Breaking News
Home / featured / ರಂಭಾಪುರಿ ಶ್ರೀಗಳ ಹಾಗೂ ಶಾಮನೂರು ಶಿವಶಂಕರಪ್ಪನವರ ನಡೆಗೆ ಭಾಲ್ಕಿ ಶ್ರೀಗಳ ಖಂಡನೆ

ರಂಭಾಪುರಿ ಶ್ರೀಗಳ ಹಾಗೂ ಶಾಮನೂರು ಶಿವಶಂಕರಪ್ಪನವರ ನಡೆಗೆ ಭಾಲ್ಕಿ ಶ್ರೀಗಳ ಖಂಡನೆ

ಭಾಲ್ಕಿ:  ಕರೋನಾ ಎಂಬ ಸಾಂಕ್ರಾಮಿಕ ಮಹಾಮಾರಿಯಿಂದ ಇಡಿ ಜಗತ್ತೆ ಭಯಭಿತವಾಗಿದೆ. ನಮ್ಮ ಸರ್ಕಾರ ಲಾಕ್‌ಡೌನ್ ಮಾಡುವ ಮೂಲಕ ಈ ಮಹಾಮಾರಿ ಹರಡದಂತೆ ಶತಪ್ರಯತ್ನ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ವಿಶ್ವಗುರು ಬಸವಣ್ಣನವರ ಜಯಂತಿ ಉತ್ಸವವನ್ನು ಎಲ್ಲ ಬಸವ ಭಕ್ತರು ತಮ್ಮ ತಮ್ಮ ಮನೆಗಳಲ್ಲಿ ಅತ್ಯಂತ ಸರಳವಾಗಿ ಆಚರಿಸುವುದು ಸಂತೋಷ ತಂದಿದೆ. ಹಾಗೆಯೇ ಈ ಸಂದರ್ಭದಲ್ಲಿ ನಮ್ಮ ದೇಶದ ಪ್ರಧಾನ ಮಂತ್ರಿಗಳು ಹಾಗೂ ವಿವಿಧ ರಾಜ್ಯದ ಮುಖ್ಯಮಂತ್ರಿಗಳು, ರಾಜಕೀಯ ದುರಿಣರೂ ಬಸವಣ್ಣನವರ ತತ್ವಾದರ್ಶಗಳನ್ನು ಕೊಂಡಾಡಿ ದೇಶದ ಜನತೆಗೆ ಬಸವ ಜಯಂತಿಯ ಶುಭಾಶಯ ಕೋರಿರುವುದು ಸಂತೋಷದ ಸಂಗತಿಯಾಗಿದೆ. ಇಂತಹ ಸಂತೋಷದ ಸಂದರ್ಭದಲ್ಲಿಯೂ ಕೆಲವು ವಿಕೃತ ಮನಸ್ಸಿನ ವ್ಯಕ್ತಿಗಳು ಬಸವಣ್ಣನವರ ಬಗ್ಗೆ ಸುಳ್ಳು ಹೇಳಿಕೆಗಳನ್ನು ಕೊಡುವುದು ಹಾಗೂ ಎತ್ತಿಗೆ ಪೂಜೆ ಮಾಡುವ ಮೂಲಕ ಬಸವ ಜಯಂತಿ ಆಚರಿಸಿರುವುದು ಸಮಸ್ತ ಬಸವ ಭಕ್ತರಿಗೆ ನೋವುಂಟು ಮಾಡಿದ್ದಾರೆ.

ಕರ್ನಾಟಕದ ಗಾಂಧಿ ಹರ್ಡೇಕರ್ ಮಂಜಪ್ಪನವರು ಅತ್ಯಂತ ಶ್ರಮಪಟ್ಟು 1913ರಲ್ಲಿ ದಾವಣಗೆರೆಯಲ್ಲಿ ಮೊಟ್ಟಮೊದಲು ಸಾರ್ವಜನಿಕ “ಬಸವ ಜಯಂತಿ” ಆಚರಣೆ ಮಾಡಿದರು. ಆ ಸಂದರ್ಭದಲ್ಲಿ ಮಣ್ಣೆತ್ತಿನ ಅಮಾವಾಸ್ಯೆಗೆ ಬಸವಜಯಂತಿ ಆಚರಿಸಬೇಕೆಂದು ಸಾಕಷ್ಟು ಅಭಿಪ್ರಾಯಗಳು ಬಂದವು ಆದರೆ ಮಂಜಪ್ಪನವರು ಈ ಪೌರಾಣಿಕ ಕಲ್ಪನೆಯನ್ನು ಒಪ್ಪದೇ ಐತಿಹಾಸಿಕ ಮಹಾಪುರುಷರಾದ ಬಸವಣ್ಣನವರ ಜಯಂತಿಯನ್ನು ಅನೇಕ ಆಧಾರಗಳನ್ನು ಸಂಗ್ರಹಿಸಿ ಅಕ್ಷಯ ತೃತೀಯದಂದು ಆಚರಿಸಿದರು. ಆದರೆ ಒಂದು ಸಂಸ್ಥೆಯ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪನವರು ನಮ್ಮ ಧರ್ಮ ಹಾಗೂ ರಾಷ್ಟ್ರನಾಯಕರ ವಿಚಾರಧಾರೆಗೆ ಧಕ್ಕೆ ಉಂಟುಮಾಡಿ ಅದೇ ದಾವಣಗೆರೆ ಭೂಮಿಯಲ್ಲಿ ಎತ್ತಿನ ಪೂಜೆ ಮಾಡುವ ಮೂಲಕ ಬಸವ ಜಯಂತಿ ಆಚರಣೆ ಮಾಡಿರುವುದು ಖಂಡನಿಯ.

