Breaking News
Home / featured / ಬಸವಣ್ಣನವರ ಸದ್ದಿಲ್ಲದ ಕ್ರಾಂತಿ

ಬಸವಣ್ಣನವರ ಸದ್ದಿಲ್ಲದ ಕ್ರಾಂತಿ

ಬಸವಣ್ಣನವರೆಂದರೆ ಅವರೊಂದು ವಿಸ್ಮಯ,

ಈ ನಾಡು ಕಂಡ ಅಪರೂಪದ ನೇತಾರ
ಅವರೆಂದರೆ ಯುಗದ ಉತ್ಸಾಹ
ಇದನ್ನೆಲ್ಲಾ ಬರೆಯಲು ಕಾರಣ
ಅವರ ವಿಚಾರ-ಆಚಾರ

ಕಳ್ಳೊನಬ್ಬ ಮನೆಗೆ ಬಂದರೆ ಅವನು ಸಾಕ್ಷಾತ್ ಕೂಡಲಸಂಗಮದೇವ ಎಂದು ತಿಳಿದು ಅವನೊಡನೆ ನಡೆದುಕೊಂಡ ರೀತಿ ಅನುಕರಣೀಯ
ಸಕಲ ಜೀವತ್ಮರಿಗೆ ಲೇಸನೆ ಬಯಸಿದ ಅವರ ನಡೆ-ನುಡಿ
ದೀನ ದಲಿತರಿಗೆ ಅಸ್ಪೃಶ್ಯರಿಗೆ ಆತ್ಮಾಭಿಮಾನ ತುಂಬಿ ಅವರನ್ನೂ ಜಗತ್ತಿನ ಮುಖ್ಯವಾಹಿನಿಗೆ ತಂದ ಅವರ ಪರಿ
ಮನುಕುಲದ ಉದ್ದಾರಕ್ಕಾಗಿ ತನ್ನ ತನು ಮನವನ್ನು‌ ಅರ್ಪಿಸುತ್ತಾ ಬಂದಿರುವ ಮಹಿಳಾ ವರ್ಗವನ್ನು ಗೌರವಿಸಿ ಸಮಾನತೆ ಹಾಗೂ‌ ವೈಚಾರಿಕತೆಯ ಕಡೆಗೆ ನಡೆಸಿದ ಪರಿ
ಸಮಾಜದಲ್ಲಿಯ ಅಜ್ಞಾನ ಅಂಧಕಾರಗಳನ್ನು ನಿವಾರಿಸಿದ ಜಗಜ್ಯೋತಿ
ಜೀವ ಜಗತ್ತುಗಳ ಸಂಬಂಧಗಳನ್ನು ಅರುಹಿದ ಆಧ್ಯಾತ್ಮಿ
ವಿಚಾರ ಸ್ವಾತಂತ್ರ್ಯಕ್ಕೂ ವಿರೋಧಾಭಿಪ್ರಾಯಕ್ಕೂ ಮನ್ನಣೆ ನೀಡಿದ ನಾಯಕ
ಅನುಭವ ಮಂಟಪ ಮುಖೇನ
ಸಾಮಾಜಿಕ ನ್ಯಾಯ,ಮಾನವ ಹಕ್ಕುಗಳನ್ನು ಪ್ರತಿಪಾದಿಸಿದ ವಾಗ್ಮಿ.

ಎಲ್ಲರೂ ದೇವರು ಮತ್ತು ಧರ್ಮದ ಬಗ್ಗೆ ಚಿಂತಿಸುತ್ತಿದ್ದಾಗ ಮನುಷ್ಯನ ಬಗ್ಗೆ ಚಿಂತಿಸಿದ ಮತ್ತು ಮಾನವ ಕೇಂದ್ರಿತ ಚಳವಳಿ ಕಟ್ಟಿದ ಯುಗ ಪುರುಷ.

ಅವನ ಅನುಯಾಯಿಗಳಾದ ನಾವು‌ ಇಂದು ಅವರ ಆಶಯಗಳನ್ನು ಸಾಕಾರಗೊಳಿಸಬೇಕಾದ ನಾವು ನಮ್ಮ ಬದುಕನ್ನು ಅವಲೋಕಿಸಬೇಕಾದ ಸಂಧರ್ಭ.

ಅದಕ್ಕಾಗಿಯೇ ಅವರು ಇಷ್ಟಲಿಂಗವನ್ನು ಕೊಟ್ಟಿದ್ದು, ಅದು ನಮ್ಮ ಅರಿವಿನ ಕುರುಹು, ಜಾತಿ ಸಂಕೇತವಲ್ಲ,
ಅದರ ಅನುಸಂಧಾನ, ನಿರೀಕ್ಷೆ ಮುಲಕ ನಮ್ಮ ಅಂತರಂಗದ ಶುದ್ಧಿ ಹಾಗೂ ಭಾವನಾತ್ಮಕ ಎತ್ತರವನ್ನು ಹೆಚ್ಚಿಸಿಕೊಳ್ಳೊಣ.

