Breaking News
Home / featured / ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ

ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ

ಚನ್ನಮ್ಮನ ಕಿತ್ತೂರ: ಲಂಡನ್ನಿನ ಬ್ರಿಟಿಷ ಮ್ಯೂಸಿಯಂ ಗ್ರಂಥಾಲಯದಿಂದ ಅತೀ ಹೆಚ್ಚು ಪುಸ್ತಕ ಎರವಲು ಪಡೆದು ಓದಿದ ದಾಖಲೆ ಬಿ.ಆರ್.ಅಂಬೇಡ್ಕರ ಅವರ ಹೆಸರಿನಲ್ಲಿ ಇದೆ.

ದೇಶದ ಪ್ರಸಿದ್ದ ಕೈಗಾರಿಕೆ ಉದ್ಯಮಿ ಟಾಟಾ ಬಿರ್ಲಾ ಅಂಬೇಡ್ಕರ್ ಅವರು ಸಂಗ್ರಹಿಸಿದ್ದ ಐವತ್ತು ಸಾವಿರ ಪುಸ್ತಕಗಳನ್ನು ಎರಡು ಲಕ್ಷ್ಯ ರೂಪಾಯಿಗಳಿಗೆ ಖರೀದಿಸಲು ಬಯಸಿದರು,ಆದರೆ ಆದುನಿಕ ಮನು ಪುಸ್ತಕಗಳನ್ನು ಮಾರಲು ಖಡಾಖಂಡಿತವಾಗಿ ನಿರಾಕರಿಸಿದರು.ಕೊನೆಗೆ ಅವುಗಳನ್ನು ತಾವೇ ಸ್ಥಾಪಿಸಿದ್ದ “ಜನತಾ ಶಿಕ್ಷಣ ” ಸಂಸ್ಥೆಗೆ ದಾನಮಾಡಿದರು.

ಸಮಾನ ನಾಗರಿಕ ಸಂಹಿತೆ ಬೆಂಬಲಿಸಿ ಸಂವಿಧಾನ ರಚನಾ ಸಭೆಯಲ್ಲಿ೧೯೪೮ ನವಂಬರ ೨೩ರಂದು ವಾದಿಸಿದರು, ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದ ಮೂಲ ಕರಡಿನಲ್ಲಿ ೩೭೦ನೇ ವಿಧಿ ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನದ ಪ್ರಸ್ಥಾಪ ಇರಲಿಲ್ಲ.

ಇಂತಹ ಮಹಾನ ನಾಯಕ ಪ್ರಕಟಿಸುತ್ತಿದ್ದ “ಮೂಕನಾಯಕ” ಪತ್ರಿಕೆಯ ಜಾಹಿರಾತನ್ನು ಪ್ರಕಟಿಸಲು ಬಾಲ ಗಂಗಾಧರ ತಿಲಕರು (ಕೇಸರಿ ಪತ್ರಿಕೆಯಲ್ಲಿ) ನಿರಾಕರಿಸಿದ್ದರು.

ಬುದ್ದನ ವಿಚಾರಗಳನ್ನು ಅಪ್ಪಿಕೂಳ್ಳುವ ಮೂಲಕ ಸ್ವಾತಂತ್ರೂತರ ಭಾರತದಲ್ಲಿ ರಾಷ್ಟ್ರೀಯತೆ ಬಲಪಡಿಸಿದರು.

