Breaking News
Home / featured / ಗರ್ಭಿಣಿ ಮಹಿಳೆಗೆ ಮುಧೋಳ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಲು ನಿರಾಕರಣೆ!

ಗರ್ಭಿಣಿ ಮಹಿಳೆಗೆ ಮುಧೋಳ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಲು ನಿರಾಕರಣೆ!

ಮುಧೋಳ:  ತಾಲೂಕಾ ಸಾರ್ವಜನಿಕ  ಆಸ್ಪತ್ರೆಯಲ್ಲಿ ತುಂಬುಗರ್ಭಿಣಿ ಮಹಿಳೆಗೆ ಹೆರಿಗೆ ಶಸ್ತ್ರಚಿಕಿತ್ಸೆ ಮಾಡಲು ನಿರಾಕರಣೆ ಮಾಡಿದ್ದರಿಂದ ಮಹಾಲಿಂಗಪುರ ಸಮುದಾಯ ಆರೋಗ್ಯ ಕೇಂದ್ರ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದ ಘಟನೆಯೊಂದು ನಡೆದಿದೆ. ಮುಧೋಳ ತಾಲೂಕಾ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯವೋ….? ಮಾನವೀಯತೆ ಮರೆತು ಮಾಡುವ ಸೇವೆಯೋ….? ಶನಿವಾರ(ಏ-19) ಪರವೀನ ಆಸೀಪ ಜಮಾದಾರ ಎಂಬುವ ತುಂಬುಗರ್ಭಿಣಿಯನ್ನು ಪತಿಯು ಮುಧೋಳ ತಾಲೂಕಾ ಆಸ್ಪತ್ರೆಗೆ ಬೆಳಗಿನ ಜಾವ 5 ಗಂಟೆ ಸುಮಾರಿಗೆ ಹೆರಿಗೆಗೆಂದು ಕರೆದುಕೊಂಡು ಹೋದಾಗ, ತುರ್ತು ಸೇವೆ ಇದ್ದರೂ ಸಹ ವೈದ್ಯರು 10 ಗಂಟೆಗೆ ಬರಲು ಹೇಳಿದ್ದಾರೆ. ಗರ್ಭಿಣಿಯನ್ನು ನೋಡಿ ನಮಗೆ ಶಸ್ತ್ರ ಚಿಕಿತ್ಸೆ ಮಾಡುಲು ಸಾಧ್ಯವಿಲ್ಲ ನೀವು ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ಹೇಳಿದರು ಗರ್ಭಿಣಿಯ ಪೋಷಕರು ಸಾಕಷ್ಟು ಬಾರಿ ಮನವರಿಕೆ ಮಾಡಿದರು ಸಹ ವೈದ್ಯರು ಶಸ್ತ್ರಚಿಕಿತ್ಸೆ ಮಾಡಲು ಒಪ್ಪದಿದ್ದಾಗ ದಿಕ್ಕು ತೋಚದೆ ಮಹಾಲಿಂಗಪುರದ ಸಮುದಾಯ ಆರೋಗ್ಯ ಕೇಂದ್ರದ ವೈದ್ಯರನ್ನು ಪೋನ್ ಮುಖಾಂತರ ಸಂಪರ್ಕಿಸಿ, ಸುಮಾರು ಇಪ್ಪತ್ತು ಕಿಲೋ ಮೀಟರ್ ದೂರದ ಮಹಾಲಿಂಗಪುರಕ್ಕೆ ಕರೆತಂದು ಹೆರಿಗೆ ಮಾಡಿಸಿ ಶಸ್ತ್ರ ಚಿಕಿತ್ಸೆ ಮಾಡಿಸಿರುವ ಘಟನೆ ನಡೆದಿದೆ ದುರಂತ ಎಂದರೆ ಈ ಗರ್ಭಿಣಿ ನಮ್ಮ ರಾಜ್ಯದ ಉಪಮುಖ್ಯಮಂತ್ರಿಗಳ ತವರು ಕ್ಷೇತ್ರ ಮುಧೋಳ ನಗರದವರಾಗಿದ್ದು ಇಂತಹ ಗಂಭೀರ ಪರಿಸ್ಥಿತಿಯಲ್ಲಿ ರೋಗಿಗಳಿಗೆ ಸರಿಯಾದ ಸಮಯಕ್ಕೆ ಸರಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ದೊರಕದೆ ಜೀವ ಉಳಿಸಿಕೊಳ್ಳಲು ಕುಟುಂಬವೊಂದು ಪರದಾಡಿದ ಘಟನೆ ನಡೆದಿದೆ.

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಬಡತನದ ಬೇರು ಕತ್ತರಿಸುವ ಕಾರ್ಯ ಮಾಡಿದವರು ಬಸವಾದಿ ಶರಣರು

  ಗಜೇಂದ್ರಗಡ: ಸಮಾಜವನ್ನು ಕಾಡುವ ಬಡತನದ ಬೇರನ್ನು ಕತ್ತರಿಸುವ ಕಾರ್ಯವನ್ನು ಬಸವಾದಿ ಶರಣರು ತಮ್ಮ ನಡೆ ನುಡಿಯ ಮೂಲಕ ಹೇಳಿ …

Leave a Reply

Your email address will not be published. Required fields are marked *

error: Content is protected !!