Breaking News
Home / featured / ಮೂರ್ತಿಪೂಜೆಯ ಧಿಕ್ಕರಿಸಿದ ಕೊಟ್ಟೂರೇಶ್ವರರು

ಮೂರ್ತಿಪೂಜೆಯ ಧಿಕ್ಕರಿಸಿದ ಕೊಟ್ಟೂರೇಶ್ವರರು

ಲಿಂಗಾಯತ ಧರ್ಮದ ತತ್ವಗಳ ಜಾಗೃತಿಗೊಳಿಸಲು ಆಗಾಗ ಅಲ್ಲಲ್ಲಿ ಶರಣರು ಉದಯಿಸುತ್ತಲೇ ಇರುತ್ತಾರೆ ಎಂದು ಚನ್ನಬಸವಣ್ಣನವರು ತಮ್ಮ ಕಾಲಜ್ಞಾನದ ವಚನಗಳಲ್ಲಿ ಹೇಳಿದಂತೆ ಹಲವು ಶರಣರು ಕರ್ನಾಟಕದ ಉದ್ದಗಲಕ್ಕೂ ಆಗಾಗ ಅಲ್ಲಲ್ಲಿ ಹುಟ್ಟಿಬಂದು ಧರ್ಮದ ಸಾರವನ್ನು , ಜಾತ್ಯಾತೀತ, ಕಾಯಕ ದಾಸೋಹದರಿವನ್ನು ಮತ್ತೇ ಮತ್ತೇ ಈ ನಾಡಿನಲ್ಲಿ ಸದೃಡವಾಗಿಸಿ ಹೋಗುತ್ತಲಿರುತ್ತಲೇ ಇದ್ದಾರೆ .

ಅವರುಗಳಲ್ಲಿ ಪ್ರಮುಖರ ಹೆಸರುಗಳು ಹೀಗಿವೆ , ಹದಿನೈದನೇ ಶತಮಾನದಲ್ಲಿ ಬಂದಂತ ಬಸವ ಶರಣ ಎಡೆಯೂರ ಸಿದ್ಧಲಿಂಗೇಶ್ವರರು(ತುಮಕೂರು ಜಿಲ್ಲೆ) ಷಣ್ಮುಖ ಶಿವಯೋಗಿಗಳು (ಜೇವರ್ಗಿ). ಮನ್ಮಥ ಶಿವಯೋಗಿಗಳು ( ಕಪಿಲಧಾರ, ಮಹಾರಾಷ್ಟ್ರ) ಬಸವಯೋಗಿ ಸರ್ವಜ್ಞ , ಕಲುಬುರಗಿಯ ಬಸವಯೋಗಿ ಶರಣಬಸವೇಶ್ವರರು, ಬಸವ ಶರಣ ಮಲೆಯ ಮಾದೇಶ್ವರರು(ಚಾಮನಗರ ಜಿಲ್ಲೆ) ಗುರುಮಲ್ಲೇಶ್ವರರು (ಮೈಸೂರು) ಅಥಣಿ ಶಿವಯೋಗಿ ಅಪ್ಪಗಳು (ಬೆಳಗಾವಿ), ಬಸವ ಶರಣ ಕೊಟ್ಟೂರೇಶ್ವರರು(ಬಳ್ಳಾರಿ) ಬಸವಯೋಗಿ ತಿಪ್ಪೇರುದ್ರಸ್ವಾಮಿ (ಚಿತ್ರದುರ್ಗ) ಮಹದೇವ ತಾತ, ಎರ್ರಿತಾತ (ಬಳ್ಳಾರಿ) ಲಿಂಗಾಗಯೋಗಿ ಬಸವಶರಣ ಕರಿಬಸಜ್ಜಯ್ಯ(ಹಾವೇರಿ) ಬಸವಯೋಗಿ ಇಳಕಲ್ಲ ವಿಜಯಮಹಾಂತೇಶ್ವರರು (ಬಾಗಲಕೋಟೆ), ಬಸವಶರಣ ಸರ್ಪಭೂಷಣ ಶಿವಯೋಗಿಗಳು, ನಿಜಗುಣ ಶಿವಯೋಗಿಗಳು, ಲಿಂಗಾನಂದ ಸ್ವಾಮಿಗಳು, ಮೃತ್ಯುಂಜಯ ಸ್ವಾಮಿಗಳು ಹೀಗೆ ನೂರಾರು ಶರಣರು ಬಂದು ಬಸವ ಧರ್ಮದ ಮೂಲಸಾರಗಳಾದ, ಕಾಯಕ, ದಾಸೋಹ, ಸಮಾನತೆ, ಜಾತ್ಯಾತೀತತೆ ಆಧ್ಯಾತ್ಮಿಕ ಮತ್ತು ಸಾಮಾಜಿಕ ಜಾಗೃತಿಗೊಳಿಸುವ ಬಸವ ಚಳುವಳಿಯನ್ನು ಮುಂದುವರೆಸಿಕೊಂಡು ಹೋಗುವತ್ತ ಅವತರಿಸಿ ಬಂದವರು.

ಅಂತಹ ಶರಣರೆಲ್ಲರೂ ತಮ್ಮ ಮೂಲಗುರುಗಳಾದ ಹನ್ನೆರಡನೆಯ ಶತಮಾನದ ಬಸವಾದಿ ಶರಣರ ಸದಾ ಸ್ಮರಿಸುತ್ತ, ಅವರು ತೋರಿದ ದಯೆ ಪ್ರೀತಿ ಕರುಣೆಗಳ ಸಕಲ ಜೀವಾತ್ಮರಿಗೆ ಉಣಬಡಿಸಿ ಸಮಾಜದಲ್ಲಿ ಏಕತೆಯ ಜೊತೆಗೆ ಎಲ್ಲಾ ವರ್ಗಗಳ ಜಾತಿ, ಮೂಢಕಂದಾಚಾರಗಳ ಬುಡಮೇಲುಗೊಳಿಸಿ, ಮೂರ್ತಿಪೂಜೆಯನ್ನು ಖಂಡಿಸಿ ಬರಿಯ ಮಾನವನಲ್ಲಿ ದೇವನ ಕಂಡ ಮಹಾ ಶರಣರುಗಳು .

