Breaking News
Home / featured / ಉಪ್ಪರಗುಡಿಯ ಸೋಮಿದೇವಯ್ಯ: ವಚನ ವಿಶ್ಲೇಷಣೆ

ಉಪ್ಪರಗುಡಿಯ ಸೋಮಿದೇವಯ್ಯ: ವಚನ ವಿಶ್ಲೇಷಣೆ

ಕಾಯದ ಸಂಗದಿಂದ
ಆತ್ಮನು ಭವಕ್ಕೆ ಬಪ್ಪುದೊ ?
ಆತ್ಮನ ಸಂಗದಿಂದ
ಕಾಯ ಲಯಕ್ಕೊಳಗಪ್ಪುದೊ ?
ಕಾಯ ಜೀವದಿಂದಳಿವೊ ?
ಜೀವ ಕಾಯದಿಂದಳಿವೋ ?
ಅಲ್ಲ, ಉಭಯವೂ ಏಕಸ್ಥದಿಂದ ಪ್ರಳಯವೋ ? ಎಂಬುದ ಅಂತಸ್ಥದಿಂದ ತಿಳಿದು,
ಕಾಯಕ್ಕೂ ಜೀವಕ್ಕೂ ಭೇದವುಂಟೆಂದಡೆ,
ಒಂದ ಬಿಟ್ಟೊಂದು ಇರದು.

ಇಲ್ಲಾ ಎಂದೆಡೆ,
ಆತ್ಮ ವಾಯುಸ್ವರೂಪ,
ಘಟ ಸಾಕಾರಸ್ವರೂಪ,
ಗುಣ-ಗಂಧ, ಕುಸುಮ-ಗಂಧ, ತಿಲ-ಸಾರದ ಸಂಗದಂತೆ.
ಇಂತೀ ಉಭಯ ಭಾವದ ಭೇದವನರಿದ ಪರಮ[ಸುಖ] ಗಾರುಡೇಶ್ವರಲಿಂಗವನರಿದವಂಗಲ್ಲದೆ ಸಾಧ್ಯವಲ್ಲ.

ಉಪ್ಪರಗುಡಿಯ ಸೋಮಿದೇವಯ್ಯ ವಚನ ಅನುಸಂಧಾನ:

ಒಟ್ಟಂದದಲ್ಲಿ ಗ್ರಹಿಸಿ ನೋಡಿದಾಗ; ಅಪ್ಪ ಬಸವಾದಿ ಶರಣರ ವಚನಗಳ ಒಳಲೋಕವು,ಅದು ನೀಡುವ ವೈವಿಧ್ಯ ಮಯ ವಿನೂತನವಾದ ಅನುಭಾವದ ಅಮೃತ ಫಲಗಳ ಮಿಂಚಿನ ಗೊಂಚಲು ಬೆರಗಿನ ಬೆಟ್ಟವಾಗಿ, ಬೆಡಗಿನ ದಿಡಗಿನ ಕಾರಣದಿಂದ ಬೆಕ್ಕಸಬೆರಗಾಗಿ ಬಿಡುತ್ತದೆ. ಒಬ್ಬೊಬ್ಬ ಶರಣರದೂ ಒಂದೊಂದು ತೆರನಾದ ಚಿಂತನೆಯ ಧಾರೆ ಜಿಜ್ಞಾಸೆಯ ಅನುಭಾವ. ಅದೊಂದು ಅನೂಹ್ಯವಾದ ಅನುಭೂತಿಯ ಆಗರ. ಅನುಪಮವಾದ ಆನಂದದ ಸಾಗರ. ಈ ಭಾವದ ಬೆಳಕನ್ನೇ ಬೆನ್ನಿಗೆ ಇಟ್ಟುಕೊಂಡು ಈ ಮೇಲಿನ ಉಪ್ಪರಗುಡಿಯ ಸೋಮಿದೇವಯ್ಯ ಶರಣರ ಪ್ರಸ್ತುತ ವಚನದ ಅನುಸಂಧಾನ ವನ್ನಿಲ್ಲಿ ಮಾಡಿ ನೋಡೋಣ.

