Breaking News
Home / featured / ಬಸವನೆಂಬ ವಿಶ್ವ ವಿಸ್ಮಯ: ಅಳಿಯಲಾಗದ ಬೆಳಗು

ಬಸವನೆಂಬ ವಿಶ್ವ ವಿಸ್ಮಯ: ಅಳಿಯಲಾಗದ ಬೆಳಗು

ಬೆಳಗಾವಿ: ಜಗತ್ತಿನ ಧಾರ್ಮಿಕ ಇತಿಹಾಸದಲ್ಲಿ ಬಸವ ಎಂಬುದು ಒಂದು ವಿಸ್ಮಯ. ಸೂರ್ಯ-ಚಂದ್ರರಳಿದರೂ ಬಸವ ಬೆಳಕು ಮರೆಯಾಗುವದಿಲ್ಲ. ಬಸವ ಎಂಬುದು ಸ್ಥಾವರ ಅಲ್ಲ. ಅದು ಎಂದೂ ಅಳಿಯದ ನಿತ್ಯ ನಿರಂತರ. ಬಸವ ಎಂಬುದು ಸರ್ವ ಕಾಲಿಕ ಸತ್ಯ.
ಸುಮಾರು 900 ವರ್ಷಗಳ ಕಾಲ ಹೆಸರು ಹೇಳುವ ವಾರಸುದಾರರಿಲ್ಲದಿದ್ದರೋ 900 ವರ್ಷಗಳ ಕಾಲ ಜನಮಾನಸದಲ್ಲಿ ಹಾಸು ಹೊಕ್ಕಾಗಿರುವ ಬಸವಣ್ಣನವರಂಥ ಧಾರ್ಮಿಕ ನಾಯಕ ಇನ್ನಾವ ಧರ್ಮದಲ್ಲೂ ಸಿಗುವದಿಲ್ಲ. ಕಟ್ಟಾ ಅನುಯಾಯಿಗಳನ್ನು ಹೊಂದಿರುವ, ಜಗತ್ತಿನ ನೂರಾರು ದೇಶಗಳಲ್ಲಿ ಹರಡಿರುವ ಧರ್ಮಗಳು ಇಂದು ಹತ್ತು ಹಲವು ವಿಷಯಗಳಲ್ಲಿ ಚರ್ಚೆಗೆ-ಟೀಕೆಗೆ ಗುರಿಯಾಗುತ್ತಿರುವ ಈ 21 ನೇ ಶತಮಾನದಲ್ಲಿ, ಎಲ್ಲರಿಂದ ಶರಣಾರ್ಥಿ ಹೇಳಿಸಿಕೊಳ್ಳುವ ವಿಶ್ವಗುರುವಾಗಿ ಎದ್ದು ಬಂದಿರುವ ಬಸವಣ್ಣನವರ ಆ ಸತ್ವದ ಪರಿ ನಿಬ್ಬೆರಗುಗೊಳಿಸುತ್ತಿದೆ.