ಹಾಗಾಗಿ ಅಂಬೇಡ್ಕರ ಅವರು ಪ್ರಸ್ತುತದಲ್ಲಿ ಬಸವೇಶ್ವರ ಮತ್ತು ಬುದ್ದನ ವಾರಸುದಾರರು.
“ಹಿಂದುವಾಗಿ ಹುಟ್ಟಿದರು ಹಿಂದುವಾಗಿ ಸಾಯಲಾರೆ ಎಂದು ೧೯೩೫ರಲ್ಲಿ ಹೇಳಿದರು ಆದರೆ ಹಿಂದು ಧರ್ಮದಿಂದ ಬೌದ್ಧ ಧರ್ಮ ಸ್ವಿಕರಿಸುವ ಪೂರ್ವ ದಲ್ಲಿ ೨೦ ವರ್ಷಗಳ ಕಾಲ ವಿಚಾರ ಮಾಡಿ ೧೯೫೬ ರಲ್ಲಿ ಬುದ್ದನ ಕಾರುಣ್ಯವನ್ನು ಅಪ್ಪಿಕೂಂಡರು.ಆ ಮೂಲಕ ಇ ದೇಶದ ರಾಷ್ಟ್ರವಾದಕ್ಕೆ ದೇಶದ ಯಾವ ಸಂಘಗಳು ಕೂಡಮಾಡದ ಬಲಿಷ್ಠ ರಾಷ್ಟ್ರೀಯತೆಯ ಅಡಿ

ಲಿಂಗಾನಂದ ಅಪ್ಪಾಜಿ ಪ್ರವಚನ

ಬುದ್ದ, ಜೋತಿ ಬಾ ಪುಲೆ ವಿಚಾರಗಳಿಂದ ಪ್ರೇರಿತರಾಗಿ ಬದುಕು ಕಟ್ಟಿಕೂಂಡರು.ಕನ್ನಡದ ಸರ ಸಿದ್ದಪ್ಪ ಕಂಬಳಿಯವರ ಒಡನಾಟದ ಪ್ರೇರಣೆ ಮತ್ತು ಅಂಬೇಡ್ಕರ ಅವರು ಇ ದೇಶದ ಅಡಳಿತಕ್ಕೆ ಅಡಿಪಾಯ ಹಾಕಿದ ಸಂವಿಧಾನಲ್ಲಿ ಬಸವೇಶ್ವರ ಮತ್ತು ಸಮಕಾಲಿನ ವಚನಕಾರರ ಆಶಯಗಳನ್ನು ಇರಿಸುವ ಮೂಲಕ ಕಲ್ಯಾಣ ರಾಜ್ಯದ ಸುವರ್ಣ ಸೌದ ನಿರ್ಮಿಸಿದರು.

ಇಲ್ಲಿ ಬಸವೇಶ್ವರ ಮತ್ತು ಅಂಬೇಡ್ಕರ್ ಅವರನ್ನು ಹೋಲಿಸುವ ಅನಿವರ್ಯತೆ ನನ್ನದಲ್ಲ ಆದರೆ ಆ ಎರಡು ಮಹಾನ ಪುರುಷರ ವಿಚಾರದಲ್ಲಿ ಇರುವ ಸಾಮ್ಯತೆ ನೂರಕ್ಕೆನೂರರಷ್ಟು ಹೋಲಿಕೆಯಾಗುವಂತದು..ಹಾಗಾಗಿ ದೇಶಕ್ಕೆ ಕಷ್ಟಬಂದಾಗ ಅವತಾರ ಪುರುಷ ರು ಜನ್ಮ ತಾಳುವರು ಎನ್ನುವಂತೆ ಅಂದು ವಚನ ಸಾಹಿತ್ಯ ದ ನೇತಾರ ಬಸವೇಶ್ವರ ಇಪ್ಪತ್ತನೇಯ ಶತಮಾನದಲ್ಲಿ ಆಧುನಿಕ ಮನು ಜನ್ಮ ತಾಳುವ ಮೂಲಕ ಶೂಷಿತರಿಗೆ ಬದುಕುವ ಹಕ್ಕು ಒದಗಿಸಿಕೂಟ್ಟವರು…

ಹಿಗಾಗಿ ಭಾರತ ರತ್ನ ಡಾ!!ಬಿ.ಆರ್.ಅಂಬೇಡ್ಕರ್…
ಅವರ 129ಜನ್ಮದಿನಾಚರಣೆ ನಿಮಿತ್ತ ಲೇಖನ…
ಹಾಗಾಗಿ ಸಮಸ್ತರಿಗೆ ಬಿ.ಆರ್.ಅಂಬೆಡ್ಕರ ಜನ್ಮದಿನದ ಶುಭಾಶಯಗಳು.

