Breaking News
Home / featured / ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ.

ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ.

ಹುನಗುಂದ: ಪ್ರಸ್ತುತ ಮಾಹಾಮಾರಿ ಕರೊನಾ ವೈರಸ್ ದಿಂದ ಜಗತ್ತಿನಲ್ಲಿ ಏನೆಲ್ಲ ಬಂದ ಮಾಡಬಹುದು ಅವನೆಲ್ಲ ಬಂದ ಮಾಡಿದರು. ದೇವಸ್ಥಾನ ಮುಚ್ಚಿದವು, ಏನು ತೊಂದರೆ ಆಗಲಿಲ್ಲ. ಚರ್ಚ ಮುಚ್ಚಿದವು, ಏನು ತೊಂದರೆ ಆಗಲಿಲ್ಲ ಮಸಿದಿ ಮುಚ್ಚಿದವು, ಏನು ತೊಂದರೆ ಆಗಲಿಲ್ಲ. ಇವೆಲ್ಲವೂ ಲಾಕ್ ಡೌನ ಆದರು ಜನರಿಗೆ ತೊಂದರೆ ಆಗಲೆಯಿಲ್ಲ. ಹನ್ನೆರಡನೆಯ ಶತಮಾನದ ಬಸವಾದಿಶರಣರ ವಿಚಾರದಾರೆಯನ್ನು ಒಮ್ಮೆ ಅವಲೋಕನ ಮಾಡಿ ನೋಡಿದಾಗ ಅವರು ಅನುಭವಿಸಿ ಅನುಭಾವದ ನುಡಿಗಳು ಎಷ್ಟು ಸಾರ್ವಕಾಲಿಕ ಸತ್ಯ ಇವೆ ನೋಡಿ ಶರಣ ಬಂದುಗಳೆ.

ಬಸವಣ್ಣನವರು ಹೇಳಿದ ಮಾತು “ಸ್ಥಾವರಕ್ಕಳಿವುಂಟ ಜಂಗಮಕ್ಕಳಿವಿಲ್ಲ” ಇವತ್ತು ಯಾವ ಸ್ಥಾವರವು ಕರೊನಾ ವಾಸಿಯಾಗಲು ಸಹಾಯ ಮಾಡಲಿಲ್ಲ ವೈದ್ಯರು, ಪೊಲೀಸರು, ಆಷಾ ಕಾರ್ಯಕರ್ತೆಯರು, ಸ್ವಯಂ ಸೇವಕರು, (ಇವರೆಲ್ಲ ಜಂಗಮರು) ಇವರೆಲ್ಲ ಇಲ್ಲದಿದ್ದರೆ ಇವತ್ತು ಜನರ ಜೀವನ ಜಂಜಡದ ಬದುಕಾಗತಿತ್ತು ಎಂದು ಅರಿಯಬೇಕು ಜಂಗಮಕ್ಕಳಿವಿಲ್ಲ, ಇದೆ ಬಸವ್ಣನವರು ಹೇಳಿದ್ದು.
ಬದುಕಲು ಆಹಾರ, ಬಟ್ಟೆ, ವಸತಿ, ಔಷಧಿ, ನೀರು ಇವು ಮುಖ್ಯ,  ಶರಣರು ಇವಕ್ಕೆ ಶಿವಪಂಚಾಯತ ಎನ್ನುವರು ಯಾವದು ನಿತ್ಯ ಬದುಕಿಗೆ ಬೇಕು ಅದು ಇಲ್ಲದಿದ್ದರೆ ನಡೆಯದು ಇಲ್ಲಿ ಸ್ಥಾವರದ್ದೆನು ಕೆಲಸ ಇವತ್ತು ದಿನಸಿ ಆಹಾರ ಸಿಗದಿದ್ದರೆ ನಡೆಯುವದಿಲ್ಲ ಆಸ್ಪತ್ರೆ ಲಾಕ್ ಡೌನ ಆಗಲಿಲ್ಲ ಆದರೆ ನಡೆಯುವದಿಲ್ಲ ಬಸವಣ್ಣನವರು ಆವಾಗಲೇ  ಸೂಕ್ಷ್ಮವಾಗಿ ಸ್ಥಾವರವನ್ನು ಲಿಂಗವ ಆಯತ ಮಾಡಿದವರಿಗೆ ಸ್ಥಾವರ ಲಾಕ್ ಡೌನ ಮಾಡಿದರು. ಕಾಯಕನಿರತನಾದವನಿಗೂ ಲಿಂಗವನ್ನು ಮರೆಯಲು ಹೇಳಿದ್ದರು ನೋಡಿ ಇಂದು ಮಸಿದಿ ಮಂದಿರ ಚರಾಚ ಲಾಕ್ ಡೌನ ಆದವು ಕನಿಷ್ಠ ಕಾಯಕ ಮಾತ್ರ ಲಾಕ್ ಡೌನ ಆಗಲಿಲ್ಲ ಇದರಿಂದ ಅರಿಯಬೇಕು ಕಾಯಕದಲ್ಲಿ ಕೈಲಾಸ ಕಾಣಿರೊ ಬಡಿದಾಡುವ ಅಣ್ಣಗಳಿರಾ ಎಂದು ತಿಳಿಸಿದರು. ಕಾಯಕವೇ ಕೈಲಾಸ ಎಂಬ ಮಾತು ಶರಣರಲ್ಲಿ ರೂಢಿಯಲ್ಲಿದೆ. ತನಗಾಗಿ ಮತ್ತು ಸಮಾಜಕ್ಕಾಗಿ ಶಿವಾರ್ಪಿತ ಭಾವದಿಂದ ಕಾರ್ಯಗಳನ್ನು ಕೈಗೊಂಡು ಎಲ್ಲರೂ ತಂತಮ್ಮ ಕಾಯಕದಲ್ಲಿ ನಿರತರಾಗಿರಬೇಕೆಂದು ಶರಣರ ಆಶಯ.
ಸೋಂಬತನವನ್ನು ಶರಣರು ಖಂಡಿಸುತ್ತಾರೆ.

