Breaking News
Home / featured / ಬಸವಣ್ಣನವರು ಮತ್ತು ಪ್ರಜಾಪ್ರಭುತ್ವ

ಬಸವಣ್ಣನವರು ಮತ್ತು ಪ್ರಜಾಪ್ರಭುತ್ವ

ವಚನ ಸಾಹಿತ್ಯ ವಿಶ್ವ ಶ್ರೇಷ್ಠ ಸಾಹಿತ್ಯ,ಪ್ರಜಾಪ್ರಭುತ್ವ ಮೌಲ್ಯಗಳನ್ನು ಸಾರುವ ವಿಶ್ವ ಸಂವಿಧಾನವಾಗಿದ್ದು, ವಚನಗಳಲ್ಲಿರುವ ಅಂಶಗಳು ಸಂವಿಧಾನದ ಚೌಕಟ್ಟಿನಲ್ಲಿ ಕಾಣುತ್ತೇವೆ.ಪ್ರಪಂಚಕ್ಕೆ ಸಮಾನತೆ ಸಂದೇಶ ಸಾರುವ ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ಮೊಟ್ಟ ಮೊದಲು ಬಾರಿ ಜಾಗತಿಕ ಪ್ರಪಂಚಕ್ಕೆ ಕೊಟ್ಟವರು, ಅದನ್ನು ಜಾರಿಗೆ ತಂದವರು ಅಣ್ಣ ಬಸವಣ್ಣನವರು. ಅನುಭವ ಮಂಟಪದ ಮೂಲಕ ಇಡೀ ಮನುಕುಲದ ಉದ್ಧಾರಕ್ಕಾಗಿ,ಸರ್ವರ ಕಲ್ಯಾಣಕ್ಕಾಗಿ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಗೆ ತಂದ ಕೀರ್ತಿ ಮತ್ತು ಶ್ರೇಯಸ್ಸು ಬಸವಣ್ಣನವರ ಆದಿಯಾಗಿ ಇಡೀ ಶರಣ ಸಂಕುಲಕ್ಕೆ ಸಲ್ಲುತ್ತದೆ ಜೊತೆಗೆ ಸಕಲ ಜೀವಾತ್ಮರೆಲ್ಲರಿಗೂ ಲೇಸು ಬಯಸಿದ ಜಗತ್ತಿನ ಮೊಟ್ಟ ಮೊದಲ ಸಮತವಾದಿ ಬಸವಣ್ಣನವರು ಎಂಬುದು ಯಾರು ಅಲ್ಲಗಳೆಯುವಂತಿಲ್ಲ. ಹಾಗಾಗಿ

ಮೌಲ್ಯಾಧಾರಿತ ಸಾಮರಸ್ಯ ಸಮೃದ್ಧ
ನಾಡು ಕಟ್ಟುವ ಕನಸು ಕಂಡು ಬಸವಣ್ಣನವರು,ಅದೇ ನಿಟ್ಟಿನಲ್ಲಿ ಪ್ರಜಾಪ್ರಭುತ್ವ ಸಿದ್ಧಾಂತವನ್ನು ಜಾಗತಿಕ ಮಟ್ಟದಲ್ಲಿ ಪ್ರತಿಪಾದಿಸಿದ್ದಾರೆ.ಜೊತೆಗೆ ಶಾಂತಿ,ಸಹಬಾಳ್ವೆ,ಕಾಯಕ,ದಯೇ,ಕರುಣೆ, ದಾಸೋಹ, ಅರಿವು, ಸಮಾನತೆಯ ವೈಚಾರಿಕ ವಿಚಾರಗಳನ್ನು ಜನಸಾಮಾನ್ಯರಿಗೆ ತಿಳಿಸುವ ಪ್ರಯತ್ನ ಮಾಡಿದ್ದಾರೆ. ವಿಶ್ವವೇ ಒಂದು ಕುಟುಂಬವಿದಂತೆ ಹಾಗೂ ರಕ್ತ ಸಂಬಂಧಿಗಳೆಲ್ಲರೂ ಒಂದು, ಸ್ವಾರ್ಥ ಬಿಟ್ಟು, ನಾವೆಲ್ಲರೂ ಒಂದಾಗಿ ನಿಸ್ವಾರ್ಥದಿಂದ ಬದಕುವ ಯೋಚನೆಯ ಮನಸ್ಥಿತಿ ನಮ್ಮಲ್ಲಿ ಮೂಡಲಿ ಹಾಗೂ ಸೌಹಾರ್ದವಾಗಿ ಬಾಳುವ ಮೂಲಕ ಪ್ರೀತಿ – ಸ್ನೇಹಯವನ್ನು ಜಗತ್ತಿಗೆ ಪರಿಚಯಿಸುವ ಕೆಲಸ ಮಾಡೋಣ – ಸಾರೋಣ ಎನ್ನುವ ಆಶಾವಾದ ಬಯಕೆ ಪ್ರತಿಯೊಬ್ಬರ ಶರಣರದಾಗಿತ್ತು, ಅದರಂತೆ ಅವರು ಬಾಳುವ ಮೂಲಕ ನಮ್ಮೆಲ್ಲರಿಗೂ ಮಾದರಿಯಾಗಿದಾರೆ.ಹಾಗಾಗಿ ಶರಣರು ಮಾನವೀಯ ಮೌಲ್ಯಗಳನ್ನು ಉಳಿಸಿಕೊಂಡು ಬೆಳೆಸಿಕೊಂಡು ಬಂದಿರುವುದು ನಮಗೆ ಅವರ ವಚನಗಳ ಮೂಲಕ ತಿಳಿದುಬರುತ್ತದೆ.

