Breaking News
Home / featured / ಲಿಂಗಾಯತರನ್ನು ಹಾಳು ಮಾಡುತ್ತಿರುವ ವೀರಶೈವ ಆರಾಧ್ಯ ಜಂಗಮರು.

ಲಿಂಗಾಯತರನ್ನು ಹಾಳು ಮಾಡುತ್ತಿರುವ ವೀರಶೈವ ಆರಾಧ್ಯ ಜಂಗಮರು.

ವಿಜಯಪುರ:- 1881 ರಲ್ಲಿ ಮೈಸೂರು ಸಂಸ್ಥಾನ ಸರಕಾರ ಅಯ್ಯಂಗಾರಿ ಬ್ರಾಹ್ಮಣ ದಿವಾನನೊಬ್ಬನ ಕಾರಸ್ಥಾನದಿಂದ ಲಿಂಗಾಯತ ವನ್ನು ಸ್ವತಂತ್ರ ಧರ್ಮದಿಂದ ತೆಗೆದು ಹಾಕಿ ಶೂದ್ರರಲ್ಲಿ ಸೇರಿಸಿತು.

1891 ಜನಗಣತಿಯಲ್ಲಿ ಮೈಸೂರು ಸಂಸ್ಥಾನದಲ್ಲಿನ ಲಿಂಗಾಯತ ಸಮುದಾಯ ತಮಗೆ ಮತ್ತೆ ಸ್ವತಂತ್ರ ಧರ್ಮದ ಮಾನ್ಯತೆ ಬೇಕು ಎಂದು ಹೋರಾಡಲಿಲ್ಲ.

ಏಕೆಂದರೆ ಹಳೇ ಮೈಸೂರು ಭಾಗದ ಲಿಂಗಾಯತರು ಮಹಾ ಅಜ್ಞಾನಿಗಳಾಗಿದ್ದರು. ಅಲ್ಲಿದ್ದ ವೀರಶೈವ ಆರಾಧ್ಯ ಜಂಗಮರು ಅಲ್ಲಿನ ಲಿಂಗಾಯತರನ್ನು ತಾವು ವೀರಶೈವರು ಎನ್ನುವ ಭ್ರಮೆಯಲ್ಲಿಟ್ಟು 1891 ಜನಗಣತಿ ಸಮಯದಲ್ಲಿ ಮೈಸೂರು ಸಂಸ್ಥಾನ ಸರಕಾರಕ್ಕೆ ಎರಡು ಬೇಡಿಕೆಗಳನ್ನು ಮುಂದಿಟ್ಟಿತ್ತು :

(i) ಲಿಂಗಾಯತರನ್ನು ಶೂದ್ರರ ಪಟ್ಟಿಯಿಂದ ಕೈಬಿಡುವುದು ಮತ್ತು

(ii) ಲಿಂಗಾಯತ ಜಂಗಮರನ್ನು ವೀರಶೈವ ಬ್ರಾಹ್ಮಣರೆಂದು ಪರಿಗಣಿಸುವುದು.

ಈ ಎರಡೂ ಬೇಡಿಕೆಗಳಿಂದ ಆ ಭಾಗದ ಅಖಂಡ ಲಿಂಗಾಯತ ಸಮುದಾಯಕ್ಕೆ ಯಾವುದೇ ಅನುಕೂಲಗಳಿರಲಿಲ್ಲ. ಏಕೆಂದರೆ ಶೂದ್ರ ಪಟ್ಟಿಯಿಂದ ಲಿಂಗಾಯತ ಪ್ರತ್ಯೇಕ ಧರ್ಮದ ಮಾನ್ಯತೆ ಮರಳಿ ಸಿಕ್ಕಿದ್ದರೆ ಲಿಂಗಾಯತರು ಅಲ್ಪಸಂಖ್ಯಾತರ ಸ್ಥಾನಮಾನ ಪಡಿತಿದ್ರು.

