Breaking News
Home / featured / ಹಡಪದ ಸಮುದಾಯಕ್ಕೆ ವಿಶೇಷ ಪ್ಯಾಕೇಜ್ ನೀಡಿ : ಸಂತೋಷ ಹಡಪದ

ಹಡಪದ ಸಮುದಾಯಕ್ಕೆ ವಿಶೇಷ ಪ್ಯಾಕೇಜ್ ನೀಡಿ : ಸಂತೋಷ ಹಡಪದ

ಬೈಲಹೊಂಗಲ: ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಬೇಕು ಎನ್ನುವ ಕಾಲದಲ್ಲಿ ಒಂದು ಹೊತ್ತಿನ ಊಟಕ್ಕಾಗಿ ಪರಿತಪಿಸುತ್ತಿರುವ ಹಡಪದ ಸಮಾಜದ ದಯನೀಯ ಸ್ಥಿತಿ ಸರಕಾರಕ್ಕೆ ಕಾಣುತ್ತಿಲ್ಲವೇ ..? ಲಾಕ್ ಡೌನ್ ನಿಂದಾಗಿ ರಾಜ್ಯದ ಹಡಪದ ಸಮುದಾಯದ ಎಲ್ಲ ಅಂಗಡಿಗಳು ಬಂದ್ ಆಗಿವೆ ಇದರ ಪರಿಣಾಮ ಕ್ಷೌರಿಕ ವೃತ್ತಿಯನ್ನು ನಂಬಿಕೊಂಡು ಜೀವನ ನಡೆಸುತ್ತಿರುವ ಹಡಪದ ಸಮಾಜ ಸಾಕಷ್ಟು ತೊಂದರೆಗೆ ಒಳಗಾಗಿದೆ ಕ್ರೂರಿ ಕರೋಣಾ ವೈರಸ್ ನಿಂದಾಗಿ ರಾಜ್ಯದ ಸುಮಾರು ಐದು ಲಕ್ಷ ಕ್ಷೌರಿಕ ವೃತ್ತಿ ಮಾಡುವವರ ಜೀವನ ನೀರಿನ ಮೇಲಿನ ಗುಳ್ಳೆಯಂತೆ ಆಗಿದೆ ಕಾರ್ಮಿಕ ರಿಗೆ ನೀಡಿದಂತಹ ಸೌಲಭ್ಯವನ್ನು ಕ್ಷೌರಿಕರಿಗೂ ನೀಡಿ ಈ ಸಮುದಾಯದ ಹಿತ ಕಾಪಾಡುವುದು ರಾಜ್ಯ ಸರ್ಕಾರದ ಮತ್ತು ಕೇಂದ್ರ ಸರ್ಕಾರದ ಕರ್ತವ್ಯವಾಗಿದೆ .

ಸರ್ಕಾರವು ಎಚ್ಚೆತ್ತುಕೊಂಡು ಸಮುದಾಯದ ಮೇಲೆ ಕಣ್ಣು ಹರಿಸದಿದ್ದರೆ ಕುಟುಂಬಗಳು ಬೀದಿಗೆ ಬರುವಂತಹ ಸಂದಿಗ್ಧ ಪರಿಸ್ಥಿತಿ ಬಂದೊದಗಿದೆ ಸರ್ಕಾರ ಶೀಘ್ರವೇ ಹಡಪದ ಸಮುದಾಯದ ಮನವಿಯನ್ನು ಪುರಸ್ಕರಿಸಿ ವಿಶೇಷ ಪ್ಯಾಕೇಜ್ ನೀಡಿ ಕ್ಷೌರಿಕರ ಹಿತ ಕಾಪಾಡಬೇಕು, ಕಾಯಕವೇ ಕೈಲಾಸ ಎಂಬ ತತ್ವದಡಿಯಲ್ಲಿ ಬದುಕುತ್ತಿರುವ ಈ ಸಣ್ಣ ಸಮುದಾಯಕ್ಕೆ ಕೈಹಿಡಿಯುವ ಯಾವೊಬ್ಬ ರಾಜಕೀಯ ನಾಯಕರು ಈ ಸಮುದಾಯದಲ್ಲಿ ಇಲ್ಲ ದಯಮಾಡಿ ಎಲ್ಲ ಕ್ಷೇತ್ರದ ಶಾಸಕರು ಸಂಸದರು ಹಾಗೂ ಸಚಿವರಲ್ಲಿ ಮಂತ್ರಿಗಳಲ್ಲಿ ಕೈಜೋಡಿಸಿ ಸಮಾಜದ ಪರವಾಗಿ ಕಳಕಳಿಯಿಂದ ವಿನಂತಿಸಿಕೊಳ್ಳುತ್ತೇನೆ ಒಂದು ದಿನದ ಕುಟುಂಬ ನಿರ್ವಹಣೆ ನಡೆಸುವುದು ಬಹಳಷ್ಟು ಕಷ್ಟಕರವಾಗಿದೆ ಅಂದೇ ದುಡಿದು ಅಂದೇ ತಿನ್ನುವಂತಹ ಸಂಪ್ರದಾಯ ಇತ್ತು ಈ ಮಹಾಮಾರಿ ಕರುಣಾ ವೈರಸ್ ನಿಂದಾಗಿ ಎಲ್ಲ ಅಂಗಡಿಗಳು ಸಿಲ್ಡೌನ್ ಆಗಿ ಬದುಕು ಕಟ್ಟಿಕೊಳ್ಳಲು ಚಡಪಡಿಸುತ್ತಿರುವ ಕುಟುಂಬಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಇನ್ನು ಗ್ರಾಮೀಣ ಪ್ರದೇಶದ ಜನರಲ್ಲಿ ಸಾಕಷ್ಟು ಆತಂಕ ಎಡೆಮಾಡಿದೆ ತುತ್ತು ಅನ್ನಕ್ಕಾಗಿ ಪರದಾಡುವಂತಹ ಪರಿಸ್ಥಿತಿ ಬಂದಿದೆ, ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಸಮಾಜವನ್ನು ಮೇಲೆತ್ತಲು ಸರ್ಕಾರ ಶೀಘ್ರವೇ ಎಚ್ಚೆತ್ತುಕೊಂಡು ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ ರಾಜ್ಯದ ಸುಮಾರು ಐದು ಲಕ್ಷ ಕುಟುಂಬಗಳನ್ನು ಉಳಿಸಬೇಕೆಂದು ಈ ಮೂಲಕ ಸಮಾಜದ ಪರವಾಗಿ ಸಮಾಜದ ಯುವ ಮುಖಂಡ ಸಂತೋಷ ಹಡಪದ ಸಕಾ೯ರವನ್ನು ಒತ್ತಾಯಿಸಿದ್ದಾರೆ

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಬಡತನದ ಬೇರು ಕತ್ತರಿಸುವ ಕಾರ್ಯ ಮಾಡಿದವರು ಬಸವಾದಿ ಶರಣರು

  ಗಜೇಂದ್ರಗಡ: ಸಮಾಜವನ್ನು ಕಾಡುವ ಬಡತನದ ಬೇರನ್ನು ಕತ್ತರಿಸುವ ಕಾರ್ಯವನ್ನು ಬಸವಾದಿ ಶರಣರು ತಮ್ಮ ನಡೆ ನುಡಿಯ ಮೂಲಕ ಹೇಳಿ …

Leave a Reply

Your email address will not be published. Required fields are marked *

error: Content is protected !!