Breaking News
Home / featured / ರಂಭಾಪುರಿ ಶ್ರೀ, ಶಾಮನೂರು ಶಿವಶಂಕ್ರಪ್ಪ ವಿರುದ್ಧ ಬಸವಪರ ಸಂಘಟನೆಗಳು ಮತ್ತು ವಿವಿಧ ಮಠಾದೀಶರ ಆಕ್ರೋಶ

ರಂಭಾಪುರಿ ಶ್ರೀ, ಶಾಮನೂರು ಶಿವಶಂಕ್ರಪ್ಪ ವಿರುದ್ಧ ಬಸವಪರ ಸಂಘಟನೆಗಳು ಮತ್ತು ವಿವಿಧ ಮಠಾದೀಶರ ಆಕ್ರೋಶ

ಬೆಂಗಳೂರು: ಬಸವಣ್ಣನವರು ವೀರಶೈವ ಧರ್ಮ ಸ್ವೀಕರಿಸಿದರೆಂದು ಬಸವಣ್ಣನವರ ಬಗ್ಗೆ ಗೊಂದಲದ ಹೇಳಿಕೆ ನೀಡಿರುವ ಬಾಳೆಹೊನ್ನುರ ರಂಭಾಪುರಿ ಶ್ರೀಗಳು ಹಾಗೂ ಎತ್ತನ್ನು ಪೂಜೆ ಮಾಡಿ ಬಸವಣ್ಣನವರನ್ನು ಪ್ರಾಣಿಗೆ ಹೋಲಿಸಿರುವ ವೀರಶೈವ ಮಹಾಸಭಾ ಅದ್ಯಕ್ಷ ಶಾಮನೂರು ಶಿವಶಂಕರಪ್ಪ ರಾಜ್ಯದ ಜನತೆಯ ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೆ ‘ಉಗ್ರಹೋರಾಟ ಕೈಗೊಳ್ಳಬೇಕಾಗುತ್ತದೆ’ ಎಂದು ಬಸವಪರ ಸಂಘಟನೆಗಳು ಹಾಗೂ ಲಿಂಗಾಯತ ಮಠಾದೀಶರು ಎಚ್ಚರಿಕೆ ನೀಡಿದ್ದಾರೆ.

ಇಡೀ ಜಗತ್ತಿನಾದ್ಯಂತ ಬಸವ ಜಯಂತಿ ಆಚರಿಸುವ ಮೂಲಕ ಸಂಭ್ರಮಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಪ್ರದಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ಕೇರಳ ಸಿಎಂ ಪಿನರಾಯಿ ವಿಜಯನ್ ಕನ್ನಡದಲ್ಲಿ ಶುಭಾಶಯ ಕೋರುವ ಮೂಲಕ ಗೌರವ ಸಲ್ಲಿಸಿದ್ದಾರೆ. ಆದರೆ ಬಾಳೆಹೊನ್ನುರ ಶ್ರೀಗಳು ಅನಾವಶ್ಯಕವಾಗಿ ಬಸವಣ್ಣನವರು ವೀರಶೈವ ಧರ್ಮ ಸ್ವೀಕರಿಸಿದ್ದಾರೆ ಎಂದು ಗೊಂದಲದ ಹೇಳಿಕೆ ನೀಡಿ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.

ಇನ್ನು ಅಖಿಲ ಭರತ ವೀರಶೈವ ಮಹಾಸಭಾ ಅದ್ಯಕ್ಷ ಶಾಮನೂರು ಶಿವಶಂಕರಪ್ಪ ಎತ್ತನ್ನು ಪೂಜೆ ಮಾಡಿ ಬಸವಣ್ಣನವರನ್ನು ಪ್ರಾಣಿಗೆ ಹೋಲಿಸಿರುವ ಬಗ್ಗೆ ಸ್ಪಷ್ಟತೆ ನೀಡಬೇಕು. ಉನ್ನತ ಸ್ಥಾನದಲ್ಲಿರುವುವರು ಗೌರವವಾಗಿ ನಡೆದುಕೊಳ್ಳಬೇಕು. ಇಂತಹ ವಿಷಯಗಳನ್ನು ನಿಲ್ಲಿಸಿ ಕ್ಷಮೇಯಾಚಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಜಾಗತಿಕ ಲಿಂಗಾಯತ ಮಹಾಸಭಾ, ಬಸವ ಸಮಿತಿ, ನಾಗನೂರು ಶ್ರೀಗಳು ಆಗ್ರಹಿಸಿದ್ದಾರೆ.

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಬಡತನದ ಬೇರು ಕತ್ತರಿಸುವ ಕಾರ್ಯ ಮಾಡಿದವರು ಬಸವಾದಿ ಶರಣರು

  ಗಜೇಂದ್ರಗಡ: ಸಮಾಜವನ್ನು ಕಾಡುವ ಬಡತನದ ಬೇರನ್ನು ಕತ್ತರಿಸುವ ಕಾರ್ಯವನ್ನು ಬಸವಾದಿ ಶರಣರು ತಮ್ಮ ನಡೆ ನುಡಿಯ ಮೂಲಕ ಹೇಳಿ …

Leave a Reply

Your email address will not be published. Required fields are marked *

error: Content is protected !!