Breaking News
Home / featured / ಬಸವಣ್ಣ ಒಬ್ಬ ಶ್ರೇಷ್ಠ ಆರ್ಥಿಕ ತಜ್ಞ

ಬಸವಣ್ಣ ಒಬ್ಬ ಶ್ರೇಷ್ಠ ಆರ್ಥಿಕ ತಜ್ಞ

ಬಸವಣ್ಣನವರು ಕೇವಲ ಒಬ್ಬ ಭಕ್ತಿಪಂಥದ ಸಂತನೆಂದು ಪಟ್ಟಭದ್ರ ಶಕ್ತಿಗಳು ಬಿಂಬಿಸುತ್ತಲೆ ಬಂದಿವೆ. ಅವರೊಬ್ಬ ಸಮಾಜವಾದಿˌ ಸಮತಾವಾದಿˌ ಜೀವನ್ಮುಖಿ ಚಿಂತಕˌ ಅಷ್ಟೇ ಅಲ್ಲ. ಅವರೊಬ್ಬ ಶ್ರೇಷ್ಠ ಆರ್ಥಿಕ ಚಿಂತಕರೂ ಅಹುದು.

ಕಲ್ಯಾಣ ಸಾಮ್ರಾಜ್ಯವು ಬಸವಣ್ಣನವರ ಆರ್ಥಿಕ ನೀತಿಗಳಿಂದ ಸರ್ವಾಂಗೀಣ ಅಭಿವ್ರದ್ಧಿ ಹೊಂದಿತ್ತು. ಶರಣರ ಚಟುವಟಿಕೆಗಳಿಂದ ಸಾಮ್ರಾಜ್ಯದ ಪ್ರವಾಸೋದ್ಯಮ ಅಭಿವ್ರದ್ಧಿ ಹೊಂದಿದ್ದಲ್ಲದೆ ಸಂಪತ್ತಿನ ಸದ್ವಿನಿಯೋಗ ಮತ್ತು ಸಮಾನ ಹಂಚಿಗೆ ನೀತಿಯು ಬಸವಣ್ಣನವರ ಕಾಯಕ ಮತ್ತು ದಾಸೋಹ ಎಂಬೆರಡು ಹೊಸ ಪರಿಕಲ್ಪನೆಗಳಿಂದ ರೂಪಿಸಲ್ಪಟ್ಟಿತ್ತು.

ಬಸವಣ್ಣನವರ ಆರ್ಥಿಕ ನೀತಿ ಮತ್ತು ವೈಯಕ್ತಿಕ ನೈತಿಕತೆ ಎರಡನ್ನೂ ಏಕಕಾಲಕ್ಕೆ ಅಭಿವ್ಯಕ್ತಿಸುವ ಅವರ ಒಂದು ವಚನ ಹೀಗಿದೆ :

” ಒಡನಿರ್ದ ಸತಿಯೆಂದು ನೆಚ್ಚಿರ್ದೆನಯ್ಯˌ
ಕೈವಿಡಿದ ಸಜ್ಜನೆಯೆಂದು ನಂಬಿರ್ದೆನಯ್ಯˌ
ಅಯ್ಯ ˌ ನಮ್ಮಯ್ಯನ ಕೈ ನೊಂದಿತ್ತು ˌ
ತೆಗೆದು ಕೊಡಾ ಬೆಂಡೋಲೆ ಕಿತ್ತಿ ˌ
ಕಳ್ಳನ ಮನೆಗೊಬ್ಬ ಬಲುಗಳ್ಳ ಬಂದೊಡೆˌ
ಕೂಡಲಸಂಗಮದೇವನಲ್ಲದೆ ಆರೂ ಇಲ್ಲ.”

ಒಡನಿರ್ದ ಸತಿಯೆಂದು ನೆಚ್ಚಿರ್ದೆನಯ್ಯ ಕೈವಿಡಿದ ಸಜ್ಜನೆಯೆಂದು ನಂಬಿರ್ದೆನಯ್ಯˌ

ಕೈ ಹಿಡಿದ ಹೆಂಡತಿ ಎಂದು ನಂಬಿರುವೆ. ಆದರೆ ಕಳ್ಳನೊಬ್ಬ ಬಂದು ಹೆಂಡತಿಯ ಆಭರಣಗಳಿಗೆ ಕೈಹಾಕಿದಾಗ ಪ್ರತಿಭಟಿಸಿದ ಹೆಂಡತಿಯ ನಡೆ ಸರಿಯಾದದ್ದಲ್ಲ. ಆಕೆ ಸಜ್ಜನೆ ಎಂದು ಕೊಂಡುರುವೆ.

