Breaking News
Home / featured / ಅಲೆಮಾರಿಗಳ ಕಣ್ಣಿರಿಗೆ ಹೃದಯ ಮಿಡಿದ : ರೋಹಿಣಿ ಪಾಟೀಲ

ಅಲೆಮಾರಿಗಳ ಕಣ್ಣಿರಿಗೆ ಹೃದಯ ಮಿಡಿದ : ರೋಹಿಣಿ ಪಾಟೀಲ

ನೇಗಿನಹಾಳ : ಮಹಾರಾಷ್ಟ್ರ ರಾಜ್ಯದ ಸೊಲ್ಲಾಪೂರ ಜಿಲ್ಲೆಯ ಮಂಗಳವೇಡದಿಂದ ಬೇಸಿಗೆಯ ಕಾಲದ ಬರಗಾಲಿನ ಸಂದರ್ಭದಲ್ಲಿ ದನಕರಗಳಿಗೆ ಮೇವು, ಒಂದು ಹೊತ್ತಿನ ಹೊಟ್ಟೆ ತುಂಬಿಸಿಕೊಳ್ಳಲು ಕರ್ನಾಟಕದ ಗಡಿ ಜಿಲ್ಲೆಗಳಲ್ಲಿ ಪ್ರತಿದಿನ ವಿವಿಧ ಮಹಾತ್ಮರ ಭಜನೆ, ಹಾಡುಗಳ ಮೂಲಕ ಒಂದೂರಿನಿಂದ ಮತ್ತೊಂದುರಿಗೆ ಸಂಚರಿಸುವ ಅಲೆಮಾರಿ ಜನಾಂಗ ಇಂದು ಜಗತ್ತಗೆ ಮಾರಕವಾಗಿರುವ ಮಹಾಮಾರಿ ಕೊರೊನಾ ವೈರಸ್ ನಿಂದ ಇಂತವರ ಜೀವನ ಒಂದು ಹೊತ್ತಿನ ಗಂಜಿಗೂ ಗತಿ ಇಲ್ಲದಂತ್ತಾಗಿದೆ.

ಕೊರಿಯುತ್ತಿರುವ ಬೇಸಿಗೆಯ ಈ ಸಂದರ್ಭದಲ್ಲಿ ಹಳ್ಳಿಗಳ ಒಳಗಡೆ ಹೊಗದಂತೆ ಸೂತ್ತಮೂತ್ತಲಿನ ಗ್ರಾಮಸ್ಥರು ಸ್ವಯಂಕೃತ ನಿರ್ಬಂಧ ಹೇರಿಕೊಂಡಿರುವುದು ಒಂದು ಕಡೆಯಾದರೆ ಗ್ರಾಮಸ್ಥರು ಮನೆಯಿಂದ ಹೊರಗಡೆ ಬರದಿರುವ ಹಾಗೂ ಇಂತವರಿಗೆ ಆಹಾರದಾನ್ಯಗಳನ್ನು ಹಸುಗಳಿಗೆ ಮೇವು ನೀಡುವುದು ಅಸಾಧ್ಯದ ಮಾತಾಗಿದೆ. ಜೊತೆಗೆ ಹೊಲಗದ್ದೆಗಳಲ್ಲಿ ಕೊರೆಯುವ ಬಿಸಿಲಿನಲ್ಲಿ ಜೀವನ ಕಳೆಯುತ್ತಿದ್ದಾರೆ.
ಇತಂಹದೇ ಒಂದು ಕುಂಟುಂಬದ ೭ ಜನ ಸದಸ್ಯರು ನೇಗಿನಹಾಳ ಗ್ರಾಮದ ಹಳ್ಳದ ಹತ್ತಿರದ ಕುಲಕರ್ಣಿಯವರ ಹೊಲದಲ್ಲಿ ಬಿಳು ಬಿಟ್ಟಿದ್ದರು ಇವರಿಗೆ ಗಂಜಿ ಮಾಡಿ ಕುಡಿಯಲು ಬೊಗಸೆ ಅಕ್ಕಿ ಇರದ ಸಂದರ್ಭ ಜಿಲ್ಲಾ ಪಂಚಾಯತ್ ಸದಸ್ಯೆ ರೋಹಿಣಿ ಪಾಟೀಲರಿಗೆ ಹಾಗೂ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ವಿಶ್ವನಾಥ ಎಚ್ ರವರ ಗಮನಕ್ಕೆ ಸಾರ್ವಜನಿಕರು ತಂದ ತಕ್ಷಣ ಅವರನ್ನು ಗ್ರಾಮದ ಹಳ್ಳದ ಪಕ್ಕದಲ್ಲಿರುವ ದೇವಸ್ಥಾನದಲ್ಲಿ ಉಳಿದುಕೊಳ್ಳಲ ದಿನಗಳ ಹಿಂದೆ ಅವಕಾಶ ನೀಡಿದರು.


