ಬೆಂಗಳೂರು: ಮಾಜಿ ಕೇಂದ್ರ ಸಚಿವ,ಹಿರಿಯ ಕಾಂಗ್ರೆಸ್ ನಾಯಕ ಎಂ.ವಿ ರಾಜಶೇಖರನ್ ವಿಧಿವಶರಾಗಿದ್ದಾರೆ. ರಾಜಶೇಖರನ್ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಅಲ್ಲದೇ, ಕಾಂಗ್ರೆಸ್ ಪಕ್ಷದಲ್ಲಿ ಹಲವು ಹುದ್ದೆಗಳನ್ನೂ ನಿರ್ವಹಿಸಿದ್ದರು. ಇನ್ನು, ರಾಜಶೇಖರನ್ರಿಗೆ 91 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರಿಗೆ ಕಳೆದ ಎರಡು ತಿಂಗಳಿನಿಂದ ಬನ್ನೇರುಘಟ್ಟ ರಸ್ತೆಯಲ್ಲಿರುವ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿತ್ತು. ಆದರೆ ಇಂದು ಚಿಕಿತ್ಸೆ ಫಲಿಸದೇ ರಾಜಶೇಖರನ್ ಮೃತಪಟ್ಟಿದ್ದಾರೆ.
ಬೆಂಗಳೂರು ಗ್ರಾಾಮಾಂತರ ಜಿಲ್ಲೆ ಕನಕಪುರ ತಾಲೂಕಿನ ಮರಳವಾಡಿಯಲ್ಲಿ ಜನಿಸಿದ್ದ ಎಂ.ವಿ. ರಾಜಶೇಖರನ್ ಕರ್ನಾಟಕದ ಸಜ್ಜನ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದರು. ರಾಜ್ಯದ ಮಾಜಿ ಮುಖ್ಯಮಂತ್ರಿ ದಿವಂಗತ ನಿಜಲಿಂಗಪ್ಪರವರ ಅಳಿಯರಾಗಿದ್ದರು.
ಶ್ರೀ ಎಂ. ವಿ. ರಾಜಶೇಖರನ್ ಅವರು ಸರಳತೆ, ಸಜ್ಜನಿಕೆಯ ಪ್ರಬುದ್ಧ ರಾಜಕಾರಣಿಯಾಗಿದ್ದರು. ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಅವರ ಅಳಿಯನಾದ ಅವರು, ಗ್ರಾಮೀಣ ಆರ್ಥಿಕತೆಯ ವಿಚಾರದಲ್ಲಿ ಆಳವಾದ ಜ್ಞಾನ ಹೊಂದಿದ್ದರು. ಗ್ರಾಮೀಣ ಅಭಿವೃದ್ಧಿ ಕುರಿತು ಅಧ್ಯಯನ ಸಂಸ್ಥೆಯೊಂದನ್ನು ಸ್ಥಾಪಿಸಿದ್ದರು. ಲೋಕಸಭೆ, ರಾಜ್ಯಸಭೆ ಹಾಗೂ ವಿಧಾನ ಪರಿಷತ್ ಸದಸ್ಯರಾಗಿ ಅತ್ಯುತ್ತಮ ಸಂಸದೀಯ ಪಟುವಾಗಿ ಗುರುತಿಸಿಕೊಂಡಿದ್ದರು. ಡಾ. ಮನಮೋಹನ್ ಸಿಂಗ್ ಸರ್ಕಾರದಲ್ಲಿ ಕೇಂದ್ರ ಯೋಜನೆ ಮತ್ತು ಅಂಕಿ ಅಂಶ ಖಾತೆಯ ರಾಜ್ಯ ಸಚಿವರಾಗಿ ಹೊಣೆಗಾರಿಕೆ ನಿಭಾಯಿಸಿದ್ದರು.
ಶ್ರೀ ರಾಜಶೇಖರ ಅವರು ರಾಜ್ಯಸಭಾ ಸದಸ್ಯರಿದ್ದಾಗ ನಮ್ಮ ಬೈಲಹೊಂಗದ ಶ್ರೀ ಶಿವಬಸವ ಕಲ್ಯಾಣ ಮಂಟಪಕ್ಕೆ ಮತ್ತು ಶ್ರೀಕ್ಷೇತ್ರ ಸೊಗಲಕ್ಕೆ ಶ್ರೀ ಶಿವಾನಂದ ಕೌಜಲಗಿಯವ ಪ್ರಯತ್ನದಿಂದ ಅನುದಾನ ಕೊಟ್ಟಿರುತ್ತಾರೆ.
ಕಿತ್ತೂರ ಸೈನಿಕ ಸ್ಕೂಲದವರು ನೀಡಿರುವ ಅಶ್ವರೂಢ ಚನ್ನಮ್ಮಳ ಮೂರ್ತಿಯನ್ನೂ ದೇಹಲಿಯಲ್ಲಿ ಸ್ಥಾಪಿಸಲು ಶ್ರೀ ರಾಜಶೇಖರನ್ನರವರು ತುಂಬಾ ಪ್ರಮುಖಪಾತ್ರ ವಹಿಸಿದ್ದರು.
ಮೌಲ್ಯಾಧಾರಿತ ರಾಜಕಾರಣ ದಿಂದಾಗಿಯೇ ಗುರುತಿಸಿಕೊಂಡಿದ್ದರು. ನಿಧನವು ಅತ್ಯಂತ ದುಃಖದ ಸಂಗತಿ ಶ್ರೀಗುರು ಬಸವಣ್ಣನವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಅವರ ಕುಟುಂಬದವರಿಗೂ ಅಭಿಮಾನಿ ಬಳಗಕ್ಕೂ ಈ ನೋವನ್ನು ಭರಿಸುವ ಶಕ್ತಿಯನ್ನು ನೀಡಲೆಂದು ಪ್ರಾರ್ಥಿಸುತ್ತೇನೆ.
ಮೃತ್ಯುಂಜಯ ಪಾಟೀಲ
ಬೈಲಹೊಂಗಲ