Breaking News
Home / featured / ವಿರಕ್ತಮಠಗಳು ಶಾಮನೂರರ ನಡೆ ಖಂಡಿಸಲಿ

ವಿರಕ್ತಮಠಗಳು ಶಾಮನೂರರ ನಡೆ ಖಂಡಿಸಲಿ

ಬೆಂಗಳೂರು : ಶಾಮನೂರ ಶಿವಶಂಕರಪ್ಪನವರು ಎತ್ತುಗಳನ್ನು ಪೂಜೆ ಮಾಡಿದ್ದು ಮುರ್ಖತನದ ಪರಮಾವಧಿ. ಅವರೊಂದಿಗೆ ಪಂಚ ಪೀಠಾದೀಶ್ವರರು ಬಸವಣ್ಣ ವೀರಶೈವ ಧರ್ಮದ ಸುಧಾರಕ ಎಂದಿದ್ದೂ ಕುಚೋಧ್ಯದ ಹೇಳಿಕೆ.ಆದರೆ ಇವಲಕ್ಕಿಂತ ಮಿಗಿಲಾಗಿ ವೀರಕ್ತಮಠದ ಪರಂಪರೆಯ,ಮೂರು ದಶಕಗಳಿಂದ ಬಸವಣ್ಣನೇ ತಮ್ಮ ಉಸಿರು, ಜಗದ್ಗುರು ಪೀಠದ ಪರಂಪರೆ ಬದಲಾಯಿಸಿ ಶೂನ್ಯ ಸಿಂಹಾಸನ ಏರಿದ, ತಮ್ಮನ್ನು ತಾವೇ ಶರಣ ಎಂದು ಕರೆದುಕೊಂಡ ಶ್ರೀ ಶಿವಮೂರ್ತಿ ಮುರುಘಾ ಶರಣರು ಇಂದು ವೀರಶೈವ- ಲಿಂಗಾಯತ ಸೈದ್ದಾಂತಿಕ ಚರ್ಚೆ ಈ ಸಮಯದಲ್ಲಿ ಅನವಶ್ಯಕ ಎಂದು ಹೇಳಿಕೆ ಕೊಟ್ಟಿದ್ದು ದುರದೃಷ್ಟಕರ. ಅವರಿಂದ ಖಂಡನೆ ನೀರಿಕ್ಷೀಸಿತ್ತು ಲಿಂಗಾಯತ ಸಮಾಜ.

ಇಂದು ಕೋರೋನಾ ವೈರಸ್ ವೈದಿಕ ಧರ್ಮವನ್ನಲ್ಲದೆ ಎಲ್ಲ ಧರ್ಮದಲ್ಲಿರುವ ಮೂಢ ನಂಬಿಕೆಗಳನ್ನು ಹುಸಿ ಗೊಳಿಸಿದೆ. ದೇವರು ಗುಡಿಯಲ್ಲಿಲ್ಲ ತಮ್ಮ ದೇಹದಲ್ಲಿದ್ದಾನೆ.ಸತ್ಯದ ಹಾದಿಯಲ್ಲಿ ನಡೆಯುವ ಮಾನವನೆ ದೇವರೆಂದು ಹೇಳಿದ ಬಸವ ಸಂದೇಶ ಇಂದು ಹಿಂದೆಂದಿಗಿಂತಲೂ ಪ್ರಚಲಿತ. ಲಿಂಗಾಯತ ಧರ್ಮದ ಸಿದ್ದಾಂತಗಳನ್ನು ಸಾರಲು ಇಂದು ಸಕಾಲ. ಕಬ್ಬಿಣ ಕಾದಾಗಲೆ ಅದಕ್ಕೆ ಆಕಾರ ಕೋಡಬೇಕು. ಶರಣ ಧರ್ಮ ಪ್ರಚಾರ ಮಾಡಲು ಇದು ಸೂಕ್ತ ಸಮಯ. ಮನೆಯೊಳಗಿರುವ ಜನರು ಸತ್ಯ ಮಿತ್ಯದ ತಡಕಾಟದಲ್ಲಿದ್ದಾರೆ, ಸತ್ಯದ ಅರಿವನ್ನು ಅವರಿಗೆ ಮುಟ್ಟಿಸುವದು ಇಂದಿನಅವಶ್ಯಕತೆ.

ಇಂದು ಬಸವ ಭಕ್ತರೇನೂ ಬಿದಿಗಿಳಿದು ಹೋರಾಟ ಮಾಡುತ್ತಿಲ್ಲವಲ್ಲ. ಕರೋನಾ ರೋಗವನ್ನು ಗುಣಪಡಿಸಲು ವೈದ್ಯರು, ಜನರು ಹೋರಬರದಂತೆ ನಿಯಂತ್ರಿಸಲು ಪೋಲಿಸರು, ಸ್ವಚ್ಛತೆ ಕಾಪಾಡಲು ಪೌರ ಕಾರ್ಮಿಕರು ಇವರೆಲ್ಲ ತಮ್ಮ ತಮ್ಮ ಕಾಯಕದಲ್ಲಿ ನಿರತರಾಗಿರುವರು.ಇಂದು ಮನೆಗಳಲ್ಲಿ ದಿನ ಕಳೆಯುವ ಖಾಲಿ ಮಿದುಳುಗಳಿಗೆ ಸತ್ಯ, ಧರ್ಮ, ನ್ಯಾಯ, ನೀತಿ, ಆಚಾರ,ವಿಚಾರ ತಿಳಿಸುವದು ಧರ್ಮ ಗುರುಗಳಿಗೆ ಒದಗಿ ಬಂದಿರುವ ಸೂಕ್ತ ಸಮಯ.