ಈ ಸಂದರ್ಭದಲ್ಲಿ ರಂಭಾಪುರಿ ವೀರಸೋಮೇಶ್ವರ ಶ್ರೀಗಳು “ಶೈವ ಬ್ರಾಹ್ಮಣ ಕುಲದಲ್ಲಿ ಜನಿಸಿದ ಬಸವಣ್ಣನವರು ವೀರಶೈವ ಧರ್ಮದ ಉದಾತ್ತ ತತ್ವಗಳಿಗೆ ಮಾರುಹೋಗಿ ವೀರಶೈವ ಧರ್ಮವನ್ನು ಸ್ವೀಕರಿಸಿದರು” ಎಂದು ಹೇಳಿದ್ದು ಪತ್ರಿಕೆಯಲ್ಲಿ ಪ್ರಕಟವಾಗಿದೆ. ಶ್ರೀಗಳ ಈ ಹೇಳಿಕೆಯನ್ನು ಅಪ್ಪಟ ಸುಳ್ಳು ಎಂಬುದು ಜಗಜ್ಜಾಹಿರ. ವಿಶ್ವಗುರು ಬಸವಣ್ಣನವರು ತಮ್ಮ ಸ್ವತಂತ್ರ ವಿಚಾರಧಾರೆಯ ಮೂಲಕ ಲಿಂಗಾಯತ ಧರ್ಮವನ್ನು ಸ್ಥಾಪಿಸಿದ್ದಾರೆ ಎಂಬುದಕ್ಕೆ ವಚನಸಾಹಿತ್ಯದಲ್ಲಿ ಸಾಲು ಸಾಲುಗಳಲ್ಲಿ ಆಧಾರಗಳು ಸಿಗುತ್ತವೆ. ನಾಡಿನ ಶ್ರೇಷ್ಠ ಸಂಶೋಧಕರೂ, ಜಗತ್ತಿನ ವಿದ್ವಾಂಸರು, ಬ್ರಿಟಿಷ್ ಕಾಲದ ದಾಖಲೆಗಳು ಈ ಮಾತಿಗೆ ಪುಷ್ಟಿ ನೀಡುತ್ತವೆ. ಆದರೂ ರಂಭಾಪುರಿ ಶ್ರೀಗಳು ಹುಸಿಯ ನುಡಿಯಲುಬೇಡ ಎಂಬ ಬಸವವಾಣಿ ಹೇಳುತ್ತಲೆ ಪದೆ ಪದೆ ಹುಸಿ ಮಾತನ್ನೇ ನುಡಿಯುತ್ತಾ ಬಸವತತ್ವಕ್ಕೆ ದ್ರೋಹ ಬಗೆಯುತ್ತಿದ್ದಾರೆ. ಇಂದು ಕರೋನಾ ಮಹಾಮಾರಿಯಿಂದ ಇಡಿ ಜಗತ್ತೇ ತತ್ತರಿಸುತ್ತಿದ್ದಾಗ ಮಾನವ ಧರ್ಮಕ್ಕೆ ಜಯಕಾರ ಹಾಕುವ ಶ್ರೀಗಳ ನುಡಿ ಮಾನವೀಯತೆಗೆ ಧಕ್ಕೆ ಉಂಟುಮಾಡಿದೆ.
ರಂಭಾಪುರಿ ಶ್ರೀಗಳ ಹೇಳಿಕೆ ಹಾಗೂ ಶಾಮನೂರು ಶಿವಶಂಕರಪ್ಪನವರ ಈ ನಡೆಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಶ್ರೀಗಳು ಹಾಗೂ ಹಿರಿಯರಾದ ಶಾಮನೂರು ಶಿವಶಂಕರಪ್ಪನವರು ಇಂತಹ ವಿಕೃತ ಮನಸ್ಸಿನಿಂದ ಹೊರಬಂದು ಸಮಾಜಕ್ಕೆ ಒಳ್ಳೆಯ ಆರೋಗ್ಯಪೂರ್ಣ ಸಂದೇಶವನ್ನು ಕೊಡಬೇಕು ಇಂತಹ ಸದ್ಬುದ್ಧಿ ವಿಶ್ವಗುರು ಬಸವಣ್ಣನವರ ಅವರಿಗೆ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.
ಶರಣು ಶರಣಾರ್ಥಿ

