Breaking News
Home / featured / ನಿಸ್ವಾರ್ಥ ಕಾಯಕದಲ್ಲಿ ತೊಡಗಿರಿ: ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ

ನಿಸ್ವಾರ್ಥ ಕಾಯಕದಲ್ಲಿ ತೊಡಗಿರಿ: ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ

ದಾವಣಗೆರೆ:- ದಿನದ 24 ತಾಸಿನೊಳಗೆ
ಒಂದು ನಿಮಿಷವಾದರೂ ಬಸವಣ್ಣನವರಾಗುವ
ಪ್ರಯತ್ನವನ್ನು ನಾವೆಲ್ಲ ಮಾಡಬಲೇಬೆಕೆಂದು
ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ನುಡಿದರು.
ನಗರದ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ನಿನ್ನೆ(ಏ-೨೬) ಏರ್ಪಡಿಸಲಾಗಿದ್ದ ಶ್ರೀ ಬಸವೇಶ್ವರರ
ಜಯಂತಿಯ ಕಾರ್ಯಕ್ರಮದಲ್ಲಿ ಶ್ರೀ ಬಸವೇಶ್ವರರ
ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿದ ನಂತರ ಅವರು
ಮಾತನಾಡಿದರು.

ಸ್ವಾರ್ಥ ಮತ್ತು ದ್ವೇಷ, ಅಸೂಯೆ ಮನದಲ್ಲಿ
ಇಟ್ಟುಕೊಂಡು ಎಷ್ಟು ಪೂಜೆ ಮಾಡಿದರೂ
ಪ್ರಯೋಜನವಿಲ. ಬದಲಾಗಿ ನಿಸ್ವಾರ್ಥ
ಕಾಯಕದಲ್ಲಿ ತೊಡಗಿ ಕಾಯಕದಲ್ಲಿ ದೇವರನ್ನು
ಕಾಣಬೇಕು. ದಾವಣಗೆರೆಯವರೇ ಆದ
ಹಿರಿಯರಾದ ಹರ್ಡೇಕರ್ ಮಂಜಪ್ಪನವರು
ಆರಂಭಿಸಿದ ಈ ಜಯಂತಿಯನ್ನು ದಾವಣಗೆರೆ
ಯಲ್ಲೇ ಸರಳವಾಗಿ ಆಚರಿಸುತ್ತಿರುವುದು ಹಾಗೂ
ಇಲ್ಲಿ ಸೇವೆ ಸಲ್ಲಿಸುತ್ತಿರುವುದು ಕೂಡ ನನ್ನ ಸೌಭಾಗ್ಯ
ಎಂದರು.

ಬಸವ ಬಳಗದ ಸಂಚಾಲಕ ಸಿದ್ದರಾಮಣ್ಣ
ಮಾತನಾಡಿ, ನಾವೆಲ್ಲಾ ಬಸವನ ಹೃದಯ ಬಳ್ಳಿಗಳು.
ಜಗತ್ತಿಗೇ ಬೆಳಕು ನೀಡಿದ ಜಗಜ್ಯೋತಿ ಬಸವಣ್ಣ
ನವರು ನುಡಿದಂತೆ ನಡೆದ ಮಹಾನ್ ಚೇತನ. ಎಲ್ಲ
ಜಾತಿ, ಧರ್ಮ, ಮತದವರನ್ನು ಒಟ್ಟುಗೂಡಿಸಿ
ಸಮಾನತೆಯನ್ನು ಎತ್ತಿ ಹಿಡಿದವರು. ಕಾಯಕದಲ್ಲಿ
ದೇವರನ್ನು ಕಂಡು ಕಾಯಕವೇ ಕೈಲಾಸವೆಂದು
ಸಾರಿದ ಬಸವಣ್ಣನವರು ನಮ್ಮ ನಿಮ್ಮೆಲರ ಮಧ್ಯೆಯೂ ಇರಬೇಕು. ಎಲ್ಲಿ ನೋಡಿದರಲ್ಲಿ
ಬಸವಣ್ಣ ಕಾಣಬೇಕು. ಜಿಲ್ಲಾಧಿಕಾರಿಗಳೂ ಬಸವ
ತತ್ವಗಳನ್ನು ಪಾಲಿಸುತ್ತಾ ಆಡಳಿತ ಕೈಂಕರ್ಯದಲ್ಲಿ
ತೊಡಗಿಕೊಂಡಿರುವುದು ಅತ್ಯಂತ ಸಂತೋಷದ
ವಿಚಾರವಾಗಿದೆ ಎಂದು ಹರ್ಷ ವ್ಯಕಪಡಿಸಿದರು.

ಶಿಕ್ಷಕ ಮಂಜಣ್ಣ ಅವರು  ಬಸವಣ್ಣನವರ ನಿಮ್ಮನರಿಯದ  ಕಾರಣ ಎಂಬ ವಚನವನ್ನು ವಾಚಿಸಿ
ದರು. ಜಿಲ್ಲಾ ಪಂಚಾಯ್ತಿ ಅಧ್ಯಕ್ಷರಾದ  ಶ್ರೀಮತಿ ಯಶೋಧಮ್ಮ ಮರುಳಪ್ಪ,  ಮುಖ್ಯ ಕಾರ್ಯನಿರ್ವಹಣಾಧಿಕಾರಿ  ಶ್ರೀಮತಿ ಪದ್ಮಾ ಬಸವಂತಪ್ಪ, ಬಸವ  ಬಳಗದ ಅಧ್ಯಕ್ಷ ಹೆಚ್.ಎಂ.ಸ್ವಾಮಿ,  ರೈತ ಮುಖಂಡರಾದ ಬಲ್ಲೂರು  ರವಿಕುಮಾರ್, ಕನ್ನಡ ಮತ್ತು ಸಂಸ್ಕೃತಿ  ಇಲಾಖೆಯ ಸಹಾಯಕ ನಿರ್ದೇಶಕ  ರವಿಚಂದ್ರ, ಬಸವ ಬಳಗದ  ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ  ಉಪಸ್ಥಿತರಿದ್ದರು.

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಬಡತನದ ಬೇರು ಕತ್ತರಿಸುವ ಕಾರ್ಯ ಮಾಡಿದವರು ಬಸವಾದಿ ಶರಣರು

  ಗಜೇಂದ್ರಗಡ: ಸಮಾಜವನ್ನು ಕಾಡುವ ಬಡತನದ ಬೇರನ್ನು ಕತ್ತರಿಸುವ ಕಾರ್ಯವನ್ನು ಬಸವಾದಿ ಶರಣರು ತಮ್ಮ ನಡೆ ನುಡಿಯ ಮೂಲಕ ಹೇಳಿ …

Leave a Reply

Your email address will not be published. Required fields are marked *

error: Content is protected !!