ಇಡಿ ಜಗತ್ತಿನಲ್ಲಿ ಟೀಕೆಗೆ ಗುರಿಯಾಗದ ಏಕೈಕ ಸಾಹಿತ್ಯವೆಂದರೆ ಅದು ಬಸವ ತಂದೆಯ ನೇತೃತ್ವದಲ್ಲಿ ಬಸವಣ್ಣನ ಮಕ್ಕಳು ಕಟ್ಟಿಕೊಟ್ಟಿರುವ ವಚನ ಸಾಹಿತ್ಯ. ವಿಶ್ವದಾದ್ಯಂತ ಇಂದು ವಿಮರ್ಶೆಗೆ ಮತ್ತು ಅಧ್ಯಯನಕ್ಕೆ ಒಳಗಾಗುತ್ತಿರುವದು ಈ ಬಸವ ಭೂಮಿಯ ವಚನ ಸಾಹಿತ್ಯ. ವಚನ ಸಾಹಿತ್ಯ ಇಂದು ಜಗತ್ತಿನ ಬಹುತೇಕ ಭಾಷೆಗಳಿಗೆ ಭಾಷಾಂತರಗೊಂಡಿದೆ. ವಿಶ್ವ ಮೆಚ್ಚುವ ಸಾಹಿತ್ಯವಾಗಿದೆ. ವಚನ ಸಾಹಿತ್ಯದೊಂದಿಗೆ ಜಗತ್ತು ಅಧ್ಯಯನ ಮಾಡುತ್ತಿರುವ ಇನ್ನೊಂದು ಸಾಹಿತ್ಯವೆಂದರೇ, ಅದು ಭಾರತದ ಬಹುಜನರ ಇನ್ನೊಬ್ಬ ಪ್ರತಿನಿಧಿ ಡಾ.ಬಾಬಾಸಾಹೇಬ ಅಂಬೇಡ್ಕರರ ಬರಹ ಮತ್ತು ಭಾಷಣಗಳು.ಬಸವಣ್ಣವರನ್ನು ನಂದಿಯಾಗಿಸುವ ಮೂಲಕ  ಗುಡಿಗುಂಡಾರಗಳ ಕಾವಲುಗಾರನನ್ನಾಗಿಸುವ ಸನಾತನ ಧರ್ಮದ ಎಲ್ಲ ಕುತಂತ್ರಗಳನ್ನು ಮೆಟ್ಟಿನಿಂತು, 900 ವರ್ಷಗಳ ನಂತರ ವಿಶ್ವಗುರುವಾಗಿ ಎದ್ದು ಬಂದ ಬಸವಣ್ಣನೆಂಬ ಆ ಅಮರ ಚೇತನಕ್ಕೆ ಸಾಠಿಯೇ ಇಲ್ಲ. 12 ನೇ ಶತಮಾನದ ಆ ಬಸವ ಕ್ರಾಂತಿ ಎಂತಹ ವಿಸ್ಮಯ ಕ್ರಾಂತಿಯೆಂದರೆ, 900 ವರ್ಷಗಳಲ್ಲಿ ಅನೇಕ ರಾಜ್ಯ-ಸಾಮ್ರಾಜ್ಯಗಳು ಅಳಿಸಿ ಹೋಗಿವೆ, ಅನೇಕ ಗುಡಿ ಗುಂಡಾರಗಳು ನಸಿಸಿ ಹೋಗಿವೆ. ಆದರೆ, 12 ನೇ ಶತಮಾನದಲ್ಲಿ ಬಸವಣ್ಣನವರ ಧಾರ್ಮಿಕ-ವೈಚಾರಿಕ ಕ್ರಾಂತಿಯ ನಿಜ ವಾರಸುದಾರರಾಗಿದ್ದ ಶೋಷಿತ ಸಮುದಾಯಗಳ ಕಟ್ಟಕಡೆಯ ಸಮುದಾಯದ ಶರಣರೂ ಬಸವಣ್ಣನವರೊಂದಿಗೆ ಮತ್ತೆ ಎದ್ದು ಬಂದಿದ್ದಾರೆ.

