Breaking News
Home / featured / ಕ್ರಾಂತಿಯೋಗಿ ಬಸವಣ್ಣ ಇಂದಿಗೂ ಪ್ರಸ್ತುತ ಹೇಗೆ.?

ಕ್ರಾಂತಿಯೋಗಿ ಬಸವಣ್ಣ ಇಂದಿಗೂ ಪ್ರಸ್ತುತ ಹೇಗೆ.?

“ಜಗಜ್ಯೋತಿ ಶ್ರೀ ಬಸವೇಶ್ವರರು”

ಚನ್ನಯ್ಯನ ಮನೆಯ ದಾಸನ ಮಗನು.,
ಕಕ್ಕಯ್ಯನ ಮನೆಯ ದಾಸಿಯ ಮಗಳು.,
ಇವರಿಬ್ಬರೂ ಹೊಲದಲ್ಲಿ ಬೆರಣಿಗೆ ಹೋಗಿ.,
ಸಂಗವ ಮಾಡಿದರು…
ಇವರಿಬ್ಬರಿಗೆ ಹುಟ್ಟಿದ ಮಗ – ನಾನು.
ಕೂಡಲಸಂಗಮದೇವ ಸಾಕ್ಷಿಯಾಗಿ…

ಹೊಲೆಯುಂಟೆ ಲಿಂಗವಿದ್ದಡೆಯಲ್ಲಿ?
ಕುಲವುಂಟೆ ಜಂಗಮವಿದ್ದಡೆಯಲ್ಲಿ?
ಎಂಜಲುಂಟೆ ಪ್ರಸಾದವಿದ್ದಡೆಯಲ್ಲಿ?
ಅಪವಿತ್ರದ ನುಡಿಯ ನುಡಿವ ಸೂತಕವೆ ಪಾತಕ.
ನಿಷ್ಕಳಂಕ ನಿಜೈಕ್ಯ ತ್ರಿವಿಧನಿರ್ಣಯ,
ಕೂಡಲಸಂಗಮದೇವಾ, ನಿಮ್ಮ ಶರಣರಿಗಿಲ್ಲದಿಲ್ಲ…

ನಾಡಿನೆಲ್ಲೆಡೆ ಜಾತಿ ಧರ್ಮಗಳ ಅಸಮಾನತೆ ತಾಂಡವವಾಡುತ್ತಿದ್ದಾಗ 11-12 ನೇ ಶತಮಾನದಲ್ಲಿ ಅಲ್ಲೊಂದು ಜ್ಯೋತಿ ಉದಯಿಸಿತು. ಅದೊಂದು ಮಹಾನ್ ಶಕ್ತಿ, ಅದೊಂದು ಮಹಾನ್ ಚೇತನ. ಅವರೇ ನಮ್ಮ ನಾಡಿನ ಮಹಾನ್ ಕ್ರಾಂತಿಯೋಗಿ, ನಾಡಿನ ತುಂಬೆಲ್ಲಾ ಸಮಾನತೆಯ ಮಂತ್ರ ಪಠಿಸಿದ ಬಸವಣ್ಣನವರು.
ಇಂದಿನ ಬಿಜಾಪುರ ಜಿಲ್ಲೆಯ ಬಸವನ ಬಾಗೇವಾಡಿ ಗ್ರಾಮದಲ್ಲಿ ಬ್ರಾಹ್ಮಣ (?) ಕುಟುಂಬದ ಮಾದರಸ ಮತ್ತು ಮಾದಲಾಂಬಿಕೆ ದಂಪತಿಗಳಿಗೆ ಜನಿಸಿದ ಶಿಶುವೇ ನಮ್ಮ ಹೆಮ್ಮೆಯ ವಿಶ್ವಗುರು ಬಸವಣ್ಣನವರು.
ಬಸವಣ್ಣನವರು ತಮ್ಮ ಚಿಕ್ಕ ವಯಸ್ಸಿನಿಂದಲೇ ವೈದಿಕ ಸಂಸ್ಕೃತಿಯ ವಿರೋಧಿಯಾಗಿದ್ದರು. ಬ್ರಾಹ್ಮಣ ಸಂಪ್ರದಾಯದಂತೆ ಅವರಿಗೆ 8 ನೇ ವಯಸ್ಸಿನಲ್ಲಿ ಜನಿವಾರವನ್ನು ಹಾಕಲು ಬಂದಾಗ, ತನಗಿಂತ ಹಿರಿಯಳಾಗಿರುವ ತನ್ನಕ್ಕನಿಗೆ ಜನಿವಾರ ಹಾಕುವಂತೆ ಹಠ ಹಿಡಿಯುತ್ತಾರೆ ಬಸವಣ್ಣ.
ಬ್ರಾಹ್ಮಣ ಸಮುದಾಯದಲ್ಲಿ ಇದು ಪುರುಷರಿಗೆ ಮಾತ್ರ ಹಾಕಲಾಗುತ್ತದೆ, ಮಹಿಳೆಯರಿಗೆ ಇದನ್ನು ಹಾಕುವುದಿಲ್ಲವೆಂದಾಗ, ಸ್ತಿ – ಪುರುಷರ ಬಗೆಗೆ ನಡೆಯುತ್ತಿರುವ ಅಸಮಾನತೆಯನ್ನು ಪ್ರಶ್ನಿಸಿ ಮನೆ ಬಿಟ್ಟು ಹೊರನಡೆಯುತ್ತಾರೆ. ಮನೆ ತೊರೆದ ಆ ಜಗಜ್ಯೋತಿ, ಸತ್ಯಾನ್ವೇಷಣೆಗಾಗಿ ಮಹಾಕ್ಷೇತ್ರ ಕೂಡಲಸಂಗಮಕ್ಕೆ ಬಂದು ನೆಲೆಸುತ್ತಾರೆ.