ಇಷ್ಟಲಿಂಗದ ಅನುಸಂಧಾನ ನಮ್ಮ ದೈಹಿಕ, ಮಾನಸಿಕ ಹಾಗೂ ಭಾವನಾತ್ಮಕ ಆರೋಗ್ಯವನ್ನು ಉತ್ತಮಗೊಳಿಸುವದಾಗಿ ಮಾನಸಿಕ ವೈದ್ಯರು ಸಂಶೋಧನೆಗಳ ಮುಲಕ ದೃಢ ಪಡಿಸಿದ್ದಾರೆ
ಅದಕ್ಕೆ ಅವರು ನೀಡುವ ಉದಾಹರಣೆ ಎಂದರೆ
ಅಂದಿನ ಅನುಭವ ಮಂಟಪದಲ್ಲಿ ಸಮಾಜದ ಕಟ್ಟಕಡೆಯ ಜನವರ್ಗದವರಿಂದ ರಚಿತವಾದ ವಚನಗಳು, ಅವುಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಅವರು ಮಾಡಿದ ಸಾಮಾಜಿಕ ಕ್ರಾಂತಿ
ಮತ್ತು ಕೊನೆಗೆ ಅವುಗಳನ್ನು ಕಾಪಾಡಲು ಅವರ‌ ಇಚ್ಚಾಶಕ್ತಿ ಮುಲಕ ಮಾಡಿದ ಅವಿರತ ಹೋರಾಟ

ಅವರಂತೇಯೆ ನಾವು ಸಹಿತ ನಮ್ಮ ಜೀವನದಲ್ಲಿ
ಇಷ್ಟಲಿಂಗದ ಅನುಸಂಧಾನ ಮಾಡುತ್ತಾ
ಶರಣರಂತೆ ತನು ಮನ ಭಾವಗಳ ಸಮ್ಮಿಳಿತವಾದ ಕಾಯಕ ಹಾಗೂ ದಾಸೋಹ ಮಾಡುತ್ತ
ಸಕಲ ಜೀವಾತ್ಮರಿಗೆ ಲೇಸನು ಮಾಡೋಣ

ಶರಣು ಶರಣಾರ್ಥಿಗಳು

ಮಹಾಂತೇಶ ಅಗಡಿ
ದಾವಣಗೆರೆ
9945221201





About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ನ. 22 ರಂದು ಡಾ. ಹೆಚ್.ಆರ್.ಗಿರಿಯಾಲ ಅವರಿಗೆ ನುಡಿನಮನ

ಚನ್ನಮ್ಮನ ಕಿತ್ತೂರು: ಸಮೀಪದ ಬೈಲೂರು ಗ್ರಾಮದ ಖ್ಯಾತ ವೈದ್ಯ ಡಾ ಹಣಮಂತ ಆರ್ ಗಿರಿಯಾಲ ಅವರು ಕಳೆದ ಸೆಪ್ಟೆಂಬರ್ 30 …

ಲಿಂಗಾಯತ ಧರ್ಮದ ಹೋರಾಟ ಸರಣಿ-2

  ಲಿಂಗಾಯತ ಧರ್ಮದ ಮಠಾಧೀಶರ ನಿಯೋಗ ಮುಖ್ಯಮಂತ್ರಿಗೆ ಭೇಟಿ ಮಾಡಬಾರದೇಕೆ? ಲಿಂಗಾಯತ ಧರ್ಮದ ಹೋರಾಟದಲ್ಲಿ ಮುಂಚೂಣಿ ಸ್ಥಾನ ವಹಿಸಿ ಅತ್ಯಂತ …

ಸಾಮಾಜಿಕ ಪ್ರಾತಿನಿಧ್ಯತೆ : ಬಿ.ಜೆ ಪಾಟೀಲ

  ವಿಜಯಪುರ : ಸಮಸಮಾಜ ಕಟ್ಟಲು, ಸಂವಿಧಾನದಲ್ಲಿ ಮೂಲಭೂತ ಹಕ್ಕಗಳ ಬಗ್ಗೆ ಮಾತನಾಡುವಾಗ ಮೂರೂ ಬಿಂದುಗಳು ( Article 15, …

ಲಿಂಗಾಯತ–ವೀರಶೈವರಿಗೆ ಶೇ 16 ಮೀಸಲಾತಿ ನೀಡಿ: ಶಿವಮೂರ್ತಿ ಮುರುಘಾ ಶರಣರು

  ಚಿತ್ರದುರ್ಗ: ಜಾತಿ, ಉಪಜಾತಿಗೆ ಒಂದೊಂದು ವಿಧವಾದ ಮೀಸಲಾತಿ ನೀಡುವ ಬದಲು ಲಿಂಗಾಯತ–ವೀರಶೈವ ಸಮುದಾಯಕ್ಕೆ ಶೇ 16ರಷ್ಟು ಮೀಸಲಾತಿಯ ನಿಗದಿಪಡಿಸುವುದು …

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಡಾ. ತೋಂಟದ ಸಿದ್ಧರಾಮ ಶ್ರೀಗಳ ಆಕ್ಷೇಪ

  ಗದಗ: ಸರ್ಕಾರ ತರಾತುರಿಯಲ್ಲಿ ಲಿಂಗಾಯತ ವೀರಶೈವ ಅಭಿವೃದ್ಧಿ ನಿಗಮ ಘೋಷಿಸಿದ್ದು, ಇದಕ್ಕೆ ಯಾವುದೇ ಗೊತ್ತು ಗುರಿಯಾಗಲಿ, ಸ್ಪಷ್ಟತೆಯಾಗಲಿ ಇಲ್ಲ …

Leave a Reply

Your email address will not be published. Required fields are marked *

error: Content is protected !!