ಕಾಯಕಕಾರದೆ ಮೈ ಸೋಂಬತನದಿಂದೆ
ಬೇರೆ ಕೂಳ ಗಳಿಸಲಾರದೆ ಹಸಿದಿಪ್ಪರಯ್ಯ|
ಒಡಲ ಸೀರೆಯ ಗಳಿಸಲಾರದೆ
ಕಚ್ಚುಟವ ಕಟ್ಟಿಕೊಂಡಿಪ್ಪರಯ್ಯ|
ಮೀಯಲು ಎಣ್ಣೆ ಗಳಿಸಲಾರದೆ
ಮಂಡೆ ಬೋಳಾಗಿಪ್ಪರಯ್ಯ|
ದಿಟದಿಂದ ಬಿಡಿಸಲರಿಯದೆ ಸಂಸಾರದ ಶಠೆಯನವಧರಿಸಿ
ಕೊಂಡಿಪ್ಪವರಿಗೆ ನಾನಂಜುವೆನೆಯ್ಯ ಸಕಲೇಶ್ವರ|
(ಸಕಲೇಶ ಮಾದರಸ)
ಆವಕಾಯಕವಾದಡೆನು ಸ್ವಕಾಯಕವ ಮಾಡು ವ್ಯಾಧಿ ಬಂದರೆ ನರಳು ಸಾವು ಬಂದರೆ ಸಾಯಿ
ಗುರುಲಿಂಗಜಂಗಮದ ಮುಂದಿಟ್ಟು
ಒಕ್ಕುದ ಹಾರೈಸಿ, ಮಿಕ್ಕುದ ಕೈಗೊಂಡು
ವ್ಯಾಧಿ ಬಂದಡೆ ನರಳು ಬೇನೆ ಬಂದಡೆ ಒರಲು
ಜೀವ ಹೋದಡೆ ಸಾಯಿ ಇದಕ್ಕೆ ದೇವರ ಹಂಗೇಕೆ
ಭಾಪು ಲದ್ದೆಯ ಸೋಮಾ.
ಹಿಗೆಲ್ಲ ಶರಣರು ಹೇಳಿದ ವಚನ ಇವತ್ತಿನ ದಿನಮಾನದ ವಾಸ್ತವಿಕ ಸತ್ಯ. ಇವತ್ತು ನೀನು ಆರೋಗ್ಯ ಸುಧಾರಿಸಲು ದೇವರ ಮೊರೆ ಹೋಗಲು ಅವಕಾಶವಿಲ್ಲ. ನಿನ್ನ ಆರೊಗ್ಯ ಸುಧಾರಿಸಿ ದೇವರೆ ನಿನ್ನ ಹರಿಕೆ ತಿರುಸವೆನಂದರು ಸ್ಥಾವರಕ್ಕೆ ಲಾಕ್ ಡೌನ ಇದೆ ಅಂದರೆ ಅರ್ಥಾತ್ ಅವಶ್ಯಕತೆ ಇಲ್ಲ ಎಂದರಿಯಲು ಹೆದರುವದೇಕೆ? ಸದಾವಕಾಲ ಶರಣರ ದಾರ್ಶನಿಕತ್ವ ಶಾಶ್ವತ ಅರಿಯಬೇಕು. ಸ್ತ್ರೀ ಅಬಲೆ ಭೋಗದ ವಸ್ತು ಮೊಕ್ಷಕ್ಕೆ ಅರ್ಹಳಲ್ಲ ಗೃಹಿಣಿ ಹೀಗೆಲ್ಲ ಇರುವಂತ ಕಾಲದಲ್ಲಿ ಬಸವಣ್ಣನವರು ಬಂದು ಸಮಾನತೆ ಕೊಟ್ಟು ಕಾಯಕಕ್ಕೆ ಹಚ್ಚಿದರು ಸಂಸಾರದ ಜವಾಬ್ದಾರಿ ಕೊಟ್ಟರು ಪುರುಷರಂತೆ ಅನುಭಾವ ಗೋಷ್ಠಿಯಲ್ಲಿ ಭಾಗವಹಿಸಿ ವಚನ ರಚನೆ ಮಾಡಲು ಅನುಮಾಡಿದರು ಈ ಆಧಾರದ ಮೇಲೆ ಅಂಬೆಡ್ಕರವರು ಸಂವಿಧಾನದಡಯಲ್ಲಿ ಸ್ತ್ರೀ ಎಲ್ಲವನ್ನು ಕಲಿತು ವೈದ್ಯಳಾದಳು ಇವತ್ತು ಕರೊನಾದ ವಿರುದ್ಧ ಹೋರಾಡಲು ಸ್ತ್ರೀ ಸಹಿತ ಇರುವರು.
ಹೆಣ್ಣು ಹೆಣ್ಣಲ್ಲ ಹೆಣ್ಣು ಸಾಕ್ಷಾತ ಕಪಿಲಸಿದ್ಧಮಲ್ಲಿರ್ಕಾಜುನ ಎಂದು ತೋರಿಸಿದರು. ಯಾವದೆ ರಂಗದಲ್ಲು ಶರಣರ ತತ್ವ ಸಾರ್ವಕಾಲಿಕ ಸತ್ಯ ನುಡಿದಂತೆ ನಡೆಯ ಧರ್ಮ ಬಸವ ಧರ್ಮ ಇಲ್ಲಿ ನಾವು ನುಡಿವದೇನು ಉಳಿದಿಲ್ಲ ನಡೇಯುವದೊಂದೆ ಉಳಿದಿದೆ. ಒಟ್ಟಾರೆ ಶರಣ ತತ್ವ ಸಾರ್ವಕಾಲಿಕ ಸತ್ಯ