ಆದರೆ ಸುಮಾರು ಎರಡು-ಮೂರು ದಿನಗಳ ಹಿಂದೆ ೭ ವರ್ಷದ ಮಗುವಿಗೆ ಟಾಯಪಾಯ್ಡಿ ಜ್ವರ ಕಾಣಿಸಿಕೊಂಡು ಚಿಕಿತ್ಸೆಗಾಗಿ ಕಣ್ಣಿರಿಡುತ್ತಿರುವ ಮಾಹಿತಿ ತಿಳಿದ ಜಿ.ಪಂ ಸದಸ್ಯೆ ತಕ್ಷಣ ಆಸ್ಪತ್ರೆ ಸೇರಿಸಲು ಹಾಗೂ ಆಸ್ಪತ್ರೆಯ ವೆಚ್ಛವನ್ನು ನೀಡುವುದಾಗಿ ಹಾಗೂ ಅವರಿಗೆ ಒಂದು ತಿಂಗಳವರಿಗೆ ದಿನಬಳಕೆಗೆ ಬೇಕಾಗುವ ಅಕ್ಕಿ, ಸಕ್ಕರೆ, ರವೆ, ಎಣ್ಣಿ, ಸಕ್ಕರೆ, ಕೊಬರಿ ಎಣ್ಣಿ, ತರಕಾರಿಗಳು, ಮಹಿಳೆಯರಿಗೆ ಸೀರೆಗಳು ಮಕ್ಕಳಿಗೆ ಬಟ್ಟೆ ಹಾಗೂ ಹಾಸಿಗೆ ಹೊದಿಕೆಗಳನ್ನು ತಂದು ನೀಡಿದ್ದಾರೆ ಜೊತೆಗೆ ಕಿರಿಯ ಮಹಿಳಾ ಆರೋಗ್ಯ ಅಧಿಕಾರಿ ಮಹಾದೇವ ತಲ್ಲೂರ ಅವರನ್ನು ಕರೆಯಿಸಿ ಕುಟುಂಬದ ಸದಸ್ಯರೆಲ್ಲರಿಗೂ ಚಿಕಿತ್ಸೆ ಕೊಡಿಸಿದ್ದಾರೆ. ಗ್ರಾಮಸ್ಥರು ಸ್ವಯಂಕೃತವಾಗಿ ದನಕರಗಳಿಗೆ ಮೇವು ನೀಡುತ್ತಿದ್ದಾರೆ.
ಈ ಸಂದರ್ಭದಲ್ಲಿ ಅಮಿತಾ ಪಾಟೀಲ, ಅನ್ವಿತಾ ಪಾಟೀಲ, ನಿಂಗಪ್ಪ ಕಲ್ಲೊಳ್ಳಿ, ಮಂಜುನಾಥ ಕೋಟಗಿ ಅಂಗನವಾಡಿ ಕಾರ್ಯಕರ್ತೆ ರೂಪಾ ಬಾಗೇವಾಡಿ, ಮಂಜುಳಾ ರೂಮೋಜಿ, ಸತ್ಯಪ್ಪ ತಳವಾರ, ಶಾಂತಮ್ಮ ಬಡಿಗೇರ, ಮಲ್ಲಮ್ಮ ಪಟ್ಟೇದ ಮತ್ತಿತ್ತರರು ಉಪಸ್ಥಿತರಿದ್ದರು.