ಸಮಗಾರ ಹರಳಯ್ಯ, ಹಡಪದ ಅಪ್ಪಣ್ಣ, ನಟವರ ಅಲ್ಲಮಪ್ರಭು, ಡೋಹರ ಕಕ್ಕಯ್ಯ, ಕುಂಬಾರ ಗುಂಡಯ್ಯ, ಮಾದಾರ ಚನ್ನಯ್ಯ, ಕಸ ಗೂಡಿಸುವ ಸತ್ಯಕ್ಕ, ಸಮಗಾರ ಕಲ್ಯಾಣಮ್ಮ, ಒಕ್ಕಲಿಗ ಮುದ್ದಣ್ಣ, ಮೇದಾರ ಕೇತಯ್ಯ, ಮಡಿವಾಳ ಮಾಚಿದೇವ, ಜಗನ್ಮಾತೆ ಅಕ್ಕಮಹಾದೇವಿ ಸೇರಿದಂತೆ ಮತ್ತೆ ಅಗಣಿತ ಶರಣರು, ಶರಣೆಯರುಗಳು ಆಧುನಿಕ ಜಗತ್ತಿಗೆ ಬೆಳಕಾಗಲು ಬಸವ ತಂದೆಯೊಂದಿಗೆ ಮತ್ತೆ ಎದ್ದು ಬಂದಿದ್ದಾರೆ. ಇದೆ 21 ನೇ ಶತಮಾನದ ಬಹುದೊಡ್ಡ ಕೊಡುಗೆ. ಇದೆ ಬಸವ ಕ್ರಾಂತಿಯ ವಿಸ್ಮಯ.
ಬಸವಣ್ಣನವರ ಕ್ರಾಂತಿಯ ಸತ್ವವೇ ಅದು. ಬಸವಣ್ಣನವರು ಸಿಕ್ಕ ಸಿಕ್ಕವರನ್ನು ತಬ್ಬಿಕೊಳ್ಳಲಿಲ್ಲ. ಆಚಾರ್ಯ-ಅಮಾತ್ಯರನ್ನು ಒಪ್ಪಿಕೊಳ್ಳಲಿಲ್ಲ. ಎಲ್ಲರನ್ನು ನಮ್ಮವರೆನ್ನಲಿಲ್ಲ. ಎಲ್ಲರನ್ನು ತಬ್ಬಿಕೊಂಡಿದ್ದರೇ, ಬಸವಣ್ಣನವರು ಬಸವಣ್ಣನವರಾಗಿ ಉಳಿಯುತ್ತಿರಲಿಲ್ಲ. ಬಸವಣ್ಣನವರು ಸಮಾಜದ ಮೂಲೆ, ಮೂಲೆಗಳಲ್ಲಿ ಅಡಗಿದ್ದ, ಸನಾತನ ಧರ್ಮ ಸೃಷ್ಟಿಸಿದ್ದ ಅಮಾನವೀಯ ವರ್ಣ ವ್ಯವಸ್ಥೆಯಿಂದಾಗಿ ಕೇರಿಗಳಲ್ಲಿ, ಕಸದ ತೊಟ್ಟಿಗಳಲ್ಲಿ ಎಸೆಯಲ್ಪಟ್ಟಿದ್ದ ತನ್ನವರನ್ನು, ಇವ ನಮ್ಮವ, ಇವ ನಮ್ಮವ ಎಂದು ಎಬ್ಬಿಸಿಕೊಂಡು ಬಂದರು. ಬಸವಣ್ಣನವರು ಹುಡುಕಿ, ಹುಡುಕಿ ಎತ್ತಿಕೊಂಡು ಬಂದು ಅಪ್ಪಿಕೊಂಡಿದ್ದ ಆ ಅಪ್ಪನ ಮಕ್ಕಳು ತಂದೆಗಿಂತ ಮಿಗಿಲಾದವರು. ಸನಾತನ ಧರ್ಮದ ಕಲ್ಪಿತ ದೇವರುಗಳನ್ನು ಮೆಟ್ಟಿನಿಂತರು. ಕಲ್ಪಿತ ದೇವರುಗಳ, ವೇದ ಶಾಸ್ತ್ರಗಳ ಹೊರೆಕಟ್ಟಿ, ಬೈಯ್ದು ಬೀಸಾಡಿ ಬದುಕಿದರು. ದೇವರನ್ನೆ ತಮ್ಮಲ್ಲಿಗೆ ಕರೆಸಿಕೊಳ್ಳುವ ಮೂಲಕ ಅಗೋಚರ ಶಕ್ತಿಯೆಂಬ ದೇವರನ್ನು ಗೆದ್ದವರು. ಅನುಭವ ಮಂಟಪವೆಂಬ ಮಹಾಮನೆಯನ್ನು ಕಟ್ಟಿಕೊಂಡರು. ತಂದೆ ಕಟ್ಟಿಕೊಟ್ಟ ಧರ್ಮದ ರಕ್ಷಣೆಯಲ್ಲಿ ರಾಜೀ ಮಾಡಿಕೊಂಡವರಲ್ಲ. ಧರ್ಮದ ಬಹುದೊಡ್ಡ ಕೊಡುಗೆಯಾಗಿದ್ದ ವಚನ ಸಾಹಿತ್ಯದ ರಕ್ಷಣೆಗಾಗಿ ತಮ್ಮ ಬಲಿಕೊಟ್ಟರು. ಒಂದು ವಿಸ್ಮಯ ಧರ್ಮ ಮತ್ತು ಸಾಹಿತ್ಯವನ್ನು ಜಗತ್ತಿಗೆ ಮುಟ್ಟಿಸಿದರು. ಲಿಂಗಾಯತ ಧರ್ಮ ಮತ್ತು ಆ ಅಮೂಲ್ಯವಾದ ವಚನ ಸಾಹಿತ್ಯವು ಇಂದು ವಿಶ್ವ ಧರ್ಮವಾಗಿ, ವಿಶ್ವ ಮೆಚ್ಚುವ ಸಾಹಿತ್ಯವಾಗಿ ಕಂಗೋಳಿಸುತ್ತಿದೆ.ಬಸವ ತಂದೆಯ ಆ ಮಕ್ಕಳು ಇಂದಿನ ಜಾತಿ ಲಿಂಗಾಯತರಂತೆ ಉಸಾಬರಿಗಳಲ್ಲ. ಲಿಂಗಾಯತರೆಂದು ಹೇಳಿಕೊಂಡು ವೀರಶೈವ ಮಹಾಸಭೆಯೆಂಬ ವೃದ್ದಾಶ್ರಮ ಕಟ್ಟಿದವರಲ್ಲ. ಕೊರಳಲ್ಲಿ ಇಷ್ಟಲಿಂಗ ಕಟ್ಟಿಕೊಂಡು ಕಿವಿಯಲ್ಲಿ ಹೂವು ಇಟ್ಟುಕೊಂಡವರಲ್ಲ. ಎಲ್ಲರು ಬೇಕ್ರಿ ಎಂದು, ಬಸವ ವಿರೋಧಿಗಳನ್ನು ತಬ್ಬಿಕೊಂಡವರಲ್ಲ. ಬಸವ ವಿರೋಧಿಗಳ ಮಾತುಗಳಿಗೆ ಮರುಳಾಗಿ ಚಪ್ಪಳೆ ತಟ್ಟಿದವರಲ್ಲ. ದೀಪ ಆರಿಸಿ ದೀಪ ಹಚ್ಚಿದವರಲ್ಲ. ಅಧಿಕಾರಕ್ಕಾಗಿ ಆಸೆ ಪಟ್ಟವರಲ್ಲ. ಬಸವಣ್ಣನವರ ಹೆಸರು ಹೇಳಿ ಬದುಕಿದವರಲ್ಲ. ಬಸವಣ್ಣನವರಿಗಾಗಿ ಬದುಕಿದವರು. ಕತ್ತಲನ್ನು ಹೋಗಲಾಡಿಸಲು ಜ್ಞಾನದ ದೀಪ ಹಚ್ಚಿದವರು. ಜಗತ್ತಿಗೆ ಬಸವನೆಂಬ ಬೆಳಕು ನೀಡಿದರು. ಆ ಬೆಳಕಿನ ಫಲವಾಗಿಯೇ 900 ವರ್ಷಗಳ ನಂತರ ಬಸವನೆಂಬ ಪ್ರಖರ ಜ್ಞಾನ ಜ್ಯೋತಿಯ ಬೆಳಕಿನೊಂದಿಗೆ ಎದ್ದು ಬಂದಿದ್ದಾರೆ. ಮತ್ತೆ ಈ ನಾಡನ್ನು ಬೆಳಗಲಿದ್ದಾರೆ. ಈ ನಾಡನ್ನು ಬಸವ ನಾಡನ್ನಾಗಿ ಮಾಡಲಿದ್ದಾರೆ ಎಂಬುದರಲ್ಲಿ ಯಾವ ಸಂಶಯ ಬೇಡ.

