Breaking News
Home / featured / ಜೀವ ಹೋದಡೆ ಸಾಯಿ. ಇದಕ್ಕೆ ದೇವರ ಹಂಗೇಕೆ …?

ಜೀವ ಹೋದಡೆ ಸಾಯಿ. ಇದಕ್ಕೆ ದೇವರ ಹಂಗೇಕೆ …?

ಆವ ಕಾಯಕವಾದಡೂ,ಸ್ವಕಾಯಕವ ಮಾಡಿ;

ಗುರು ಲಿಂಗ ಜಂಗಮದ ಮುಂದಿಟ್ಟು,
ಒಕ್ಕುದ ಹಾರೈಸಿ, ಮಿಕ್ಕುದ ಕೈಕೊಂಡು,

ವ್ಯಾಧಿ ಬಂದಡೆ ನರಳು,
ಬೇನೆ ಬಂದಡೆ ಒರಲು,
ಜೀವ ಹೋದಡೆ ಸಾಯಿ.
ಇದಕ್ಕಾ ದೇವರ ಹಂಗೇಕೆ,
ಭಾಪು ಲದ್ದೆಯ ಸೋಮಾ ?

ಶರಣ ಲದ್ದೆಯ ಸೋಮ

ವಚನ ಅನುಸಂಧಾನ:

ಶರಣರು; ಸತ್ಯನಿಷ್ಠುರತೆ ಕಾರಣದಿಂದ ಸ್ವತಂತ್ರ ಧೀರರೆನಿಸಿದ್ದಾರೆ. ಮತ್ತು ಇವ ರಿಗೆ ತಮ್ಮ ವಿಚಾರ ವಿಷಯದಲ್ಲಿ ಸ್ಪಷ್ಟತೆ ಇದ್ದುದರಿಂದಲೇ ತಮ್ಮ ನಡೆನುಡಿಗಳಲ್ಲಿ ಯೂ ನೇರ ನಿರ್ಭಿಡೆಯ ಸ್ವಭಾವವನ್ನು ಮೈಗೂಡಿಸಿಕೊಂಡಿರಲು ಸಾಧ್ಯವಾಗಿದೆ.
ಪ್ರಸ್ತುತ ವಚನದ ವಚನಕಾರ ಲದ್ದೆಯ ಸೋಮ ಶರಣರು ಇಂಥಹ ಗುಣಸ್ವಭಾ ವವನ್ನು ತಮ್ಮ ಈ ವಚನದಲ್ಲಿ ತೋರಿಸಿ ರುವುದನ್ನು ಗಮನಿಸಬಹುದು. ಈಗಿನ ಸಂದರ್ಭದಲ್ಲಿ ಇಡೀ ಜಗತ್ತು ಕರೋನಾ ವೈರಸ್ ಒಡ್ಡಿದ ಪ್ರಾಣ ಭಯದಿಂದಾಗಿ ತತ್ತರಿಸಿ ಮನೆಯಲ್ಲಿಯೇ ಬಂಧಿಯಾಗಿ ರುವಾಗ,ಈ ವಚನದ ಅನುಸಂಧಾನವು ಸಕಾಲಿಕ ಎನಿಸುತ್ತದೆ. ಪ್ರಸ್ತುತ ವಚನ ವು ಸರಳ, ನೇರ, ಸ್ಪಷ್ಟ ನುಡಿಗಳಲ್ಲಿರು ವ ಕಾರಣದಿಂದ, ಸಹಜ ಓದಿಗೇ ಬೇಗ ದಕ್ಕುತ್ತದೆ. ಹಾಗಾಗಿ, ತೀರಾ ಗಹನವಾದ ಚಿಂತನೆಗೆ ಎಳಸದೇ ವಚನ ಒಳಗೊಂಡ ಸಂಗತಿಯನ್ನು ಪರಿಶೀಲಿಸೋಣ.

ಇಲ್ಲಿ ಲದ್ದೆಯ ಸೋಮ ಶರಣರು ವಚನ ದಲ್ಲಿ; ಕೆಲಸ ಯಾವುದೇ ಇರಲಿ ಪಾಲಿಗೆ ಬಂದದ್ದನ್ನು ಪ್ರಸಾದ ‘ಕಾಯಕ’ ವೆಂದು ಪರಿಭಾವಿಸಿ ಮಾಡ ಬೇಕೆನ್ನುವರು. ಆ ಕಾಯಕದಿಂದ ಬಂದದ್ದರಲ್ಲಿಯೇ ಗುರು ಲಿಂಗ ಜಂಗಮಕ್ಕರ್ಪಿಸಬೇಕೆನ್ನುವ‌ರು.

