Breaking News
Home / featured / ದೇವರು ಹೇಳುತ್ತಿದ್ದಾನೆ ಸಾಕು ನೀವೀಗ ವಿಶ್ರಾಂತಿ ಪಡೆಯಿರಿ

ದೇವರು ಹೇಳುತ್ತಿದ್ದಾನೆ ಸಾಕು ನೀವೀಗ ವಿಶ್ರಾಂತಿ ಪಡೆಯಿರಿ

ಜಗತ್ತಿನ ಬಹುತೇಕ ರಾಷ್ಟ್ರಗಳು, ಮಹಾಮರಿ ಕರೋನ ವೈರಸ್ ಗೆ ತತ್ತರಿಸಿ ಹೋಗಿದೆ. ಈ ಸಂದರ್ಭದಲ್ಲಿ ಸಂದೇಶ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ದೇವರು ಹೇಳುತ್ತಿದ್ದಾನೆ ಸಾಕು ನೀವೀಗ ವಿಶ್ರಾಂತಿ ಪಡೆಯಿರಿ..!!
ಗುಡಿ, ಗುಂಡಾರ, ಮಸೀದಿ, ಚರ್ಚ್ ಗಳಿಗೆ ಬಹಳಷ್ಟು ಅಲೆದಿದ್ದಿರಿ, ಮನವಿಲ್ಲದೆ ನನ್ನನ್ನು ಬಹಳಷ್ಟು ಹುಡುಕಿದ್ದಿರಿ, ಸಾಕು ನೀವೀಗ ವಿಶ್ರಾಂತಿ ಪಡೆಯಿರಿ

ಕಾಯಕ ಬಿಟ್ಟು  ಸಾಮೂಹಿಕ ಭಜನೆ, ಪ್ರಾರ್ಥನೆ ಏನೆನೋ ಜಾತ್ರೆ ,ಉತ್ಸವಗಳನ್ನು ಮಾಡಿದಿರಿ
ಸಾಕು ನೀವೀಗ ವಿಶ್ರಾಂತಿ ಪಡೆಯಿರಿ.

ಅನ್ನ ,ಆಹಾರವಿದ್ದರೂ ಎಲ್ಲಾ ಪ್ರಾಣಿಗಳನ್ನು ತಿಂದು ತೇಗಿದಿರಿ, ಅನ್ನ ಚೆಲ್ಲಿದಿರಿ, ಈಗ ಮನೆಯಲ್ಲಿಯೇ  ತಿನ್ನುತ ವಿಶ್ರಾಂತಿ ಪಡೆಯಿರಿ.

ಒಂದು ನಿಮಿಷವು ಸಮಯವಿಲ್ಲವೆಂದು ಒತ್ತಡದಲ್ಲಿ
ಅಲೆಯುತ್ತಿದ್ದಿರಿ, ಅನ್ನ ನಿದ್ದೆ ಇಲ್ಲದೆ ಆಸ್ತಿ ಮಾಡಿದ್ದಿರಿ
ಸಾಕೀಗ ನೀವು ವಿಶ್ರಾಂತಿ ಪಡೆಯಿರಿ.

ಅತಿ ಆಸೆಗೆ ಬೆನ್ನು ಬಿದ್ದು ಸಜೀವಗಳನ್ನು ಸುಟ್ಟು ಸುಟ್ಟು
ನಿರ್ಜೀವಗಳನ್ನು ಗಳಿಸಿ, ಗಳಿಸಿ ಇದ್ದಿದ್ದರಲ್ಲಿ ತೃಪ್ತಿ ಪಡದೆ
ಅತೃಪ್ತರಾಗಿ ಅಂತರಂಗವ ಅಶುದ್ಧ ಮಾಡಿ ಬದುಕಿದ
ನೀವೀಗ ವಿಶ್ರಾಂತಿ ಪಡೆಯಿರಿ.

