Breaking News
Home / featured / ಸಾರಾಯಿ ನಿಷೇಧಕ್ಕೆ ಈಗ ಸಕಾಲ

ಸಾರಾಯಿ ನಿಷೇಧಕ್ಕೆ ಈಗ ಸಕಾಲ

ಸಂಪಾದಕೀಯ : ಮಹಾಮಾರಿ ಕೊರೊನಾ ವೈರಸ್ ಜಗತ್ತಿನಾದ್ಯಂತ ಹಲವಾರು ಸಾವು-ನೋವುಗಳು ಕಷ್ಟ-ನಷ್ಟಗಳನ್ನು ತಂದೊಡ್ಡಿತು ಇದರಿಂದ ಜಗತ್ತಿನ ಸುಮಾರು 650 ಕೋಟಿ ಜನಸಂಖ್ಯೆ ಸಂಪೂರ್ಣ ಸ್ಥಗ್ಧವಾಗಿದ್ದು ಇದು ಶ್ರೀಮಂತರಿಂದ ಕೂಲಿ ಕಾರ್ಮಿಕರನ್ನು ಒಂದೇ ತಕ್ಕಡಿಯಲ್ಲಿ ಸಮಾನವಾಗಿ ತುಗುತ್ತಿದೆ. ಇದರಿಂದ ಕಿತ್ತು ತಿನ್ನುವ ಬಡತನ, ನಿರುದ್ಯೋಗ, ಆರ್ಥಿಕತೆಯ ಕೊರತೆ ಸರ್ವರಿಗೂ ಸಮನಾಗಿ ಹಂಚಿಕೆಯಾಗುತ್ತಿದೆ. ಇನ್ನಷ್ಟು ದಿನಗಳಲ್ಲಿ ಕೊರೊನಾ ವೈರಸ್ ಮುಕ್ತವಾಗಬಹುದು ಆದರೆ ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಬಡತನ, ಆರ್ಥಿಕ ಸಂಕಷ್ಟ ಮುಂದುವರಿಯುತ್ತದೆ.

ಮಧ್ಯ ಸೇವನೆಯಿಂದ ದೇಹದ ಮೇಲಾಗುವ ಅಡ್ಡಪರಿಣಾಮಗಳು

ಇದಕ್ಕೆ ಮುಖ್ಯ ಕಾರಣ ಸೇಂದಿ, ಸಾರಾಯಿ, ಹಾಗೂ ಮದ್ಯಪಾನದ ಉತ್ಪನ್ನಗಳು, ತಂಬಾಕು ಉತ್ಪನ್ನಗಳನ್ನು ತಯಾರಿಸುವ ಕಂಪನಿಗಳು ಸಂಪೂರ್ಣ ನಿಷೇಧಿಸಬೇಕು.ಭಾರತ ದೇಶ ಸುಮಾರು 70ರಷ್ಟು ಹಳ್ಳಿಗಳಿಂದ ಕೊಡಿದ ಕೃಷಿ ಕೂಲಿಕಾರರು ಹಾಗೂ ಗುಡಿ ಕೈಗಾರಿಕೆಗಳಿಂದ ಜೀವನ ನಡೆಸುವ ರಾಷ್ಟವಾಗಿದೆ. ಈ ಜನರು ಬಹಳಷ್ಟು ಕಡು ಬಡತನದಿಂದ ಕೂಡಿದೆ ಹಾಗೂ ಅಂದಿನ ಕೂಲಿಯ ಸಂಬಳ ಪಡೆದು ಅರ್ಧ ಭಾಗ ಸಾರಾಯಿ ಅಂಗಡಿಗಳಿಗೆ ಖರ್ಚು ಮಾಡಿ ಅಂದಿನ ಜೀವನಾಂಶಕ ವಸ್ತುಗಳ ಅದೇ ದಿನ ಖರೀದಿಸಿ ತಿನ್ನುತ್ತಾರೆ. ಇದರಿಂದ ಆ ಬಡಜನತೆ ಆರ್ಥಿಕವಾಗಿ ಬೆಳೆಯಲು ಸಾಧ್ಯವಾಗದು. ಇಂತಹ ಕುಟುಂಬಕ್ಕೆ ನೂರೆಂಟು ತಾಪತ್ರೆಗಳು‌ ಆರಂಭವಾಗಿರುತ್ತದೆ.ಬಡತನಕ್ಕೆ ಕೊಡಲಿ ಪೆಟ್ಟು ಈ ಸಾರಾಯಿ :