ಮನುಷ್ಯ ಅಂದಮೇಲೆ ರೋಗ ರುಜಿನ ಜಡ್ಡು ಜಾಪತ್ರೆ ಬರುವುದು ಪ್ರಕೃತಿ ಸಹ ಜ. ಅದನ್ನು ಎದುರಿಸಿ ಅನುಭವಿಸಲೇ ಬೇಕು ಬಿಡುಗಡೆಯಿಲ್ಲ. ಅಷ್ಟೇ ಅಲ್ಲದೇ ಒಂದು ವೇಳೆ ಸಾವು ಬಂದರೂ ಕೂಡಾ ಅದು ಬಿಡುಗಡೆಯಿಲ್ಲವಾದ್ದರಿಂದಾಗಿ, ‘ಸಾಯಿ’. ಎಂಬ ನಿಷ್ಠುರ ಸಂದೇಶವನ್ನು ಶರಣ ಲದ್ದೆಯ ಸೋಮ ನೀಡುವರು. ತನ್ಮೂಲಕ, ಬದುಕಿನ ಕಠೋರ ಸತ್ಯವ ನ್ನು ‘ದೇವರ ಹಂಗಿಲ್ಲದೇ’ ಸ್ವತಃ ಧೈರ್ಯ ದಿಂದ ಎದುರಿಸಿ ಬಾಳಬೇಕೆಂಬ ವಾಸ್ತವ ಸತ್ಯವನ್ನು ತಮ್ಮ ತುಂಬಾ ನೇರ, ನಿಷ್ಠುರ ವಾದ ಮಾತುಗಳಿಂದ ತಿಳಿಸುತ್ತಾರೆ. ಈ ದೃಢತೆಯ ನಡೆಯು ಶರಣರಿಗೆ ಮಾತ್ರ ಸಾಧ್ಯವಾಗುತ್ತದೆ ಎನಿಸುತ್ತದೆ.

ಸಂಕ್ಷಿಪ್ತ ಪರಿಚಯ:

ಶರಣ ಲದ್ದೆಯ ಸೋಮ ‘ಲದ್ದೆ’ ಎಂಬ ಗ್ರಾಮಕ್ಕೆ ಸೇರಿದವರಾಗಿದ್ದು, ಬೀದರ ಜಿಲ್ಲೆಯ ಭಾಲ್ಕಿ ತಾಲೂಕಿನ ಇಂದಿನ ಲಾಧಾ ಗ್ರಾಮವೇ ಇರಬೇಕೆನ್ನಲಾಗಿದೆ.
೧೨ನೆಯ ಶತಮಾನದ ಇವರ ‘ಕಾಯಕ’ ಹುಲ್ಲು ಕೊಯ್ದು ಪಿಂಡಿ ಮಾಡಿ ಮಾರಿ, ಜಂಗಮ ದಾಸೋಹ ಮಾಡುವುದು.
ಅನುಭವ ಮಂಟಪದ ೭೭೦ ಅಮರ ಗಣಂಗಳಲ್ಲಿ ಇವರೂ ಒಬ್ಬ ವಚನಕಾರ ಶರಣರು. ತಮ್ಮ ಹೆಸರನ್ನೇ (ಲದ್ದೆಯ ಸೋಮ) ವಚನಾಂಕಿತ ಮಾಡಿಕೊಂಡು ವಚನ ರಚಿಸಿದ್ದು, ಎಷ್ಟು ವಚನಗಳನ್ನು ರಚಿಸಿದ್ದಾರೆ ಎಂಬುದು ತಿಳಿದಿಲ್ಲ. ಆದರೆ ಪ್ರಸ್ತುತ ಈ ಒಂದೇ ವಚನ ಮಾತ್ರ ಲಭ್ಯ ವಾಗಿದೆ.ಲದ್ದೆಯ ಸೋಮ ಶರಣರ ಬಗ್ಗೆ ಚೆನ್ನಬಸವ ಪುರಾಣ & ಮಹಾಲಿಂಗ ಲೀಲೆಗಳಲ್ಲಿ ಉಲ್ಲೇಖಿದೆಯಂದು ಹೇಳ ಲಾಗುತ್ತದೆ. ಅಲ್ಲದೇ ಬನವಾಸಿ ಮಧು ಕೇಶ್ವರ ದೇವಸ್ಥಾನದಲ್ಲಿನ ಶಿವೋತ್ಸವ ಮಂಟಪದ ಗಗ್ಗರಿ ಕಲ್ಲಿನ ಮೇಲಿರುವ ಶರಣರ ಶಿಲ್ಪಗಳಲ್ಲಿ ಇವರ ವಿಗ್ರಹವಿದೆ ಎನ್ನುವುದು ಕೂಡಾ ಲದ್ದೆಯ ಸೋಮ ಶರಣರ ಘನತೆಯ ಎತ್ತಿ ತೋರಿಸುತ್ತದೆ.