ಪೂಜಶ್ರೀ ಡಾ. ಬಸವಲಿಂಗ ಪಟ್ಟದೇವರು ಅಧ್ಯಕ್ಷರು, ಅನುಭವಮಂಟಪ ಬಸವಕಲ್ಯಾಣ. ಹಿರೇಮಠ ಸಂಸ್ಥಾನ ಭಾಲ್ಕಿ

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಲಿಂಗಾಯತ–ವೀರಶೈವರಿಗೆ ಶೇ 16 ಮೀಸಲಾತಿ ನೀಡಿ: ಶಿವಮೂರ್ತಿ ಮುರುಘಾ ಶರಣರು

  ಚಿತ್ರದುರ್ಗ: ಜಾತಿ, ಉಪಜಾತಿಗೆ ಒಂದೊಂದು ವಿಧವಾದ ಮೀಸಲಾತಿ ನೀಡುವ ಬದಲು ಲಿಂಗಾಯತ–ವೀರಶೈವ ಸಮುದಾಯಕ್ಕೆ ಶೇ 16ರಷ್ಟು ಮೀಸಲಾತಿಯ ನಿಗದಿಪಡಿಸುವುದು …

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಡಾ. ತೋಂಟದ ಸಿದ್ಧರಾಮ ಶ್ರೀಗಳ ಆಕ್ಷೇಪ

  ಗದಗ: ಸರ್ಕಾರ ತರಾತುರಿಯಲ್ಲಿ ಲಿಂಗಾಯತ ವೀರಶೈವ ಅಭಿವೃದ್ಧಿ ನಿಗಮ ಘೋಷಿಸಿದ್ದು, ಇದಕ್ಕೆ ಯಾವುದೇ ಗೊತ್ತು ಗುರಿಯಾಗಲಿ, ಸ್ಪಷ್ಟತೆಯಾಗಲಿ ಇಲ್ಲ …

ರವಿ ಬೆಳಗೆರೆ ಒಂದು ಕನಸು ನನಸು ಮಾಡಲು ಆಗಲಿಲ್ಲ..!

  ಚನ್ನಮ್ಮನ ಕಿತ್ತೂರು: ಪಿ. ಲಂಕೇಶರ ನಂತರ ಕನ್ನಡ ಪತ್ರಿಕೋದ್ಯಮ ಮತ್ತೊಂದು ರೀತಿ ಕಲ್ಪನೆ ಮೀರಿ ಮುನ್ನಡಿಸಿದ್ದ ಕೀರ್ತಿ ರವಿಗೆ …

ಬಿಜಗುಪ್ಪಿಯ ಘಟನೆ ಆಕಸ್ಮಿಕ

  ಬೆಳಗಾವಿ: ರಾಮದುರ್ಗ ತಾಲೂಕಿನ ಬಿಜಗುಪ್ಪಿ ಗ್ರಾಮದಲ್ಲಿ ನ.8ರಂದು ಬಸವೇಶ್ವರರ ಮೂರ್ತಿಯ ಕೈ ಮುರಿದಿತ್ತು. ಜಗಜ್ಯೋತಿ ಬಸವೇಶ್ವರರ ಮೂರ್ತಿಯ ಕೈ …

ತಪೋವನ ಕುಮಾರಸ್ವಾಮಿಗಳು: ವಿದೇಶಿಯರಿಗೆ ಬಸವತತ್ವದ ಅರಿವು ಮೂಡಿಸಿದ ಮೊದಲಿಗರು

  ಲಿಂಗಾಯತ ಕ್ರಾಂತಿ: ಶಿವಯೋಗ ಮತ್ತು ಇಷ್ಟಲಿಂಗದ ಮಹತ್ವ ಕುರಿತು ಅರಿವು ಕೇವಲ ಕರ್ನಾಟಕದಲ್ಲಿರುವ ಲಿಂಗಾಯತರಿಗೆ ತಿಳಿಸುವದಷ್ಟೇ ಅಲ್ಲದೇ ವಿದೇಶಿಯರಿಗೆ …

Leave a Reply

Your email address will not be published. Required fields are marked *

error: Content is protected !!