ಆದರೆ ಕರಿಬಸವ ಶಾಸ್ತ್ರಿ ನೇತ್ರತ್ವದ ವೀರಶೈವ ಆರಾಧ್ಯ ಜಂಗಮರಿಗೆ ಅಖಂಡ ಲಿಂಗಾಯತ ಸಮುದಾಯಕ್ಕೆ ಅನುಕೂಲವಾಗುವುದು ಬೇಕಿರಲಿಲ್ಲ. ಅದಕ್ಕಾಗಿ ಅವರು ಬಹಳ ನಯವಂಚಕತನದಿಂದ ಶೂದ್ರ ಪಟ್ಟಿಯಿಂದ ಹೊರಬಂದು ಜಂಗಮರಿಗೆ ಬ್ರಾಹ್ಮಣ ಸ್ಥಾನಮಾನ ಪಡೆದರು. ಅವರ ಬೇಡಿಕೆ ಈಡೇರಿಸಿಕೊಳ್ಳಲು ಆರಾಧ್ಯ ಜಂಗಮರು ಇಡೀ ಸಮುದಾಯ ಮತ್ತು ಎಲ್ಲ ಮಠ ಮತ್ತು ಮಠಾಧೀಶರನ್ನು ಬಳಸಿಕೊಂಡರು. ಮಠಾಧೀಶರಿಗೂ ಕೂಡ ತಮ್ಮ ಜಂಗಮ ಜಾತಿ ವ್ಯಾಮೋಹದಿಂದ ಲಿಂಗಾಯತ ಸ್ವತಂತ್ರ ಧರ್ಮಕ್ಕಿಂತ ವೀರಶೈವ ಆರಾಧ್ಯ ಜಂಗಮರ ಅಭಿವ್ರದ್ಧಿ ಮುಖ್ಯವಾಗಿತ್ತು.

ಕಳೆದೆರಡು ವರ್ಷಗಳಿಂದ ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆ ಹೋರಾಟ ತೀವ್ರತೆಮಡೆದಾಗಲು ಅದಕ್ಕೆ ಅಡ್ಡಗಾಲು ಹಾಕಿದ್ದೇ ಈ ವೀರಶೈವ ಜಂಗಮ ಆರಾಧ್ಯರ ಗುಂಪು. ಅಂದರೆ ಒಟ್ಟಾರೆಯಾಗಿ ವೀರಶೈವ ಆರಾಧ್ಯ ಜಂಗಮರ ಗುಂಪಿಗೆ ಲಿಂಗಾಯತ ಕಾಣಿಕೆˌ ಹಣˌ ದೇಣಿಗೆˌ ಸೇವೆ ಮತ್ತು ಬೆಂಬಲ ಬೇಕು. ಆದರೆ ಲಿಂಗಾಯತರಿಗೆ ಅಲ್ಪಸಂಖ್ಯಾತರ ಸ್ಥಾನಮಾನ ಸಿಗಬಾರದು.

ಅಖಂಡ ಲಿಂಗಾಯತ ಸಮುದಾಯದ ಬೆಂಬಲದಿಂದ
ತಾವು ಶೂದ್ರರಲ್ಲ ˌ ಶ್ರೇಷ್ಠ ವೀರಶೈವ ಬ್ರಾಹ್ಮಣರೆಂದು ಮೈಸೂರು ಸಂಸ್ಥಾನ ಸರಕಾರದಿಂದ ಮಾನ್ಯತೆ ಪಡೆದ ಈ ವೀರಶೈವ ಆರಾಧ್ಯ ಜಂಗಮರು ಅದಷ್ಟೆ ಅಲ್ಲದೆ ಆ ಬ್ರಾಹ್ಮಣ ಶ್ರೇಷ್ಠತೆಯನ್ನು ಬದಿಗಿಟ್ಟು ಮತ್ತೊಂದು ಕಡೆ ತಾವು ಬೇಡ ಜಂಗಮರೆಂದು ಪರಿಶಿಷ್ಡರ ಮೀಸಲಾತಿ ಸೌಲಭ್ಯವನ್ನೂ ಕಸಿಯುತ್ತಿದ್ದಾರೆ. ಆದರೆ ಲಿಂಗಾಯತರಿಗೆ ಅಲ್ಪಸಂಖ್ಯಾತರ ಸ್ಥಾನಮಾನ ಸಿಗುವುದಕ್ಕೆ ಸದಾ ಅಡ್ಡಗಾಲು ಹಾಕುತ್ತಲೇ ಇದ್ಧಾರೆ.

