ವಿಜಯಪುರ: 1871 ರ ಮೈಸೂರು ಸಂಸ್ಥಾನ ಸರಕಾರದ ಜನಗಣತಿ ವರದಿ ಪ್ರಕಾರ ಲಿಂಗಾಯತವು ಒಂದು ಸ್ವತಂತ್ರ ಧರ್ಮವಾಗಿತ್ತು. 1881 ರ ಜನಗಣತಿಯಲ್ಲಿ ಲಿಂಗಾಯತವು ಸ್ವತಂತ್ರ ಧರ್ಮ ಪಟ್ಟಿಯಿಂದ ಕೈಬಿಟ್ಟು ಲಿಂಗಾಯತರನ್ನು ಶೂದ್ರರ ಪಟ್ಟಿಯಲ್ಲಿಡಲಾಯಿತು. ಅಯ್ಯಂಗಾರಿ ಬ್ರಾಹ್ಮಣ ದಿವಾನನೊಬ್ಬನ ಕುತಂತ್ರ ಇದರ ಹಿಂದಿತ್ತು. 1891 ರ ಜನಗಣತಿ ಆರಂಭಕ್ಕೆ ಮುಂಚೆ ಮೈಸೂರು ವೀರಶೈವ ಆರಾಧ್ಯರು ಆದೋಲನ ಸಂಘಟಿಸಿ ಲಿಂಗಾಯತರನ್ನು ಶೂದ್ರ ಪಟ್ಟಿಯಿಂದ ಕೈಬಿಡಬೇಕು ಮತ್ತು ವೀರಶೈವ ಆರಾಧ್ಯರನ್ನು ವೀರಶೈವ ಬ್ರಾಹ್ಮಣರೆಂದು ಪರಿಗಣಿಸಬೇಕು ಎನ್ನುವ ಎರಡು ಪ್ರಮುಖ ಬೇಡಿಕೆಗಳನ್ನಿತ್ತರು.ಅವುಗಳೊಂದಿಗೆ :-
1. ಲಿಂಗಾಯತರು ಹಿಂದೂಗಳು. ಲಿಂಗಾಯತ/ವೀರಶೈವರಲ್ಲೂ ಚತುರ್ವರ್ಣಗಳು ಗುರುತಿಸಬೇಕು. ವೀರಶೈವರಿಗೆ ಬ್ರಾಹ್ಮಣರಂತೆ ಭಾರಧ್ವಜˌ ಕಶ್ಯಪ ಮುಂತಾದ ಗೋತ್ರಗಳಿವೆ.
2. ಈ ಚತುರ್ವರ್ಣಗಳೆಂದರೆ:
- ವೀರಶೈವ ಬ್ರಾಹ್ಮಣ (ಆರಾಧ್ಯರುˌ ಅಯ್ಯಗಳುˌ ಜಂಗಮರು)
- ವೀರಶೈವ ಕ್ಷತ್ರೀಯರು (ಕೆಳದಿˌ ಕಿತ್ತೂರುˌ ಕೊಡಗು ಮುಂತಾದ ರಾಜಮನೆತಗಳು ಮತ್ತು ದೇಸಾಯಿˌ ದೇಶಮುಖ ಕುಟುಂಬಗಳು)
- ವೀರಶೈವ ವೈಶ್ಯರು (ಬಣಜಿಗರುˌ ಶೆಟ್ಟಿ ಲಿಂಗಾಯತರುˌ ಗೌಡˌ ನಾಗಾರ್ತˌ ಸಾದುˌ ನೊಣಬ ಮುತಾದ ಲಿಂಗಾಯತ ಪಂಗಡಗಳು)
- ವೀರಶೈವ ಶೂದ್ರರು (ಮಡಿವಾಳˌ ಚೆಮ್ಮಾರˌ ಹಡಪದˌ ಬಣಗಾರˌ ಅಂಬಿಗˌ ಗಾಣಿಗˌ ಸಿಂಪಿಗ ಮುಂತಾದ ಕಾಯಕ ವರ್ಗಗಳು)
ಮೈಸೂರು ಸಂಸ್ಥಾನದಲ್ಲಿ ಆಸ್ಥಾನ ಪಂಡಿತನಾಗಿದ್ದ ಮತ್ತು ಅಂದಿನ ಮಹಾರಾಜಾ ಕಾಲೇಜಿನ ಸಂಸ್ಕ್ರತ/ಕನ್ನಡ ಪ್ರಾಧ್ಯಾಪಕನಾಗಿದ್ದ ಕರಿಬಸವ ಶಾಸ್ತ್ರಿ ಎನ್ನುವ ಆರಾಧ್ಯ ಜಂಗಮ ಈ ಹೋರಾಟದ ಮುಖ್ಯ ರೂವಾರಿ. ಲಿಂಗಾಯತರಿಗೆ ಶೂದ್ರ ಪಟ್ಟ ದಕ್ಕಿದರೆ ಉಳಿದ ಬ್ರಾಹ್ಮಣ ಆಸ್ಥಾನ ಪಂಡಿತರು ಇವರನ್ನು ಕೀಳಾಗಿ ನೋಡಬಹುದು ಮತ್ತು ಆಸ್ಥಾನ ಪಂಡಿತರ ಸ್ಥಾನ ಕಳೆದುಕೊಳ್ಳಬಹುದೆಂಬ ಭಯ ಈ ಆರಾಧ್ಯರಲ್ಲಿತ್ತು.
