Breaking News
Home / featured / 130 ಕ್ವಿಂಟಾಲ್ ಜೋಳ ದಾನ ಮಾಡಿದ ಮಹಾದಾನಿ

130 ಕ್ವಿಂಟಾಲ್ ಜೋಳ ದಾನ ಮಾಡಿದ ಮಹಾದಾನಿ

ವಿಜಯಪುರ:  “ಕಟ್ಟಿದರೆ ಗೋಳಗುಮ್ಮಟ ಇಲ್ಲದಿದ್ದರೆ ಬಾರಾ ಕಮಾನ್” ಎಂಬ ಗಾದೆ ಇದೆ, ಅದೇ ರೀತಿ “ಧೋಣಿ ಬೆಳೆದರೆ ಓಣೆಲ್ಲಾ ಕಾಳು” ಎಂಬ ಗಾದೆಯೂ ಇದೆ. ಆಪತ್ಕಾಲದಲ್ಲಿ ವಿಜಯಪುರ ಜಿಲ್ಲೆಯ ಜನ ಕೈ ಎತ್ತುವವರೆ ಹೊರತು ಕೈ ಚಾಚುವವರಲ್ಲ, ಈ ಹಿಂದೆ ಯುದ್ಧದ ಸಂದರ್ಭದಲ್ಲಿ ಭಾರತದ ಪ್ರಧಾನಿಗಳನ್ನು ಬಂಗಾರದಲ್ಲಿ ತೂಗಿದವರು ನಾವು. ಜಿಲ್ಲೆಯ ವತಿಯಿಂದ ನಿಧಿಯನ್ನು ದೇಶಕ್ಕೆ ಸಮರ್ಪಿಸಲು ಮನೆ ಮನೆಯಿಂದ ಗುಂಜಿ ಗುಂಜಿ ಬಂಗಾರ ಸಂಗ್ರಹಿಸಿ ನೀಡಿದವರು.
“ನಾವು ನೀಡುವ ಕೈ ಹೊರತು ಚಾಚುವ ಕೈ ಅಲ್ಲ” ಎನ್ನುವುದನ್ನು ಕೋರೊನಾ ಸಂಕಷ್ಟದಲ್ಲಿ ನಮ್ಮವರು ಮತ್ತೆ ಸಾಬೀತು ಮಾಡಿದ್ದಾರೆ.

ವಿಜಯಪುರ ಜಿಲ್ಲೆಯ ತಿಕೋಟ ತಾಲ್ಲೂಕಿನ ಲೋಹಗಾಂವ ಗ್ರಾಮದ ನಾಗರಾಜ್ ಬಿದರಿ ಬಿ.ಟೆಕ್ ಎಂಜಿನಿಯರ್. ಹೈದರಾಬಾದ್ ನಲ್ಲಿ ಕೈ ತುಂಬಾ ಇದ್ದ ಸಂಬಳವನ್ನು ಬಿಟ್ಟು ಊರಲ್ಲಿದ್ದ ಜಮೀನು ಉಳುಮೆ ಮಾಡಲು ರೈತರಾಗಿ ನೆಲೆ ನಿಂತಿದ್ದಾರೆ. ಇವರ ತಂದೆ ಹಣಮಂತ ಸಾಹುಕಾರ ಬಿದರಿ ಈ ಭಾಗಲ್ಲಿಯೇ ಕೊಡುಗೆ ದಾನಿ ಎಂದು ಹೆಸರುವಾಸಿ. ಇವರ ತಾಯಿಯವರು ಸಾಕ್ಷಾತ್ ಅನ್ನಪೂರ್ಣೇಶ್ವರಿ, ಮನೆಗೆ ಸಾವಿರ ಜನ ಬಂದರೂ ಪ್ರೀತಿಯಿಂದ ಎಲ್ಲರಿಗೂ ಉಣಬಡಿಸಿ ಕಳುಹಿಸುವ ಮಹಾತಾಯಿ. ಇವರ ಸುಪುತ್ರ ನಾಗರಾಜ ಮೊನ್ನೆ ನನಗೆ ಕರೆ ಮಾಡಿ ಸಂಕಷ್ಟ ಸಂದರ್ಭದಲ್ಲಿ ನಾವು ಜಿಲ್ಲಾಡಳಿತದ ಮೂಲಕ ಬಡವರಿಗೆ ನೆರವಾಗಲು ನಾವು ಬೆಳೆದಿರುವ ನೂರಾ ಮೂವತ್ತೈದು ಕ್ವಿಂಟಾಲ್ ಜೋಳದಲ್ಲಿ ಐದು ಕ್ವಿಂಟಾಲ್ ನಮ್ಮ ಮನೆ ಬಳಕೆಗೆ ಇಟ್ಟುಕೊಂಡು, ಮೂವತ್ತು ಕ್ವಿಂಟಾಲ್ ನಮ್ಮ ಸ್ವಗ್ರಾಮದಲ್ಲಿ ಹಂಚುತ್ತೇವೆ. ಉಳಿದ ನೂರು ಕ್ವಿಂಟಲ ಜಿಲ್ಲಾಡಳಿತಕ್ಕೆ ನೀಡುತ್ತೇವೆ ಎಂದಿದ್ದರು,

ಅಂದು ಹೇಳಿದಂತೆ ಇಂದು ಎರಡು ಟ್ರ್ಯಾಕ್ಟರ್ ಲೋಡ್ ಗಳಲ್ಲಿ ನೂರು ಕ್ವಿಂಟಾಲ್ ಬಿಳಿ ಜೋಳವನ್ನು ತಂದು, ಎಂ.ಬಿ ಪಾಟೀಲರ ಸಮ್ಮುಖದಲ್ಲಿ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಅವರ ನೇತೃತ್ವದಲ್ಲಿ ಜಿಲ್ಲಾಡಳಿತಕ್ಕೆ ನೀಡಿದರು.

ಇದು ನೀಡುವ ಕೈಗಳ ಆರಂಭ ಮಾತ್ರ ಇನ್ನು ಮುಂದೆ ಇಂತಹ ನೂರಾರು ಕೈಗಳು ನೀಡಲು ಮುಂದೆ ಬರಲಿ ಎಂದು ಆಶಿಸುತ್ತೇನೆ. ಮತ್ತು ದಾನಶೂರ ಬಿದರಿ ಅವರ ಕುಟುಂಬಕ್ಕೆ ಸದಾ ಕಾಲ ಒಳಿತಾಗಲಿ.

ಶರಣ: ಡಾ.ಮಹಾಂತೇಶ ಬಿರಾದಾರ
ವಿಜಯಪುರ

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಬಡತನದ ಬೇರು ಕತ್ತರಿಸುವ ಕಾರ್ಯ ಮಾಡಿದವರು ಬಸವಾದಿ ಶರಣರು

  ಗಜೇಂದ್ರಗಡ: ಸಮಾಜವನ್ನು ಕಾಡುವ ಬಡತನದ ಬೇರನ್ನು ಕತ್ತರಿಸುವ ಕಾರ್ಯವನ್ನು ಬಸವಾದಿ ಶರಣರು ತಮ್ಮ ನಡೆ ನುಡಿಯ ಮೂಲಕ ಹೇಳಿ …

Leave a Reply

Your email address will not be published. Required fields are marked *

error: Content is protected !!