Breaking News
Home / featured / ಗದಗ​ದಲ್ಲಿ ಕೊರೋನಾ ಪ್ರಕರಣ ಇದ್ದರೂ ಟೆಸ್ಟಿಂಗ್ ಕಿಟ್ ಲಭ್ಯವಿಲ್ಲ: ಹೆಚ್.ಕೆ. ಪಾಟೀಲ್​​ ಆಕ್ರೋಶ

ಗದಗ​ದಲ್ಲಿ ಕೊರೋನಾ ಪ್ರಕರಣ ಇದ್ದರೂ ಟೆಸ್ಟಿಂಗ್ ಕಿಟ್ ಲಭ್ಯವಿಲ್ಲ: ಹೆಚ್.ಕೆ. ಪಾಟೀಲ್​​ ಆಕ್ರೋಶ

ಗದಗ: ಜಿಲ್ಲೆಯ ಮೆಡಿಕಲ್ ಕಾಲೇಜಿನಲ್ಲಿ ಮೂರು ಉಪಕರಣಗಳಿವೆ .ಆದರೆ ಇವತ್ತಿನವರೆಗೂ ಐಸಿಎಂ ಯವರು ಪರವಾನಿಗೆ‌ ನೀಡುತ್ತಿಲ್ಲ. ನೊಡಲ್ ಆಫೀಸರ್ ನಿಷ್ಕಾಳಜಿಯ ಉತ್ತರ‌ ನೀಡುತ್ತಿದ್ದಾರೆ. ಗದಗ ಜಿಲ್ಲೆಯಲ್ಲಿ ಈಗಾಗಲೇ ಎರಡು ಕೊರೋನಾ ಪಾಸಿಟಿವ್ ಪ್ರಕರಣ ಬಂದೀವೆ. ಸರ್ಕಾರ ಗದಗ ಜಿಲ್ಲೆಗೆ ಈವರೆಗೂ ಟೆಸ್ಟಿಂಗ್ ಕಿಟ್ ಕೊಡದೇ‌ ಇರುವುದು ದುರ್ದೈವ ಎಂದು ಶಾಸಕ ಹೆಚ್ ಕೆ ಪಾಟೀಲ್ ಹೇಳಿದ್ದಾರೆ.ಜಿಲ್ಲೆಗೊಂದು ಟೆಸ್ಟಿಂಗ್ ಲ್ಯಾಬೊರೇಟರಿ ಆಗಲಿ ಅಂತ ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡಿದ್ದೆ. ಕಳೆದ ಮಾರ್ಚ್ 23 ರಂದೇ ಹೇಳಿದ್ದೆ. ಈ ವಿಚಾರವಾಗಿ ಮುಖ್ಯಮಂತ್ರಿಗಳ ಗಮನಕ್ಕೆ ಹಲವಾರು ಬಾರಿ ತಂದಿದ್ದೆ. ಇವತ್ತಿಗೆ ಕೆಎಂಸಿಯಲ್ಲಿ‌ ಲ್ಯಾಬೊರೇಟರಿ ಬಿಟ್ರೆ ಎಲ್ಲಿಯೂ ಲ್ಯಾಬ್ ಆಗಿಲ್ಲ. ಇದು ಸರಕಾರದ ಬೇಜವಾಬ್ದಾರಿತನ ಎಂದು ಸರ್ಕಾರದ ವಿರುದ್ಧ ಶಾಸಕ ಹೆಚ್ ಕೆ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದರು.

ಗದಗ ಜಿಲ್ಲೆಯ ಮೆಡಿಕಲ್ ಕಾಲೇಜಿನಲ್ಲಿ ಮೂರು ಉಪಕರಣಗಳಿವೆ .ಆದರೆ ಇವತ್ತಿನವರೆಗೂ ಐಸಿಎಂ ಯವರು ಪರವಾನಿಗೆ‌ ನೀಡುತ್ತಿಲ್ಲ. ನೊಡಲ್ ಆಫೀಸರ್ ನಿಷ್ಕಾಳಜಿಯ ಉತ್ತರ‌ ನೀಡುತ್ತಿದ್ದಾರೆ. ಮೂರು ಕುಟುಂಬದಲ್ಲಿ ಈವರೆಗೂ ಶವಗಳನ್ನು ಅಂತ್ಯ ಸಂಸ್ಕಾರ ಮಾಡಿಲ್ಲ. ಆಕಸ್ಮಿಕವಾಗಿ ಸಾವನ್ನಪ್ಪಿದ ಮೂರು ಜನರ ಅಂತ್ಯಸಂಸ್ಕಾರ ಇನ್ನೂ ಆಗಿಲ್ಲ. ಅದಕ್ಕೆ ಕಾರಣ ಅವರ ಟೆಸ್ಟ್ ರಿಪೋರ್ಟ್ ಬರದೇ ಇರೋದು. ಹೀಗಾದ್ರೆ ಸಾವನಪ್ಪಿದ ಕುಟುಂಬಗಳ ಪರಿಸ್ಥಿತಿ ಏನು ಎಂದು ಪ್ರಶ್ನಿಸಿದ್ದಾರೆ.

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಡೊಂಗಿ ಮಂತ್ರವಾದಿ ಲಪಟಾಯಿಸಿದ್ದು 6 ಕೋಟಿ

  ಬೆಳಗಾವಿ: ಖ್ಯಾತ ಸಂಗೀತ ಸಂಯೋಜಕ ಕೆ.ಕಲ್ಯಾಣ ಅವರ ದಾಂಪತ್ಯ ವಿವಾದ ಹೊಸ ತಿರುವು ಪಡೆದುಕೊಂಡಿದ್ದು, ಡೊಂಗಿ ಮಂತ್ರವಾದಿ ಲಪಟಾಯಿಸಿದ …

Leave a Reply

Your email address will not be published. Required fields are marked *

error: Content is protected !!