ಅಂತಹ ಶರಣರೆಲ್ಲರ ನೆನೆದು ಇಂದು ನಾವು ಬಸವ ಶರಣ ಕೊಟ್ಟೂರಿನ ಗುರು ಬಸವರಾಜರ ಬಗ್ಗೆ ತಿಳಿಯೋಣ.

ಬಸವಶರಣರ ಹೆಸರು: ಕೊಟ್ಟೂರೇಶ್ವರ, ಗುರುಬಸವೇಶ್ವರ, ಹುಚ್ಚೇಶ.

ಶರಣ ಸ್ಥಳ : ಕೊಟ್ಟೂರು, ಶಿಖಾಪುರ, ಕೂಡ್ಲಿಗಿ ತಾ. ಬಳ್ಳಾರಿ ಜಿ.

ಶರಣರ ಕಾಯಕ: ಚಿಕ್ಕಂದಿನಲ್ಲಿ ನಂಬಿಯಕ್ಕಳ ಮನೆಯ ದನ ಮೇಯಿಸುವುದು. ನಂತರ ಬಸವ ಧರ್ಮ ಭೋದನೆ ಮತ್ತು ಲಿಂಗಾಗಯೋಗ.

ತತ್ವಗಳ ಭೋಧನೆ: ಮೂಢನಂಬಿಕೆಗಳ ತೊಲಗಿಸಿದರು, ಕಂದಾಚಾರಗಳ ಕಿತ್ತೆಸೆದರು, ಜಾತೀಯತೆಯನ್ನು ಖಂಡನೆ ಮತ್ತು ಸಮಾನತೆ ಬಿತ್ತಿದರು, #ಮೂರ್ತಿಪೂಜೆಗಳ ತೀವ್ರವಾಗಿ ವಿರೋಧಿಸಿ ಅಲ್ಲಿದ್ದ ಪ್ರಸಿದ್ದ ವೀರಭದ್ರ ಎಂಬ ಮೂರ್ತಿಯನ್ನು ಕಿತ್ತೆಸೆದು ಅಲ್ಲಿನ ಪುರೋಹಿತರನ್ನೆಲ್ಲ ಹೊಡಿಸಿದರು‌, ಲಿಂಗಾಯತ ಧರ್ಮದ ಅಷ್ಟಾವರಣಗಳಾದ ಗುರು, ಲಿಂಗ, ಜಂಗಮ, ಪಾದೋದಕ, ಪ್ರಸಾದ, ವಿಭೂತಿ, ರುದ್ರಾಕ್ಷಿ, ಮಂತ್ರಗಳ ಮಹಾತ್ಮೆಯನ್ನು ಜನಮನಕೆ ತಿಳಿಸಿ, ಪಂಚಾಚಾರಗಳಾದ : ಸದಾಚಾರ,ಗಣಾಚಾರ,ಬೃತ್ಯಾಚಾರ,ಶಿವಾಚಾರ,ಲಿಂಗಾಚಾರಗಳ ಎಲ್ಲರಲ್ಲಿ ಬಿತ್ತಿ ಸಮಾಜದ ಸಮಾನತೆಯ ಸಮತೋಲನಗೊಳಿಸಿ ಕಾಪಾಡಿದರು. ಇನ್ನು ಲಿಂಗಾಯತ ಧರ್ಮದ ಆದ್ಯಾತ್ಮಿಕ ದಾರಿಗಳಾದಂತ ಷಟ್ ಸ್ಥಲಗಳು:ಭಕ್ತ, ಮಹೇಶ, ಪ್ರಸಾದಿ, ಪ್ರಾಣಲಿಂಗಿ, ಶರಣ, ಐಕ್ಯಗಳ ದಾರಿಯನ್ನು ಅನುಸರಿಸುವ ಭೋಧನೆಗಳನ್ನು ಮಾಡಿದರು.

ಸಮಕಾಲೀನ ಶರಣರು: ಕೊಟ್ಟೂರೇಶ್ವರ(ಕೊಟ್ಟೂರು), ತಿಪ್ಪೇರುದ್ರಸ್ವಾಮಿ (ನಾಯಕನಹಟ್ಟಿ), ಖೋಲಸಾಂತ (ಅರಸೆಕೇರಿ), ಮದ್ದಾನೇಶ(ಕೂಲಹಳ್ಳಿ) ಕೆಂಪಯ್ಯ ಸ್ವಾಮಿಗಳು (ಹರಪನಹಳ್ಳಿ). ಇವರೆಲ್ಲರನ್ನು ಪಂಚಗಣಾಧೀಶ್ವರರು ಎಂದು ಕರೆಯಲಾಗುತ್ತದೆ.

ಕೊಟ್ಟುರೇಶ್ವರರ ಕಾಲದಲ್ಲಿ ಶರಣಧರ್ಮಕ್ಕೆ ಮಾರುಹೋದ ರಾಜರುಗಳು: ದಿಲ್ಲಿಯ ಅಕ್ಬರ್ , ಮದಕರಿನಾಯಕ, ಸೋಮಶೇಖರನಾಯಕ.ಸಂಡೂರಿನ ರಾಜರುಗಳು, ಹರಪನಳ್ಳಿಯ ನಾಯಕರುಗಳು.

ಕೊಟ್ಟೂರೇಶ್ವರ ಶರಣರ ಇತಿಹಾಸ ಹೀಗಿದೆ: ಹನ್ನೆರಡನೇ ಶತಮಾನದ ಶರಣರು ಮಾಡಿದ ಸಾಮಾಜಿಕ ಆಧ್ಯಾತ್ಮಿಕ, ವೈಚಾರಿಕ ಕಲ್ಯಾಣ ಕ್ರಾಂತಿಯ ಮೂಲಕ ಕರ್ನಾಟಕದಲ್ಲಿ ಮೊದಲ ವೈಧಿಕೇತರ ಲಿಂಗಾಯತ ಧರ್ಮ ಸ್ಥಾಪನೆಯ ಮಾಡಿದರು. ಆನಂತರ ಆ ಧರ್ಮೋದ್ದಾರಕ್ಕಾಗಿ ಹಲವು ಶರಣರು ಬಂದರು, ಅದರಲ್ಲಿ ಶಿಕಾಪುರದಲ್ಲಿ ನೆಲೆಸಿದ ಕೊಟ್ಟೂರೇಶ್ವರರ ಪಾತ್ರ ಬಹಳ ಇದೆ.