ಕೂಡಲಸಂಗಮದಲ್ಲಿ ಸತತ 12 ವರ್ಷಗಳ ಕಾಲ ತಮ್ಮ ವಿದ್ಯಾಭ್ಯಾಸವನ್ನು ಮುಗಿಸುವ ಬಸವಣ್ಣನವರು, ಜಾತಿ, ಮತ, ಲಿಂಗ ಭೇದಗಳನ್ನು ತಿರಸ್ಕರಿಸಿ ಸಾಮಾಜಿಕ ಕ್ರಾಂತಿಗೆ ನಾಂದಿ ಹಾಡುತ್ತಾರೆ. ಸಮಾನತೆ, ಕಾಯಕ, ದಾಸೋಹ ತತ್ವಗಳನ್ನು ಸ್ವೀಕರಿಸುವ ಮತ್ತು ಆಚರಿಸುವವರು ಶಿವಶರಣರಾಗಬಹುದು ಎಂಬುದನ್ನು ಇಡೀ ಜಗತ್ತಿಗೆ ಸಾರಿ ಹೇಳುತ್ತಾರೆ.

ಆ ತ್ರಿಮೂರ್ತಿಗಳೆಂಬ ಗೊಂಬೆಗಳನ್ನು ಮೀರಿದ ಸೃಷ್ಠಿಕರ್ತನೇ ನಿಜವಾದ ಶ್ರೇಷ್ಠ ದೈವವೆಂದು ಘೋಷಿಸಿ, ಆ ದೇವನನ್ನು “ಲಿಂಗ” ವೆಂದು ಕರೆಯುತ್ತಾರೆ. ಅವನನ್ನು ಅರಿಯಲು “ಇಷ್ಟಲಿಂಗ” ವನ್ನು ಕೊಡುತ್ತಾರೆ.
ಜಾತಿ ಅಸಮಾನತೆಯನ್ನು ಸೃಷ್ಟಿಸಿದ್ದ ಪುರೋಹಿತಶಾಹಿ ವರ್ಗವನ್ನು ವಿರೋಧಿಸುತ್ತಾರೆ. ಸಮಾಜದ ಅಂಕು-ಡೊಂಕುಗಳನ್ನು ತಿದ್ದಲು ವಚನ ಸಾಹಿತ್ಯ ಚಳುವಳಿ ಆರಂಭಿಸುತ್ತಾರೆ. ತಮ್ಮ ವಚನಗಳ ಮೂಲಕ ಸಾಮಾಜಿಕ ಓರೆ-ಕೋರೆಗಳನ್ನು ತಿದ್ದುತ್ತಾರೆ. ಬಸವಣ್ಣನವರ ಪ್ರಭಾವಕ್ಕೆ ಒಳಗಾದ ಬಹುಜನ ಮತ್ತು ಬ್ರಾಹ್ಮಣ ಕುಟುಂಬಗಳ ನಡುವೆ ವಿವಾಹದ ನಂತರ ಕಲ್ಯಾಣದಲ್ಲಿ ಕ್ರಾಂತಿ ನಡೆಯುತ್ತದೆ.

