Breaking News
Home / featured / ಬಾಬಾಸಾಹೇಬ ಪಾಟೀಲ ಅಭಿಮಾನಿಗಳಿಂದ ಉಚಿತ ಮಾಸ್ಕ್ ವಿತರಣೆ

ಬಾಬಾಸಾಹೇಬ ಪಾಟೀಲ ಅಭಿಮಾನಿಗಳಿಂದ ಉಚಿತ ಮಾಸ್ಕ್ ವಿತರಣೆ

ಚನ್ನಮ್ಮನ ಕಿತ್ತೂರು : ಮಹಾಮಾರಿ ಕೊರೊನಾ ವೈರಸ್ ತಡೆಗಟ್ಟುವ ಹಿನ್ನಲೆಯಲ್ಲಿ ಕಿತ್ತೂರು ತಾಲೂಕಿನ ದೇಗುಲಹಳ್ಳಿ ಗ್ರಾಮದಲ್ಲಿ ಬಾಬಾಸಾಹೇಬ ಪಾಟೀಲ ಅಭಿಮಾನಿ ಬಳಗದ ಮುಖಂಡ ವಿಜಯ ಅಂಕಲಗಿಮಠ ಗ್ರಾಮದ ಮನೆ-ಮನೆಗೆ ಸಂಚರಿಸಿ ಉಚಿತವಾಗಿ ಮಾಸ್ಕ್ ವಿತರಿಸಿದರು.

ಇದು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಾಗೂ ಲಕ್ಷಾಂತರ ಜನರ ಜೀವ ತೆಗೆದುಕೊಂಡಿರುವ ಮಹಾಮಾರಿ ಕೊರೊನಾ ವೈರಸ್ ಜಗತ್ತಿನಾದ್ಯಂತ ಸುಮಾರು10 ಲಕ್ಷ ಜನರಿಗೆ ಈ ವೈರಸ್ ಅಂಟಿಕೊಂಡಿದೆ. ಭಾರತದಲ್ಲಿಯೂ ಸಹ 14ಸಾವಿರಕ್ಕೂ ಅಧಿಕ ಜನರಿಗೆ ವೈರಸ್ ತಗುಲಿದ್ದು ನೂರಾರು ಜನ ನಿಧನ ಹೊಂದಿದ್ದಾರೆ. ಇತಂಹ ಸಂದರ್ಭದಲ್ಲಿ ಪ್ರತಿಯೊಬ್ಬರೂ ಜಾಗೃಕತೆಯಿಂದ ಇರಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಸ್ಯಾನಿಟೈಸರ್ ಇಲ್ಲವೇ ಸೋಪ್ ಬಳಸಿ ಕೈತೊಳೆದುಕೊಳ್ಳಬೇಕು, ಅನಾವಶ್ಯಕವಾಗಿ ಹೊರಗಡೆ ತಿರುಗಾಟ ಮಾಡಬಾರದು ಎಂದು ತಿಳಿಸಿದರು. ಗ್ರಾಮದ ಮುಖಂಡರಾದ ಮಡಿವಾಳಪ್ಪ ಅಂಗಡಿ, ರುದ್ರಪ್ಪ ನಾಯ್ಕರ, ಬಸ್ಸು ನಾಯ್ಕರ, ದೃವ ಜಿವನ್ನವರ ಹಾಗೂ ಬೈಲೂರ ಗ್ರಾಮ ‌ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು.

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಬಡತನದ ಬೇರು ಕತ್ತರಿಸುವ ಕಾರ್ಯ ಮಾಡಿದವರು ಬಸವಾದಿ ಶರಣರು

  ಗಜೇಂದ್ರಗಡ: ಸಮಾಜವನ್ನು ಕಾಡುವ ಬಡತನದ ಬೇರನ್ನು ಕತ್ತರಿಸುವ ಕಾರ್ಯವನ್ನು ಬಸವಾದಿ ಶರಣರು ತಮ್ಮ ನಡೆ ನುಡಿಯ ಮೂಲಕ ಹೇಳಿ …

Leave a Reply

Your email address will not be published. Required fields are marked *

error: Content is protected !!