ಶರಣು ಶರಣಾರ್ಥಿಗಳು

ಆರ್.ಎಸ್.ದರ್ಗೆ, ಪತ್ರಕರ್ತ
ಅಧ್ಯಕ್ಷ: ಬಸವ ಭೀಮ ಸೇನೆ, ಬೆಳಗಾವಿ
ಮೋ.ನಂ.9986710560

About Shivanand

Admin : Lingayat Kranti Monthly news paper 8884000008 [email protected]

Check Also

ಲಿಂಗಾಯತ ದಿಟ್ಟ ಶರಣೆ: ಪ್ರೇಮಕ್ಕಾ ಅಂಗಡಿ

  ಬೈಲಹೊಂಗಲ: ಪ್ರೇಮಕ್ಕ ಅಂಗಡಿ ನಮ್ಮ ಸಮಾಜದ ದಿಟ್ಟ ಹೆಣ್ಣುಮಗಳು ಇಂದು ಇಡೀ ರಾಜ್ಯದಲ್ಲಿ ಲಿಂಗಾಯತ ಸಮಾಜದ ಮಹಿಳೆಯರು ಸಂಘಟಿತ …

ಮಠಾಧೀಶರಿಗೆ ರಾಜಕಾರಣದ ಉಸಾಬರಿ ಏಕೆ?

  ಬೆಂಗಳೂರು: ರಾಜ್ಯದಲ್ಲಿನ ಸ್ವಾಮೀಜಿಗಳ ಪೈಕಿ ಕೆಲವರು ರಾಜಕೀಯ ನಾಯಕರಂತೆ ವರ್ತಿಸುತ್ತಿರುವುದು ಅವರು ಪ್ರತಿನಿಧಿಸುವ ಸ್ಥಾನಗಳಿಗೆ ಶೋಭೆ ತರುವಂತಹದ್ದಲ್ಲ. ಸಮಾಜಕ್ಕೆ …

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಯಾರಿಗೆ? ಹಾಗೂ ಮಹಾ ಮಾದರಿ ಶೇ.16ರ ವಿಶೇಷ ಮೀಸಲಾತಿ ಬೇಡವೇ….?