ಶರಣ: ಅಳಗುಂಡಿ ಅಂದಾನಯ್ಯ
ಬೆಳಗಾವಿ

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ನ. 22 ರಂದು ಡಾ. ಹೆಚ್.ಆರ್.ಗಿರಿಯಾಲ ಅವರಿಗೆ ನುಡಿನಮನ

ಚನ್ನಮ್ಮನ ಕಿತ್ತೂರು: ಸಮೀಪದ ಬೈಲೂರು ಗ್ರಾಮದ ಖ್ಯಾತ ವೈದ್ಯ ಡಾ ಹಣಮಂತ ಆರ್ ಗಿರಿಯಾಲ ಅವರು ಕಳೆದ ಸೆಪ್ಟೆಂಬರ್ 30 …

ಲಿಂಗಾಯತ ಧರ್ಮದ ಹೋರಾಟ ಸರಣಿ-2

  ಲಿಂಗಾಯತ ಧರ್ಮದ ಮಠಾಧೀಶರ ನಿಯೋಗ ಮುಖ್ಯಮಂತ್ರಿಗೆ ಭೇಟಿ ಮಾಡಬಾರದೇಕೆ? ಲಿಂಗಾಯತ ಧರ್ಮದ ಹೋರಾಟದಲ್ಲಿ ಮುಂಚೂಣಿ ಸ್ಥಾನ ವಹಿಸಿ ಅತ್ಯಂತ …

ಸಾಮಾಜಿಕ ಪ್ರಾತಿನಿಧ್ಯತೆ : ಬಿ.ಜೆ ಪಾಟೀಲ

  ವಿಜಯಪುರ : ಸಮಸಮಾಜ ಕಟ್ಟಲು, ಸಂವಿಧಾನದಲ್ಲಿ ಮೂಲಭೂತ ಹಕ್ಕಗಳ ಬಗ್ಗೆ ಮಾತನಾಡುವಾಗ ಮೂರೂ ಬಿಂದುಗಳು ( Article 15, …

ಲಿಂಗಾಯತ–ವೀರಶೈವರಿಗೆ ಶೇ 16 ಮೀಸಲಾತಿ ನೀಡಿ: ಶಿವಮೂರ್ತಿ ಮುರುಘಾ ಶರಣರು

  ಚಿತ್ರದುರ್ಗ: ಜಾತಿ, ಉಪಜಾತಿಗೆ ಒಂದೊಂದು ವಿಧವಾದ ಮೀಸಲಾತಿ ನೀಡುವ ಬದಲು ಲಿಂಗಾಯತ–ವೀರಶೈವ ಸಮುದಾಯಕ್ಕೆ ಶೇ 16ರಷ್ಟು ಮೀಸಲಾತಿಯ ನಿಗದಿಪಡಿಸುವುದು …

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಡಾ. ತೋಂಟದ ಸಿದ್ಧರಾಮ ಶ್ರೀಗಳ ಆಕ್ಷೇಪ

  ಗದಗ: ಸರ್ಕಾರ ತರಾತುರಿಯಲ್ಲಿ ಲಿಂಗಾಯತ ವೀರಶೈವ ಅಭಿವೃದ್ಧಿ ನಿಗಮ ಘೋಷಿಸಿದ್ದು, ಇದಕ್ಕೆ ಯಾವುದೇ ಗೊತ್ತು ಗುರಿಯಾಗಲಿ, ಸ್ಪಷ್ಟತೆಯಾಗಲಿ ಇಲ್ಲ …

Leave a Reply

Your email address will not be published. Required fields are marked *

error: Content is protected !!