ಹೌದು ಕೊಟ್ಟೂರೇಶ್ವರು ಬಂದು ಇದ್ದು ಹೋಗಿದ್ದು ಪವಾಡರೂಪವೇ ಆಗಿತ್ತು, ಅವರ ಆಗಮನ ಬಹಳ ವಿಚಿತ್ರವಾಗಿತ್ತು, ಸಮಕಾಲೀನ ಶರಣರಾದ ಐದು ಜನ ಬಂದ ಬಗೆ ಬಹಳ ಕುತೊಹಲಕಾರಿಯಾಗಿತ್ತು.

ಲೋಕದಂತೆ ಬಾರರು
ಲೋಕದಂತೆ ಇರರು
ಲೋಕದಂತೆ ಹೋಹರು ನೋಡಯ್ಯಾ!!
ಪುಣ್ಯದಂತೆ ಬಪ್ಪರು
ಜ್ಞಾನದಂತೆ ಇಪ್ಪರು
ಮುಕ್ತಿಯಂತೆ ಹೋಹರು ನೋಡಯ್ಯಾ
ಉರಿಲಿಂಗದೇವಾ ನಿಮ್ಮ ಶರಣರು ಉಪಮಿಸಬಾರದ ಉಪಮಾತೀತರು !!

ಎಂಬ ಉರಿಲಿಂಗದೇವರ ವಚನದಂತೆ, ಕೊಟ್ಟೂರಿನ ನಿಜ ಶರಣರು ಬಂದ ಬಗೆ, ನಿಂದ ಬಗೆ, ಹೋದ ಬಗೆಗಳು ಈ ಲೋಕದ ಮಾನವನಿಗೆ ಪವಾಡದಂತೆ ಕಂಡವು.

ಕೊಟ್ಟುರೇಶ್ವರರ ಹಲವು ಸಂದರ್ಭಗಳು ಬಹಳ ಅಚ್ಚರ ಚಕಿತವಾಗುದ್ದು ಲೋಕದ ಜನರಿಗೆ ನಂಬಲಸಾದ್ಯವಾಗಿ ವಿಸ್ಮಯಗೊಳಿಸುವಂತಹ ಘಟನೆಗಳಿಗೆ ಸಾಕ್ಷಿಗಳಾಗಿರುತ್ತಾರೆ. ಅಂತಹ ಸಂದರ್ಭಗಳನ್ನು ನಿಮಗೆ ಮುಂದಿನ ದಿನಗಳಲ್ಲಿ ಸುದೀರ್ಘವಾಗಿ ಹೇಳುತ್ತೇನೆ.

ಈ ಶರಣರು ಸುಮಾರು ನಾಲ್ಕುನೂರು ವರ್ಷಗಳ ಹಿಂದೆಯೇ ಜಾತೀಯತೆ ಯ ತೊಡೆದು ದಲಿತರ ಮನೆಯಲ್ಲಿ ಪ್ರಸಾದವ ಸ್ವೀಕರಿಸಿ ಸಮಾಜಕ್ಕೆ ಈ ಜಾತಿ ಎಂಬುದೆಲ್ಲ ಸುಳ್ಳು, ಎಲ್ಲರೂ ಸಮಾನರು , ಎಲ್ಲರೂ ನಿಜದೇವನ ಮಕ್ಕಳು ಎಂದು ಸಾರಿದ್ದರು. ಆದರೆ ಇಂದು ಇಂತ ಶರಣರನ್ನು ದೇವರನ್ನಾಗಿಸಿ, ಗುಡಿಯೊಳಗಿರಿಸಿ, ಪುರೋಹಿತ್ಯವ ಸಾಧಿಸಿದ ಅಜ್ಞಾನಿ ಪಂಚಪೀಠಗಳ ವಾರಸುದಾರರಿಗೆ ಮತ್ತು ಇಂತ ಬಸವ ಶರಣರನ್ನು ಬಿಟ್ಟುಕೊಟ್ಟು ಅವರ ತತ್ವಗಳನ್ನು ಮರೆತು ಬರಿಯ ದೇವರೆಂದು ನಂಬಿಕುಳಿತಿರುವ ಜನಗಳಿಗೆ ಎಂದು ಈ ಶರಣರ ತತ್ವಗಳು ಫಲಿಸುವವೋ ಏನೋ.

ಈ ಶರಣರ ಪ್ರತಿಯೊಂದು ಘಟನೆಗಳು ನಮ್ಮೆಲ್ಲರನ್ನು ಆಶ್ಚರ್ಯ ಚಕಿತರನ್ನಾಗಿಸದೇ ಇರದು, ಅಂತಹ ಘಟನೆಗಳನ್ನು ಒಂದೊಂದಾಗಿ ನಿಮ್ಮ ಮುಂದೆ ಹೇಳುತ್ತಾ ಹೋಗುತ್ತೇನೆ.
ಸಮಾಜದ ಮೌಡ್ಯಕಳೆಯಲು ಅವತರಿಸಿ ಬಂದ ಬಸವಯೋಗಿ ಕೊಟ್ಟೂರೇಶ್ವರ ಕಾಯಕ, ದಾಸೋಹ, ಸಮಾನತೆ ಮತ್ತು ಬಸವ ನಿಷ್ಟೆಗಳು ಎಲ್ಲರಿಗೂ ಆದರ್ಶನೀಯವಾಗಿದ್ದವು.

ಲಿಂಗಾಯತ ಧರ್ಮೋದ್ದಾರಕ್ಕಾಗಿ ಬಂದ ಕೊಟ್ಟೂರಿನ ಗುರು ಬಸವರಾಜರು ಅಲ್ಲಿ ನಡೆಯುತ್ತಿದ್ದ ಹಿಂದೂ/ವೈಧಿಕ ಧರ್ಮದ ಹಾವಳಿ, ಮೂಢನಂಬಿಕೆಗಳ ಹೊತ್ತು ಜೀವಿಸುತ್ತಿರುವ ಜನರ ಜೀವನಗಳನ್ನು ಸೂಕ್ಷ್ಮವಾಗಿ ಗಮನಿಸಿ ಅಲ್ಲಿನ ಜನರನ್ನು ಆ ಕತ್ತಲೆಯಿಂದ ಮೇಲೆತ್ತಲು ಶರಣರ ತತ್ವಗಳ ಬಳಸಿದರು. ಜಾತೀಯತೆಯನ್ನು ತೊಡೆದು ಸರ್ವರೂ ಸಮಾನರು ಎಂಬ ಭಾವ ಬಿತ್ತಿದರು, ಮೂರ್ತಿ ಪೂಜೆಗಳನ್ನು ವಿರೋಧಿಸಿದರು , ಆಗಿನ ಕೆಲವು ಘಟನೆಗಳು ಹೀಗಿವೆ.