ಅನುಸಂಧಾನದ ಅನುಕೂಲಕ್ಕಾಗಿಯೇ ಈ ವಚನವನ್ನಿಲ್ಲಿ ಎರಡು ಭಾಗದಲ್ಲಿ ವಿಂಗಡಿಸಿ ಕೊಳ್ಳಲಾಗಿದೆ. ಈಗ ಮೊದಲ ಭಾಗದಲ್ಲಿ ಏನಿದೆ ಪರಿಶೀಲಿಸುವಾ.

ಕಾಯದ ಸಂಗದಿಂದ
ಆತ್ಮನು ಭವಕ್ಕೆ ಬಪ್ಪುದೊ ?
ಆತ್ಮನ ಸಂಗದಿಂದ
ಕಾಯ ಲಯಕ್ಕೊಳಗಪ್ಪುದೊ ?
ಕಾಯ ಜೀವದಿಂದಳಿವೊ ?
ಜೀವ ಕಾಯದಿಂದಳಿವೋ ?
ಅಲ್ಲ, ಉಭಯವೂ ಏಕಸ್ಥದಿಂದ ಪ್ರಳಯವೋ ? ಎಂಬುದ ಅಂತಸ್ಥದಿಂದ ತಿಳಿದು,
ಕಾಯಕ್ಕೂ ಜೀವಕ್ಕೂ ಭೇದವುಂಟೆಂದಡೆ,
ಒಂದ ಬಿಟ್ಟೊಂದು ಇರದು.

ಇಲ್ಲಿ, ವಚನಕಾರ ಶರಣರು; ಕಾಯದ ಹಾಗೂ ಆತ್ಮದ ಬಗ್ಗೆ ಜಿಜ್ಞಾಸೆ ಮಾಡಿದ್ದು
ಕಾಯ (ದೇಹ)ದ ಸಂಗದಿಂದ ಆತ್ಮ ಈ ಭವಕ್ಕೆ ಬಂದನೋ? ಅಥವಾ ಈ ಆತ್ಮನ ಸಂಗದಿಂದಾಗಿ ಈ ಕಾಯ(ದೇಹ)ವು ಲಯಕ್ಕೆ ಒಳಗಾಗಿಹುದೋ ಎಂದೆನ್ನುವ ಚಿಂತನೆಯ ನಡೆಸಿದೆ. ಹಾಗೆಯೇ ಕಾಯ ಅಂದರೆ ಈ ದೇಹ ಜೀವದಿಂದ ಅಳಿದು ಹೋಗುತ್ತದೆಯೋ ಅಥವಾ ಈ ಜೀವ ಕಾಯ (ದೇಹ) ದಿಂದ ಅಳಿದು ಹೋಗು ತ್ತದೆಯೋ? ಒಂದು ವೇಳೆ ಹಾಗಲ್ಲದಿದ್ದರೆ, ಎರಡೂ ಒಂದಾಗಿ ಕೂಡಿಯೇ ಪ್ರಳ ಯವೋ ಎಂಬ ಇಂತಹಾ ಚಿಂತನೆಯ
ಮಾಡುತ್ತಲೇ ವಚನ ಮತ್ತೂ ಮುಂದೆ ಸಾಗಿ, ಹೀಗೆ ಯಾವುದು ಯಾವುದರ ಅಳಿವು ಉಳಿವಿಗೆ ಕಾರಣ ಎಂಬುದನ್ನು
ನಮ್ಮೊಳಗೇ ತಿಳಿದುಕೊಂಡು, ಈ ಕಾಯಕ್ಕೂ ಹಾಗೂ ಜೀವಕ್ಕೂ ಭೇದ ಇದೆ ಎಂಬುದಾದರೆ, ಮತ್ತೆ ಅವು ಒಂದ ಕ್ಕೊಂದು ಬಿಟ್ಟು ಇರುತ್ತಿಲ್ಲವಲ್ಲಾ !? ಎಂಬ ಬೆರಗಿನ ಪ್ರಶ್ನೆಗೆ ಎದುರಾಗಿದೆ. ಮುಂದಿನ ಭಾಗದಲ್ಲಿ ಏನು ಪರಿಹಾರವ ಹೇಳಿದೆ ನೋಡೋಣ.