ಅಲಾಪ ಮೆಲೋಡಿಸ್ ಅವರಿಂದ ವಚನ ಗಾಯನ.

ಅಯ್ಯ ನಮ್ಮಯ್ಯನ ಕೈ ನೊಂದಿತ್ತು ತೆಗೆದು ಕೊಡಾ ಬೆಂಡೋಲೆ ಕಿತ್ತಿ ˌ

ಕಳ್ಳನ ವೇಷದಲ್ಲಿ ನನ್ನ ಹೆಂಡತಿಯ ಆಭರಣಕ್ಕೆ ಕೈ ಹಾಕಿದವ ಕಳ್ಳನಲ್ಲ. ಆತ ಸಾಕ್ಷಾತ ನನ್ನ ದೇವರು. ಆತನ ಕೈ ನೊಂದಿದೆ. ನಿನ್ನ ಬೆಂಡೋಲೆಯನ್ನು ಕಿತ್ತಿ ಆತನ ಕೈಗಿಡು ಎಂದು ಹೆಂಡತಿಯನ್ನು ಬಸವಣ್ಣ ಆದೇಶಿಸುತ್ತಾರೆ.

ಕಳ್ಳನ ಮನೆಗೊಬ್ಬ ಬಲುಗಳ್ಳ ಬಂದೊಡೆ ಕೂಡಲಸಂಗಮದೇವ ನಲ್ಲದೆ ಆರೂ ಇಲ್ಲ.

ನಮ್ಮ ಮನೆಗೆ ಕಳ್ಳನೊಬ್ಬ ಬಂದಿದ್ದಾನೆಂದರೆ ನಾನೂ ಒಬ್ಬ ಕಳ್ಳನೇ ಇದ್ದಂತೆ. ಏಕೆಂದರೆ ಸಮಾಜದಲ್ಲಿ ಸಂಪತ್ತು ಸಮಾನವಾಗಿ ಹಂಚಿಕೆಯಾಗದೆ ಶ್ರೀಮಂತ ಬಡವ ಎಂಬ ಎರಡು ವರ್ಗಗಳು ಹುಟ್ಟಿಕೊಂಡರೆ ಕಳ್ಳತನಗಳು ಸಹಜ. ಕಳ್ಳನೊಬ್ಬ ನನ್ನ ಮನೆಗೆ ಬಂದಿದ್ದಾನೆಂದರೆ ಅಗತ್ಯಕ್ಕಿಂತ ಹೆಚ್ಚಿನ ಸಂಪತ್ತು ನನ್ನ ಕಡೆ ಇದೆ ಎಂದರ್ಥ. ಈ ರೀತಿಯಾಗಿ ಕಳ್ಳನೊಬ್ಬನನ್ನು ದೇವರು ಎನ್ನುವ ಮೂಲಕ ಬಸವಣ್ಣನವರು ಕಳ್ಳನ ಮನಪರಿವರ್ತನೆ ಮಾಡುವುದಷ್ಟೇ ಅಲ್ಲದೆ ಆತ್ಮಾವಲೋಕನದ ಮಾತನ್ನೂ ಆಡುತ್ತಾರೆ. ಇದು ಬಸವಣ್ಣನವರು ಸಮಾಜದಲ್ಲಿ ಸಂಪತ್ತಿನ ಸಮಾನ ಹಂಚಿಕೆಯನ್ನು ಪ್ರತಿಪಾದಿಸಿದ ಸ್ಪಷ್ಟ ನಿದರ್ಶನವಾಗಿದೆ.

ಶರಣ: ಡಾ. ಜೆ ಎಸ್ ಪಾಟೀಲ.

ವಿಜಯಪುರ

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಬಡತನದ ಬೇರು ಕತ್ತರಿಸುವ ಕಾರ್ಯ ಮಾಡಿದವರು ಬಸವಾದಿ ಶರಣರು

  ಗಜೇಂದ್ರಗಡ: ಸಮಾಜವನ್ನು ಕಾಡುವ ಬಡತನದ ಬೇರನ್ನು ಕತ್ತರಿಸುವ ಕಾರ್ಯವನ್ನು ಬಸವಾದಿ ಶರಣರು ತಮ್ಮ ನಡೆ ನುಡಿಯ ಮೂಲಕ ಹೇಳಿ …

Leave a Reply

Your email address will not be published. Required fields are marked *

error: Content is protected !!