ಕೊಟ್ಟೂರಿನಲ್ಲಿ ಒಂದು ಪ್ರಸಿದ್ದ ವೀರಭದ್ರ ಎಂಬ ದೊಡ್ಡ ವೈಧಿಕ ದೇವಾಲಯವಿತ್ತು, ಅಲ್ಲಿ ಪುರೋಹಿತ ಶಾಯಿ ಮನಸ್ಸುಗಳು ಹಿಡಿಯ ಮುಗ್ದ ಸಮಾಜದ ರಕ್ತಹೀರುತ್ತಾ, ಸಮಾಜದ ಅಸಮಾನತೆಯನ್ನು ಹೆಚ್ಚಾಗಿಸುತ್ತಾ , ಮೇಲು ಕೀಳಿಗಳೆಂದು ಕೇಕೆ ಹಾಕುತ್ತಾ, ಜನರಿಗೆ ಮೌಢ್ಯ ಕಂದಾಚಾರಗಳಿಗೆ ಎಡೆಮಾಡುತ್ತಿದ್ದರು. ಇದನ್ನು ನೋಡಿದ ಕೊಟ್ಟೂರೇಶ್ವರರು ಆ ದೇವಸ್ಥಾನಕ್ಕೆ ಹೋಗಿ , ಅಲ್ಲಿನ ಚಾವಡಿಯ ಮೇಲೆ ಕುಳಿತು, ಬರುವ ಭಕ್ತರಿಗೆಲ್ಲ ಬಸವಪ್ಪನ ಮಹಿಮೆಯ ತಿಳಿಸಿ , ಲಿಂಗಾಂಗ ಸಮರಸದ ಬೋಧನೆ ಮಾಡಿ, ಅಷ್ಟಾವರಣದ ಮಹತ್ವಗಳ ತಿಳಿಸುತ್ತ ಜನರನ್ನು ಮೌಢ್ಯತೆಗಳಿಂದ ಹೊರಬರಲು ಹೇಳುತ್ತಿದ್ದರು.

ಶರಣರ ಬಲದಿಂದ ಅಲ್ಲಿನ ಜನರೆಲ್ಲ ಅಪ್ಪ ಕೊಟ್ಟೂರೇಶ್ವರ ಮಂತ್ರದ ಮಾತುಗಳಿಗೆ ತಲೆದೂಗಿ ವೈಚಾರಿಕತೆಯ ಚಿಂತನಾ ಗೋಷ್ಠಿಗಳ ಆರಂಭಿಸಿ ಪ್ರತಿ ದಿನ ಸಾಯಂಕಾಲ ಶರಣರ ಅನುಭವ ಮಂಟಪದ ಪರಿಕಲ್ಪನೆಯಲ್ಲಿ ಶರಣ ಗೋಷ್ಠಿಗಳ ನಡೆಸುತ್ತಾ ಶರಣರ ಹಲವು ವಚನಗಳ ಹಾಡುತ್ತಾ ಆ ವಚನಗಳ ಅರ್ಥವನ್ನು ವಿವರಿಸುತ್ತಾ ಇರುತ್ತಿರುವಾಗ ಒಂದು ದಿನ ಗುರು ಕೊಟ್ಟೂರೇಶ್ವರರು ಈ ಕೆಳಗಿನ ವಚನ ಹೇಳುತ್ತಾರೆ.

ಜಗದಗಲ , ಮುಗಿಲಗಲ, ಮಿದೆಯಗಲ , ನಿಮ್ಮಗಲ!
ಪಾತಾಳದಿಂದತ್ತತ್ತ ನಿಮ್ಮ ಶ್ರೀ ಚರಣ,
ಬ್ರಹ್ಮಾಂಡದಿಂದತ್ತತ್ತ ನಿಮ್ಮ ಶ್ರೀ ಮುಕುಟ,
ಅಘಮ್ಯಾ !
(ಹೇ ದೇವಾ ನೀನು ಆದಿ ಅಂತ್ಯವಿಲ್ಲದ ಅನಂತನು)
ಅಗೋಚರ !
(ದೇವಾ, ನೀನು ಎಲ್ಲಾ ಜೀವಗಳ ಜೀವ ವಸ್ತುವಾಗಿದ್ದೀಯ, ಆದರೂ ನೀ ಗೋಚರಣೆಗೆ ನಿಲುಕದ ಅಗೋಚರನು)
ಅಪ್ರತಿಮಾ !
(ಅಖಿಲಾಂಡ ಕೋಟಿಗಳಿಗೊಡೆಯನಾದ ಹೇ ದೇವಾ ನಿನ್ನನ್ನು ಬರಿಯ ಮಾನವ ನಿರ್ಮಿತ ಕಲ್ಲು ಮಣ್ಣುಗಳ ಮೂರ್ತಿಗಳಿಗೆ ಪ್ರತಿಮೆಗಳಿಗೆ ನಿಲುಕದ ನಿಜ ನಿಲುವಿನಾ ನಿಧಿ ನೀನು)
ಅಪ್ರಮಾಣ !
(ಸಕಲಕ್ಕೂ ಮೂಲಬೇರಾದ ನಿನ್ನನ್ನು ಯಾವುದರಿಂದಲೂ ಅಳೆಯಲು ಸಾದ್ಯವಿಲ್ಲ)
ಲಿಂಗವೇ ಕೂಡಲಸಂಗಮದೇವಯ್ಯಾ ನೀವೇನ್ನ ಕರಸ್ಥಲಕೆ ಬಂದು ಚುಳುಕಾದಿರಯ್ಯಾ !!

