Breaking News
Home / featured / ಕರೋನಾ ವೈರಸ್: ಗ್ರಾಮ ಪಂಚಾಯತಿಗಳಿಗೆ ಅನುದಾನ ಬಿಡುಗಡೆ

ಕರೋನಾ ವೈರಸ್: ಗ್ರಾಮ ಪಂಚಾಯತಿಗಳಿಗೆ ಅನುದಾನ ಬಿಡುಗಡೆ

ಬೆಳಗಾವಿ : ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಜಿಲ್ಲೆಯ 506 ಗ್ರಾಮ ಪಂಚಾಯತಿಗಳಿಗೆ ಕರೋನಾ ವೈರಸ್ ವ್ಯಾಪಕತೆಯನ್ನು ತಡೆಯಲು ಗ್ರಾಮ ಪಂಚಾಯತಿ ಮತ್ತು ಗ್ರಾಮ ಮಟ್ಟದಲ್ಲಿ ರಚಿಸಿರುವ ಕಾರ್ಯಪಡೆಗಳ ಅಭಿವೃದ್ಧಿಗಾಗಿ ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಪ್ರತಿ ಗ್ರಾಮ ಪಂಚಾಯತಿಗಳಿಗೆ ತಲಾ ರೂ, 20,000 ಗಳಂತೆ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಪಂಚಾಯತ ಸಿ.ಇ.ಓ ಡಾ. ರಾಜೇಂದ್ರ ಕೆ.ವಿ ಅವರು ತಿಳಿಸಿದ್ದಾರೆ.

ಕರೋನಾ ಸೊಂಕು ತಡೆಗಟ್ಟುವ ಸಲುವಾಗಿ ಗ್ರಾಮ ಸಭೆಯ ಸದಸ್ಯರಿಗೆ ಸಮುದಾಯ ಸಂಘಟನೆ ಮತ್ತು ಅರಿವು ಮೂಡಿಸಲು ಹಾಗೂ ತರಬೇತಿ ನೀಡುವ ಸಲುವಾಗಿ ಉಪಯೋಗಿಸಬಹುದಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದು, ಕೈಗಳನ್ನು ತೊಳೆದುಕೊಂಡು ಶುಚಿತ್ವ ಖಚಿತಪಡಿಸುವ ಬಗ್ಗೆ ಅರಿವು ಮೂಡಿಸುವುದು, ಕಡ್ಡಾಯವಾಗಿ ಜನರು ಮಾಸ್ಕಗಳನ್ನು ಧರಿಸುವಂತೆ ಪ್ರೇರಿಪಿಸಬೇಕಾಗಿದೆ. ಅಬ್ದುಲ್ ನಜೀರಸಾಬ್ ಗ್ರಾಮೀಣ ಮತ್ತು ಪಂಚಾಯತ್ ರಾಜ್ ಸಂಸ್ಥೆಯು ಕಾಲ-ಕಾಲಕ್ಕೆ ನೀಡುವ ಮಾರ್ಗಸೂಚಿಗಳನ್ವಯ ವೆಚ್ಚ ಮಾಡುವಂತೆ ತಾಲೂಕ ಪಂಚಾಯತಿಗಳು ಕಡ್ಡಾಯವಾಗಿ ಖಾತರಿಪಡಿಸಕೊಳ್ಳಬೇಕು. ಗ್ರಾಮ ಪಂಚಾಯತಿಗಳು ತಮ್ಮ ವ್ಯಾಪ್ತಿಯಲ್ಲಿ ಕೈಗೊಳ್ಳಲು ಯೋಜಿಸಿರುವ ವಿವಿಧ ಸಮುದಾಯ ಸಂಘಟನೆ, ಅರಿವು ಮೂಡಿಸುವ ಹಾಗೂ ತರಬೇತಿ ಚಟುವಟಿಕೆಗಳ ವಿವರಗಳನ್ನು ಅನುಷ್ಠಾನ ಮಾಡಬೇೇಕು.

ಗ್ರಾಮ ಪಂಚಾಯತಿಯು ಕೈಗೆತ್ತಿಕೊಳ್ಳುವ ಈ ಎಲ್ಲ ಚಟುವಟಿಕೆಗಳನ್ನು ವಿವರಗಳನ್ನು ತಾಲೂಕ ಪಂಚಾಯತಿಗಳು ಕ್ರೋಢಿಕರಿಸಿ ಜಿಲ್ಲಾ ಪಂಚಾಯತ್ ಕಛೇರಿಗೆ ಸಲ್ಲಿಸಬೇಕು. ಪ್ರತಿ ಸಮುದಾಯ ಸಂಘಟನೆ, ಅರಿವು ಮೂಡಿಸುವ ಕಾರ್ಯಕ್ರಮ ಹಾಗೂ ತರಬೇತಿಯನ್ನು ಕೈಗೊಳ್ಳುವ ಸಂದರ್ಭದಲ್ಲಿ ಎರಡು ಛಾಯಾಚಿತ್ರಗಳನ್ನು ಮತ್ತು ನೆರೆದಿರುವ ಒಟ್ಟು ಜನರ ಮಾಹಿತಿಯನ್ನು ನೀಡಬೇಕು.
ಈ ಅನುದಾನದಿಂದ ಪ್ರತಿ ಗ್ರಾಮ ಪಂಚಾಯತಿ ಒಟ್ಟಾರೆ ಕನಿಷ್ಟ 250 ವ್ಯಕ್ತಿಗಳಿಗೆ ತರಬೇತಿ ಅಥವಾ ಅರಿವು ಮೂಡಿಸುವ ಕಾರ್ಯಕ್ರಮವನ್ನು ಕಡ್ಡಾಯವಾಗಿ ಕೈಗೊಳ್ಳುವಂತೆ ಗ್ರಾಮ ಪಂಚಾಯತಿಗಳಿಗೆ ಸಿ.ಇ.ಓ ಡಾ. ರಾಜೇಂದ್ರ ಕೆ.ವಿ ಅವರು ಸೂಚನೆ ನೀಡಿದ್ದಾರೆ.

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

‘ಶರಣಾರ್ಥಿ’ ಗುರು ಪ್ರವೇಶ..!

  ಗಜೇಂದ್ರಗಡದ ಶರಣದಂಪತಿಗಳು ನೂತನ ಮನೆಗೆ ‘ಶರಣಾರ್ಥಿ’ ಎಂದು ವಿಶಿಷ್ಟ ರೀತಿಯಲ್ಲಿ ಮನೆ ನಾಮಕರಣ ಮಾಡಿ ಗುರುಪ್ರವೇಶ, ಅನುಭಾವ ಹಾಗೂ …

Leave a Reply

Your email address will not be published. Required fields are marked *

error: Content is protected !!