Breaking News
Home / featured / ಮನೆಯಲ್ಲಿಯೇ ಬಸವ ಜಯಂತಿ ಆಚರಿಸೋಣ: ಎಂ ಬಿ ಪಾಟೀಲ

ಮನೆಯಲ್ಲಿಯೇ ಬಸವ ಜಯಂತಿ ಆಚರಿಸೋಣ: ಎಂ ಬಿ ಪಾಟೀಲ

ಬಸವ ಜಯಂತಿ ಹಾರ್ದಿಕ ಶುಭಾಶಯಗಳು

ವಿಜಯಪುರ: 2020ರಲ್ಲಿ ಬರುವ ಧರ್ಮಗುರು ಬಸವಣ್ಣನವರ 887ನೆಯ ವರ್ಷದ ಬಸವ ಜಯಂತಿ ಕಾರ್ಯಕ್ರಮಗಳನ್ನು ಮನೆಗಳಲ್ಲಿಯೇ ಮಾಡಬೇಕು ಸದ್ಯದ ಪರಿಸ್ಥಿತಿ ಮಹಾಮಾರಿ ಕೊರೊನಾ ವೈರಸ್ ತಡೆಗಟ್ಟುವ ಹಿನ್ನಲೆಯಲ್ಲಿ ಸರ್ಕಾರದ ಆದೇಶದಂದ ಪ್ರತಿಯೊಬ್ಬರೂ ತಮ್ಮ ತಮ್ಮ ಮನೆಗಳಲ್ಲಿಯೇ ಕುಟುಂಬದ ಸದಸ್ಯರು ಮಾತ್ರ ಸೇರಿಕೊಂಡು ಬಹಳಷ್ಟು ಸರಳ ಮತ್ತು ಅರ್ಥಪೂರ್ಣವಾಗಿ ಆಚರಿಸಬೇಕೆಂದು ಮಾಜಿ ಗೃಹ ಸಚಿವರು, ಲಿಂಗಾಯತ ನಾಯಕ ಎಂ ಬಿ ಪಾಟೀಲ ತಿಳಿಸಿದ್ದಾರೆ.

ಒಲೆ ಹತ್ತಿ ಉರಿಧರೆ ನಿಲ್ಲಬಹುದೆ?
ಧರೆ ಹೊತ್ತಿ ಉರಿದೆಡೆ ನಿಲ್ಲಲುಬಾರದು? ಎಂಬ ಬಸವಾದಿ ಶರಣರ ವಚನ ಇವತ್ತಿನ ಸಂಕಷ್ಟ ಪರಿಸ್ಥಿಯಲ್ಲಿ ಪ್ರಸ್ತುತವಾಗಿದೆ. ಆದರೆ ನಾವೆಲ್ಲರೂ ಭಯಪಡುವ ಅಗತ್ಯವಿಲ್ಲ ಕರೋನ ಸೊಂಕು ಹರಡದಂತೆ ಎಚ್ಚರಿಕೆ ವಹಿಸಿ, ಕರೋನ ವಿರುದ್ಧ ಹೋರಾಡೋಣ.

ಇತಂಹ ಸಂಕಷ್ಟ ಸಂದರ್ಭದಲ್ಲಿ ನಾವುಗಳು ಭಯಪಡುವ ಅವಶ್ಯಕತೆಯಿಲ್ಲ ಎಂಬ
ನಾಳೆ ಬಪ್ಪುದು ನಮಗಿಂದೆ ಬರಲಿ, ಇಂದು ಬಪ್ಪುದು ನಮಗೀಗಲೆ ಬರಲಿ, ಇದಕಾರಂಜುವರು, ಇದಕಾರಳುಕುವರು `ಜಾತಸ್ಯ ಮರಣಂ ಧ್ರುವಂ’ ಎಂದುದಾಗಿ ನಮ್ಮ ಕೂಡಲಸಂಗಮದೇವರು ಬರೆದ ಬರೆಹವ ತಪ್ಪಿಸುವಡೆ ಹರಿಬ್ರಹ್ಮಾದಿಗಳಿಗಳವಲ್ಲ. ಗುರು ಬಸವಣ್ಣನವರು ವಚನಗಳು ನಮಗೆ ದಾರಿದ್ವೀಪವಾಗಿದ್ದು ಯಾರು ಸಹ ಧೈರ್ಯ ಕಳೆದುಕೊಳ್ಳುವ ಅವಶ್ಯಕತೆಯಿಲ್ಲ ಆದರಿಂದ ಸುರಕ್ಷತೆಯ ದೃಷ್ಟಿಯಿಂದ ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಮನೆಯಲ್ಲಿಯೇ ಬಸವಣ್ಣನವರು ಹಾಗೂ ಬಸವಾದಿ ಶರಣರ ವಚನಗಳ ಮತ್ತು ಬಸವಾದಿ ಶರಣರ ಜೀವನ ಚರಿತ್ರೆಯನ್ನು ಓದುವ ಮೂಲಕ ಕುಟುಂಬದ ಸದಸ್ಯರೊಂದಿಗೆ ಆಚರಿಸೋಣ