ವಚನ ಸಾಹಿತ್ಯ ಮತ್ತು ಭಾರತ ಸಂವಿಧಾನ:
ವಚನ ಮತ್ತು ಸಂವಿಧಾನ ಎರಡೂ ಒಂದೇ, ಅವು ಬೇರೆ, ಬೇರೆ ಅಲ್ಲ. ವಚನಗಳಲ್ಲಿರುವ ಅಂಶಗಳು ಸಂವಿಧಾನದಲ್ಲಿವೆ. ದೇಶದ ಪ್ರಗತಿಗೆ ವಚನ ಸಾಹಿತ್ಯ ಎಷ್ಟೋ ಪ್ರಮುಖ್ಯವೋ ಅಷ್ಟೋ ಮುಖ್ಯ ನಮ್ಮ ಭಾರತ ದೇಶದ ಸಂವಿಧಾನದ ಎನ್ನುವುದು ನಾವೆಲ್ಲರೂ ತಿಳಿದುಕೊಳ್ಳುವುದು ಅತಿ ಅವಶ್ಯ. ಹಾಗಾಗಿ ಈ ಎರಡು ತತ್ವಗಳಿಂದ ದೇಶದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಲ್ಲದೆ, ಪೂರಕ ಹಾಗೂ ಮಾರ್ಗದರ್ಶನ ಎನ್ನುವುದು ನಾವ್ಯಾರು ಮರೆಯಬಾರದು.ಆದ್ದರಿಂದ
ದೇಶದ ಸಂವಿಧಾನವು ಪ್ರತಿಯೊಬ್ಬ ವ್ಯಕ್ತಿಗೂ ಸಮಾನತೆ, ಸ್ವಾತಂತ್ರ್ಯ ನೀಡಿದೆ.ಆದರೆ ಕೆಲ ಸಂಪ್ರದಾಯವಾದಿಗಳು ಸಮಾನತೆಯ ತತ್ವವಾದ ಸಂವಿಧಾನವನ್ನು ಸುಡುವ, ಅಗೌರವಿಸುವ ಬಗೆ ಮಾತನಾಡುತ್ತಿದ್ದಾರೆ.ಇವರೆಲ್ಲ ಅಹಂಕಾರದ ಅಜ್ಞಾನಿಗಳಾಗಿದ್ದಾರೆ ಎಂದು ಹೇಳಬಹುದು. ಪ್ರತಿಯೊಬ್ಬ ಪ್ರಜೆಗೂ ಸ್ವಚಂದವಾಗಿ ಬದುಕಲು ಅವಕಾಶ ನೀಡಿದೆಯನ್ನುವುದು ಮರೆತು, ಮನಸ್ಸಿಗೆ ತೋಚಿದಂತೆ ಕೆಲ ಅವಿವೇಕಿಗಳು ಬಾಲಿಶ್ಯ ಹೇಳಿಕೆಗಳನ್ನು ಕೊಟ್ಟು, ಅವರ ಬೆನ್ನು ಅವರೇ ತಟ್ಟಿಕೊಳ್ಳುವ ಸನ್ನಿವೇಶಗಳು ನಾವು ಅಲ್ಲಲ್ಲಿ ಕಂಡಾಗ ಮನಸ್ಸಿಗೆ ಅತ್ಯಂತ ನೋವಾಗುತ್ತದೆ. [ನಮ್ಮ ಸಂವಿಧಾನದ
ಮಹತ್ವವನ್ನು ತಿಳಿದುಕೊಳ್ಳುವ ಕೆಲಸ ಮಾಡದೇ, ಬರೀ ಟೀಕೆ ಮಾಡುವುದು ಎಷ್ಟೋ ಸರಿ ಇದೆ ಹೇಳೀ,] ಮೊದಲು ಸಂವಿಧಾನದ ತತ್ವಗಳನ್ನು ತಿಳಿದುಕೊಳ್ಳುವ ಕೆಲಸ ಮಾಡಲಿ,ಮಾಡುವುದು ಸೊಕ್ತ.ಆದಕಾರಣ
ಹಗುರವಾಗಿ ಮಾತನಾಡುವುದನ್ನು ಬಿಡುವುದು ಅವರ ಶ್ರೇಯಸ್ಸಿಗಾಗಿ ಉತ್ತಮ ಎನ್ನುವುದು ಮನಗಂಡು,ದೇಶದ ಒಳ್ಳಿತಿಗಾಗಿ ದುಡಿಯುವ ಮನೋಬಲವನ್ನು ಪ್ರದರ್ಶಿಸುವ ಕೆಲಸ ಮಾಡುವುದು ಒಳ್ಳೆಯದು ಜೊತೆಗೆ ಸಹಕಾರ ನೀಡುವುದು ಅತ್ಯುತ್ತಮ ಮಾರ್ಗ ಸ್ನೇಹಿತರೆ.ಹಾಗಾಗಿ ಇಂದಿನ ಸಮಾಜದ ಎಲ್ಲಾ ನಾಗರಿಕರು ಪ್ರಜಾಪ್ರಭುತ್ವದ ಆದರ್ಶ ವಿಚಾರಗಳನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ, ತಿಳಿದುಕೊಂಡಾಗಲೇ ಈ ದೇಶದಲ್ಲಿ ಬದುಕಲು ನಾವು ಯೋಗ್ಯರಾಗುತ್ತೇವೆ.ಶಾಂತಿ, ನೆಮ್ಮದಿ ಹಾಗೂ ಸ್ನೇಹಮಯ ಜೀವನವನ್ನು ಸಾಗಿಸಲು ಸಾಧ್ಯವಾಗಬಹುದಾಗಿದೆ.