ಎಂಬ ಅಪ್ಪ ಬಸವರಾಜರ ಈ ವಚನದ ಸಾರವನ್ನು ಕೊಟ್ಟೂರೇಶ್ವರರು ಹೇಳುವಾಗ, ಅಲ್ಲಿ ನೆರೆದಿದ್ದ ಜನಸಾಗರವೆಲ್ಲಾ ಅಪ್ಪ ಕೊಟ್ಟೂರೇಶ್ವರನ್ನೇ ದಿಟ್ಟಿಸಿ ನೋಡುತ್ತಾ ಕಣ್ಣಲ್ಲಿ ನೀರ ತಂದು ಕ್ಷಮಾ ಭಾವದಿಂದ ಕೈಮುಗಿದು ಅಪ್ಪನಲ್ಲಿ ಒಂದು ಪ್ರಶ್ನೆಯ ಕೇಳುತ್ತಾರೆ ಅದೇನಂದರೆ : ಹೇ ನನ್ನಪ್ಪ ಹುಚ್ಚೇಶಾ! ನಿಜದೇವನು ಅಷ್ಟೋಂದು ವಿವರವಾಗಿದ್ದಾನೆ ನಿಜ , ಆದರೆ ಈ ಗುಡಿಯೊಳಗಿರುವ ವೀರಭದ್ರನು ಯಾರು?? ಎಂದು ಕೇಳಲು, ಸ್ವಾಮಿ ಕೊಟ್ಟೂರೇಶ್ವರರು ತಮ್ಮ ಬಸವಶಿವ ಮಂತ್ರದ ದಿವ್ಯಶಕ್ತಿಯಿಂದ, ಗುರು ಲಿಂಗ ಜಂಗಮ ಪಾದೋಧಕವ ನೆನೆದು, ಯಾರದು ವೀರಭದ್ರ ?? ಎಲ್ಲಿರುವನು ತೋರಿಸಿ ಎಂದು ತಮ್ಮ ಕೈಯಲ್ಲಿದ್ದ ಬೆತ್ತ ಜೋಳಿಗೆಯನ್ನ ಆ ಕಡೆ ಹಾಕಲು , ಇಡಿಯ ದೇವಸ್ಥಾನವೆಲ್ಲಾ ಬರಿಯ ಜಂಗಮಸ್ಥಳವಾಗಿ ಜೋಳಿಗೆ ಬೆತ್ತಗಳೇ ಎಲ್ಲರ ಕಣ್ ಮನಗಳಿಗೆ ಕಾಣಲಾರಂಬಿಸುತ್ತವೆ.

ಅಲ್ಲಿ ನೆರೆದಿದ್ದ ಜನರೆಲ್ಲ ಆಶ್ಚರ್ಯ ಚಕಿತರಾಗಿ ತಮ್ಮ ಕಣ್ಣುಗಳನ್ನ ತಿಕ್ಕಿ ನೋಡಿದರೂ ಅಲ್ಲಿ ವೀರಭದ್ರನ ವಿಗ್ರಹ ಅವರಿಗೆ ಕಾಣುವುದಿಲ್ಲ . ಆಗ ಎಲ್ಲರೂ ಗದ್ಗದಿತರಾಗಿ,

ಹೇ ಹುಚ್ಚೇಶಾ !!
ಒಡೆಯ ಗುರುಬಸವರಾಜೇಂದ್ರಾ !!
ಶಿಖಾಪುರಕ್ಕೆ ಬಂದ ಶಿವಬಸವನೇ !!
ನಿಜದೇವನ ಅರಿವ ಅರುಹಿದ ನಿಜನಿಧಿಯೇ!!
ಶರಣು ಶರಣಯ್ಯಾ ಎಂದೋದಿ , ಇಂದು ನೀವು ನಮ್ಮ ಕಣ್ಣು ತೆರೆಸಿದಿರಿ. ಎಂದು ಕೈ ಎತ್ತಿ ಮುಗಿದು ಶರಣೆನ್ನಲು , ಆ ದಿನದ ನಿಜದೇವನ ಅರಿವಿನ ಅಧ್ಯಾಯವನ್ನು ಮುಂದುವರೆಸಿ ಮುಗಿಸುವಷ್ಟರಲ್ಲಿ , ಅಲ್ಲಿನ ಪುರೋಹಿತರಲ್ಲಿ ಕೆಲವರು ಕೊಟ್ಟೂರೇಶ್ವರರ ಭಕ್ತರಾದರೆ, ಇನ್ನೂ ಕೆಲವು ಜನ ಅಲ್ಲಿಂದ ಹೋಡಿ ಹೋಗುತ್ತಾರೆ.

ನಂತರ ಕೆಲವು ವರ್ಷಗಳ ಬಳಿಕ ಅಲ್ಲಿಂದ ಕಾಲು ಕಿತ್ತ ಕೆಲವು ಪುರೋಹಿತರು ಕೊಟ್ಟೂರಿನಿಂದ(ಗುರುಬಸವರಾಜರಿಗೆ ಕೊಟ್ಟ ಊರು ಕೊಟ್ಟೂರು) ದೂರ ಹೊಗಿ, ಸುಮಾರು ಹತ್ತನ್ನೆರಡು ಕಿ ಮೀ ದೂರದಲ್ಲಿ “ಕೊಡದ ಗುಡ್ಡ” (ಕೊಟ್ಟೂರೇಶ್ವರರಿಗೆ ಕೊಡಲಾಗದ ಗುಡ್ಡ) ಎಂಬ ಬೆಟ್ಟದ ಮೇಲೆ ಮತ್ತೇ ವೀರಭದ್ರನ ಮೂರ್ತಿಯನ್ನು ಸ್ಥಾಪಿಸುತ್ತಾರೆ. ಈ ವಿಚಾರ ಈಗಲೂ ಅಲ್ಲಿನ (ಕೊಟ್ಟೂರಿನ ಸುತ್ತಲಿನ ) ಜನಮನಗಳ ಬಾಯಲ್ಲಿ ಸಾಕ್ಷಾ ಕಥೆಯಾಗಿ ಉಳಿದಿದೆ.