    ಬಸವಣ್ಣ ಬರುವಾಗ | ಬಿಸಿಲು ಬೆಳದಿಂಗಳು || ಮೊಗ್ಗು ಮಲ್ಲಿಗೆ | ಅರಳ್ಯಾವ || ಯಾಲಕ್ಕಿ ಗೊನೆಬಾಗಿ …

ಕರ್ನಾಟಕದ ಮ್ಯಾಕ್ಸ್ ಮುಲ್ಲರ್ ‘ವಚನ ಪಿತಾಮಹ’ ಡಾ. ಫ.ಗು.ಹಳಕಟ್ಟಿ

  ರಾಮದುರ್ಗ: ೧೯೫೬ರಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯದ ಪ್ರತಿಷ್ಠಿತ ಗೌರವ ಡಾಕ್ಟರೇಟ್ ಪದವಿ ಪ್ರದಾನ ಸಮಾರಂಭ. ಡಾ.ಪಾವಟೆಯವರು ಕುಲಪತಿಗಳಾಗಿದ್ದರು. ಕರ್ನಾಟಕ ವಿಶ್ವವಿದ್ಯಾನಿಲಯದ …

ರಾಣಿ ಚನ್ನವೀರಮ್ಮ

  ಲಿಂಗಾಯತ ಕ್ರಾಂತಿ: ಚನ್ನಮ್ಮ ಮತ್ತು ವೀರಮ್ಮ ಇವರಿಬ್ಬರು ಕಿತ್ತೂರ ದೇಸಾಯಿಣಿಗಳು. ಇವರಿಬ್ಬರ ಹೆಸರು ಒಂದಾಗಿರುವ ಚನ್ನವೀರಮ್ಮಾಜಿ ಎನ್ನುವ ಕೆಳದಿಯ …

ಜನಪದವೇ ಲಿಂಗಾಯತ ಧರ್ಮ ಉಳಿವಿಗೆ ಆಧಾರ

  ಬೀದರ್: 12ನೆ ಶತಮಾನದಲ್ಲಿ ನಡೆದ ಕಲ್ಯಾಣ ಕ್ರಾಂತಿ ನಂತರ ಲಿಂಗಾಯತ ಧರ್ಮದ ಶರಣರು ಚೆಲ್ಲಾಪಿಲ್ಲಿ ಆದರು, ಹಲವಾರು ಶರಣರು …

ಸಂವಿಧಾನ ಮತ್ತು ಕಾನೂನುಗಳ ಸಮರ್ಪಕ ಬಳಕೆಯೇ ಈ ದೇಶದ ಎಲ್ಲ ಸಮಸ್ಯೆಗಳಿಗೆ ಪರಿಹಾರ

  ~ ಡಾ. ಜೆ ಎಸ್ ಪಾಟೀಲ. ವಿಜಯಪುರ: ಭಾರತವು ಧಾರ್ಮಿಕ ಮೂಢನಂಬಿಕೆಗಳ ತವರು ಮನೆ. ಇಲ್ಲಿ ಧಾರ್ಮಿಕ ನಂಬಿಕೆಗಳ …

ಗ್ರಾಮ ಸ್ವರಾಜ್ಯ ಸಾಕಾರಗೊಳಿಸಿದ: ರಾಮಪ್ಪ ಬಿದರಿ

ವಿಜಯಪುರ: 1952-1962 ಹತ್ತು ವರ್ಷಗಳ ಕಾಲ ಲೋಕಸಭಾ ಸದಸ್ಯರಾಗಿದ್ದ ರಾಮಪ್ಪ ಬಿದ್ರಿ ಈ ಹುದ್ದೆಯನ್ನು ಎಂದೂ ತಮ್ಮ ಸ್ವಂತದ ಲಾಭಕ್ಕಾಗಿ …