ಇಲ್ಲಾ ಎಂದೆಡೆ,
ಆತ್ಮ ವಾಯುಸ್ವರೂಪ,
ಘಟ ಸಾಕಾರಸ್ವರೂಪ,
ಗುಣ-ಗಂಧ, ಕುಸುಮ-ಗಂಧ, ತಿಲ-ಸಾರದ ಸಂಗದಂತೆ.
ಇಂತೀ ಉಭಯ ಭಾವದ ಭೇದವನರಿದ ಪರಮ[ಸುಖ] ಗಾರುಡೇಶ್ವರಲಿಂಗವನರಿದವಂಗಲ್ಲದೆ ಸಾಧ್ಯವಲ್ಲ.

ಈ ಕಾಯ ಮತ್ತು ಆತ್ಮದ ಅಭಿನ್ನತೆಯ ನೋಡುವುದಾದರೆ, ಆತ್ಮ ವಾಯುವಿನ ಸ್ವರೂಪವಾದರೆ, ಈ ಘಟ (ಕಾಯ)ವು ಸಾಕಾರ ಸ್ವರೂಪವಾಗಿವೆ. ಹೇಗೆಂದರೆ,
ವಸ್ತುವಿನ ಗುಣ ಮತ್ತು ಗಂಧ (ವಾಸನೆ) ಯಂತೆ, ಕುಸುಮ (ಹೂವು) ಮತ್ತು ಗಂಧ (ಪರಿಮಳ) ದಂತೆ, ಹಾಗೂ ತಿಲ (ಎಣ್ಣೆ) ಮತ್ತು ಅದರ ಸಾರದಂತೆ ಇವು ಒಂದಕ್ಕೊಂದು ಅಭಿನ್ನತೆಯ ನೈಸರ್ಗಿಕ ತತ್ವವನ್ನು ಹೊಂದಿವೆ ಎಂಬ ಅಂಶವನ್ನು ಮನಗಾಣಬೇಕು ಹಾಗೂ ಅದರ ಈ ಅನುಭೂತಿಯಾನಂದವ ಹೊಂದಬೇಕು ಅಂದರೆ ಅದು ಗಾರುಡೇಶ್ವರಲಿಂಗವನ್ನ ಅರಿದವಂಗಲ್ಲದೆ ಅನ್ಯರಿಗೆ ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಅಂತರಂಗ
ದ ಅನುಸಂಧಾನ ಇಷ್ಟಲಿಂಗದ ಜೊತೆಗೆ ಆದಾಗ ಮಾತ್ರ ಸಾಧ್ಯ ಎಂದು ವಚನವು ಹಲವು ದೃಷ್ಟಾಂತಗಳ ನಿದರ್ಶನದಲ್ಲಿ ಸಾಬೀತು ಮಾಡಿದೆ ಎನಿಸುತ್ತದೆ.

ಸಂಕ್ಷಿಪ್ತ ಪರಿಚಯ:-

ಉಪ್ಪರಗುಡಿಯ ಸೋಮಿದೇವಯ್ಯ ಶರಣರು ಹನ್ನೆರಡನೆ ಶತಮಾನದಲ್ಲಿದ್ದ ವರು. ಅನುಭವ ಮಂಟಪದ ೭೭೦ ಅಮರ ಗಣಂಗಳ ಪೈಕಿ ಇವರೂ ಒಬ್ಬ ವಚನಕಾರ ಶರಣರು. ಇವರು
“ಗಾರುಡೇಶ್ವರ ಲಿಂಗ’ ಅಂಕಿತದಲ್ಲಿ ರಚಿಸಿದ ೧೧ ವಚನಗಳು ದೊರೆತಿವೆ.
ಅವುಗಳಲ್ಲಿ; ಕಾಯ – ಆತ್ಮಗಳ ಸಂಬಂಧ, ಪ್ರಸಾದದ ಮಹತ್ವ, ಕ್ರಿಯಾ – ಜ್ಞಾನ ಸಾಮರಸ್ಯ ಈ ಮೊದಲಾದ ವಿಷ ಯಗಳು ಅಭಿವ್ಯಕ್ತವಾಗಿವೆ. ಈ ಶರಣ ಒಳ್ಳೆಯ ಅನುಭಾವಿಯಾಗಿದ್ದವರು. ತಮ್ಮ ಆಲೋಚನೆಗಳನ್ನು ಅತ್ಯಂತ ಪರಿ ಣಾಮಕಾರಿಯಾದ ಉಪಮೆ ದೃಷ್ಟಾಂತ ಗಳ ಮೂಲಕ ತಿಳಿಯ ಪಡಿಸುವರು.
ಉಳಿದಂತೆ ಇವರ ಜೀವನ ವೃತ್ತಾಂತದ ಬಗ್ಗೆ ಯಾವುದೇ ವಿವರಗಳು ಲಭ್ಯವಿಲ್ಲ.