ಪ್ರಜಾಪ್ರಭುತ್ವದ ಪಿತಾಮಹ :
ಬಸವಣ್ಣನವರು ಒಬ್ಬ ಪ್ರಜಾವಾದಿ, ಸಾಮಾಜಿಕ ನ್ಯಾಯ ಮತ್ತು ಮಾನವ ಹಕ್ಕುಗಳ ಪ್ರತಿಪಾದಕ. ಪ್ರಜಾಪ್ರಭುತ್ವದ ಪಿತಾಮಹ. ಮ್ಯಾಗ್ನಕಾರ್ಟ್‌ ಒಪ್ಪಂದಕ್ಕಿಂತ ಅರ್ಧ ಶತಮಾನದ ಹಿಂದೆಯೇ ಕಲ್ಯಾಣದಲ್ಲಿ ಅನುಭವ ಮಂಟಪವೆಂಬ ವಿಶ್ವಮಾನ್ಯ ಪ್ರಜಾಪ್ರಭುತ್ವದ ಸಂಸತ್ತನ್ನು ನಿರ್ಮಿಸಿದರು,ನಿರ್ಮಿಸಿದ ಕಾರಣದಿಂದಲೇ ಇಂದು ವಿಶ್ವವು ಪ್ರಜಾಪ್ರಭುತ್ವ ವ್ಯವಸ್ಥೆ ಬಗೆ ಮಾತನಾಡುತ್ತದೆ ಎಂದರೆ ಅಂದು ಬಸವಣ್ಣನವರ ವೈಚಾರಿಕ ನಿಲುವು ಹೇಗಿತ್ತು ಎನ್ನುವುದು ನಾವೆಲ್ಲರೂ ಒಮ್ಮೆ ಎದೆ ಮೇಲೆ ಕೈಯಿಟ್ಟು ಯೋಚನೆ ಮಾಡುವ ದೊಡ್ಡ ವಿಚಾರ. ಆದ್ದರಿಂದ ಈಗಲಾದರೂ ಎಚ್ಚತ್ತು ಬಸವಣ್ಣನವರು ನೀಡಿರುವ ಪ್ರಜಾಪ್ರಭುತ್ವ ವಚನ ಸಾಹಿತ್ಯವನ್ನು ಅರಿತು ನಾವೆಲ್ಲರೂ ಬಾಳಬೇಕಾಗಿದೆಯಲ್ಲವೇ.
ಬಸವಣ್ಣನವರ ಪ್ರಜಾಪ್ರಭುತ್ವ ಕಲ್ಪನೆಯ
ವಚನಗಳು ನಮ್ಮ ಬದುಕಿಗೆ ದಾರಿದೀಪವಾಗಿವೆ ಎನ್ನುವುದು ಸತ್ಯ. ಕಳಬೇಡ, ಕೊಲಬೇಡ ಎಂಬ ಸಪ್ತಶೀಲದ ವಚನವನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಅಪರಾಧಗಳು ಈ ಜಗತ್ತಿನಲ್ಲಿ ನಡೆಯಲು ಸಾಧ್ಯವಿಲ್ಲ. ಈ ವಚನದ ಆಶಯವನ್ನೆ ನಮ್ಮ ಸಂವಿಧಾನ ತಿಳಿಸುತ್ತದೆ.
ಸಮಾನತೆ ತತ್ವ ಸಾರಿದ ಬಸವಣ್ಣನವರು ಜಾತಿಯತೆ ಹೋಗಲಾಡಿಸಬೇಕೆಂದು ಕರೆ ನೀಡಿ ಅದರಂತೆ
ಹೋರಾಟ ಮಾಡಿದರು. ಆದರೆ ಇಂದಿಗೂ ಅದು ಹೋಗಿಲ್ಲ ಹೆಚ್ಚಾಗುತ್ತಿದೆ. ವಚನಗಳ ಅಧ್ಯಯನ, ಅವುಗಳ ಪಾಲನೆಯಿಂದ ಜಾತ್ಯಾತೀತ ರಾಷ್ಟ್ರ, ಸಮಾಜ ನಿರ್ಮಾಣ ಸಾಧ್ಯ ಎನ್ನುವುದಂತು ನಾವು ಮರೆಯಬಾರದು ಸಹೋದರರೆ,ವಚನ ಸಾಹಿತ್ಯವು ಸಂವಿಧಾನದಂತೆ ಸರ್ವರಿಗೂ ಸಮಬಾಳು, ಸಮಪಾಲು ತತ್ವ ನೀಡುತ್ತದೆ. ಸರ್ವ ಸಮಾನತೆಯ ಸಮಾಜ ನಿರ್ಮಾಣವೇ ವಚನ ಸಾಹಿತ್ಯದ ಪ್ರಮುಖ ತತ್ವವಾಗಿದೆ. ಇದರಿಂದಾಗಿಯೇ 900 ವರ್ಷಗಳು ಕಳೆದರೂ ವಚನ ಸಾಹಿತ್ಯ ಜೀವಂತವಾಗಿದೆ.
ಬಸವಣ್ಣನ ದೃಷ್ಟಿಯಲ್ಲಿ ಪ್ರಜಾಪ್ರಭುತ್ವ ಅಂದರೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಎಲ್ಲಾ ಜನಸಾಮಾನ್ಯರಿಗೆ ಮುಕ್ತವಾಗಿ ಸೀಗಬೇಕೆಂಬ ನಿಲುವೆ ಅವರದಾಗಿತ್ತು. ಬಸವಣ್ಣನವರ ಕಾಯಕ ನಿಷ್ಠೆಗೆ ಮಾನವೀಯತೆಗೆ ಬುನಾದಿ ಆಗಬೇಕೆಂದು ನಂಬಿ ಅದರಂತೆ ನಡೆದವರು ಹಾಗೆ ಧಾರ್ಮಿಕ, ಸಮಾಜಿಕ,ಪ್ರಜಾಪ್ರಭುತ್ವದ ಸಂಸತ್ತು ಅಂದಿನ ಅನುಭವ ಮಂಟಪದ ಅಡಿಯಲ್ಲಿ
