Breaking News
Home / featured / ಲಿಂಗಾಯತ ಎಂಬುದೊಂದು ಕ್ರಾಂತಿಕಾರಿ ಚಳುವಳಿ

ಲಿಂಗಾಯತ ಎಂಬುದೊಂದು ಕ್ರಾಂತಿಕಾರಿ ಚಳುವಳಿ

ಈ ಚಿತ್ರ ಅರ್ಥಮಾಡಿಕೊಳ್ಳಲಾರದ ಲಿಂಗಾಯತರು ನಿಜವಾದ ಲಿಂಗಾಯತ ತತ್ವ ಅರಿತಿರಲಾರರು, ಅದೇ ರೀತಿ ಇದನ್ನು ಅರ್ಥಮಾಡಿಕೊಳ್ಳದ ದಲಿತ ಮತ್ತು‌ ಹಿಂದುಳಿಸಲ್ಪಟ್ಟವರೂ ಸಹ ನಿಜವಾದ ಭೀಮತತ್ವವ ಅರಿತುಕೊಂಡಿರಲಾರರು.‌

 

 

ಬಸವ ಭೀಮ ತತ್ವಗಳ ಅರಿತ ಎಲ್ಲರೂ ನಿಜ ಲಿಂಗಾಯತರೇ ಆಗಿರುತ್ತಾರೆ. ಕಾರಣ ಲಿಂಗಾಯತ ಎಂಬುದು ಜಾತಿ ಅಲ್ಲ ಅದೊಂದು ಚಳುವಳಿ, ಅದೊಂದು ಕ್ರಾಂತಿಕಾರಿ ಹೋರಾಟಕ್ಕಿಟ್ಟ ಹೆಸರು.

ಹೌದು, ಹಲವರು ಲಿಂಗಾಯತ ಎಂಬುದನ್ನು ತಮ್ಮ ಜಾತಿಯಾಗಿಯೂ, ಮೇಲ್ವರ್ಗತನದ ಹೆಮ್ಮೆಯಾಗಿಯೂ ಭಾವಿಸಿದ್ದರೆ ಅವರಷ್ಟು ಕುಬ್ಜರು ಯಾರೂ ಇರಲಾರರು, ಅದೇ ರೀತಿ ಲಿಂಗಾಯತ ಕ್ರಾಂತಿಯ ಅರಿಯದೇ ಇರುವ ಹಲವರು ಅದನ್ನು ಕೇವಲ ಜಾತಿಯಂತೆ ನೋಡುವ ಹಲವು ವೈಚಾರಿಕರೂ ನನ್ನಲ್ಲಿದ್ದಾರೆ.

ಅದೇನೆ ಇರಲಿ, ಯಾರಿಗೆ ಬಸವ ಭೀಮ ಸಾಮಾಜಿಕ ನಿಲುವುಗಳು, ಕ್ರಾಂತಿಕಾರಿ ಹೋರಾಟಗಳು , ಮಾನವೀಯ ಮೌಲ್ಯಗಳ ಸಂಪಾದನೆಯಾದ ಸಮಾನತೆ, ಕಾಯಕ , ದಾಸೋಹ ಅರಿವು ಆಚಾರಣೆಗಳ ಬಗ್ಗೆ ಅರ್ಥವಾಗಿರುವುದಿಲ್ಲವೋ ಅವರು ವಿಶ್ವಮಾನವೀಯತೆಯ ಅರಿಯದೇ ಬರೀ ಕೋಮುವಾದಿ ಮೂಲಭೂತವಾದಿತನವನ್ನೇ ತಮ್ಮೊಳಗೆ ಇಳಿಸಿಕೊಂಡು ಸಾಮಾಜಿಕ ಅಸಮತೋಲನಕ್ಕೆ ಕಾರಣರಾಗುತ್ತಾರೆ.

ಸಕಲ ಜೀವಾತ್ಮರಿಗೂ ಲೇಸ ಬಯಸಿದ ಬಸವ
ಸಕಲ ಜೀವಾತ್ಮರಿಗೂ ನ್ಯಾಯ ನೀಡಿದ ಭೀಮ
ಎಂಬುದ ಅರಿತ ನಿಮಗೆಲ್ಲಾ ಶರಣು ಶರಣಾರ್ಥಿಗಳು.

ಶರಣೆ: ದೀಪ್ತಿ ಎಸ್ ಪಾಟೀಲ್
ಬಸವಪ್ರಿಯಳು.

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

‘ಶರಣಾರ್ಥಿ’ ಗುರು ಪ್ರವೇಶ..!

  ಗಜೇಂದ್ರಗಡದ ಶರಣದಂಪತಿಗಳು ನೂತನ ಮನೆಗೆ ‘ಶರಣಾರ್ಥಿ’ ಎಂದು ವಿಶಿಷ್ಟ ರೀತಿಯಲ್ಲಿ ಮನೆ ನಾಮಕರಣ ಮಾಡಿ ಗುರುಪ್ರವೇಶ, ಅನುಭಾವ ಹಾಗೂ …

Leave a Reply

Your email address will not be published. Required fields are marked *

error: Content is protected !!