ಮುಂದಿನ ದಿನಗಳಲ್ಲಿ ಗುರು ಕೊಟ್ಟುರೇಶ್ವರರು ಅದೇ ದೇವಸ್ಥಾನವನ್ನು ಸಂಪೂರ್ಣವಾಗಿ ಶರಣಸಂಗಕ್ಕಾಗಿ ಬಳಸಿಕೊಳ್ಳುತ್ತಾ, ದೊಡ್ಡ ಚಾವಡಿ ಕಟ್ಟೆಯ ಮೇಲೆ ಕುಳಿತು ಶರಣ ತತ್ವವ ಬಿತ್ತುತ್ತಾರೆ. ಅದನ್ನೇ ಜನ ಗುರುವಿನ ದರ್ಬಾರು ಮಠ ಎಂದು ಕರೆಯಲಾರಂಬಿಸುತ್ತಾರೆ.

ಈಗಲೂ ಅದಕ್ಕೆ ದರ್ಬಾರ್ ಮಠ ಎಂದೇ ಹೆಸರು. ಅಲ್ಲದೇ ಇಂದಿಗೂ ನೀವು ಈ ಮಠದಲ್ಲಿ ಇರುವ ಕೊಟ್ಟೂರೇಶ್ವರರ ಸ್ಥಳ ಗರ್ಭಗುಡಿ ಇಲ್ಲದೇ ಬರಿಯ ಕಟ್ಟೆಯ ಮೇಲೆ ಅವರು ಕುಳಿತ ಪೀಠ ಮತ್ತು ಪಾದುಕೆಗಳ ಇರಿಸಲಾಗಿರುವುದ ಕಾಣಬಹುದು. ಅಷ್ಟೇ ಅಲ್ಲದೇ , ಒಳಗೆ ಪ್ರವೇಶವಿಲ್ಲ ಎಂಬ ತಲೆಬರಹದ ಕೊಣೆಯ ಹೊಕ್ಕು ಒಳ ಹೋದರೆ ಅಲ್ಲಿ , ಸಣ್ಣ ಬಾಗಿಲು ಕಾಣುವುದು. ಅದುವೇ ವೀರಭದ್ರನಿದ್ದ ಗರ್ಭಗುಡಿಯ ಬಾಗಿಲು, ಈಗ ಅದನ್ನು ಸಂಪೂರ್ಣವಾಗಿ ಮುಚ್ಚಲಾಗಿ ಅದರೊಳಗೆ #ಅಕ್ಬರ್_ಚಕ್ರವರ್ತಿಯು ಒಪ್ಪಿಸಿದ ಬಂಗಾರದ ಖಡ್ಗ ಇಡಲಾಗಿದೆ, ಜಾತ್ರಾ ಮತ್ತು ವಿಶೇಶ ದಿನಗಳಲ್ಲಿ ಅದನ್ನು ಹೊರತೆಗೆದು , ಸ್ವಾಮಿಯ ಜೊತೆ ಕೊಂಡ್ಯೊಯ್ಯಲಾಗುತ್ತಿದೆ.

ಅದೇ ಕೋಣೆಯಲ್ಲಿ ದೊಡ್ಡ ಗಣಪತಿ ಮೂರ್ತಿ ಇದೆ ಅದನ್ನು ಸಹ ಸಾರ್ವಜನಿಕರು ಪೂಜಿಸದಂತೆ ಮುಚ್ಚಲಾಗಿದೆ, ಆದರೆ ಇತ್ತೀಚಿಗೆ ಜನ ಮತ್ತೆ ಅದಕ್ಕೆ ಪೂಜೆಮಾದಲು ಒಳಗೆ ಹೋಗುತ್ತಾರೆ(ಕೆಲವರು ಮಾತ್ರ) , ಇನ್ನು ಈ ದೇವಸ್ಥಾನದ ಪಕ್ಕದಲ್ಲಿ ದೇವಸ್ತಾನಕ್ಕೆ ಹತ್ತಿಕೊಂಡಂತೆ ಒಂದು ದೊಡ್ಡ ಕಾಳಿಯ(ದೇವಿ) ದೇವಸ್ಥಾನವೂ ಇತ್ತು, ಆದರೆ ಅಲ್ಲಿಯೂ ದೇವಿಯನ್ನ ಕಿತ್ತೆಸೆದ ಗುರು ಕೊಟ್ಟೂರೆಶ್ವರರು ಆ ಸಂಪೂರ್ಣ ದೇವಸ್ಥಾನವನ್ನು ನಿತ್ಯದಾಸೋಹದ ಮನೆಯಾಗಿಸಿದರು. ಈಗಲೂ ನೀವಿದನ್ನ ನೋಡಬಹುದು, ಅಲ್ಲದೇ ಕೊಟ್ಟೂರಿನಲ್ಲಿರುವ ಒಟ್ಟು ನಾಲ್ಕು ಕೊಟ್ಟೂರೇಶ್ವರರ ದೇವಸ್ಥಾನಗಳಲ್ಲಿ ಈಗಲೂ ದರ್ಬಾರ್ ಮಠ ಮಾತ್ರ ವೈಧಿಕರ/ವೀರಶೈವ ಶೈಲಿಯಲ್ಲಿದ್ದು ಉಳಿದ ಮೂರು ಮಠಗಳು ಬಸವ ಶರಣ ಶೈಲಿಯಲ್ಲಿವೆ.

ಅದೇನೇ ಇರಲಿ, ಕೊಟ್ಟೂರಿನ ಗುರು ಬಸವೇಶ್ವರರು ಅಪ್ಪ ಬಸವನ ತತ್ವಗಳ ಬಿತ್ತಿ , ಅಲ್ಲಿನ ಜನರಲ್ಲಿ ಶರಣ ಪರಂಪರೆಯ ಮತ್ತೇ ಬಿತ್ತಿದರು, ಅಸಮಾನತೆಯ ತಡೆದು, #ಸಹಪಂಕ್ತಿಯ_ದಾಸೋಹವನೈದು ದಾಸೋಹಮೂರುತಿಯಾದರು.

ಆದರೆ ಇಂದು ಪಂಚಪೀಠದ ಪುರೋಹಿತರು ತಮ್ಮ ಬೇಳೆ ಬೇಯಿಸಿಕೊಳ್ಳಲು ಮತ್ತೇ ಕೊಟ್ಟುರಿಗೆ ಬಂದು ಕೊಟ್ಟೂರೇಶ್ವರರನ್ನೇ ಮೂರ್ತಿಯನ್ನಾಗಿಸಿ ಅವರ ವೈಧಿಕತೆಯ ಮೆರೆಯುತ್ತಿದ್ದಾರೆ. ಅದಕ್ಕೆ ಸೈ ಎಂದ ಮುಗ್ದ ಜನ , ಜನ ಮರುಳೋ ಜಾತ್ರೆ ಮರುಳೋ ಎಂಬಂತಾಗಿರುವುದೇ ವಿಷಾದನೀಯ ಸಂಗತಿಯಾಗಿದೆ.