ಸ್ವಾರ್ಥದ ರಾಜಕಾರಣ, ಲಂಚದ ಉದ್ಯೋಗ,
ವ್ಯಾಪಾರದ ಶಿಕ್ಷಣ, ಮಾರ್ಕ್ಸ್ ಒತ್ತಡದಲಿ
ಮಕ್ಕಳು, ಹೆತ್ತವರು, ಗುರುಗಳು. ನಿರುದ್ಯೋಗ ಉತ್ಪಾದಿಸುವ ವಿಶ್ವ ವಿದ್ಯಾಲಯಗಳು
ಸಾಕು ನೀವು ವಿಶ್ರಾಂತಿ ಪಡೆಯಿರಿ.

ಪರಿಸರದ ಮೇಲೆ ನಿರಂತರ ದಾಳಿ ಮಾಡಿ, ವನ್ಯಜೀವಿಗಳನ್ನುಕೊಂದಿರಿ, ಈಗ ನೀವು Zoo ನಲ್ಲಿ ಇದ್ದಿರಿ ಪ್ರಾಣಿ, ಪಕ್ಷಿಗಳನ್ನು ಮನೆಯಿಂದಲೇ
ನೋಡುತ್ತ ವಿಶ್ರಾಂತಿ ಪಡೆಯಿರಿ.

ಒಂದು ಬಸ್, ಟ್ರೇನ್, ಪ್ಲೈಟ್
Miss ಆದರೆ tension ತೊಗೊಂಡಿರಿ.
ಜೀವನ ಮುಗಿದೆ ಹೋಯಿತು ಅಂದುಕೊಂಡಿರಿ
ಅವು ಎಲ್ಲವು ಅಲ್ಲೆ ನಿಂತಲ್ಲೇ ನಿಂತಿವೆ
ನೀವೀಗ ವಿಶ್ರಾಂತಿ ಪಡೆಯಿರಿ.

ಟ್ರಾಫಿಕ್ ನಲ್ಲಿ ಹೆತ್ತವರು ,
ಪ್ಲೇ ಹೋಂ ನಲ್ಲಿ ಕಂದಮ್ಮಗಳು,
ವೃದ್ದಾಶ್ರಮದಲ್ಲಿ
ಅನಾಥಾಶ್ರಮದಲ್ಲಿ ಅಜ್ಜ ಅಜ್ಜಿ ,
ನಿಮ್ಮ ಮುಖ ಒಬ್ಬರನೊಬ್ಬರು ನೋಡುತಾ ನೀವೀಗ ವಿಶ್ರಾಂತಿ ಪಡೆಯಿರಿ.ಧರ್ಮದ ಹೆಸರಲ್ಲಿ ಅಧರ್ಮ, ಅತ್ಯಾಚಾರ ಎಸೆಗಿದಿರಿ, ನಮ್ಮ ಧರ್ಮವೇ ಶ್ರೇಷ್ಠ ಎಂದು ಕೂಗಾಡಿದಿರಿ ಜಗತ್ತನ್ನೇ ನಮ್ಮ ಧರ್ಮ ಆಳಬೇಕು ಎಂದಿರಿ ಭ್ರಮೆಯಲ್ಲಿ ಚಿರಾಡಿದ್ದು ಸಾಕು ನೀವೀಗ ವಿಶ್ರಾಂತಿ ಪಡೆಯಿರಿ.

ಕ್ಷುಲ್ಲಕ ಕಾರಣಕ್ಕೆ ವಿಚ್ಛೇದನ ಕೊಟ್ಟಿರಿ
ವರದಕ್ಷಿಣೆಗೆ ಹೆಣ್ಣನ್ನು ಸುಟ್ಟಿರಿ
ಭ್ರೂಣ ಹತ್ಯೆ ಮಾಡಿದಿರಿ
ಹೆಣ್ಣನ್ನು ದೇವರೆನ್ನುತ ಗುಡಿ ಹೊರಗೆ ಇಟ್ಟಿರಿ
ಸಾಕು ನೀವೀಗ ವಿಶ್ರಾಂತಿ ಪಡೆಯಿರಿ.