ಶರಣ : ಮಲ್ಲೇಶ ಹಳಕಟ್ಟಿ 

ಹುನಗುಂದ

About Shivanand

Admin : Lingayat Kranti Monthly news paper 8884000008 [email protected]

Check Also

ಲಿಂಗಾಯತ ದಿಟ್ಟ ಶರಣೆ: ಪ್ರೇಮಕ್ಕಾ ಅಂಗಡಿ

  ಬೈಲಹೊಂಗಲ: ಪ್ರೇಮಕ್ಕ ಅಂಗಡಿ ನಮ್ಮ ಸಮಾಜದ ದಿಟ್ಟ ಹೆಣ್ಣುಮಗಳು ಇಂದು ಇಡೀ ರಾಜ್ಯದಲ್ಲಿ ಲಿಂಗಾಯತ ಸಮಾಜದ ಮಹಿಳೆಯರು ಸಂಘಟಿತ …

ಮಠಾಧೀಶರಿಗೆ ರಾಜಕಾರಣದ ಉಸಾಬರಿ ಏಕೆ?

  ಬೆಂಗಳೂರು: ರಾಜ್ಯದಲ್ಲಿನ ಸ್ವಾಮೀಜಿಗಳ ಪೈಕಿ ಕೆಲವರು ರಾಜಕೀಯ ನಾಯಕರಂತೆ ವರ್ತಿಸುತ್ತಿರುವುದು ಅವರು ಪ್ರತಿನಿಧಿಸುವ ಸ್ಥಾನಗಳಿಗೆ ಶೋಭೆ ತರುವಂತಹದ್ದಲ್ಲ. ಸಮಾಜಕ್ಕೆ …

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಯಾರಿಗೆ? ಹಾಗೂ ಮಹಾ ಮಾದರಿ ಶೇ.16ರ ವಿಶೇಷ ಮೀಸಲಾತಿ ಬೇಡವೇ….?

