Breaking News
Home / featured / ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಜಿಯವರ 106ನೇ ಜಯಂತೋತ್ಸವದ ಭಕ್ತಿ ಪೂರ್ವಕ  ನಮನಗಳು

ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಜಿಯವರ 106ನೇ ಜಯಂತೋತ್ಸವದ ಭಕ್ತಿ ಪೂರ್ವಕ  ನಮನಗಳು

ಸಿರಿಗೆರೆ: ಶ್ರೀಮದುಜ್ಜಯಿನಿ ಸದ್ದರ್ಮ ಸಿಂಹಾಸನ ತರಳಬಾಳು ಜಗದ್ಗುರು ಬೃಹನ್ಮಠದ 20ನೇಯ ಜಗದ್ಗುರುಗಳಾದ ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು ಕನ್ನಡನಾಡು ಕಂಡು ಕೇಳಿ ಅರಿಯದ ಅಪ್ರತಿಮ ಧೀರ ಸನ್ಯಾಸಿಗಳು.

ವೈರಿಯೂ ಸಹ ಮೆಚ್ಚಿ ತಲೆದೂಗುವಂತಿತ್ತು ಅವರ ಬದುಕು.  ಭಕ್ತರ ಸುಖ ದುಃಖಗಳನ್ನು ತಮ್ಮವೇ ಸುಖ ದುಃಖಗಳೆಂದು ಭಾವಿಸಿ ಸಮಾಜದ ಕಣ್ಣೀರೊರೆಸಿ ಬಿದ್ದವರ ಬಾಳಿನಲ್ಲಿ ನಗಬೆಳದಿಂಗಳನ್ನು ಮೂಡಿಸಲು ತಮ್ಮ ಇಡೀ ಬಾಳನ್ನೇ ಮುಡುಪಾಗಿಟ್ಟವರು. ಹಳ್ಳಿಗಾಡುಗಳಲ್ಲಿ ನೆಲೆ ಕಳೆದುಕೊಂಡ ಬೇರುಗಳಿಗೆ ಶಿಕ್ಷಣದ ನೀರೆರೆದು ಬದುಕಿಸಿ ಸುಡುವ ಬೆಂಗಾಡಿನಲ್ಲಿಯೂ ‘ ಏಳುಸುತ್ತಿನ ಬೆಳ್ಳನೆಯ ಬಿಳಿಮಲ್ಲಿಗೆಯನ್ನು ಅರಳಿಸಿ ದೇಶವನ್ನು ಬೆರಗುಗೊಳಿಸಿದವರು. ಬಸವಣ್ಣನವರ ವಚನವಾರಿಧಿಗೆ ಬರೆದ ಭಾಷ್ಯದಂತಿತ್ತು ಅವರ ನಿರ್ಮಲ ಬದುಕು.

ಉರಿಬರಲಿ ಸಿರಿಬರಲಿ ಆಂಜದ ಅಳುಕದ ‘ ಅವರ ಧೀರ ನಡೆನುಡಿಗಳು ಇಡೀ ಒಂದು ಸಮಾಜವನ್ನೇ ಮುನ್ನಡೆಸಿದವು ಕಾಯಕವೇ ಶಿವಪೂಜೆ , ಜನತೆಯೇ ಜಂಗಮವೆಂದು ನುಡಿದು ಅದರಂತೆ ನಡೆದು ಈ ಭವದ ಬದುಕಿನಲ್ಲಿ ನಿರತಾವರೆಯಂತೆ ನಡೆಸಿದ ಅವರ ಬದುಕು ಅನನ್ಯ , ಅಸದೃಶ.

ಬೃಹನ್ಮಠದ ಸಿಂಹಾಸನವನ್ನು ತೆರವು ಮಾಡಿ ಅದನ್ನು ತಮ್ಮ ಉತ್ತರಾಧಿಕಾರಿಗಳಿಗೆ ಗುರುಗಳವರು ನೀಡಿದ್ದಾರೆಂಬುದು ನಿಜ . ಆದರೆ ತಮ್ಮ ಭಕ್ತರು ಮುಹೂರ್ತ ಮಾಡಿಸಿದ ಸಿಂಹಾಸನವನ್ನು ಅವರು ಎಂದೂ ತೆರವು ಮಾಡಲಾರರು . ಏಕೆಂದರೆ ಅದು ಭಕ್ತರ ಹೃದಯವೇ ಆಗಿದೆ . ಸದ್ಭಕ್ತರ ಹೃದಯ ಸಿಂಹಾಸನಾಧೀಶ್ವರರಾದ ಅವರನ್ನು ನೆನೆಯುವುದೇ ಪುಣ್ಯಕರ 28.04,1914  ರಂದು  ಹೊಳಲ್ಕೆರೆ ತಾಲ್ಲೂಕಿನ ಮುತ್ತುಗದೂರಿನಲ್ಲಿ ಜನಿಸಿದ ಶ್ರೀ ತರಳಬಾಳು ಜಗದ್ಗುರು ಶ್ರೀ   ಶಿವಕುಮಾರ ಶಿವಾಚಾರ್ಯ ಮಹಾಸ್ವಾಮೀಜಿಗಳವರು.24.09.1992  ರಂದು ಲಿಂಗೈಕ್ಯರಾದರು. ಈ ಮಹಾಬೆಳಗು ಜನಿಸಿದ ಈ ದಿನ  ಭಕ್ತರ ಪಾಲಿಗೆ ನಿತ್ಯ ಸ್ಮರಣೀಯವಾದುದು. ದಿವ್ಯ ಚೇತನದ ಪವಿತ್ರ ಪಾದಗಳಿಗೆ 106 ನೇ ಜನ್ಮ ಜಯಂತಿಯ  ಸುಸಮಯದಿ  ಭಕ್ತಿ ಪೂರ್ವಕ ಪ್ರಣಾಮಗಳು.

