Breaking News
Home / featured / ರಂಭಾಪುರಿ ಸ್ವಾಮೀಜಿಯವರಿಗೆ ಬಹಿರಂಗ ಮನವಿ

ರಂಭಾಪುರಿ ಸ್ವಾಮೀಜಿಯವರಿಗೆ ಬಹಿರಂಗ ಮನವಿ

ರಂಭಾಪುರಿ ಸ್ವಾಮೀಜಿ

ಸ್ವಾಮೀಜಿ,

ತಾವು ಕೊಟ್ಟ ಬಸವ ಜಯಂತಿಯ ಸಂದೇಶಕ್ಕೆ ಉತ್ತರವಾಗಿ ಈ ಮನವಿ

ತಾವು ಹೇಳಿದಂತೆ ವೀರಶೈವವು ಒಂದು ಧರ್ಮವಾಗಿದ್ದು ಅದನ್ನು ಬಸವಣ್ಣನವರು ಒಪ್ಪಿಕೊಂಡರಂತೆ
ಹಾಗಾದರೆ ಸ್ವಾಮೀಜಿ‌ ಪ್ರಾಚೀನ ಕಾಲದಿಂದಲೂ ಬಂದ ಅದೇ ವೀರಶೈವ ಧರ್ಮಕ್ಕೆ ಕೇಂದ್ರ ಸರ್ಕಾರದ ಮಾನ್ಯತೆಯನ್ನು ಕೊಡಿಸಿದರೆ ಈ ಸ್ವತಂತ್ರ ಧರ್ಮದ ಮಾನ್ಯತೆಯ ವಿಷಯ ತಾನಾಗಿಯೇ ಸತ್ತು ಹೋಗುತ್ತದೆ

ಕಲ್ಲಿನಲ್ಲಿ ಉದ್ಬವಿಸಿದ ರೇಣುಕರ ಪರಮ ಆರಾಧಕರಾದ ತಮಗೆ ತಮ್ಮ ತಪೋ ಶಕ್ತಿಯಿಂದ ಕೇಂದ್ರದ ಸರ್ಕಾರದ ಒಂದು ಸಣ್ಣ ಪರಿ ಪತ್ರ (ನೋಟಿಫಿಕೇಶನ) ಹೊರಡಿಸಬೇಕಾಗಿ ಭಕ್ತಿಯ ಬಿನ್ನಹ.

ಅದಲ್ಲದೇ ತಾವು ಪೂಜೆ ಮಾಡುದರಿಂದಲೇ ಇಲ್ಲಿ ಕಾಲ ಕಾಲಕ್ಕೆ ಮಳೆ ಬೆಳೆ ಆಗುತ್ತದೆ ಎಂದು ನಿಮ್ಮ ಶಿಷ್ಯರ ಹೇಳಿಕೆ
ಆದರೆ ತಾವು ಕಳೆದ ವರ್ಷ ಬಹಳಷ್ಟು ಪೂಜೆ ಮಾಡಿದ್ದರಿಂದಲೇ ಮಹಾರಾಷ್ಟ್ರದಲ್ಲಿ ಬಹಳ ಮಳೆ ಯಾಗಿ
ಇಡಿ ಉತ್ತರ ಕರ್ನಾಟಕ ನರೆ ಹಾವಳಿ ಸಂಭವಿಸಿ ಅಕಾಲ ಮೃತ್ಯು, ಆಸ್ತಿ ಪಾಸ್ತಿ ಹಾನಿಯಾಗಿದ್ದು ತಮಗೆ ತಿಳಿದ ವಿಷಯ
ಆ ಕಾರಣ ತಾವು ಈ ಸಲ ಜಾಸ್ತಿ ಪೂಜೆ ಮಾಡಬಾರದಾಗಿ ತಮ್ಮಲ್ಲಿ ಭಕ್ತಿಯ ಬಿನ್ನಹ

ಕೊನೆಯದಾಗಿ, ತಮ್ಮ ಪೂಜೆ ಹಾಗೂ ತಮ್ಮ ಸಲ್ಲಬೇಕಾದ ಗೌರವವನ್ನು ಕೇಂದ್ರ ಸರ್ಕಾರ ಕೊಡದ ಕಾರಣ ಇಂದು ದೇಶದಲ್ಲಿ ಕರೋನಾ ಮಹಾಮಾರಿ ಹಬ್ಬಿರಬಹುದು

ಕಾರಣ, ದೆಹಲಿಯಲ್ಲಿ ಕುಳಿತು ತಮ್ಮ ತಪೋ ಶಕ್ತಿಯಿಂದ ಈ ಮಹಾಮಾರಿಯನ್ನು ಈ ಜಗತ್ತಿನಿಂದಲೇ ತೊಲಗಿಸಿ,
ತಮ್ಮನ್ನು ಜಾಗಾದಗುರು ಎಂದು ಹಂಗಿಸುವ ಜನರಿಗೆ ತಾವು ನಿಜವಾದ ಜಗದ್ಗುರು ಎಂದು ಸಾಬೀತು ಪಡಿಸಬೇಕೆಂದು‌
ತಮ್ಮಲ್ಲಿ ಭಕ್ತಿಯ ಬಿನ್ನಹ

ಮಹಾಂತೇಶ ಅಗಡಿ

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಬಡತನದ ಬೇರು ಕತ್ತರಿಸುವ ಕಾರ್ಯ ಮಾಡಿದವರು ಬಸವಾದಿ ಶರಣರು

  ಗಜೇಂದ್ರಗಡ: ಸಮಾಜವನ್ನು ಕಾಡುವ ಬಡತನದ ಬೇರನ್ನು ಕತ್ತರಿಸುವ ಕಾರ್ಯವನ್ನು ಬಸವಾದಿ ಶರಣರು ತಮ್ಮ ನಡೆ ನುಡಿಯ ಮೂಲಕ ಹೇಳಿ …

Leave a Reply

Your email address will not be published. Required fields are marked *

error: Content is protected !!