ಶರಣರೆಲ್ಲರೂ ಸೇರಿ ಆದರ್ಶ ಸಮಾನತೆಯ ಸಮಾಜವನ್ನು ಕಟ್ಟಿದರು,ವಚನ ಸಾಹಿತ್ಯವನ್ನು ರಚಿಸಿದರು.ಆದರಿಂದ ಬಸವಣ್ಣ ನವರ ಆತ್ಮ ಅನುಭವದಿಂದ ಲಿಂಗಾಯತ ಧರ್ಮವನ್ನು ಸ್ಥಾಪಿಸಿ – ಬೆಳೆಸಿ, ವಚನಗಳನ್ನು ನಮಗೆ ಕೊಟ್ಟು ಹೋಗಿದ್ದಾರೆ ಎನ್ನುವ ಅರಿವು ನಮ್ಮಲ್ಲಿ ಉಂಟುಮಾಡಲಿ ಹಾಗೆ ಸಮಾನತೆಯ ಮಂತ್ರ ಭೋದನೆ ಮಾಡಿದ ವಿಚಾರ ಸಹ ನಮ್ಮ ಗಮನದಲ್ಲಿಟ್ಟುಕೊಳ್ಳುವುದು ಉತ್ತಮ.
ಆದರೆ ಈಗಿನ ಸಮಾನತೆ ಕೇವಲ ನೆಪಮಾತ್ರಕ್ಕೆ ಅಂದರೆ ಲೋಕತಂತ್ರಕ್ಕೆ ಮಾತ್ರ ಸೀಮಿತವಾಗಿದೆ ಎನ್ನುವುದಂತು ಸತ್ಯ,ಹಾಗಾಗಿ ಲೋಕ ತಂತ್ರಕ್ಕೆ
ಸ್ವತಂತ್ರವಾಗಿ, ನಿಷ್ಪಕ್ಷವಾಗಿ ಕೆಲಸ ಮಾಡಲು ಸಮಾನತೆಯ ವಚನ ಸಾಹಿತ್ಯದ ಪ್ರಜಾಪ್ರಭುತ್ವದಿಂದ ಮಾತ್ರ ಸಾಧ್ಯ, ಇದು ದೇಶಕ್ಕೆ ಒಳ್ಳೆಯ ಭವಿಷ್ಯ ತಂದುಕೊಡುತ್ತದೆ ಎಂದು ತಿಳಿದುಕೊಂಡು ನಡೆದರೆ ಅದೊಂದು ಉತ್ತಮ ಹೆಜ್ಜೆ ಎನ್ನಬಹುದು.ಹಾಗೆ
ಬಸವಣ್ಣನವರು ಕಲ್ಯಾಣದಲ್ಲಿ ಮಾಡಿದ ಎಲ್ಲಾ ಪ್ರಜಾಪ್ರಭುತ್ವ ದೃಷ್ಟಿಯ ಪ್ರಯೋಗಗಳಲ್ಲಿ ಬಹಳಷ್ಟು ಪ್ರಯೋಗಗಳು ಜಗತ್ತಿನಲ್ಲಿ ನಡೆದ ಮೊದಲ ಪ್ರಯೋಗಗಳೇ ಆಗಿವೆ. ಬಸವಣ್ಣನವರು ಎಲ್ಲದಕ್ಕೂ ಸಮಾಜ ಮುಖಿ ಸೇವೆಗಳ ಪರ್ಯಾಯ ವ್ಯವಸ್ಥೆ ಮಾಡಿದರು. ರಾಜ್ಯಸಿಂಹಾಸನವನ್ನು ಅವರು ಕೆಣಕಲಿಲ್ಲ.
ಆದರೆ ಶೂನ್ಯಸಿಂಹಾಸನ ಸೃಷ್ಟಿಸಿ ಪ್ರಜಾಪ್ರಭುತ್ವದ ಕನಸು ಬಿತ್ತಿದರು. ಅವರ ಅನುಭವ ಮಂಟಪದ ಅಮರಗಣಂಗಳಲ್ಲಿ ಎಲ್ಲಾ ಜಾತಿ ಜನಾಂಗದವರಿದ್ದರು. ಮಹಿಳೆಯರಿದ್ದರು. ಅವರೆಲ್ಲ ಆ ಅನುಭವ ಮಂಟಪ ಎಂಬ ಸಮಜೋ ಧಾರ್ಮಿಕ ಸಂಸತ್ತಿನ ಸದಸ್ಯರಾಗಿದ್ದರು. ಅಭಿವ್ಯಕ್ತಿ ಸ್ವಾತಂತ್ರ್ಯ ಪಡೆದವರಾಗಿದ್ದರು. ಹೀಗೆ ಸ್ವತಂತ್ರ ಸರ್ವಸಮಾನತೆಯ ವಿಚಾರಧಾರೆಯನ್ನು ಜಗತ್ತಿನಲ್ಲಿ ಹರಿಸಿದವರಲ್ಲಿ ಬಸವಣ್ಣನವರು ಪ್ರಥಮರು, ಅವರು ಪ್ರಾರಂಭಿಸಿದ ಚಳವಳಿಯಿಂದಾಗಿ ಮಹಿಳೆಯರು ಮತ್ತು ಅಸ್ಪೃಶ್ಯರು ಕೂಡ ಶರಣರಾದರು. ಅಕ್ಷರ ಕಲಿತರು, ಕಲಿಯುವ ಮೂಲಕ ವಯಸ್ಕರ ಶಿಕ್ಷಣ ಕಲ್ಯಾಣದ ನಾಡಿನಲ್ಲಿ ಆರಂಭವಾಯಿತು – ಆರಂಭವಾಗಿದ್ದು ಐತಿಹಾಸಿಕ ಯಾಕೆಂದರೆ 21 ನೇ ಶತಮಾನದ ಈಗಿನ ಎಲ್ಲಾ ಸರಕಾರಗಳು ಕೋಟಿಗಟ್ಟಲೆ ಹಣ ಸುರಿದರೂ ಸಹ ಇಂದಿನ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಕೊಡಲು ಸಾಧ್ಯವಾಗುತ್ತಿಲ್ಲ ಅಂದ ಮೇಲೆ 12ನೇ ಶತಮಾನದಲ್ಲಿ ಅವಿಧ್ಯಾವಂತರನ್ನು ವಿಧ್ಯಾವಂತರನ್ನಾಗಿ ಮಾಡಿ – ಶಿಕ್ಷಣ ಕಲಿಸಿ, ವಚನಗಳನ್ನು ರಚನೆ ಮಾಡುವಂತೆ ಪ್ರೋತ್ಸಾಹ ಮಾಡಿದ ಕೀರ್ತಿ ಮತ್ತು ಸಾಧನೆ ಬಸವಣ್ಣನವರದು ಹಾಗಾಗಿ ಅವರ ಬಗೆ ಎಷ್ಟೋ ಹಾಡಿ ಹೊಗಳಿದರು ಕಡಿಮೆಯಾಗುತ್ತದೆ.