ಅದೇನೇ ಇರಲಿ, ಅಪ್ಪ ಬಸವರಾಜರ ತತ್ವಗಳ ಬಿತ್ತಲೆಂದೇ ಬಂದ ಕೊಟ್ಟೂರೇಶ್ವರ ವೈಚಾರಿಕತೆಯ ಧರ್ಮಜಾಗೃತಿಯ ಕಾರ್ಯ ವೈಖರಿ ತುಂಬಾ ವಿಭಿನ್ನವಾಗಿತ್ತಲ್ಲದೇ ಹನ್ನೆರಡನೆಯ ಶತಮಾನದ ಶರಣರ ಹೋಲುವಂತಿತ್ತೆಂದರೆ ತಪ್ಪಗಲಾರದು‌.

ಅಂತಹ ಶರಣರ ನೆನೆದು ,ಕೊಟ್ಟೂರಿನ ಗುರು ಹುಚ್ಚೇಶನ ಶ್ರೀ ಪಾದಗಳಲ್ಲಿ ಶಿರವಿರಿಸಿ , ಬಸವ ಬಸವ ಬಸವಾ ಎಂದೆಂಬ ಭಾವದಿ ಶರಣು ಶರಣಾರ್ಥಿಗಳ ಸಲ್ಲಿಸುತ್ತಾ, ನಿಮ್ಮೆಲ್ಲರ ಜಾಗೃತ ಸ್ಥಿತಿಗೆ ನನ್ನ ಶರಣಾರ್ಥಿಗಳು ..

(ಮುಂದುವರೆಯುತ್ತದೆ..)

ಶರಣೆ: ದೀಪ್ತಿ ಎಸ್ ಪಾಟೀಲ್ (ವಿದ್ಯಾರ್ಥಿನಿ)
ಬಸವ ಪ್ರಿಯಳು.

About Shivanand

Admin : Lingayat Kranti Monthly news paper 8884000008 [email protected]

Check Also

ಮಠಾಧೀಶರಿಗೆ ರಾಜಕಾರಣದ ಉಸಾಬರಿ ಏಕೆ?

  ಬೆಂಗಳೂರು: ರಾಜ್ಯದಲ್ಲಿನ ಸ್ವಾಮೀಜಿಗಳ ಪೈಕಿ ಕೆಲವರು ರಾಜಕೀಯ ನಾಯಕರಂತೆ ವರ್ತಿಸುತ್ತಿರುವುದು ಅವರು ಪ್ರತಿನಿಧಿಸುವ ಸ್ಥಾನಗಳಿಗೆ ಶೋಭೆ ತರುವಂತಹದ್ದಲ್ಲ. ಸಮಾಜಕ್ಕೆ …

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಯಾರಿಗೆ? ಹಾಗೂ ಮಹಾ ಮಾದರಿ ಶೇ.16ರ ವಿಶೇಷ ಮೀಸಲಾತಿ ಬೇಡವೇ….?

    ಬಸವಣ್ಣ ಬರುವಾಗ | ಬಿಸಿಲು ಬೆಳದಿಂಗಳು || ಮೊಗ್ಗು ಮಲ್ಲಿಗೆ | ಅರಳ್ಯಾವ || ಯಾಲಕ್ಕಿ ಗೊನೆಬಾಗಿ …

ಕರ್ನಾಟಕದ ಮ್ಯಾಕ್ಸ್ ಮುಲ್ಲರ್ ‘ವಚನ ಪಿತಾಮಹ’ ಡಾ. ಫ.ಗು.ಹಳಕಟ್ಟಿ

  ರಾಮದುರ್ಗ: ೧೯೫೬ರಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯದ ಪ್ರತಿಷ್ಠಿತ ಗೌರವ ಡಾಕ್ಟರೇಟ್ ಪದವಿ ಪ್ರದಾನ ಸಮಾರಂಭ. ಡಾ.ಪಾವಟೆಯವರು ಕುಲಪತಿಗಳಾಗಿದ್ದರು. ಕರ್ನಾಟಕ ವಿಶ್ವವಿದ್ಯಾನಿಲಯದ …

ರಾಣಿ ಚನ್ನವೀರಮ್ಮ

  ಲಿಂಗಾಯತ ಕ್ರಾಂತಿ: ಚನ್ನಮ್ಮ ಮತ್ತು ವೀರಮ್ಮ ಇವರಿಬ್ಬರು ಕಿತ್ತೂರ ದೇಸಾಯಿಣಿಗಳು. ಇವರಿಬ್ಬರ ಹೆಸರು ಒಂದಾಗಿರುವ ಚನ್ನವೀರಮ್ಮಾಜಿ ಎನ್ನುವ ಕೆಳದಿಯ …

ಜನಪದವೇ ಲಿಂಗಾಯತ ಧರ್ಮ ಉಳಿವಿಗೆ ಆಧಾರ

  ಬೀದರ್: 12ನೆ ಶತಮಾನದಲ್ಲಿ ನಡೆದ ಕಲ್ಯಾಣ ಕ್ರಾಂತಿ ನಂತರ ಲಿಂಗಾಯತ ಧರ್ಮದ ಶರಣರು ಚೆಲ್ಲಾಪಿಲ್ಲಿ ಆದರು, ಹಲವಾರು ಶರಣರು …

ಸಂವಿಧಾನ ಮತ್ತು ಕಾನೂನುಗಳ ಸಮರ್ಪಕ ಬಳಕೆಯೇ ಈ ದೇಶದ ಎಲ್ಲ ಸಮಸ್ಯೆಗಳಿಗೆ ಪರಿಹಾರ

  ~ ಡಾ. ಜೆ ಎಸ್ ಪಾಟೀಲ. ವಿಜಯಪುರ: ಭಾರತವು ಧಾರ್ಮಿಕ ಮೂಢನಂಬಿಕೆಗಳ ತವರು ಮನೆ. ಇಲ್ಲಿ ಧಾರ್ಮಿಕ ನಂಬಿಕೆಗಳ …