“ದಯವೇ ಧರ್ಮದ ಮೂಲವಯ್ಯ” ಎಂಬ ಶರಣರ ಆಶಯದಂತೆ ನಾವೆಲ್ಲರೂ
ಕೂಡಾ ನಮ್ಮ ಕೈಲಾದಷ್ಟು
ಸಹಾಯ ಮಾಡಿ ಜನರ ಸಂಕಷ್ಟದಲ್ಲಿ ಬಾಗಿಯಾಗೋಣ,

ಬಿಎಲ್‌ಡಿಇ ಸಂಸ್ಥೆಯಿಂದ ಕರೋನ ವಿರುಧ್ದ ಹೋರಾಡೋಕೆ ಸಿಎಂ ಪರಿಹಾರ ನಿಧಿಗೆ ರೂ 25 ಲಕ್ಷ ಮತ್ತು ಪಿಎಂ ಪರಿಹಾರ ನಿಧಿಗೆ ರೂ 25 ಲಕ್ಷ ನೀಡಿದ್ದು, ಜಿಲ್ಲಾಡಳಿತದ ಸಹಯೋಗದೊಂದಿಗೆ ವಿಜಯಪುರ ಜಿಲ್ಲೆಯಾದ್ಯಂತ ಸ್ಯಾನಿಟೈಸರ್ ಪೂರೈಕೆ, ಎಂ ಬಿ ಪಾಟೀಲ ಫೌಂಡೆಶನ್ ಎಲ್ಲ ಹಿತೈಷಿಗಳು
ಗೋವಾ ಕನ್ನಡಿಗರ ಸಂಕಷ್ಟಕ್ಕೆ ಸ್ಪಂದನೆ, 2000 ಆಹಾರ ಪದಾರ್ಥಗಳನ್ನು ಹಾಗೂ ದಿನಸಿ ವಸ್ತುಗಳನ್ನು ವಿತರಿಸಲಾಗಿದೆ ಉಚಿತ ಹಾಗೂ ಇನ್ನೂ ಹಲವಾರು ಕಾರ್ಯಗಳನ್ನು ಎಂ ಬಿ ಪಾಟೀಲ ಮಾಡಿರುವುದು ಶ್ಲಾಘನೀಯ.

ವೈದ್ಯಕೀಯ ಸಿಬ್ಬಂದಿ, ನರ್ಸಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಪೋಲಿಸರು ಹಾಗೂ ಕರೋನ ವಿರುಧ್ದ ಹೋರಾಡುತ್ತಿರುವವರಿಗೆ ಬಸವಾದಿ ಶರಣರು ರಕ್ಷಣೆ ನೀಡಲಿ, ಮತ್ತು ನಾವು ಕೂಡಾ ಅವರ ಬೆಂಬಲ ವ್ಯಕ್ತಪಡಿಸೋಣ ಎಂದು ತಿಳಿಸಿದ್ದಾರೆ.