    ಬಸವಣ್ಣ ಬರುವಾಗ | ಬಿಸಿಲು ಬೆಳದಿಂಗಳು || ಮೊಗ್ಗು ಮಲ್ಲಿಗೆ | ಅರಳ್ಯಾವ || ಯಾಲಕ್ಕಿ ಗೊನೆಬಾಗಿ …

ಕರ್ನಾಟಕದ ಮ್ಯಾಕ್ಸ್ ಮುಲ್ಲರ್ ‘ವಚನ ಪಿತಾಮಹ’ ಡಾ. ಫ.ಗು.ಹಳಕಟ್ಟಿ

  ರಾಮದುರ್ಗ: ೧೯೫೬ರಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯದ ಪ್ರತಿಷ್ಠಿತ ಗೌರವ ಡಾಕ್ಟರೇಟ್ ಪದವಿ ಪ್ರದಾನ ಸಮಾರಂಭ. ಡಾ.ಪಾವಟೆಯವರು ಕುಲಪತಿಗಳಾಗಿದ್ದರು. ಕರ್ನಾಟಕ ವಿಶ್ವವಿದ್ಯಾನಿಲಯದ …

ರಾಣಿ ಚನ್ನವೀರಮ್ಮ

  ಲಿಂಗಾಯತ ಕ್ರಾಂತಿ: ಚನ್ನಮ್ಮ ಮತ್ತು ವೀರಮ್ಮ ಇವರಿಬ್ಬರು ಕಿತ್ತೂರ ದೇಸಾಯಿಣಿಗಳು. ಇವರಿಬ್ಬರ ಹೆಸರು ಒಂದಾಗಿರುವ ಚನ್ನವೀರಮ್ಮಾಜಿ ಎನ್ನುವ ಕೆಳದಿಯ …

ಜನಪದವೇ ಲಿಂಗಾಯತ ಧರ್ಮ ಉಳಿವಿಗೆ ಆಧಾರ

  ಬೀದರ್: 12ನೆ ಶತಮಾನದಲ್ಲಿ ನಡೆದ ಕಲ್ಯಾಣ ಕ್ರಾಂತಿ ನಂತರ ಲಿಂಗಾಯತ ಧರ್ಮದ ಶರಣರು ಚೆಲ್ಲಾಪಿಲ್ಲಿ ಆದರು, ಹಲವಾರು ಶರಣರು …

ಸಂವಿಧಾನ ಮತ್ತು ಕಾನೂನುಗಳ ಸಮರ್ಪಕ ಬಳಕೆಯೇ ಈ ದೇಶದ ಎಲ್ಲ ಸಮಸ್ಯೆಗಳಿಗೆ ಪರಿಹಾರ

  ~ ಡಾ. ಜೆ ಎಸ್ ಪಾಟೀಲ. ವಿಜಯಪುರ: ಭಾರತವು ಧಾರ್ಮಿಕ ಮೂಢನಂಬಿಕೆಗಳ ತವರು ಮನೆ. ಇಲ್ಲಿ ಧಾರ್ಮಿಕ ನಂಬಿಕೆಗಳ …

ಗ್ರಾಮ ಸ್ವರಾಜ್ಯ ಸಾಕಾರಗೊಳಿಸಿದ: ರಾಮಪ್ಪ ಬಿದರಿ

ವಿಜಯಪುರ: 1952-1962 ಹತ್ತು ವರ್ಷಗಳ ಕಾಲ ಲೋಕಸಭಾ ಸದಸ್ಯರಾಗಿದ್ದ ರಾಮಪ್ಪ ಬಿದ್ರಿ ಈ ಹುದ್ದೆಯನ್ನು ಎಂದೂ ತಮ್ಮ ಸ್ವಂತದ ಲಾಭಕ್ಕಾಗಿ …