ಶರಣ ಅಳಗುಂಡಿ ಅಂದಾನಯ್ಯ

ಬೆಳಗಾವಿ

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಲಿಂಗಾಯತ ಧರ್ಮದ ಹೋರಾಟ ಸರಣಿ-2

  ಜಾತಿ ಲಿಂಗಾಯತರು ಮತ್ತು ಬೇಡ ಜಂಗಮ ಪಂಚಾಚಾರ್ಯರು ಸತ್ಯವೆಂದು ನಂಬಿ ಲಿಂಗಾಯತ ಧರ್ಮದ ಮಾನ್ಯತೆ ತಪ್ಪಿಸುತ್ತಿದ್ದಾರೆ. ಬಸವಕಲ್ಯಾಣ: 12ನೇ …

ನ. 22 ರಂದು ಡಾ. ಹೆಚ್.ಆರ್.ಗಿರಿಯಾಲ ಅವರಿಗೆ ನುಡಿನಮನ

ಚನ್ನಮ್ಮನ ಕಿತ್ತೂರು: ಸಮೀಪದ ಬೈಲೂರು ಗ್ರಾಮದ ಖ್ಯಾತ ವೈದ್ಯ ಡಾ ಹಣಮಂತ ಆರ್ ಗಿರಿಯಾಲ ಅವರು ಕಳೆದ ಸೆಪ್ಟೆಂಬರ್ 30 …

ಲಿಂಗಾಯತ ಧರ್ಮದ ಹೋರಾಟ ಸರಣಿ-2

  ಲಿಂಗಾಯತ ಧರ್ಮದ ಮಠಾಧೀಶರ ನಿಯೋಗ ಮುಖ್ಯಮಂತ್ರಿಗೆ ಭೇಟಿ ಮಾಡಬಾರದೇಕೆ? ಲಿಂಗಾಯತ ಧರ್ಮದ ಹೋರಾಟದಲ್ಲಿ ಮುಂಚೂಣಿ ಸ್ಥಾನ ವಹಿಸಿ ಅತ್ಯಂತ …

ಸಾಮಾಜಿಕ ಪ್ರಾತಿನಿಧ್ಯತೆ : ಬಿ.ಜೆ ಪಾಟೀಲ

  ವಿಜಯಪುರ : ಸಮಸಮಾಜ ಕಟ್ಟಲು, ಸಂವಿಧಾನದಲ್ಲಿ ಮೂಲಭೂತ ಹಕ್ಕಗಳ ಬಗ್ಗೆ ಮಾತನಾಡುವಾಗ ಮೂರೂ ಬಿಂದುಗಳು ( Article 15, …

ಲಿಂಗಾಯತ–ವೀರಶೈವರಿಗೆ ಶೇ 16 ಮೀಸಲಾತಿ ನೀಡಿ: ಶಿವಮೂರ್ತಿ ಮುರುಘಾ ಶರಣರು

  ಚಿತ್ರದುರ್ಗ: ಜಾತಿ, ಉಪಜಾತಿಗೆ ಒಂದೊಂದು ವಿಧವಾದ ಮೀಸಲಾತಿ ನೀಡುವ ಬದಲು ಲಿಂಗಾಯತ–ವೀರಶೈವ ಸಮುದಾಯಕ್ಕೆ ಶೇ 16ರಷ್ಟು ಮೀಸಲಾತಿಯ ನಿಗದಿಪಡಿಸುವುದು …

Leave a Reply

Your email address will not be published. Required fields are marked *

error: Content is protected !!