ಶ್ರೇಷ್ಠತೆಯ ಮದದಲ್ಲಿ ಜಾತಿ ಧರ್ಮದ ಗೋಡೆ ಕಟ್ಟುತ್ತ ಅಸಮಾನತೆಯಿಂದ ನಡೆದಿರಿ..
ಅಧಿಕಾರದ ಅಹಂಕಾರದಲ್ಲಿ
ಅನ್ನದಾತನ ಮರೆತಿರಿ
ಈಗ ಅನ್ನಕ್ಕಾಗಿ ಕೈ ಚಾಚುತ ವಿಶ್ರಾಂತಿ ಪಡೆಯಿರಿ.

ದೇಶ ಭಕ್ತಿ ಹೆಸರಲ್ಲಿ ಬಡವರ ಮಕ್ಕಳನ್ನು ಗಡಿಯಲ್ಲಿ ನಿಲ್ಲಿಸಿ ಅತ್ತ ಶಾಂತಿ ಮಾತುಕತೆ ಎನ್ನುತ್ತಾ… ಇತ್ತ ಗಡಿಯಲ್ಲಿ ಯುವಕರನ್ನು ‌ಕೊಲ್ಲುತ್ತಾ , ಅವರ ಮಕ್ಕಳನ್ನು, ಹೆಂಡತಿಯನ್ನು ಅನಾಥ ಮಾಡುವ ಆ ಕಟುಕ ಗಡಿಗಳು ನಿಶಬ್ದವಾಗಿವೆ ನೀವು ವಿಶ್ರಾಂತಿ ಪಡೆಯಿರಿ.

ಧರ್ಮದ ಹೆಸರಿನಲ್ಲಿ ಅಮಾಯಕರನ್ನು ಕೊಲ್ಲುತ
ಸ್ವರ್ಗ ಸೇರುತ್ತೆನೆ ಎನ್ನುವ ನರಹಂತಕರ ಬಣ್ಣ ಬಯಲಾಗಿದೆ
ನಿಮ್ಮ ಮದ್ದು ಗುಂಡುಗಳ ಜೊತೆಗೆ ವಿಶ್ರಾಂತಿ ಪಡೆಯಿರಿ.

ಭವಿಷ್ಯ ಹೇಳುವವರ ಭವಿಷ್ಯ ಈಗ ನನ್ನ ಕೈಯಲ್ಲಿದೆ ,
ದೇವರು, ಧರ್ಮದ ಹೆಸರಲ್ಲಿ
ದುಡ್ಡು ಮಾಡಿದವರ ಪಟ್ಟಿ
ನನ್ನಲ್ಲಿದೆ…
ನನ್ನ ಪಟ್ಟಿ ಈಗ ಬಿಡುಗಡೆ ಮಾಡುತ್ತೆನೆ
ನೀವೀಗ ವಿಶ್ರಾಂತಿ ಪಡೆಯಿರಿ.

ಎಲ್ಲಾ ಗೆದ್ದೆ ಎನ್ನುತ್ತ
ಅಟ್ಟಹಾಸದಿ ಮೆರೆದ ನೀವು
ಈಗ ನಿಮ್ಮ ‌ಪ್ರಾಣ ಉಳಿದರೆ ಸಾಕು ಎನ್ನುತ ಅಲ್ಲೆ ನನ್ನನ್ನು ನೆನೆಯುತ ವಿಶ್ರಾಂತಿ ಪಡೆಯಿರಿ.

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಡೊಂಗಿ ಮಂತ್ರವಾದಿ ಲಪಟಾಯಿಸಿದ್ದು 6 ಕೋಟಿ

  ಬೆಳಗಾವಿ: ಖ್ಯಾತ ಸಂಗೀತ ಸಂಯೋಜಕ ಕೆ.ಕಲ್ಯಾಣ ಅವರ ದಾಂಪತ್ಯ ವಿವಾದ ಹೊಸ ತಿರುವು ಪಡೆದುಕೊಂಡಿದ್ದು, ಡೊಂಗಿ ಮಂತ್ರವಾದಿ ಲಪಟಾಯಿಸಿದ …

Leave a Reply

Your email address will not be published. Required fields are marked *

error: Content is protected !!