ಶ್ರೀ ಗುರುಗಳ ಜೀವನಚರಿತ್ರೆ …

ಶ್ರೀಜನನ :- 28 ಏಪ್ರಿಲ್ 1914 ರ ಮಂಗಳವಾರ {ಬಸವ ಜಯಂತಿಯಂದು}
ಜನ್ಮಸ್ಥಳ :- ಮುತ್ತುಗದೂರು, ಹೊಳಲ್ಕೆರೆ ತಾಲ್ಲೂಕು, ಚಿತ್ರದುರ್ಗ ಜಿಲ್ಲೆ
ತಂದೆ,ಮಹಾದೇವಯ್ಯಾ ತಾಯಿ, ಬಸಮ್ಮ
02 ಆಗಸ್ಟ್ 1933 ರಂದು ಯಲಹಂಕ ಮಠಕ್ಕೆ ಚರಪಟ್ಟಧಿಕಾರ
10 ಮೇ 1940 ಶುಕ್ರವಾರ {ಬಸವ ಜಯಂತಿಯಂದು} ಶ್ರೀ ತರಳಬಾಳು ಜಗದ್ಗುರು ಮಠಕ್ಕೆ 20 ನೇ ಜಗದ್ಗುರುಗಳಾಗಿ ಪಟ್ಟಾಭಿಷೇಕ
1946 ಸಿರಿಗೆರೆಯಲ್ಲಿ ತರಳಬಾಳು ಹುಣ್ಣಿಮೆ ಪ್ರಾರಂಭ
1949 ಕಲಾಸಂಘ,ಅಣ್ಣನ ಬಳಗ ,ಅಕ್ಕನ ಬಳಗ,ಪ್ರಕಾಶನ ಸಂಸ್ಥೆಗಳ ಸ್ಥಾಪನೆ
1962 ಶ್ರೀ ತರಳಬಾಳು ವಿದ್ಯಾಸಂಸ್ಥೆ ಸ್ಥಾಪನೆ
1968 ಮರಣವೇ ಮಹಾನವಮಿ ನಾಟಕ ರಚನೆ
1968 ಶ್ರೀ ತರಳಬಾಳು ಜಗದ್ಗುರು ನಿಧಿ ಸ್ಥಾಪನೆ
1970 ವಿಶ್ವಬಂದು ಮರುಳಸಿದ್ದ ನಾಟಕ ರಚನೆ
28 ಏಪ್ರಿಲ್ 1974 ಪೀಠತ್ಯಾಗದ ಪತ್ರ ಸಮರ್ಪಣೆ 60 ವರ್ಷ ತುಂಬಿದ ಸಂದರ್ಬದಲ್ಲಿ
1981 ಶ್ರೀ ಗುರುಶಾಂತ ರಾಜದೇಸಿಕೇಂದ್ರ ಸ್ವಾಮೀಜಿಗಳ ಜೀವನ ಚರಿತ್ರೆ ರಚನೆ
24 ಸೆಪ್ಟೆಂಬರ್ 1992 ರ ಗುರುವಾರ ಲಿಂಗೈಕ್ಯ…

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಬಡತನದ ಬೇರು ಕತ್ತರಿಸುವ ಕಾರ್ಯ ಮಾಡಿದವರು ಬಸವಾದಿ ಶರಣರು

  ಗಜೇಂದ್ರಗಡ: ಸಮಾಜವನ್ನು ಕಾಡುವ ಬಡತನದ ಬೇರನ್ನು ಕತ್ತರಿಸುವ ಕಾರ್ಯವನ್ನು ಬಸವಾದಿ ಶರಣರು ತಮ್ಮ ನಡೆ ನುಡಿಯ ಮೂಲಕ ಹೇಳಿ …

Leave a Reply

Your email address will not be published. Required fields are marked *

error: Content is protected !!