ಲಿಂಗಾಯತ ಧರ್ಮದ ಹೋರಾಟ ಸರಣಿ-2 ಭಾಗ-4

  ಲಿಂಗಾಯತ ಧರ್ಮ ಮಾನ್ಯತೆಯ ಹೊರಾಟದಲ್ಲಿ ಲಿಂಗಾಯತ ಸಮನ್ವಯದ ಸಮಿತಿ ಪಾತ್ರ. ಬಸವಕಲ್ಯಾಣ: ಬೆಂಗಳೂರಿನ ಕುಂಬಳಗೋಡಿನ ಬಸವ ಗಂಗೋತ್ರಿಯಲ್ಲಿ ಜೂನ್ …

ಲಿಂಗಾಯತ ಧರ್ಮದ ಹೋರಾಟ ಸರಣಿ-2

  ಜಾತಿ ಲಿಂಗಾಯತರು ಮತ್ತು ಬೇಡ ಜಂಗಮ ಪಂಚಾಚಾರ್ಯರು ಸತ್ಯವೆಂದು ನಂಬಿ ಲಿಂಗಾಯತ ಧರ್ಮದ ಮಾನ್ಯತೆ ತಪ್ಪಿಸುತ್ತಿದ್ದಾರೆ. ಬಸವಕಲ್ಯಾಣ: 12ನೇ …

ನ. 22 ರಂದು ಡಾ. ಹೆಚ್.ಆರ್.ಗಿರಿಯಾಲ ಅವರಿಗೆ ನುಡಿನಮನ

ಚನ್ನಮ್ಮನ ಕಿತ್ತೂರು: ಸಮೀಪದ ಬೈಲೂರು ಗ್ರಾಮದ ಖ್ಯಾತ ವೈದ್ಯ ಡಾ ಹಣಮಂತ ಆರ್ ಗಿರಿಯಾಲ ಅವರು ಕಳೆದ ಸೆಪ್ಟೆಂಬರ್ 30 …

ಲಿಂಗಾಯತ ಧರ್ಮದ ಹೋರಾಟ ಸರಣಿ-2

  ಲಿಂಗಾಯತ ಧರ್ಮದ ಮಠಾಧೀಶರ ನಿಯೋಗ ಮುಖ್ಯಮಂತ್ರಿಗೆ ಭೇಟಿ ಮಾಡಬಾರದೇಕೆ? ಲಿಂಗಾಯತ ಧರ್ಮದ ಹೋರಾಟದಲ್ಲಿ ಮುಂಚೂಣಿ ಸ್ಥಾನ ವಹಿಸಿ ಅತ್ಯಂತ …

ಸಾಮಾಜಿಕ ಪ್ರಾತಿನಿಧ್ಯತೆ : ಬಿ.ಜೆ ಪಾಟೀಲ

  ವಿಜಯಪುರ : ಸಮಸಮಾಜ ಕಟ್ಟಲು, ಸಂವಿಧಾನದಲ್ಲಿ ಮೂಲಭೂತ ಹಕ್ಕಗಳ ಬಗ್ಗೆ ಮಾತನಾಡುವಾಗ ಮೂರೂ ಬಿಂದುಗಳು ( Article 15, …

ಲಿಂಗಾಯತ–ವೀರಶೈವರಿಗೆ ಶೇ 16 ಮೀಸಲಾತಿ ನೀಡಿ: ಶಿವಮೂರ್ತಿ ಮುರುಘಾ ಶರಣರು

  ಚಿತ್ರದುರ್ಗ: ಜಾತಿ, ಉಪಜಾತಿಗೆ ಒಂದೊಂದು ವಿಧವಾದ ಮೀಸಲಾತಿ ನೀಡುವ ಬದಲು ಲಿಂಗಾಯತ–ವೀರಶೈವ ಸಮುದಾಯಕ್ಕೆ ಶೇ 16ರಷ್ಟು ಮೀಸಲಾತಿಯ ನಿಗದಿಪಡಿಸುವುದು …

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಡಾ. ತೋಂಟದ ಸಿದ್ಧರಾಮ ಶ್ರೀಗಳ ಆಕ್ಷೇಪ

  ಗದಗ: ಸರ್ಕಾರ ತರಾತುರಿಯಲ್ಲಿ ಲಿಂಗಾಯತ ವೀರಶೈವ ಅಭಿವೃದ್ಧಿ ನಿಗಮ ಘೋಷಿಸಿದ್ದು, ಇದಕ್ಕೆ ಯಾವುದೇ ಗೊತ್ತು ಗುರಿಯಾಗಲಿ, ಸ್ಪಷ್ಟತೆಯಾಗಲಿ ಇಲ್ಲ …

Leave a Reply

Your email address will not be published. Required fields are marked *

error: Content is protected !!