ಮೈಸೂರು ಸಂಸ್ಥಾನದಲ್ಲಿ 25% ವಕ್ಕಲಿಗರ ನಂತರ 12% ಜನಸಂಖ್ಯೆ ಹೊಂದಿದ್ದ ಲಿಂಗಾಯತ ಸಮುದಾಯ ಭೂಹಿಡುವಳಿˌ ವ್ಯಾಪಾರ ಉದ್ಯಮˌ ಶಿಕ್ಷಣ ಸಂಸ್ಥೆ ಹೊಂದಿದ್ದ ಪ್ರಭಾವಶಾಲಿ ಸಮುದಾಯವಾದ್ದರಿಂದ ಸಂಸ್ಥಾನ ಸರಕಾರ ಅವರ ಬೇಡಿಕೆ ಮನ್ನಿಸಿ ಶೂದ್ರ ಪಟ್ಟ ತೆಗೆದು ಅವರನ್ನು ವೀರಶೈವ ಬ್ರಾಹ್ಮಣರೆಂದು ಪರಿಗಣಿಸಿತು.ಅಂದರೆ ಈ ವೀರಶೈವ ಆರಾಧ್ಯರು ಪಂಚಪೀಠಗಳು ಮತ್ತು ಇನ್ನಿತರ ಜಂಗಮ ಮಠಾಧೀಶರ ಬೆಂಬಲದಿಂದ ಲಿಂಗಾಯತರಲ್ಲಿದ್ದ ಅಜ್ಞಾನವನ್ನು ದುರುಪಯೋಗಪಡಿಸಿಕೊಂಡುˌ ಬಸವಣ್ಣನವರು ಸ್ಥಾಪಿಸಿದ ಜಾತಿ ರಹಿತ ಧರ್ಮದಲ್ಲಿ ಶ್ರೇಣಿಕ್ರತ ವ್ಯವಸ್ಥೆ ರೂಪಿಸಿ ಬಸವ ಧರ್ಮವನ್ನು ಸನಾತನ ಹಿಂದೂ ವೈದಿಕ ಧರ್ಮದ ತೋಳಿನೊಳಗೆ ಸೇರಿಸಿ ತಾವು ಲಿಂಗಿ ಬ್ರಾಹ್ಮಣರಾಗಿ ಮೆರೆಯಲಿರಂಭಿಸಿದರು.
ಲಿಂಗಾಯತರೆˌ ಈಗಲಾದರೂ ಎಚ್ಚರಗೊಳ್ಳಿ. ನಾವು ವೀರಶೈವರಲ್ಲ ˌ ಸರಳವಾಗಿ ಬಸವಣ್ಣ ದಯಪಾಲಿಸಿದ ಲಿಂಗಾಯತರು ಎಂದು ತಿಳಿದುಕೊಳ್ಳಿ.
ಶರಣ ಡಾ. ಜೆ ಎಸ್ ಪಾಟೀಲ
ವಿಜಯಪುರ
ಮೊನ್ನೆ ಒಬ್ಬ ಯುವಕನಿಗೆ ಲಿಂಗಾಯತರು ಹಿಂದೂಗಳಲ್ಲ ಎಂಬ ತಮ್ಮ ಲೇಖನ ಕಳುಹಿಸಿದ್ದೆ. ನನಗೆ ಬಂದ ಉತ್ತರ- ನನು ಲಿಂಗಾಯತ ಪದವನ್ನು ಬಿಟ್ಟಿದ್ದೇನೆ. ಹೀಗಾಗಿ ನಾನೊಬ್ಬ ಹಿಂದೂ ಎಂದು ಹೆಮ್ಮೆಯಿಂದ ಹೇಳುತ್ತೇನೆ ಎಂದು ನನಗೆ ಮೆಸೆಜ್ ಮಾಡಿದ್ದನು. ಅಂತಹ ಅಜ್ಞಾನಿಗಳಿಗೆ ತಮ್ಮ ಲೇಖನ ದಾರಿದೀಪವಾಗಲಿ.
ನಾವು ವೀರಶೈವರಲ್ಲ, ಲಿಂಗಾಯತರು.. ಸುಂದರವಾದ ವಿಶ್ಲೇಷಣೆ ಶರಣರೆ,
ಶರಣು ಶರಣಾರ್ಥಿಗಳು.
ಶರಣು ಶರಣಾರ್ಥಿಗಳು