ಕೊನೆಯ ಮಾತು: ಬಸವಣ್ಣನವರ ವಚನಗಳಲ್ಲಿ ವಿಶ್ವಸಂಸ್ಥೆ ಘೋಷಿಸಿದ ಎಲ್ಲಾ ಮಾನವ ಹಕ್ಕುಗಳ ವಿಚಾರಗಳೆಲ್ಲವೋ ಸೇರಿವೆ.ಸ್ಥಾವರ ಲಿಂಗಕ್ಕೆ ಪರ್ಯಾಯವಾಗಿ ಇಷ್ಟಲಿಂಗ, ಗುಡಿಗೆ ಪರ್ಯಾಯವಾಗಿ ಅನುಭವ ಮಂಟಪ, ದಾನಕ್ಕೆ ಸಮನಾಗಿ ದಾಸೋಹ,ಕರ್ಮಸಿದ್ಧಾಂತಕ್ಕೆ ಪರ್ಯಾಯವಾಗಿ ಕಾಯಕ ಸಿದ್ಧಾಂತ, ಹೀಗೆ ಎಲ್ಲ ರೀತಿಯಿಂದಲೂ ಬಸವಣ್ಣನವರು ಪ್ರಜಾಪ್ರಭುತ್ವ ಮೌಲ್ಯಗಳನ್ನು ಎತ್ತಿ
ಹಿಡಿದುಕೊಳ್ಳುವ ಮೂಲಕ ಬದುಕಿನುದ್ದಕ್ಕೂ ಚ್ಯುತಿ ಬರದಂತೆ ಕಾಪಾಡಿಕೊಂಡು ಬಂದಿದ್ದಾರೆ.ಇದನ್ನು ನಾವೆಲ್ಲರೂ ಉಳಿಸಿಕೊಂಡು – ಬೆಳೆಸಿಕೊಂಡು ಹೋಗುವ ಹೋಣೆಗಾರಿಕೆ ಪ್ರತಿಯೊಬ್ಬ ಬಸವಾಭಿಮಾನಿಗಳ ಮೇಲಿದೆ.

