Breaking News
Home / featured / ಸಾಮಾಜಿಕ ಜಾಲತಾಣದಲ್ಲಿ ಬಸವ ಜಯಂತಿ

ಸಾಮಾಜಿಕ ಜಾಲತಾಣದಲ್ಲಿ ಬಸವ ಜಯಂತಿ

ಬಾಲ ಬಸವ ಚನ್ನಬಸವ ಪಾಟೀಲ.
ನಾಗನೂರ, ತಾ: ರಾಮದುರ್ಗ

ಬೆಂಗಳೂರು: ಜಗತ್ತಿನ ಎಲ್ಲ ಧರ್ಮಗಳ ಮೂಢ ಆಚರಣೆಗಳನ್ನು, ಪೂಜಕರನ್ನು, ಪೂಜಿಸುವವರನ್ನು ಬೆತ್ತಲೆ ಗೊಳಿಸಿದೆ ಕರೋನಾ ಎಂಬ ವೈರಸ್. ನೂರಾರು ವರ್ಷಗಳಿಂದ ಮುಗ್ದ ಜನರಿಂದ ವಂತಿಗೆ ಸಲ್ಲಿಸಿಕೊಂಡು, ದಿನದ ೨೪ ಘಂಟೆಗಳ ಕಾಲ ಪೂಜಿಸಿಕೊಂಡ ದೇವರುಗಳು, ಇಂದು ಕೇವಲ ಒಂದು ವೈರಸ್ ನಿಂದ ತಪ್ಪಿಸಿಕೊಳ್ಳಲು ತಮ್ಮ ತಮ್ಮ ಬೃಹದಾಕಾರದ ಬಾಗಿಲು ಹಾಕಿಕೊಂಡು ಕುಳಿತಿವೆ. ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರೆ ಮಾತ್ರ ಮುಕ್ತಿ ಸಿಗುತ್ತದೆ ಎಂದು ಸಾರಿದ್ದ ಮೆಕ್ಕಾ ಇಂದು ಖಾಲಿ ಖಾಲಿ. ವೆಟಿಕನ್ ಸಿಟಿಯಲ್ಲಿ ಈಸ್ಟರ ಪ್ರಾರ್ಥನೆ ಮಾಡಿದರೆ ಸ್ವರ್ಗ ಎಂದ ಒಂದು ಧರ್ಮ, ತನ್ನ ಸೇವೆಗೆ ಯಾರು ಬರಬೇಡಿ ಎನ್ನುತ್ತಲಿದೆ ಈ ದೊಡ್ಡ ಧರ್ಮ. ದೊಡ್ಡ ಜನಸಂಖ್ಯೆಯನ್ನು ತನ್ನೆಡೆಗೆ ಸೆಳೆದ ಧರ್ಮಗಳ ಕಥೆ ಈ ರೀತಿಯಾದರೆ ಇನ್ನು ಚಿಕ್ಕ ಪುಟ್ಟ ಧರ್ಮಗಳ ವಿಚಾರ ನಿಮ್ಮ ಉಹೆಗೆ ಬಿಟ್ಟದ್ದು.

ಬಾಲ ಬಸವ ಚಿನ್ಮಯ ಎಸ್ ಮಗದುಮ್. ನಾಗನೂರ ತಾ: ರಾಮದುರ್ಗ

ಇಂದು ನಾವು ಮುಖ್ಯವಾಗಿ ಧರ್ಮದ ಸಿದ್ದಾಂತಗಳನ್ನು ಮರೆತು ಅವುಗಳ ಆಚರಣೆಗೆ ಹೆಚ್ಚು ಮಹತ್ವ ಕೊಟ್ಟಿದ್ದಕ್ಕಾಗಿ ಪಶ್ಚಾತಾಪ ಪಡುತ್ತಿದ್ದೆವೆ. ದಯವೇ ಧರ್ಮದ ಮೂಲವಯ್ಯಾ ಎಂಬ ವಾಕ್ಯ ಮರೆತಿದ್ದೇವೆ. ಜಗತ್ತನ್ನು ವ್ಯಾಪಾರದ ದೃಷ್ಟಿಯಿಂದ ನೋಡಿ ಸೃಷ್ಟಿ ಕರ್ಥನನ್ನು ಸಹ ಬೃಷ್ಟ ಗೊಳಿಸಿದ್ದೆವೆ. ಮನಸ್ಸಿನ ನೆಮ್ಮದಿಗಾಗಿ ಪ್ರಾರ್ಥನೆ ಎಂಬುದನ್ನು ಮರೆತು ಜಗಮೆಚ್ಚಿಸಲು ಪ್ರಾರ್ಥನೆ ಮಾಡುತ್ತಿದ್ದೆವೆ. ನಿಮ್ಮ ಧರ್ಮಕ್ಕಿಂತ ನನ್ನ ಧರ್ಮ ಶ್ರೇಷ್ಠ ಎಂದು ಬೇರೆ ಧರ್ಮವನ್ನು ತುಳಿಯುವದರಲ್ಲಿ ನಮ್ಮ ಧರ್ಮದ ಸಿದ್ದಾಂತಗಳನ್ನು ಅರಿಯದೆ ಅಂಧಕಾರದಲ್ಲಿ ಮುಳುಗುತ್ತಿದ್ದೆವೆ. ದೇವರಿಗೆ ಲಂಚ ಕೊಟ್ಟು ಅವನನ್ನು ಖರಿದಿಸಲು ಪ್ರಯತ್ನಿಸುತ್ತಿದ್ದೆವೆ. ಅವನ ಸೇವೆಗೆ ಪ್ರತಿಫಲ ಅಪೇಕ್ಷಿಸುತ್ತಿದ್ದೆವೆ. ಕಾಯಬೇಕಾದವರೆ ಕೊಲ್ಲಲು ಪ್ರಾರಂಭಿಸಿದರೆ ಬದಕುವದು ಹೇಗೆ?. ತಿಳಿ ಹೇಳಬೇಕಾದ ಧರ್ಮ ಗುರುವೆ ಬೃಷ್ಟನಾದರೆ ಭಕ್ತನ ಗತಿ?.

ಎಲ್ಲರೊಂದಿಗೆ ನಾನೂ ಪ್ರಾರ್ಥಸುವೆ ಬಸವಣ್ಣ ನೀನು ಹುಟ್ಟಿದ ದಿನದಂದು. ಕಾರಣ ನಾನು ಸಮಾಜ ಜೀವಿಯಲ್ಲವೆ?.

ಜಿ.ಬಿ ಪಾಟೀಲ
ಜಾಗತಿಕ ಲಿಂಗಾಯತ ಮಹಾಸಭಾ ಪ್ರಧಾನ ಕಾರ್ಯದರ್ಶಿಗಳು ಬೆಂಗಳೂರು

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

‘ಶರಣಾರ್ಥಿ’ ಗುರು ಪ್ರವೇಶ..!

  ಗಜೇಂದ್ರಗಡದ ಶರಣದಂಪತಿಗಳು ನೂತನ ಮನೆಗೆ ‘ಶರಣಾರ್ಥಿ’ ಎಂದು ವಿಶಿಷ್ಟ ರೀತಿಯಲ್ಲಿ ಮನೆ ನಾಮಕರಣ ಮಾಡಿ ಗುರುಪ್ರವೇಶ, ಅನುಭಾವ ಹಾಗೂ …

Leave a Reply

Your email address will not be published. Required fields are marked *

error: Content is protected !!