ಕೃಷಿ ಕೂಲಿಕಾರರು, ದಿನಗೂಲಿ ಬಟ್ಟೆ ಹೊಲೆಯುವರು, ಕುಂಬಾರ, ಕಂಬಾರ,‌ ಬಡಿಗೇರ, ಹಾಗೂ ಎಲ್ಲ ತಳಮಟ್ಟದ ಕೂಲಿಕಾರರು, ತರಕಾರಿ, ದಿನಸಿ ವ್ಯಾಪಾರಿಗಳು,
ದಿನಗೂಲಿ ಕೂಲಿ ಕಾರ್ಮಿಕರ ಆದಾಯ ಪ್ರತಿದಿನ ಬರುವುದು ಜೊತೆಗೆ ದಿನವೆಲ್ಲ ದುಡಿದರೆ 200-500 ರೂ ಗಳಕೆ ಬಂದರೆ ಶೇ 75 ರಿಂದ 80ರಷ್ಟು ಜನರು ಸುಮಾರು 100 ರಿಂದ 300ರೂಗಳ ವರಗೆ ಮದ್ಯಪಾನ, ತಂಬಾಕು, ತಂಬಾಕಿನ ಉತ್ಪನ್ನಗಳನ್ನು ಸೇವಿಸುತ್ತಾರೆ. ಇದರಿಂದ ಬಡವರು ಆರ್ಥಿಕವಾಗಿ ಹಿಂದುಳಿಯುತ್ತಾರೆ.

ದೂಮಪಾನದಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳು

ಸಾರಾಯಿ ದುಷ್ಪರಿಣಾಮಗಳು :
* ಮಕ್ಕಳ್ಳಿಗೆ ಶಿಕ್ಷಣ ನೀಡುತ್ತಿಲ್ಲಾ.
* ಉನ್ನತ ಶಿಕ್ಷಣ ನೀಡುವಲ್ಲಿ ಅಸಹಾಯಕತೆ
* ಮದ್ಯದ ಅಮಲಿನಲ್ಲಿ ಹೆಂಡತಿಯ ಮೇಲೆ ದೌರ್ಜನ್ಯ
* ಮದ್ಯದ ಅಮಲಿನಿಂದ ಮಹಿಳೆಯರ ಮೇಲೆ ಅತ್ಯಾಚಾರ
* ಮದ್ಯಕ್ಕಾಗಿ ಚಿಕ್ಕ ವಯಸ್ಸಿನಲ್ಲೇ ಮಕ್ಕಳನ್ನು ಬಾಲಕಾರ್ಮಿಕರನ್ನು ಮಾಡುವುದು
* ಉದ್ಯಮಿಗಳು, ರಾಜಕಾರಣಿಗಳು ಮಾತ್ರ ಅಭಿವೃದ್ಧಿ ಇದರಿಂದ ದೇಶದಲ್ಲಿ ಆರ್ಥಿಕ ಅಸಮತೋಲನ
* ಅಜ್ಞಾನದಿಂದ ಸರಕಾರಿ ಸವಲತ್ತುಗಳನ್ನು ಪಡೆಯುವಲ್ಲಿ ವಿಫಲ‌
* ದೇಶದ ಒಟ್ಟು ಬೆಳವಣಿಗೆಯ ಕುಂಠಿತಕ್ಕೆ ಬಹಳಷ್ಟು ಹೊಡೆತ.ಕೊರೊನಾದಿಂದ ಸಾರಾಯಿಗೆ ವಿಮುಕ್ತಿ :
ಕೊರೊನಾ ವೈರಸ್ ತಡೆಗಟ್ಟಲು ಭಾರತ ಪ್ರಧಾನ ಮಂತ್ರಿಗಳು ದೇಶದ ಎಲ್ಲ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ನಮ್ಮ ಕರ್ನಾಟಕದ ಜನಪ್ರಿಯ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ನವರು. ಭಾರತದಲ್ಲಿ ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಸಂಪೂರ್ಣ ಲಾಕ್ ಡೌನ್ ಮಾಡಿದರು ಇದರಿಂದ ಜೀವನಾಂಶಕ ವಸ್ತುಗಳ ಉತ್ಪಾದನೆಗೆ ಅವಕಾಶ ಕಲ್ಪಿಸಿದರಲ್ಲದೆ ಮದ್ಯಪಾನ ಹಾಗೂ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡಲು ಅವಕಾಶ ನೀಡಲಿಲ್ಲ ಇದರಿಂದ ಕೆಲವು ದಿನಗಳವರಿಗೆ ಮದ್ಯವೆಸನಿಗಳು ಹಾರಾಟ ನಡೆಸಿದರು ಕಾಲ ಕಳೆದಂತೆ ಇಂದು ಬಾಯಿ ಮುಚ್ಚಿಕೊಂಡು ದುಡಿಯುತ್ತಿದ್ದಾರೆ ದುಡಿದ ಹಣದಲ್ಲಿ ಬದುಕುವ ಕಲೆ ರೂಡಿಸಿಕೊಂಡು ಜೊತೆಗೆ ಅವರು ನೆಮ್ಮದಿಯ ಬದುಕು ಸಾಗಿಸುತ್ತಿದ್ದಾರೆ. ಇದು ಬಡವರ ಜನಸಾಮಾನ್ಯರ ಜೀವನದಲ್ಲಿ ಸಂತೋಷ ಕೊಡುತ್ತಿದೆ.
