Breaking News
Home / featured / ಬಸವಧರ್ಮ ಪೀಠದ ಜಾಲತಾಣ ಸಾಂಕೇತಿಕ ಬಿಡುಗಡೆ

ಬಸವಧರ್ಮ ಪೀಠದ ಜಾಲತಾಣ ಸಾಂಕೇತಿಕ ಬಿಡುಗಡೆ

ಕೂಡಲಸಂಗಮ:  ಬಸವಧರ್ಮ ಪೀಠ ಮತ್ತು ವಿಶ್ವಕಲ್ಯಾಣ ಮಿಷನ್ ಟ್ರಸ್ಟ್ ನ ಅಧಿಕೃತ ವೆಬ್ ಸೈಟ್ http://dasoha.in/ ಜಾಲತಾಣವನ್ನು ಇಂದು (ಬಸವ ಜಯಂತಿ ಕಾರ್ಯಕ್ರಮದಲ್ಲಿ) ಸಾಂಕೇತಿಕವಾಗಿ ಬಸವಧರ್ಮ ಪೀಠಾಧ್ಯಕ್ಷರಾದ ಪೂಜ್ಯ ಶ್ರೀ ಮಹಾಜಗದ್ಗುರು ಡಾ. ಮಾತೆ ಗಂಗಾದೇವಿಯವರು ಬಿಡುಗಡೆ ಮಾಡಿದರು.ಪೂಜ್ಯಶ್ರೀ ಮಹಾಜಗದ್ಗುರು ಲಿಂಗಾನಂದ ಸ್ವಾಮೀಜಿ ಹಾಗೂ ಪೂಜ್ಯಶ್ರೀ ಡಾ.ಮಾತೆ ಮಹಾದೇವಿ (ಮಾತಾಜಿ) ಯವರು ಶೈಕ್ಷಣಿಕ, ಸಾಮಾಜಿಕ ಅಭಿವೃದ್ಧಿ ಕಾರ್ಯ ನಡೆಸುವುದು ಹಾಗೂ ಬಸವತತ್ವ ಮತ್ತು ಲಿಂಗಾಯತ ಧರ್ಮದ ಪ್ರಚಾರ ಕಾರ್ಯಗಳನ್ನು ನಡೆಸುವ ನಿಟ್ಟಿನಲ್ಲಿ 1977ರಲ್ಲಿ ವಿಶ್ವಕಲ್ಯಾಣ ಮಿಷನ್ ಟ್ರಸ್ಟ್ ಮತ್ತು 1987ರಲ್ಲಿ ಬಸವಧರ್ಮ ಪೀಠ ಟ್ರಸ್ಟ್ ಗಳನ್ನು ಆರಂಭಿಸಿದ್ದು,

ಅಂದಿನಿಂದ ಈ ಎರಡೂ ಟ್ರಸ್ಟ್ ಗಳು ಉದ್ದೇಶಿತ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿವೆ. ಹಲವಾರು ಜಂಗಮ ಮೂರ್ತಿಗಳು ಹಾಗೂ ಭಕ್ತರು ಈ ಕಾರ್ಯಗಳಿಗೆ ದುಡಿಯುತ್ತಿದ್ದಾರೆ.
ಬಸವಧರ್ಮ ಪೀಠ ಹಾಗೂ ವಿಶ್ವಕಲ್ಯಾಣ ಮಿಷನ್ ಟ್ರಸ್ಟ್ ನ ಕಾರ್ಯಚಟುವಟಿಕೆಗಳನ್ನು ಪ್ರಪಂಚದ ಪ್ರತಿಯೊಬ್ಬರಿಗೂ ತಲುಪಿಸುವ ನಿಟ್ಟಿನಲ್ಲಿ ಮಾತಾಜಿಯವರು “ದಾಸೋಹ ಜಾಲತಾಣ” ಆರಂಭಿಸಲು ಬುನಾದಿ ಹಾಕಿದ್ದರು, ಆದರೆ 14 ಮಾರ್ಚ್ 2019 ರಂದು ಅವರು ಲಿಂಗೈಕ್ಯರಾದ ನಂತರ ನಾವು ಮಾತಾಜಿಯವರ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ತೊಡಗಿದ್ದು, ಶೀಘ್ರದಲ್ಲೇ “ದಾಸೋಹ” ಸಂಪೂರ್ಣ ಜಾಲತಾಣ ನಿಮ್ಮೆಲ್ಲರ ಕೈ ಸೇರಲಿದೆ ಎಂದು ಮಾತೆ ಗಂಗಾದೇವಿಯವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಪೂಜ್ಯಶ್ರೀ ಬಸವಕುಮಾರ ಸ್ವಾಮೀಜಿ, ರಾಷ್ಟ್ರೀಯ ಬಸವ ದಳ ರಾಜ್ಯ ಪ್ರಧಾನ ಕಾರ್ಯದರ್ಶಿ, ಶರಣ. ದಿಲೀಪ ಭತಮುರ್ಗೆ ಹಾಗೂ ಬೆಂಗಳೂರು ಜಿಲ್ಲಾ ರಾಷ್ಟ್ರೀಯ ಬಸವ ದಳದ ಅಧ್ಯಕ್ಷರಾದ ಶರಣ. ಜಗದೀಶ ಕೇಬಲ್ ಜಗದೀಶ್ ಮತ್ತಿತರರು ಇದ್ದರು.

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಬಡತನದ ಬೇರು ಕತ್ತರಿಸುವ ಕಾರ್ಯ ಮಾಡಿದವರು ಬಸವಾದಿ ಶರಣರು

  ಗಜೇಂದ್ರಗಡ: ಸಮಾಜವನ್ನು ಕಾಡುವ ಬಡತನದ ಬೇರನ್ನು ಕತ್ತರಿಸುವ ಕಾರ್ಯವನ್ನು ಬಸವಾದಿ ಶರಣರು ತಮ್ಮ ನಡೆ ನುಡಿಯ ಮೂಲಕ ಹೇಳಿ …

Leave a Reply

Your email address will not be published. Required fields are marked *

error: Content is protected !!