ಇದಕ್ಕೆ ವ್ಯತಿರಿಕ್ತವಾಗಿ ಶ್ರೀ ಶಿವಮೂರ್ತಿ ಮುರುಘಾಶರಣರು ಈ ಸಮಯ ವೀರಶೈವ-ಲಿಂಗಾಯತ ಸೈದ್ಧಾಂತಿಕ ನಿಲುವು ವ್ಯಕ್ತಪಡಿಸುವ ಸಮಯವಲ್ಲ ಕಾರಣ ಇಂದು ದೇಶವ್ಯಾಪಿ ಕರೋನಾ ಹರಡಿದೆ ಎಂದು ಕಾರಣ ನೀಡಿದ್ದಾರೆ.ಇದು ವೀರಶೈವ ಪರವಾಗಿರುವ ಜನರ ಓಲೈಸಲು ಬಳಸಿರುವ ಜಾಣ ಕುರುಡು.

ಮುರುಘಾ ಶರಣರ ಇತ್ತೀಚಿನ ಹೇಳಿಕೆಗಳು,ಅವರ ನಡವಳಿಕೆಗಳನ್ನು ಗಮನಿಸಿದರೆ ಅವರು ಬಸವ ತತ್ವದಿಂದ ವಿಮುಖರಾಗುವ ಲಕ್ಷಣಗಳು ಹೆಚ್ಚಾಗಿ ಕಾಣುತ್ತಿವೆ. ಕೆಲ ತಿಂಗಳು ಹಿಂದೆ ಅವರು ಬೆಂಗಳೂರಿನಲ್ಲಿ ಕೈಗೊಂಡಿದ್ದ ಸಾರ್ವಜನಿಕ ಇಷ್ಟಲಿಂಗ ಪೂಜೆ. ಅಂದು ಅವರು ವ್ಯಕ್ತಪಡಿಸಿದ ಲಿಂಗಾಯತ ಹಾಗು ವೀರಶೈವದ ಬಗ್ಗೆ ಅವರಿಗಿರುವ ಅಭಿಪ್ರಾಯ, ಕಳೆದೆರಡು ವರ್ಷಗಳಿಂದ ಅವರು ಲಿಂಗಾಯತ ಸಂಘಟನೆಯ ಬಗ್ಗೆ ತೋರುತ್ತಿರುವ ಅನಾದರ, ವೀರಶೈವ ನೀತಿಗೆ ಬಲವಾಗಿ ಅಂಟಿಕೊಂಡಿರುವರೊಂದಿಗೆ ಅವರ ಒಡನಾಟ ಅಂತಹವರಿಂದ ಬಯಸುತ್ತಿರುವ ಕಾಣಿಕೆ!!. ಬದಲಾದ ಪರಸ್ಥಿತಿಯಲ್ಲಿ ಬದಲಾಗುತ್ತಿರುವ ಸಿದ್ದಾಂತ, ರಕ್ತ ನೀರಿಗಿಂತ ಗಟ್ಟಿ ಎಂಬಂತಹ ಅವರ ಅಂತರಂಗದ ಸೂಕ್ಷ್ಮತೆ, ಇವೆಲ್ಲವುಗಳನ್ನೂ ಗಮನಿಸಿದಾಗ ಶ್ರೀ ಗಳು ಇಂದು ಬಸವ ತತ್ವದ ಪ್ರತಿಪಾದಕರೋ ಅಥವಾ ಜಂಗಮ ಸಮಾಜದ ಜಗದ್ಗುರುಗಳೋ ಯಂಬ ಬಿಜ್ಞಾಸೆ ಕಾಣಿಸಲು ಆರಂಬಿಸಿದೆ.

ಅವರಿಂದ ಗದಗಿನ ಶ್ರೀ ಮಠದ ಶ್ರೀ ಜಗದ್ಗುರುಗಳ ಹೇಳಿಕೆಯಂತ ಹೇಳಿಕೆ ಬಯಸಿದೆ ಸಮಾಜ.ಪೂಜ್ಯರು ಭಕ್ತರ ಸಂಶಯ ನಿವಾರಣೆ ಗೊಳಿಸುವರೆಂಬ ನಂಬುಗೆ ಇಟ್ಟುಕೊಂಡಿದ್ದಾರೆ.ಅವರಿಂದ ಸಮಾಜದಲ್ಲಿ ತಪ್ಪು ನಡೆದವರ ತಪ್ಪು ತಿದ್ದುವ ಕಾರ್ಯ ಆಗಲಿ ಎಂದು ಬಯಸಿದೆ ಸಮಾಜ.

ಜಿ ಬಿ ಪಾಟೀಲ
ಪ್ರಧಾನ ಕಾರ್ಯದರ್ಶಿಗಳು. ಜಾಗತಿಕ ಲಿಂಗಾಯತ ಮಹಾಸಭೆ ಬೆಂಗಳೂರು

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಬಡತನದ ಬೇರು ಕತ್ತರಿಸುವ ಕಾರ್ಯ ಮಾಡಿದವರು ಬಸವಾದಿ ಶರಣರು

  ಗಜೇಂದ್ರಗಡ: ಸಮಾಜವನ್ನು ಕಾಡುವ ಬಡತನದ ಬೇರನ್ನು ಕತ್ತರಿಸುವ ಕಾರ್ಯವನ್ನು ಬಸವಾದಿ ಶರಣರು ತಮ್ಮ ನಡೆ ನುಡಿಯ ಮೂಲಕ ಹೇಳಿ …

Leave a Reply

Your email address will not be published. Required fields are marked *

error: Content is protected !!