ಬೆಳಗಾವಿ : ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಬೆಳಗಾವಿಯ 10ವರ್ಷದ ಬಾಲಕನ್ನೊಬ್ಬ ತನ್ನ ಶಿಷ್ಯವೇತನ ಹಾಗೂ ಮನೆಯಲ್ಲಿ ಕೂಡಿಟ್ಟ 5ಸಾವಿರ ಹಣವನ್ನ ನೀಡುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾನೆ.
ಮೂಲತಃ ರಾಮದುರ್ಗ ತಾಲೂಕಿನ ನಾಗನೂರ ಗ್ರಾಮದ ಚನ್ನಬಸವ ಪಾಟೀಲ್, ಸದ್ಯ ನಾಲ್ಕನೇ ತರಗತಿ ಓದುತ್ತಿದ್ದಾನೆ.ತನಗೆ ಬಂದ ಸ್ಕಾಲರಶಿಪ್ ಹಣ ಹಾಗೂ ಮನೆಯಲ್ಲಿ ನೀಡಿದ್ದ ಹಣವನ್ನ ಮನೆಯಲ್ಲಿನ ಟ್ರಜರಿಯಲ್ಲಿ ಕೂಡಿಟ್ಟಿದ್ದ. ಅದನ್ನ ತನ್ನ ವಿದ್ಯಾಭ್ಯಾಸಕ್ಕೆ ಬಳಸಿಕೊಳ್ಳುವ ಆಲೋಚನೆಯಲ್ಲಿದ್ದ. ಆದರೆ ಇಡೀ ದೇಶವನ್ನೇ ಕಾಡುತ್ತಿರುವ ಕೊರೊನಾ ಮಹಾಮಾರಿಗೆ, ಪೋಲಿಸರು, ವೈದ್ಯಕೀಯ ಸಿಬ್ಬಂದ್ಧಿಗಳು ಹಗಲಿರುಳು ಶ್ರಮಿಸುತ್ತಿದ್ದಾರೆ. ಇಂತವರ ನೆರವಿಗೆ ನಾನು ನನ್ನ ಹಣ ನೀಡುತ್ತೇನೆ ಅಂತ ತಾಯಿಯ ಮುಂದೆ ಹೇಳಿಕೊಂಡಿದ್ದಾನೆ.
ಬಾಲ ಬಸವ ಅಗಸ್ತ್ಯ ಸಿ ಶೆಟ್ಟರ. ಮಾಚಕನೂರ
ಇದನ್ನ ಕೇಳಿದ ತಾಯಿ ಕೂಡಿಟ್ಟ ಹಣವನ್ನ ಎಣಿಕೆ ಮಾಡಿದ್ದಾಗ 5000ರೂ ಇರುವುದು ಗೊತ್ತಾಗಿದೆ. ಮಗನ ಆಸೆ ಈಡೇರಿಸಬೇಕೆಂಬ ಬಯಕೆಯಿಂದ ರಾಮದುರ್ಗ ತಹಶೀಲ್ದಾರ ಗಿರೀಶ್ ಸಾದ್ವಿ ಅವರನ್ನ ಸಂಪರ್ಕ ಮಾಡಿ ವಿಚಾರ ತಿಳಿಸಿದ್ದಾರೆ. ಇದನ್ನ ಕೇಳಿದ ತಹಶೀಲ್ದಾರ ಸಹ ಮಗುವಿನ ದೇಶಪ್ರೇಮ, ಸಾಮಾಜಿಕ ಕಳಕಳಿಯನ್ನ ಪ್ರಶಂಸೆ ಮಾಡಿದ್ದಾರೆ. ಇವತ್ತು ರಾಮದುರ್ಗ ತಹಶೀಲ್ದಾರ ಕಚೇರಿಗೆ ಬಾಲಕ ಹಾಗೂ ಆತನ ತಾಯಿ ಖುದ್ದು ಹೋಗಿ ಬಾಲಕ ಕೂಡಿಟ್ಟ 5000ರೂ ಹಣವನ್ನ ಸಿಎಂ ಪರಿಹಾರ ನಿಧಿಗೆ ನೀಡಿ ಬಂದಿದ್ದಾರೆ.
ಸದ್ಯ ಬಾಲಕನ ಸಾಮಾಜಿಕ ಕಳಕಳಿಗೆ ತಶೀಲ್ದಾರ ಗಿರೀಶ್ ಸಾಧ್ವಿ ಪ್ರಶಂಸೆ ವ್ಯಕ್ತಪಡಿಸಿ, ಬಾಲಕನ ಬೆನ್ನು ತಟ್ಟಿಕಳುಹಿಸಿಕೊಟ್ಟಿದ್ದಾರೆ.