ಲಿಂಗಾಯತ ಧರ್ಮದ ಹೋರಾಟ ಸರಣಿ-2 ಭಾಗ-4

  ಲಿಂಗಾಯತ ಧರ್ಮ ಮಾನ್ಯತೆಯ ಹೊರಾಟದಲ್ಲಿ ಲಿಂಗಾಯತ ಸಮನ್ವಯದ ಸಮಿತಿ ಪಾತ್ರ. ಬಸವಕಲ್ಯಾಣ: ಬೆಂಗಳೂರಿನ ಕುಂಬಳಗೋಡಿನ ಬಸವ ಗಂಗೋತ್ರಿಯಲ್ಲಿ ಜೂನ್ …

ಲಿಂಗಾಯತ ಧರ್ಮದ ಹೋರಾಟ ಸರಣಿ-2

  ಜಾತಿ ಲಿಂಗಾಯತರು ಮತ್ತು ಬೇಡ ಜಂಗಮ ಪಂಚಾಚಾರ್ಯರು ಸತ್ಯವೆಂದು ನಂಬಿ ಲಿಂಗಾಯತ ಧರ್ಮದ ಮಾನ್ಯತೆ ತಪ್ಪಿಸುತ್ತಿದ್ದಾರೆ. ಬಸವಕಲ್ಯಾಣ: 12ನೇ …

ನ. 22 ರಂದು ಡಾ. ಹೆಚ್.ಆರ್.ಗಿರಿಯಾಲ ಅವರಿಗೆ ನುಡಿನಮನ

ಚನ್ನಮ್ಮನ ಕಿತ್ತೂರು: ಸಮೀಪದ ಬೈಲೂರು ಗ್ರಾಮದ ಖ್ಯಾತ ವೈದ್ಯ ಡಾ ಹಣಮಂತ ಆರ್ ಗಿರಿಯಾಲ ಅವರು ಕಳೆದ ಸೆಪ್ಟೆಂಬರ್ 30 …

ಲಿಂಗಾಯತ ಧರ್ಮದ ಹೋರಾಟ ಸರಣಿ-2

  ಲಿಂಗಾಯತ ಧರ್ಮದ ಮಠಾಧೀಶರ ನಿಯೋಗ ಮುಖ್ಯಮಂತ್ರಿಗೆ ಭೇಟಿ ಮಾಡಬಾರದೇಕೆ? ಲಿಂಗಾಯತ ಧರ್ಮದ ಹೋರಾಟದಲ್ಲಿ ಮುಂಚೂಣಿ ಸ್ಥಾನ ವಹಿಸಿ ಅತ್ಯಂತ …

ಸಾಮಾಜಿಕ ಪ್ರಾತಿನಿಧ್ಯತೆ : ಬಿ.ಜೆ ಪಾಟೀಲ

  ವಿಜಯಪುರ : ಸಮಸಮಾಜ ಕಟ್ಟಲು, ಸಂವಿಧಾನದಲ್ಲಿ ಮೂಲಭೂತ ಹಕ್ಕಗಳ ಬಗ್ಗೆ ಮಾತನಾಡುವಾಗ ಮೂರೂ ಬಿಂದುಗಳು ( Article 15, …

ಲಿಂಗಾಯತ–ವೀರಶೈವರಿಗೆ ಶೇ 16 ಮೀಸಲಾತಿ ನೀಡಿ: ಶಿವಮೂರ್ತಿ ಮುರುಘಾ ಶರಣರು

  ಚಿತ್ರದುರ್ಗ: ಜಾತಿ, ಉಪಜಾತಿಗೆ ಒಂದೊಂದು ವಿಧವಾದ ಮೀಸಲಾತಿ ನೀಡುವ ಬದಲು ಲಿಂಗಾಯತ–ವೀರಶೈವ ಸಮುದಾಯಕ್ಕೆ ಶೇ 16ರಷ್ಟು ಮೀಸಲಾತಿಯ ನಿಗದಿಪಡಿಸುವುದು …

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಡಾ. ತೋಂಟದ ಸಿದ್ಧರಾಮ ಶ್ರೀಗಳ ಆಕ್ಷೇಪ

  ಗದಗ: ಸರ್ಕಾರ ತರಾತುರಿಯಲ್ಲಿ ಲಿಂಗಾಯತ ವೀರಶೈವ ಅಭಿವೃದ್ಧಿ ನಿಗಮ ಘೋಷಿಸಿದ್ದು, ಇದಕ್ಕೆ ಯಾವುದೇ ಗೊತ್ತು ಗುರಿಯಾಗಲಿ, ಸ್ಪಷ್ಟತೆಯಾಗಲಿ ಇಲ್ಲ …

Leave a Reply

Your email address will not be published. Required fields are marked *

error: Content is protected !!