Breaking News
Home / featured / ಲಾಕ್​ಡೌನ್​ ಮುಂದುವರೆದರೆ, ಸೋಂಕಿಗಿಂತ ಹಸಿವು ಹೆಚ್ಚು ಜನರನ್ನ ಕೊಲ್ಲಲಿದೆ: ನಾರಾಯಣಮೂರ್ತಿ

ಲಾಕ್​ಡೌನ್​ ಮುಂದುವರೆದರೆ, ಸೋಂಕಿಗಿಂತ ಹಸಿವು ಹೆಚ್ಚು ಜನರನ್ನ ಕೊಲ್ಲಲಿದೆ: ನಾರಾಯಣಮೂರ್ತಿ

ಬೆಂಗಳೂರು: ಲಾಕ್​ಡೌನ್ ಇನ್ನೂ ಮುಂದುವರಿದರೆ, ಕೊರೊನಾ ಸೋಂಕಿಗಿಂತ ಹಸಿವಿನಿಂದಲೇ ಹೆಚ್ಚು ಜನರು ಸಾಯಲಿದ್ದಾರೆ ಅಂತ ಇನ್ಫೋಸಿಸ್ ಸಂಸ್ಥಾಪಕ ಎನ್ ಆರ್ ನಾರಾಯಣ ಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.

ನಿನ್ನೆ ವೆಬಿನಾರ್​​(ವಿಡಿಯೋ ಕಾನ್ಫರೆನ್ಸ್​)ನಲ್ಲಿ ಮಾತನಾಡಿದ ಅವರು, ಭಾರತ ಇದೇ ಸ್ಥಿತಿಯಲ್ಲಿ ತುಂಬಾ ದಿನ ಮುಂದುವರಿಯಲು ಸಾಧ್ಯವಿಲ್ಲ ಅನ್ನೋದು ನಾವು ಪ್ರಮುಖವಾಗಿ ಅರ್ಥಮಾಡಿಕೊಳ್ಳಬೇಕಿದೆ. ಲಾಕ್​ಡೌನ್ ಹೀಗೆ ಮುಂದುವರಿದಲ್ಲಿ ಸೋಂಕಿನಿಂದ ಬಳಲಿ ಸಾಯುವ ಜನರಿಗಿಂತ ಹಸಿವಿನಿಂದ ಅಸುನೀಗುವ ಜನರ ಸಂಖ್ಯೆ ಜಾಸ್ತಿಯಾಗಲಿದೆ ಅಂತ ಹೇಳಿದ್ದಾರೆ.

“ದೇಶ ಕೊರೊನಾವನ್ನ ಸಾಮಾನ್ಯವೆಂದು ಪರಿಗಣಿಸಬೇಕು. ಸಮರ್ಥರು ಕೆಲಸಕ್ಕೆ ಹಿಂದಿರುಗಲು ಅನುಕೂಲ ಮಾಡಿಕೊಡಬೇಕು. ಇದೇ ಸಮಯದಲ್ಲಿ ತೀರಾ ದುರ್ಬಲರಾದವರನ್ನ ರಕ್ಷಣೆ ಮಾಡಬೇಕು. ಭಾರತದಲ್ಲಿ ಕೊರೊನಾ ಸೋಂಕಿತರ ಸಾವಿನ ಪ್ರಮಾಣ ಶೇ. 0.25-0.5ರಷ್ಟಿದೆ. ಬೇರೆ ಮುಂದುವರಿದ ದೇಶಗಳಿಗೆ ಹೋಲಿಸಿದ್ರೆ ಇದು ತೀರಾ ಕಡಿಮೆ. ಭಾರತದಲ್ಲಿ ಹಲವಾರು ಕಾರಣಗಳಿಂದ ವರ್ಷಕ್ಕೆ ಸುಮಾರು 90 ಲಕ್ಷ ಜನರು ಸಾವನ್ನಪ್ಪುತ್ತಾರೆ. ಅದ್ರಲ್ಲಿ ಕಾಲು ಭಾಗದಷ್ಟು ಸಾವುಗಳು ಮಾಲಿನ್ಯದಿಂದ ಸಂಭವಿಸುತ್ತಿವೆ. 90 ಲಕ್ಷ ಜನರ ಸಹಜ ಸಾವನ್ನ , ಕಳೆದ ಎರಡು ತಿಂಗಳ 1000 ಜನರ ಸಾವಿಗೆ ಹೋಲಿಸಿದ್ರೆ, ನಾವು ಗಾಬರಿಪಡುವಂಥದ್ದೇನೂ ಇಲ್ಲ ಅನ್ನೋದು ಸ್ಪಷ್ಟವಾಗಿದೆ. 19 ಕೋಟಿ ಭಾರತೀಯರು ಅಸಂಘಟಿತ ವಲಯದ ಕಾರ್ಮಿಕರು ಅಥವಾ ಸ್ವಯಂಉದ್ಯೋಗಿಗಳಾಗಿದ್ದಾರೆ. ಸದ್ಯ ಲಾಕ್​ಡೌನ್​ನಿಂದಾಗಿ ಇದ್ರಲ್ಲಿ ಗಣನೀಯ ಪ್ರಮಾಣದ ಜನರು ಜೀವನೋಪಾಯ ಕಳೆದುಕೊಂಡಿದ್ದಾರೆ. ಲಾಕ್​ಡೌನ್​ ಮತ್ತೆ ದೀರ್ಘ ಕಾಲ ಮುಂದುವರೆದರೆ ಮತ್ತಷ್ಟು ಜನರು ಕೆಲಸ ಕಳೆದುಕೊಳ್ಳುತ್ತಾರೆ.”
-ನಾರಾಯಣಮೂರ್ತಿ

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಬಡತನದ ಬೇರು ಕತ್ತರಿಸುವ ಕಾರ್ಯ ಮಾಡಿದವರು ಬಸವಾದಿ ಶರಣರು

  ಗಜೇಂದ್ರಗಡ: ಸಮಾಜವನ್ನು ಕಾಡುವ ಬಡತನದ ಬೇರನ್ನು ಕತ್ತರಿಸುವ ಕಾರ್ಯವನ್ನು ಬಸವಾದಿ ಶರಣರು ತಮ್ಮ ನಡೆ ನುಡಿಯ ಮೂಲಕ ಹೇಳಿ …

Leave a Reply

Your email address will not be published. Required fields are marked *

error: Content is protected !!