ಇದು ಲಾಕ್ ಡೌನ್ ನಂತರ ಶಾಶ್ವತವಾಗಿ ಸಾರಾಯಿ ನಿಷೇಧವಾದರೆ ಸದ್ಯ ನಿತ್ಯ ಕುಡುಕರು ಸಂಪೂರ್ಣವಾಗಿ ಸಾರಾಯಿ ಯಿಂದ ದೂರ ಉಳಿದಿದ್ದು ಇದನ್ನೆ ಮುಂದೆವರಿಸುತ್ತಾರೆ ಹಾಗೂ ಮಾನಸಿಕವಾಗಿ ಗಟ್ಟಿಗೊಂಡು ಬಡ ಕುಟುಂಬಗಳು, ಕೂಲಿ ನಾಲಿ ಮಾಡಿ ಮನೆತನವನ್ನು ಆರ್ಥಿಕವಾಗಿ ಸದೃಢಗೊಳಿಸುತ್ತಾರೆ. ಇದರಿಂದ ನಮ್ಮ ರಾಜ್ಯ, ರಾಷ್ಟ್ರ ಇತರ ಹಿಂದುಳಿದ ದೇಶಗಳಿಗೆ ಮಾದರಿಯಾಗುತ್ತದೆ.ಆದಾಯಕ್ಕಿಂತ ಖರ್ಚುಗಳೆ ಹೆಚ್ಚು:
ನಮ್ಮ ಕರ್ನಾಟಕದ ರಾಜ್ಯದಲ್ಲಿ 2019-2020 ರಲ್ಲಿ ಒಟ್ಟು ಸೇಂದಿ, ಸಾರಾಯಿ, ಬಿಯರ್, ಹಾಗೂ ಇತರ ಉತ್ಪನ್ನಗಳಿಂದ ಸುಮಾರು 19,000 ಕೋಟಿ ರೂಗಳಷ್ಟು ಆದಾಯವಾಗಿದೆ. ಆದರೆ ಇದರಲ್ಲಿ‌ 80% ಹಣ ಸಂಪೂರ್ಣ ಬಡವರಿಂದ ಬಂದಂತಹದ್ದು‌ ಸಾರಾಯಿ, ಸೇಂದಿ, ಇತರ ಲೊಕಲ್ ವೈನ್ ಗಳ ಮೇಲೆ ಸುಮಾರು 20 ರಿಂದ 45% ರಷ್ಟು ತೆರಿಗೆ ವಿಧಿಸಲಾಗುತ್ತದೆ. ಶ್ರೀಮಂತ ವರ್ಗದವರು ಕುಡಿಯುವ ಮದ್ಯಗಳಿಗೆ ಕಡಿಮೆ ಇದೆ. ಶ್ರೀಮಂತರು ಕುಡಿಯುವ ವಿದೇಶಿ ಮದ್ಯಗಳ ಬಳಕೆ ತುಂಬಾ ಕಡಿಮೆ ಇರುತ್ತದೆ. ಆದರಿಂದ ಸುಮಾರು 15,600 ಕೋಟಿ ರೂಗಳಷ್ಟು ಹಣ ಬಡವರಿಂದ ಕಿತ್ತುಕೊಂಡಿದ್ದೆ ಎಂಬುವುದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು.
ಆದರೆ ತಂಬಾಕು ಹಾಗೂ ಮದ್ಯಪಾನ ಮಾಡಿದವರಿಗೆ ನೂರಾರು ಕಾಯಿಲೆಗಳು ಬಂದು ಸರ್ಕಾರಿ ಆಸ್ಪತ್ರೆಗೆ ಸೇರುತ್ತಾರೆ ಇದಕ್ಕೆ ಸರಕಾರ ಆರೋಗ್ಯ ಕೇಂದ್ರಗಳಿಗೆ ಸುಮಾರು 15,000 ರಿಂದ 25,000 ಕೋಟಿ ರೂಗಳಷ್ಟು ಹಣ ನೀಡುತ್ತದೆ.ಸಾರಾಯಿ ನಿಷೇಧದಿಂದ ರಾಜ್ಯದ ಆದಾಯ ದ್ವಿಗುಣ :
ಇಲ್ಲಿ ಮದ್ಯಪಾನ ಹಾಗೂ ಗುಟಖಾ ಉತ್ಪನ್ನಗಳನ್ನು ಹಾಗೂ ಮಾರಾಟವನ್ನು ನಿಷೇಧಿಸಿದರೆ ಇದರ ಅವಶ್ಯತೆ ಕಡಿಮೆಯಾಗುತ್ತದೆ.
* ಮಾನಸಿಕ ಆರೋಗ್ಯ, ಮಹಿಳೆಯರ ಮೇಲಿನ ದೌರ್ಜನ್ಯ, ಹಿಂಸೆ, ಹತ್ಯೆ, ಆತ್ಮಹತ್ಯೆ ಮಾಡಿಕೊಳ್ಳುವ ಸಂಖ್ಯೆ ಕಡಿಮೆಯಾಗುತ್ತದೆ.
* ಪ್ರಜ್ಞಾವಂತ ಯುವಕ-ಯುವತಿಯರ ಬೆಳೆಯುತ್ತಾರೆ.
* ಸರಕಾರಕ್ಕೆ ಉತ್ತಮ ಸ್ಪಂದನೆ ದೊರೆಯುತ್ತದೆ.