ಗ್ರಾಮ ಸ್ವರಾಜ್ಯ ಸಾಕಾರಗೊಳಿಸಿದ: ರಾಮಪ್ಪ ಬಿದರಿ

ವಿಜಯಪುರ: 1952-1962 ಹತ್ತು ವರ್ಷಗಳ ಕಾಲ ಲೋಕಸಭಾ ಸದಸ್ಯರಾಗಿದ್ದ ರಾಮಪ್ಪ ಬಿದ್ರಿ ಈ ಹುದ್ದೆಯನ್ನು ಎಂದೂ ತಮ್ಮ ಸ್ವಂತದ ಲಾಭಕ್ಕಾಗಿ …

ಲಿಂಗಾಯತ ಧರ್ಮದ ಹೋರಾಟ ಸರಣಿ-2 ಭಾಗ-4

  ಲಿಂಗಾಯತ ಧರ್ಮ ಮಾನ್ಯತೆಯ ಹೊರಾಟದಲ್ಲಿ ಲಿಂಗಾಯತ ಸಮನ್ವಯದ ಸಮಿತಿ ಪಾತ್ರ. ಬಸವಕಲ್ಯಾಣ: ಬೆಂಗಳೂರಿನ ಕುಂಬಳಗೋಡಿನ ಬಸವ ಗಂಗೋತ್ರಿಯಲ್ಲಿ ಜೂನ್ …

ಲಿಂಗಾಯತ ಧರ್ಮದ ಹೋರಾಟ ಸರಣಿ-2

  ಜಾತಿ ಲಿಂಗಾಯತರು ಮತ್ತು ಬೇಡ ಜಂಗಮ ಪಂಚಾಚಾರ್ಯರು ಸತ್ಯವೆಂದು ನಂಬಿ ಲಿಂಗಾಯತ ಧರ್ಮದ ಮಾನ್ಯತೆ ತಪ್ಪಿಸುತ್ತಿದ್ದಾರೆ. ಬಸವಕಲ್ಯಾಣ: 12ನೇ …

ನ. 22 ರಂದು ಡಾ. ಹೆಚ್.ಆರ್.ಗಿರಿಯಾಲ ಅವರಿಗೆ ನುಡಿನಮನ

ಚನ್ನಮ್ಮನ ಕಿತ್ತೂರು: ಸಮೀಪದ ಬೈಲೂರು ಗ್ರಾಮದ ಖ್ಯಾತ ವೈದ್ಯ ಡಾ ಹಣಮಂತ ಆರ್ ಗಿರಿಯಾಲ ಅವರು ಕಳೆದ ಸೆಪ್ಟೆಂಬರ್ 30 …

ಲಿಂಗಾಯತ ಧರ್ಮದ ಹೋರಾಟ ಸರಣಿ-2

  ಲಿಂಗಾಯತ ಧರ್ಮದ ಮಠಾಧೀಶರ ನಿಯೋಗ ಮುಖ್ಯಮಂತ್ರಿಗೆ ಭೇಟಿ ಮಾಡಬಾರದೇಕೆ? ಲಿಂಗಾಯತ ಧರ್ಮದ ಹೋರಾಟದಲ್ಲಿ ಮುಂಚೂಣಿ ಸ್ಥಾನ ವಹಿಸಿ ಅತ್ಯಂತ …

ಸಾಮಾಜಿಕ ಪ್ರಾತಿನಿಧ್ಯತೆ : ಬಿ.ಜೆ ಪಾಟೀಲ

  ವಿಜಯಪುರ : ಸಮಸಮಾಜ ಕಟ್ಟಲು, ಸಂವಿಧಾನದಲ್ಲಿ ಮೂಲಭೂತ ಹಕ್ಕಗಳ ಬಗ್ಗೆ ಮಾತನಾಡುವಾಗ ಮೂರೂ ಬಿಂದುಗಳು ( Article 15, …

ಲಿಂಗಾಯತ–ವೀರಶೈವರಿಗೆ ಶೇ 16 ಮೀಸಲಾತಿ ನೀಡಿ: ಶಿವಮೂರ್ತಿ ಮುರುಘಾ ಶರಣರು

  ಚಿತ್ರದುರ್ಗ: ಜಾತಿ, ಉಪಜಾತಿಗೆ ಒಂದೊಂದು ವಿಧವಾದ ಮೀಸಲಾತಿ ನೀಡುವ ಬದಲು ಲಿಂಗಾಯತ–ವೀರಶೈವ ಸಮುದಾಯಕ್ಕೆ ಶೇ 16ರಷ್ಟು ಮೀಸಲಾತಿಯ ನಿಗದಿಪಡಿಸುವುದು …

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಡಾ. ತೋಂಟದ ಸಿದ್ಧರಾಮ ಶ್ರೀಗಳ ಆಕ್ಷೇಪ

  ಗದಗ: ಸರ್ಕಾರ ತರಾತುರಿಯಲ್ಲಿ ಲಿಂಗಾಯತ ವೀರಶೈವ ಅಭಿವೃದ್ಧಿ ನಿಗಮ ಘೋಷಿಸಿದ್ದು, ಇದಕ್ಕೆ ಯಾವುದೇ ಗೊತ್ತು ಗುರಿಯಾಗಲಿ, ಸ್ಪಷ್ಟತೆಯಾಗಲಿ ಇಲ್ಲ …

ರವಿ ಬೆಳಗೆರೆ ಒಂದು ಕನಸು ನನಸು ಮಾಡಲು ಆಗಲಿಲ್ಲ..!

  ಚನ್ನಮ್ಮನ ಕಿತ್ತೂರು: ಪಿ. ಲಂಕೇಶರ ನಂತರ ಕನ್ನಡ ಪತ್ರಿಕೋದ್ಯಮ ಮತ್ತೊಂದು ರೀತಿ ಕಲ್ಪನೆ ಮೀರಿ ಮುನ್ನಡಿಸಿದ್ದ ಕೀರ್ತಿ ರವಿಗೆ …

Leave a Reply

Your email address will not be published. Required fields are marked *

error: Content is protected !!