ಅಜ್ಞಾನ, ಅಹಂಕಾರ ತೊರೆದು ಅಂದಕಾರ, ಅಂದ ಶ್ರದ್ಧೆಯಿಂದ ಹೊರಬಂದು ಹೊಸ-ಹೊಸ ವಿಚಾರಗಳೊಂದಿಗೆ ಸಕಲ ಜೀವಿಗಳ ಲೇಸಿಗಾಗಿ ತನು-ಮನವನ್ನು ಸಮರ್ಪಿಸೋಣ ಸಮಾಜದಲ್ಲಿ ಮೌಡ್ಯ, ಕಂದಾಚಾರ, ಅಸಮಾನತೆ, ಅಸಂಹಿಷ್ಣತೆ, ಕಳೆಯಲು ಪ್ರಯತ್ನ ಮಾಡೋಣ ಎಂದು ತಿಳಿಸುತ್ತಾ ಮತ್ತೊಮ್ಮೆ ಎಲ್ಲರಿಗೂ ಬಸವ ಜಯಂತಿ ಶುಭಾಶಯಗಳು.

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಲಿಂಗಾಯತ ಧರ್ಮದ ಹೋರಾಟ ಸರಣಿ-2

  ಜಾತಿ ಲಿಂಗಾಯತರು ಮತ್ತು ಬೇಡ ಜಂಗಮ ಪಂಚಾಚಾರ್ಯರು ಸತ್ಯವೆಂದು ನಂಬಿ ಲಿಂಗಾಯತ ಧರ್ಮದ ಮಾನ್ಯತೆ ತಪ್ಪಿಸುತ್ತಿದ್ದಾರೆ. ಬಸವಕಲ್ಯಾಣ: 12ನೇ …

ನ. 22 ರಂದು ಡಾ. ಹೆಚ್.ಆರ್.ಗಿರಿಯಾಲ ಅವರಿಗೆ ನುಡಿನಮನ

ಚನ್ನಮ್ಮನ ಕಿತ್ತೂರು: ಸಮೀಪದ ಬೈಲೂರು ಗ್ರಾಮದ ಖ್ಯಾತ ವೈದ್ಯ ಡಾ ಹಣಮಂತ ಆರ್ ಗಿರಿಯಾಲ ಅವರು ಕಳೆದ ಸೆಪ್ಟೆಂಬರ್ 30 …

ಲಿಂಗಾಯತ ಧರ್ಮದ ಹೋರಾಟ ಸರಣಿ-2

  ಲಿಂಗಾಯತ ಧರ್ಮದ ಮಠಾಧೀಶರ ನಿಯೋಗ ಮುಖ್ಯಮಂತ್ರಿಗೆ ಭೇಟಿ ಮಾಡಬಾರದೇಕೆ? ಲಿಂಗಾಯತ ಧರ್ಮದ ಹೋರಾಟದಲ್ಲಿ ಮುಂಚೂಣಿ ಸ್ಥಾನ ವಹಿಸಿ ಅತ್ಯಂತ …

ಸಾಮಾಜಿಕ ಪ್ರಾತಿನಿಧ್ಯತೆ : ಬಿ.ಜೆ ಪಾಟೀಲ

  ವಿಜಯಪುರ : ಸಮಸಮಾಜ ಕಟ್ಟಲು, ಸಂವಿಧಾನದಲ್ಲಿ ಮೂಲಭೂತ ಹಕ್ಕಗಳ ಬಗ್ಗೆ ಮಾತನಾಡುವಾಗ ಮೂರೂ ಬಿಂದುಗಳು ( Article 15, …

ಲಿಂಗಾಯತ–ವೀರಶೈವರಿಗೆ ಶೇ 16 ಮೀಸಲಾತಿ ನೀಡಿ: ಶಿವಮೂರ್ತಿ ಮುರುಘಾ ಶರಣರು

  ಚಿತ್ರದುರ್ಗ: ಜಾತಿ, ಉಪಜಾತಿಗೆ ಒಂದೊಂದು ವಿಧವಾದ ಮೀಸಲಾತಿ ನೀಡುವ ಬದಲು ಲಿಂಗಾಯತ–ವೀರಶೈವ ಸಮುದಾಯಕ್ಕೆ ಶೇ 16ರಷ್ಟು ಮೀಸಲಾತಿಯ ನಿಗದಿಪಡಿಸುವುದು …

Leave a Reply

Your email address will not be published. Required fields are marked *

error: Content is protected !!