ಶರಣ: ಸಂಗಮೇಶ ಎನ್ ಜವಾದಿ. ಕೊಡಂಬಲ,ಬೀದರ ಜಿಲ್ಲೆ.

About Shivanand

Admin : Lingayat Kranti Monthly news paper 8884000008 [email protected]

Check Also

ಮಠಾಧೀಶರಿಗೆ ರಾಜಕಾರಣದ ಉಸಾಬರಿ ಏಕೆ?

  ಬೆಂಗಳೂರು: ರಾಜ್ಯದಲ್ಲಿನ ಸ್ವಾಮೀಜಿಗಳ ಪೈಕಿ ಕೆಲವರು ರಾಜಕೀಯ ನಾಯಕರಂತೆ ವರ್ತಿಸುತ್ತಿರುವುದು ಅವರು ಪ್ರತಿನಿಧಿಸುವ ಸ್ಥಾನಗಳಿಗೆ ಶೋಭೆ ತರುವಂತಹದ್ದಲ್ಲ. ಸಮಾಜಕ್ಕೆ …

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಯಾರಿಗೆ? ಹಾಗೂ ಮಹಾ ಮಾದರಿ ಶೇ.16ರ ವಿಶೇಷ ಮೀಸಲಾತಿ ಬೇಡವೇ….?