ಮಹೇಶ ನೀ ಚನ್ನಂಗಿ. KES
ಚನ್ನಮ್ಮನ ಕಿತ್ತೂರು

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ನ. 22 ರಂದು ಡಾ. ಹೆಚ್.ಆರ್.ಗಿರಿಯಾಲ ಅವರಿಗೆ ನುಡಿನಮನ

ಚನ್ನಮ್ಮನ ಕಿತ್ತೂರು: ಸಮೀಪದ ಬೈಲೂರು ಗ್ರಾಮದ ಖ್ಯಾತ ವೈದ್ಯ ಡಾ ಹಣಮಂತ ಆರ್ ಗಿರಿಯಾಲ ಅವರು ಕಳೆದ ಸೆಪ್ಟೆಂಬರ್ 30 …

ಲಿಂಗಾಯತ ಧರ್ಮದ ಹೋರಾಟ ಸರಣಿ-2

  ಲಿಂಗಾಯತ ಧರ್ಮದ ಮಠಾಧೀಶರ ನಿಯೋಗ ಮುಖ್ಯಮಂತ್ರಿಗೆ ಭೇಟಿ ಮಾಡಬಾರದೇಕೆ? ಲಿಂಗಾಯತ ಧರ್ಮದ ಹೋರಾಟದಲ್ಲಿ ಮುಂಚೂಣಿ ಸ್ಥಾನ ವಹಿಸಿ ಅತ್ಯಂತ …

ಸಾಮಾಜಿಕ ಪ್ರಾತಿನಿಧ್ಯತೆ : ಬಿ.ಜೆ ಪಾಟೀಲ

  ವಿಜಯಪುರ : ಸಮಸಮಾಜ ಕಟ್ಟಲು, ಸಂವಿಧಾನದಲ್ಲಿ ಮೂಲಭೂತ ಹಕ್ಕಗಳ ಬಗ್ಗೆ ಮಾತನಾಡುವಾಗ ಮೂರೂ ಬಿಂದುಗಳು ( Article 15, …

ಲಿಂಗಾಯತ–ವೀರಶೈವರಿಗೆ ಶೇ 16 ಮೀಸಲಾತಿ ನೀಡಿ: ಶಿವಮೂರ್ತಿ ಮುರುಘಾ ಶರಣರು

  ಚಿತ್ರದುರ್ಗ: ಜಾತಿ, ಉಪಜಾತಿಗೆ ಒಂದೊಂದು ವಿಧವಾದ ಮೀಸಲಾತಿ ನೀಡುವ ಬದಲು ಲಿಂಗಾಯತ–ವೀರಶೈವ ಸಮುದಾಯಕ್ಕೆ ಶೇ 16ರಷ್ಟು ಮೀಸಲಾತಿಯ ನಿಗದಿಪಡಿಸುವುದು …

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಡಾ. ತೋಂಟದ ಸಿದ್ಧರಾಮ ಶ್ರೀಗಳ ಆಕ್ಷೇಪ

  ಗದಗ: ಸರ್ಕಾರ ತರಾತುರಿಯಲ್ಲಿ ಲಿಂಗಾಯತ ವೀರಶೈವ ಅಭಿವೃದ್ಧಿ ನಿಗಮ ಘೋಷಿಸಿದ್ದು, ಇದಕ್ಕೆ ಯಾವುದೇ ಗೊತ್ತು ಗುರಿಯಾಗಲಿ, ಸ್ಪಷ್ಟತೆಯಾಗಲಿ ಇಲ್ಲ …

Leave a Reply

Your email address will not be published. Required fields are marked *

error: Content is protected !!