ಈ ರೀತಿಯಾಗಿ ಮೊದಲು ಮತ್ತು ಈಗ ಈ ಬೆರಳೆಣಿಕೆಯ ಸಂಖ್ಯೆಯುಳ್ಳ ವೀರಶೈವ ಆರಾಧ್ಯ ಜಂಗಮರ ಹಿತಾಸಕ್ತಿಗಾಗಿ ಇಡೀ ಲಿಂಗಾಯತ ಸಮುದಾಯ ಸಂಕಷ್ಟಕ್ಕೆ ಸಿಲುಕುತ್ತಿದೆ. ಈಗಲಾದರೂ ಲಿಂಗಾಯತ ಬಂಧುಗಳು ಎಚ್ಚತ್ತುಕೊಳ್ಳಬೇಕು. ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟವನ್ನು ಜಂಗಮ ಆರಾಧ್ಯರು ಬೆಂಬಲಿಸಿದರೆ ಮಾತ್ರ ಅವರನ್ನು ಹತ್ತಿರಕ್ಕೆ ಸೇರಿಸಿಕೊಳ್ಳಬೇಕು. ಇಲ್ಲದಿದ್ದರೆ ಜಂಗಮ ಸಮುದಾಯದ ಯಾವುದೇ ಮಠಗಳನ್ನು ಲಿಂಗಾಯತ ಸಮುದಾಯ ಬೆಂಬಲಿಸುವುದು ನಿಲ್ಲಿಸಬೇಕು.

ಶರಣ: ಡಾ. ಜೆ ಎಸ್ ಪಾಟೀಲ.

ವಿಜಯಪುರ





About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ನ. 22 ರಂದು ಡಾ. ಹೆಚ್.ಆರ್.ಗಿರಿಯಾಲ ಅವರಿಗೆ ನುಡಿನಮನ

ಚನ್ನಮ್ಮನ ಕಿತ್ತೂರು: ಸಮೀಪದ ಬೈಲೂರು ಗ್ರಾಮದ ಖ್ಯಾತ ವೈದ್ಯ ಡಾ ಹಣಮಂತ ಆರ್ ಗಿರಿಯಾಲ ಅವರು ಕಳೆದ ಸೆಪ್ಟೆಂಬರ್ 30 …

ಲಿಂಗಾಯತ ಧರ್ಮದ ಹೋರಾಟ ಸರಣಿ-2

  ಲಿಂಗಾಯತ ಧರ್ಮದ ಮಠಾಧೀಶರ ನಿಯೋಗ ಮುಖ್ಯಮಂತ್ರಿಗೆ ಭೇಟಿ ಮಾಡಬಾರದೇಕೆ? ಲಿಂಗಾಯತ ಧರ್ಮದ ಹೋರಾಟದಲ್ಲಿ ಮುಂಚೂಣಿ ಸ್ಥಾನ ವಹಿಸಿ ಅತ್ಯಂತ …

ಸಾಮಾಜಿಕ ಪ್ರಾತಿನಿಧ್ಯತೆ : ಬಿ.ಜೆ ಪಾಟೀಲ

  ವಿಜಯಪುರ : ಸಮಸಮಾಜ ಕಟ್ಟಲು, ಸಂವಿಧಾನದಲ್ಲಿ ಮೂಲಭೂತ ಹಕ್ಕಗಳ ಬಗ್ಗೆ ಮಾತನಾಡುವಾಗ ಮೂರೂ ಬಿಂದುಗಳು ( Article 15, …

ಲಿಂಗಾಯತ–ವೀರಶೈವರಿಗೆ ಶೇ 16 ಮೀಸಲಾತಿ ನೀಡಿ: ಶಿವಮೂರ್ತಿ ಮುರುಘಾ ಶರಣರು

  ಚಿತ್ರದುರ್ಗ: ಜಾತಿ, ಉಪಜಾತಿಗೆ ಒಂದೊಂದು ವಿಧವಾದ ಮೀಸಲಾತಿ ನೀಡುವ ಬದಲು ಲಿಂಗಾಯತ–ವೀರಶೈವ ಸಮುದಾಯಕ್ಕೆ ಶೇ 16ರಷ್ಟು ಮೀಸಲಾತಿಯ ನಿಗದಿಪಡಿಸುವುದು …

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಡಾ. ತೋಂಟದ ಸಿದ್ಧರಾಮ ಶ್ರೀಗಳ ಆಕ್ಷೇಪ

  ಗದಗ: ಸರ್ಕಾರ ತರಾತುರಿಯಲ್ಲಿ ಲಿಂಗಾಯತ ವೀರಶೈವ ಅಭಿವೃದ್ಧಿ ನಿಗಮ ಘೋಷಿಸಿದ್ದು, ಇದಕ್ಕೆ ಯಾವುದೇ ಗೊತ್ತು ಗುರಿಯಾಗಲಿ, ಸ್ಪಷ್ಟತೆಯಾಗಲಿ ಇಲ್ಲ …

Leave a Reply

Your email address will not be published. Required fields are marked *

error: Content is protected !!