    ಬಸವಣ್ಣ ಬರುವಾಗ | ಬಿಸಿಲು ಬೆಳದಿಂಗಳು || ಮೊಗ್ಗು ಮಲ್ಲಿಗೆ | ಅರಳ್ಯಾವ || ಯಾಲಕ್ಕಿ ಗೊನೆಬಾಗಿ …

ಕರ್ನಾಟಕದ ಮ್ಯಾಕ್ಸ್ ಮುಲ್ಲರ್ ‘ವಚನ ಪಿತಾಮಹ’ ಡಾ. ಫ.ಗು.ಹಳಕಟ್ಟಿ

  ರಾಮದುರ್ಗ: ೧೯೫೬ರಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯದ ಪ್ರತಿಷ್ಠಿತ ಗೌರವ ಡಾಕ್ಟರೇಟ್ ಪದವಿ ಪ್ರದಾನ ಸಮಾರಂಭ. ಡಾ.ಪಾವಟೆಯವರು ಕುಲಪತಿಗಳಾಗಿದ್ದರು. ಕರ್ನಾಟಕ ವಿಶ್ವವಿದ್ಯಾನಿಲಯದ …

ರಾಣಿ ಚನ್ನವೀರಮ್ಮ

  ಲಿಂಗಾಯತ ಕ್ರಾಂತಿ: ಚನ್ನಮ್ಮ ಮತ್ತು ವೀರಮ್ಮ ಇವರಿಬ್ಬರು ಕಿತ್ತೂರ ದೇಸಾಯಿಣಿಗಳು. ಇವರಿಬ್ಬರ ಹೆಸರು ಒಂದಾಗಿರುವ ಚನ್ನವೀರಮ್ಮಾಜಿ ಎನ್ನುವ ಕೆಳದಿಯ …

ಜನಪದವೇ ಲಿಂಗಾಯತ ಧರ್ಮ ಉಳಿವಿಗೆ ಆಧಾರ

  ಬೀದರ್: 12ನೆ ಶತಮಾನದಲ್ಲಿ ನಡೆದ ಕಲ್ಯಾಣ ಕ್ರಾಂತಿ ನಂತರ ಲಿಂಗಾಯತ ಧರ್ಮದ ಶರಣರು ಚೆಲ್ಲಾಪಿಲ್ಲಿ ಆದರು, ಹಲವಾರು ಶರಣರು …

ಸಂವಿಧಾನ ಮತ್ತು ಕಾನೂನುಗಳ ಸಮರ್ಪಕ ಬಳಕೆಯೇ ಈ ದೇಶದ ಎಲ್ಲ ಸಮಸ್ಯೆಗಳಿಗೆ ಪರಿಹಾರ

  ~ ಡಾ. ಜೆ ಎಸ್ ಪಾಟೀಲ. ವಿಜಯಪುರ: ಭಾರತವು ಧಾರ್ಮಿಕ ಮೂಢನಂಬಿಕೆಗಳ ತವರು ಮನೆ. ಇಲ್ಲಿ ಧಾರ್ಮಿಕ ನಂಬಿಕೆಗಳ …

ಗ್ರಾಮ ಸ್ವರಾಜ್ಯ ಸಾಕಾರಗೊಳಿಸಿದ: ರಾಮಪ್ಪ ಬಿದರಿ

ವಿಜಯಪುರ: 1952-1962 ಹತ್ತು ವರ್ಷಗಳ ಕಾಲ ಲೋಕಸಭಾ ಸದಸ್ಯರಾಗಿದ್ದ ರಾಮಪ್ಪ ಬಿದ್ರಿ ಈ ಹುದ್ದೆಯನ್ನು ಎಂದೂ ತಮ್ಮ ಸ್ವಂತದ ಲಾಭಕ್ಕಾಗಿ …

ಲಿಂಗಾಯತ ಧರ್ಮದ ಹೋರಾಟ ಸರಣಿ-2 ಭಾಗ-4

  ಲಿಂಗಾಯತ ಧರ್ಮ ಮಾನ್ಯತೆಯ ಹೊರಾಟದಲ್ಲಿ ಲಿಂಗಾಯತ ಸಮನ್ವಯದ ಸಮಿತಿ ಪಾತ್ರ. ಬಸವಕಲ್ಯಾಣ: ಬೆಂಗಳೂರಿನ ಕುಂಬಳಗೋಡಿನ ಬಸವ ಗಂಗೋತ್ರಿಯಲ್ಲಿ ಜೂನ್ …