ರೋಹಿಣಿ ಬಾಬಾಸಾಹೇಬ ಪಾಟೀಲ
ಜಿ. ಪಂ ಸದಸ್ಯ ಸದಸ್ಯರು ಸಂಪಗಾವಿ
ಮಹಾಮಾರಿ ಕೊರೊನಾ ಸೊಂಕಿನಿಂದ ಇಂದು ಬಡವರು, ರೈತರ, ಬೀದಿ ಬದಿ ವ್ಯಾಪಾರಸ್ಥರು, ದಿನಗೂಲಿ ಕೂಲಿಕಾರ್ಮಿಕರಿಗೆ ಒಂದು ಹೊತ್ತಿನ ಅನ್ನವನ್ನು ಕಸಿದುಕೊಂಡಿದೆ ಇದರಿಂದ ಹಳ್ಳಿಗಳಲ್ಲಿ ಬದುಕುವ ಶೇ೬೦% ರಷ್ಟು ಬಡ ರೈತ ಕುಟುಂಬಗಳು ಭೂಮಿಯನ್ನು ಹದಗೊಳಿಸಲು ಸಾಧ್ಯವಾಗುತ್ತಿಲ್ಲಾ ಜೊತೆಗೆ ಹೊಲದಲ್ಲಿನ ತರಕಾರಿ ಬೆಲೆ ಸಂಪೂರ್ಣ ಕುಸಿತಕಂಡಿದ್ದರಿಂದ ಜನತೆ ಸಂಕಷ್ಟದಲ್ಲಿದ್ದಾರೆ ಇತಂಹ ಪರಿಸ್ಥಿತಿ ಯಾರಿಗೂ ಎಂದೆಂದಿಗೂ ಬರಬಾರದು.

ವಿಶ್ವನಾಥ ಎಚ್
ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ
ಕೊರೊನಾ ವೈರಸ್ ತಡೆಗಟ್ಟುವ ಹಿನ್ನಲೆಯಲ್ಲಿ ಆರೋಗ್ಯ ಹಾಗೂ ಸುರಕ್ಷತೆಯ ದೃಷ್ಠಿಯಿಂದ ಸಾಕಷ್ಟು ಮುಂಜಾಗೃತ ಕ್ರಮಗಳನ್ನು ಕೈಗೊಂಡಿದ್ದೇವೆ. ಬಡ ಕುಟುಂಬಗಳಿಗೆ ನರೇಗಾ ಮೂಲಕ ಉದೋಗ ನೀಡುತ್ತಿದ್ದು ಆವಶ್ಯಕತೆ ಇದ್ದವರು ತಮ್ಮ ದಾಖಲಾತಿಗಳೊಂದಿಗೆ ಸಂಪರ್ಕಿಸಬೇಕು.

ವರದಿ :ಶಿವಾನಂದ ಮೆಟ್ಯಾಲ ನೇಗಿನಹಾಳ                          ಬೆಳಗಾವಿ

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಬಡತನದ ಬೇರು ಕತ್ತರಿಸುವ ಕಾರ್ಯ ಮಾಡಿದವರು ಬಸವಾದಿ ಶರಣರು

  ಗಜೇಂದ್ರಗಡ: ಸಮಾಜವನ್ನು ಕಾಡುವ ಬಡತನದ ಬೇರನ್ನು ಕತ್ತರಿಸುವ ಕಾರ್ಯವನ್ನು ಬಸವಾದಿ ಶರಣರು ತಮ್ಮ ನಡೆ ನುಡಿಯ ಮೂಲಕ ಹೇಳಿ …

Leave a Reply

Your email address will not be published. Required fields are marked *

error: Content is protected !!