* ಬಡವರಿಗೆ ನೀಡಿರುವ ಯೋಜನೆಗಳು ಸ್ಪಷ್ಟವಾಗಿ ಪಲಾಣುಭವಿಗಳಿಗೆ ಪಡೆದುಕೊಳ್ಳಲು ಅನುಕೂಲವಾಗುತ್ತದೆ.
* ಬಡವರು ಸಹ ಉಳಿತಾಯ ದಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬಹುದು.
* ಬಡವರು ಸಹ ಉನ್ನತ ವೃತ್ತಿಪರ ವ್ಯಾಸಂಗ ಮಾಡಿಸಬಹುದು
* ಬಾಲ ಕಾರ್ಮಿಕರ ಸಂಖ್ಯೆ ಸಂಪೂರ್ಣವಾಗಿ ಕಡಿಯಾಗುತ್ತದೆ.
* ಗುಲಾಮಗಿರಿ, ಜೀತಪದ್ಧತಿ ಕಡಿಯಾಗುತ್ತದೆ.
* ವ್ಯೆಶಾವಾಟಿಕೆ, ಕೊಲೆ, ದರೊಡೆ, ಸುಲಿಗೆ ಕಡಿಮೆಯಾಗುತ್ತದೆ.
*ಮಾನವ ಸಂಪನ್ಮೂಲಗಳು ಸಂಪೂರ್ಣ ಬಳಕೆಗೆ ಸಾಧ್ಯ.
*ಪ್ರತಿಯೊಬ್ಬರೂ ಆರ್ಥಿಕವಾಗಿ ಬೆಳೆಯಲು ಸಾಧ್ಯ
* ದೇಶದ ಆದಾಯವನ್ನು ಶಿಕ್ಷಣ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಒತ್ತು ನೀಡಲು ಸಾದ್ಯವಾಗುತ್ತದೆ.
* ಮದ್ಯಪಾನದಿಂದ ಮುಕ್ತರಾದರೆ ಮನೆ- ಸಂಸಾರ ಹಾಗೂ ಜೀವನದ ಕುರಿತು ಎಚ್ಛರಿಕೆ ವಹಿಸಿಕೊಂಡು ಏನಾದರೂ ಉದ್ಯೋಗ ಸೃಷ್ಠಿ ಮಾಡಿಕೊಳ್ಳಲು ಸಾದ್ಯವಾಗಿ ನಿರುದ್ಯೋಗ ಸಮಸ್ಯೆ ಪರಿಹಾರ ನೀಡಲು ಸಾಧ್ಯ
ಮದ್ಯಪಾನ ಮತ್ತು ಗುಟಖಾ ಉತ್ಪನ್ನಗಳನ್ನು ಮಾರಾಟ ನಿಷೇಧಿಸುವುದರಿಂದೆ ಇತಂಹ ಸಾವಿರಾರು ಪ್ರಯೋಜನಗಳಾಗುತ್ತವೆ. ಇದರಿಂದ ರಾಷ್ಟ್ರದ ಆರ್ಥಿಕ ಅಭಿವೃದ್ಧಿಗೆ ಕಾರಣವಾಗುತ್ತದೆ.

 

ಪ್ರತಿಯೊಬ್ಬರೂ ಶೇರ್ ಮಾಡಿ ಎಲ್ಲರಿಗೂ ತಲುಪುವಂತೆ ಮಾಡಿ. ಸಾರಾಯಿ ನಿಷೇಧ ಎಲ್ಲರೂ ಬೆಂಬಲಿಸಿ.

ಧನ್ಯವಾದಗಳು..

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಡೊಂಗಿ ಮಂತ್ರವಾದಿ ಲಪಟಾಯಿಸಿದ್ದು 6 ಕೋಟಿ

  ಬೆಳಗಾವಿ: ಖ್ಯಾತ ಸಂಗೀತ ಸಂಯೋಜಕ ಕೆ.ಕಲ್ಯಾಣ ಅವರ ದಾಂಪತ್ಯ ವಿವಾದ ಹೊಸ ತಿರುವು ಪಡೆದುಕೊಂಡಿದ್ದು, ಡೊಂಗಿ ಮಂತ್ರವಾದಿ ಲಪಟಾಯಿಸಿದ …

Leave a Reply

Your email address will not be published. Required fields are marked *

error: Content is protected !!