ಲಿಂಗಾಯತ ಧರ್ಮದ ಹೋರಾಟ ಸರಣಿ-2

  ಜಾತಿ ಲಿಂಗಾಯತರು ಮತ್ತು ಬೇಡ ಜಂಗಮ ಪಂಚಾಚಾರ್ಯರು ಸತ್ಯವೆಂದು ನಂಬಿ ಲಿಂಗಾಯತ ಧರ್ಮದ ಮಾನ್ಯತೆ ತಪ್ಪಿಸುತ್ತಿದ್ದಾರೆ. ಬಸವಕಲ್ಯಾಣ: 12ನೇ …

ನ. 22 ರಂದು ಡಾ. ಹೆಚ್.ಆರ್.ಗಿರಿಯಾಲ ಅವರಿಗೆ ನುಡಿನಮನ

ಚನ್ನಮ್ಮನ ಕಿತ್ತೂರು: ಸಮೀಪದ ಬೈಲೂರು ಗ್ರಾಮದ ಖ್ಯಾತ ವೈದ್ಯ ಡಾ ಹಣಮಂತ ಆರ್ ಗಿರಿಯಾಲ ಅವರು ಕಳೆದ ಸೆಪ್ಟೆಂಬರ್ 30 …

ಲಿಂಗಾಯತ ಧರ್ಮದ ಹೋರಾಟ ಸರಣಿ-2

  ಲಿಂಗಾಯತ ಧರ್ಮದ ಮಠಾಧೀಶರ ನಿಯೋಗ ಮುಖ್ಯಮಂತ್ರಿಗೆ ಭೇಟಿ ಮಾಡಬಾರದೇಕೆ? ಲಿಂಗಾಯತ ಧರ್ಮದ ಹೋರಾಟದಲ್ಲಿ ಮುಂಚೂಣಿ ಸ್ಥಾನ ವಹಿಸಿ ಅತ್ಯಂತ …

ಸಾಮಾಜಿಕ ಪ್ರಾತಿನಿಧ್ಯತೆ : ಬಿ.ಜೆ ಪಾಟೀಲ

  ವಿಜಯಪುರ : ಸಮಸಮಾಜ ಕಟ್ಟಲು, ಸಂವಿಧಾನದಲ್ಲಿ ಮೂಲಭೂತ ಹಕ್ಕಗಳ ಬಗ್ಗೆ ಮಾತನಾಡುವಾಗ ಮೂರೂ ಬಿಂದುಗಳು ( Article 15, …

ಲಿಂಗಾಯತ–ವೀರಶೈವರಿಗೆ ಶೇ 16 ಮೀಸಲಾತಿ ನೀಡಿ: ಶಿವಮೂರ್ತಿ ಮುರುಘಾ ಶರಣರು

  ಚಿತ್ರದುರ್ಗ: ಜಾತಿ, ಉಪಜಾತಿಗೆ ಒಂದೊಂದು ವಿಧವಾದ ಮೀಸಲಾತಿ ನೀಡುವ ಬದಲು ಲಿಂಗಾಯತ–ವೀರಶೈವ ಸಮುದಾಯಕ್ಕೆ ಶೇ 16ರಷ್ಟು ಮೀಸಲಾತಿಯ ನಿಗದಿಪಡಿಸುವುದು …

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಡಾ. ತೋಂಟದ ಸಿದ್ಧರಾಮ ಶ್ರೀಗಳ ಆಕ್ಷೇಪ

  ಗದಗ: ಸರ್ಕಾರ ತರಾತುರಿಯಲ್ಲಿ ಲಿಂಗಾಯತ ವೀರಶೈವ ಅಭಿವೃದ್ಧಿ ನಿಗಮ ಘೋಷಿಸಿದ್ದು, ಇದಕ್ಕೆ ಯಾವುದೇ ಗೊತ್ತು ಗುರಿಯಾಗಲಿ, ಸ್ಪಷ್ಟತೆಯಾಗಲಿ ಇಲ್ಲ …

ರವಿ ಬೆಳಗೆರೆ ಒಂದು ಕನಸು ನನಸು ಮಾಡಲು ಆಗಲಿಲ್ಲ..!

  ಚನ್ನಮ್ಮನ ಕಿತ್ತೂರು: ಪಿ. ಲಂಕೇಶರ ನಂತರ ಕನ್ನಡ ಪತ್ರಿಕೋದ್ಯಮ ಮತ್ತೊಂದು ರೀತಿ ಕಲ್ಪನೆ ಮೀರಿ ಮುನ್ನಡಿಸಿದ್ದ ಕೀರ್ತಿ ರವಿಗೆ …

Leave a Reply

Your email address will not be published. Required fields are marked *

error: Content is protected !!