ಹೀಗೆ ಬಸವಣ್ಣ ಮಾಡಿದ ಸಮಾಜಮುಖಿ ಕಾರ್ಯಗಳು ಇಡೀ ಮನುಕುಲವನ್ನ ಹೊಸ ಮನ್ವಂತರದತ್ತ ಮುನ್ನಡೆಸಿತ್ತು.. 11-12 ನೇ ಶತಮಾನದಲ್ಲಿ ಬಸವಣ್ಣ ಮಾಡಿದ ಕ್ರಾಂತಿಗೆ ಇಂದಿಗೂ ಸಾಕ್ಷಿಯಾಗಿ ನಿಂತಿದೆ ಬಸವನ ಬಾಗೇವಾಡದಲ್ಲಿರುವ ಅನುಭವ ಮಂಟಪ.

ಬಸವಣ್ಣನ ಆಲೋಚನೆಗಳು ಚಿಂತನೆಗಳು, ಇಂದಿಗೂ ಕೂಡ ಪ್ರಸ್ತುತ. ವಿಶ್ವಮಾನ್ಯ ಪಡೆದ ಸಂತ ಇಂದು ಧರ್ಮಕ್ಕೆ ಸೀಮಿತವಾಗಿ, ಕೆಲವರ ಆಸ್ತಿ ಆಗಿ ಉಳಿದಿರೋದು ದುರ್ದೈವ.

ಕ್ಷಮೆ ಇರಲಿ ಬಸವಣ್ಣ ನಿನ್ನ ದೇವರು ಮಾಡಿದ್ದಕ್ಕೆ…
ಕ್ಷಮೆ ಇರಲಿ ಬಸವಣ್ಣ ನಿನಗೆ ಗುಡಿ ಕಟ್ಟಿದ್ದಕ್ಕೆ…
ಕ್ಷಮೆ ಇರಲಿ ಬಸವಣ್ಣ ನಿನ್ನನೇ ಜಾತಿ ಮಾಡಿದ್ದಕ್ಕೆ..!!!
ಕ್ಷಮೆ ಇರಲಿ ಬಸವಣ್ಣ ನಿನ್ನ ವಚನಗಳು ಕೇವಲ ಗೋಡೆಗಳ ಮೇಲೆ ಮಾತ್ರವೇ ಉಳಿದಿದ್ದಕ್ಕೆ..!!!
ನೀನು ಹುಟ್ಟಿದ್ದ ಕ್ಷೇತ್ರ ತೀರ್ಥಕ್ಷೇತ್ರವಾಯ್ತು..!!!
ನೀನು ಇದ್ಧ ಸ್ಥಳವೇ ದೇಗುಲವಾಯ್ತು..!!!
ಮೂರ್ತಿ ಪೂಜೆ ಬೇಡವೆಂದ ನಿನ್ನನೇ
ಮೂರ್ತಿ ಮಾಡಿ ದೇಗುಲದಲ್ಲಿ ಸ್ಥಾಪಿಸಿದರು..
ನಿನ್ನ ಹೆಸರಲ್ಲಿ ಸಂಶೋಧನೆಗಳು, ಮಠಗಳು ವಿಶ್ವ ಪ್ರಸಿದ್ಧ ಉದ್ಯಮಗಳು ಉನ್ನತಿ ಪಡೆಯುತ್ತಿವೆ..

ಆದ್ರೆ ಬಸವಣ್ಣ…,

ನೀನು ಕಂಡ ಕನಸ್ಸು ಮಾತ್ರ ಇಂದಿಗೂ ನನಸಾಗಲಿಲ್ಲ…
ನಿನ್ನ ಕನಸಿನ ಸಮಾನತೆ ಸಾಧ್ಯವಾಗಲಿಲ್ಲ..
ಜಾತಿ ವ್ಯವಸ್ಥೆ ನಾಶವಾಗಲಿಲ್ಲ..
ಮನುಜಮತಂ ವಿಶ್ವ ಪಥಂ ಅನ್ನೋ ಸಮಾಜ ನಿರ್ಮಾಣವಾಗಲಿಲ್ಲ..
ಮೌಡ್ಯ ವಿಜ್ಞಾನವನ್ನೇ ನುಂಗುತ್ತಿದೆ.!
ಸ್ಥಾವರಕ್ಕೆ ಅಳಿವುಂಟು ಜಂಗಮಕ್ಕೆ ಅಳಿವಿಲ್ಲ, ಅನ್ನೋ ಮಾತು ಸುಳ್ಳಾಗಿ,
ಸ್ಥಾವರ ಶಾಶ್ವತವಾಗಿ, ಜಂಗಮ ಅಳಿಸಿದೆ..!!!
ಸಮಾನತೆಯ ಹಾರಿಕಾರನೇ ಮತ್ತೆ ಹುಟ್ಟಿ ಬಾ…
ಜಾತಿಯ ಭೂತವನ್ನ ಸಂಹಾರ ಮಾಡಲು, ಅಸಮಾನತೆಯಿಂದ ಮೆರೆಯುವ ಮೌಡ್ಯರಿಗೆ ಅಂಕುಶ ಹಾಕಲು…

ಮತ್ತೊಂದು ಬಸವ ಜಯಂತಿ ಸಮೀಪಿಸುತಿದೆ.. ಮತ್ತೆ ಮತ್ತೆ ಬಸವಣ್ಣನವರ ಕಲ್ಯಾಣ ರಾಜ್ಯ ನೆನಪಾಗುತ್ತಿದೆ..

ಶರಣೆ: ಸುಮಾ ಮುದ್ದಾಪುರ

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಲಿಂಗಾಯತ ಧರ್ಮದ ಹೋರಾಟ ಸರಣಿ-2

  ಜಾತಿ ಲಿಂಗಾಯತರು ಮತ್ತು ಬೇಡ ಜಂಗಮ ಪಂಚಾಚಾರ್ಯರು ಸತ್ಯವೆಂದು ನಂಬಿ ಲಿಂಗಾಯತ ಧರ್ಮದ ಮಾನ್ಯತೆ ತಪ್ಪಿಸುತ್ತಿದ್ದಾರೆ. ಬಸವಕಲ್ಯಾಣ: 12ನೇ …

ನ. 22 ರಂದು ಡಾ. ಹೆಚ್.ಆರ್.ಗಿರಿಯಾಲ ಅವರಿಗೆ ನುಡಿನಮನ

ಚನ್ನಮ್ಮನ ಕಿತ್ತೂರು: ಸಮೀಪದ ಬೈಲೂರು ಗ್ರಾಮದ ಖ್ಯಾತ ವೈದ್ಯ ಡಾ ಹಣಮಂತ ಆರ್ ಗಿರಿಯಾಲ ಅವರು ಕಳೆದ ಸೆಪ್ಟೆಂಬರ್ 30 …

ಲಿಂಗಾಯತ ಧರ್ಮದ ಹೋರಾಟ ಸರಣಿ-2

  ಲಿಂಗಾಯತ ಧರ್ಮದ ಮಠಾಧೀಶರ ನಿಯೋಗ ಮುಖ್ಯಮಂತ್ರಿಗೆ ಭೇಟಿ ಮಾಡಬಾರದೇಕೆ? ಲಿಂಗಾಯತ ಧರ್ಮದ ಹೋರಾಟದಲ್ಲಿ ಮುಂಚೂಣಿ ಸ್ಥಾನ ವಹಿಸಿ ಅತ್ಯಂತ …

ಸಾಮಾಜಿಕ ಪ್ರಾತಿನಿಧ್ಯತೆ : ಬಿ.ಜೆ ಪಾಟೀಲ

  ವಿಜಯಪುರ : ಸಮಸಮಾಜ ಕಟ್ಟಲು, ಸಂವಿಧಾನದಲ್ಲಿ ಮೂಲಭೂತ ಹಕ್ಕಗಳ ಬಗ್ಗೆ ಮಾತನಾಡುವಾಗ ಮೂರೂ ಬಿಂದುಗಳು ( Article 15, …

ಲಿಂಗಾಯತ–ವೀರಶೈವರಿಗೆ ಶೇ 16 ಮೀಸಲಾತಿ ನೀಡಿ: ಶಿವಮೂರ್ತಿ ಮುರುಘಾ ಶರಣರು

  ಚಿತ್ರದುರ್ಗ: ಜಾತಿ, ಉಪಜಾತಿಗೆ ಒಂದೊಂದು ವಿಧವಾದ ಮೀಸಲಾತಿ ನೀಡುವ ಬದಲು ಲಿಂಗಾಯತ–ವೀರಶೈವ ಸಮುದಾಯಕ್ಕೆ ಶೇ 16ರಷ್ಟು ಮೀಸಲಾತಿಯ ನಿಗದಿಪಡಿಸುವುದು …

Leave a Reply

Your email address will not be published. Required fields are marked *

error: Content is protected !!