Breaking News
Home / featured / ಬಸವಾದಿ ಶರಣ-ಶರಣೆಯರ ಕಾಯಕ ಸಿದ್ಧಾಂತ

ಬಸವಾದಿ ಶರಣ-ಶರಣೆಯರ ಕಾಯಕ ಸಿದ್ಧಾಂತ

ದಾವಣಗೆರೆ: ಅಂದಿನ ಕಾಲಘಟ್ಟದಲ್ಲಿ ಶ್ರಮಕ್ಕೆ ಬೆಲೆಯ ಇರಲಿಲ್ಲ, ಸಮಾಜದ ಸರ್ವಾಂಗೀಣ ಪ್ರಗತಿಗೆ, ವಿಕಾಸಕ್ಕೆ “ಶ್ರಮ ಸಂಸ್ಕೃತಿ, ಬೆವರಿನ ಸಂಸ್ಕೃತಿ” ಅತ್ಯಗತ್ಯ ಎಂದ ಅರಿತ ಬಸವಣ್ಣನವರು, ಶ್ರಮಿಕರಿಗೆ ಸಲ್ಲಬೇಕಾದ ಗೌರವ ಹಾಗೂ ಆರ್ಥಿಕ ಸ್ವಾವಲಂಬನೆ ದೃಷ್ಟಿಯಿಂದ, ಮಾಡುವ ಯಾವುದೇ ಕೆಲಸದಲ್ಲಿ ಭೇದ ಸಲ್ಲ ಎಂದವರು,ಉಚ್ಚ ನೀಚಗಳಿಲ್ಲ ಎಂದವರು.

ತನು ಮನ ಭಾವಗಳನ್ನು ಅರ್ಪಿಸಿ ಮಾಡುವ ಯಾವುದೇ ಕೆಲಸವು ಕಾಯಕವಾಗುತ್ತದೆ ಎಂಬ ಹೊಸ ತತ್ವವನ್ನು ಅರುಹಿದರು. ಮತ್ತು ಪ್ರತಿಯೊಬ್ಬರು ಕಾಯಕ ಮಾಡಿಯೇ ಪ್ರಸಾದ ಸ್ವೀಕರಿಸಬೇಕು ಎಂದು
ಕಾಯಕ ಪ್ರಧಾನ ಸಮಾಜವನ್ನು ಕಟ್ಟಿದರು.

ದುಡಿಯುವವರು ಬೇರೆ, ಅದರ ಫಲವನ್ನು ಉಣ್ಣುವವರು ಬೇರೆ ಆಗಿದ್ದ ಕಾಲಘಟ್ಟದಲ್ಲಿ ‘ಗುರುಲಿಂಗ ಜಂಗಮವಾದರೂ ಕಾಯಕದಿಂದಲೇ ಮುಕ್ತಿ’ ಎಂದು ಪ್ರತಿಪಾದಿಸುವ ಮೂಲಕ ವಿನೂತನವಾದ ಸಿದ್ಧಾಂತಕ್ಕೆ ವ್ಯಾಖ್ಯಾನ ಬರೆದರು.
ಕಾಯಕವೇ ಕೈಲಾಸ ಎಂಬುದು ಅವರು ಜಗತ್ತಿಗೆ ನೀಡಿದ ಅಮೂಲ್ಯ ಸಂದೇಶ.

ಕೈಲಾಸವೆಂದರೆ ಆನಂದ, ಆತ್ಮ ತೃಪ್ತಿಯ ಅನುಭುತಿ.
ಕಾಯಕದೊಳಗೆ ದೈವತ್ವ ಕಾಣುವ, ಆಧ್ಯಾತ್ಮಿಕ ತಳಹದಿಯ ಮೇಲೆ ಕಾಯಕವನ್ನು ಸಮೀಕರಿಸುವ ಪದ್ಧತಿಗೆ ಶರಣರು ನಾಂದಿ ಹಾಡಿದರು‌.

ಅದರೊಂದಿಗೆ ಸತ್ಯ ಶುಧ್ಧವಲ್ಲದ್ದು ಕಾಯಕವಲ್ಲ ಎಂಬ ಎಚ್ಚರಿಕೆಯನ್ನು‌ ನೀಡಿದರು.

ಅರಿತೊ ಅರಿಯದೆಯೋ ಅಣ್ಣನವರ ಈ ತತ್ವವನ್ನು ಕಾರ್ಯಗೊಳಿಸಿದವರು ಜಪಾನಿಯರು.

೧೯೪೬ ರಲ್ಲಿ ಅಮೇರಿಕಾದ ಅಣುಬಾಂಬಿನ ಆಕ್ರಮಣದಿಂದ ಬಹುಪಾಲು ನಾಶವಾಗಿದ್ದರೂ ಸಹ, ಕಾಯಕದ ಮೂಲಕವೇ ಪುಟಿದೆದ್ದು ಇಂದು ಜಗತ್ತಿನ ಮನೆಮಾತಾಗಿರುವ ಅವರು, ಅವರು
ಮಾಡುವ ಪ್ರತಿ ಕೆಲಸವು ಕಾಯಕವೇ, ಜಪಾನ್ ಇಂದು ವಿಶ್ವದ ಪ್ರಭಾವಿ ರಾಷ್ಟ್ರವಾಗಲೂ ಇದು ಒಂದು ಕಾರಣವೆಂದು ನನ್ನ ಅನಿಸಿಕೆ.

ಕಾಯಕ ಉದ್ದೇಶಿಸಿ ಬಸವಣ್ಣನವರ ಒಂದು ವಚನದಲ್ಲಿ.

ದೇವಸಹಿತ ಭಕ್ತ ಮನೆಗೆ ಬಂದಡೆ
ಕಾಯಕವಾವುದೆಂದು ಬೆಸಗೊಂಡೆನಾದಡೆ
ನಿಮ್ಮಾಣೆ ! ನಿಮ್ಮ ಪುರಾತರಾಣೆ ! ತಲೆದಂಡ ! ತಲೆದಂಡ !
ಕೂಡಲಸಂಗಮದೇವಾ, ಭಕ್ತರಲ್ಲಿ ಕುಲವನರಸಿದಡೆ
ನಿಮ್ಮ ರಾಣಿವಾಸದಾಣೆ.

ಎಂದು ಯಾರೇ ಮನೆಗೆ ಬಂದರು ಅವರ ಕಾಯಕಯಾವುದೆಂದು ಕೇಳಿ ಅದರ ಅನುಗುಣವಾಗಿ ಅವರೊಡನೆ ವರ್ತಿಸಿದರೆ ನಿಮ್ಮಾಣೆ ಎನ್ನುತ್ತಾ ಎಲ್ಲ ಕಾಯಕದವರನ್ನು ಸಮಾನ ಪ್ರೀತಿ ಗೌರವಗಳಿಂದ ಕಾಣಬೇಕೆಂದು ನಮಗೆ ಅರುಹಿದ್ದಾರೆ

ನಾವೆಲ್ಲರೂ ಅದರಂತೆ ನಡೆಯುವದಲ್ಲದೇ ನಾವು ಸಹಿತ ನಮ್ಮ ಕೆಲಸವನ್ನು ಕಾಯಕವನ್ನಾಗಿ ಪರಿವರ್ತಿಸಿ, ಜಪಾನಿನಂತೆ, ನಮ್ಮ ದೇಶವನ್ನು ಸಹಿತ ವಿಶ್ವದ ಸಹಿತ ಪ್ರಭಾವಿ ರಾಷ್ಟ್ರದ ಸಾಲಿಗೆ ಸೇರಿಸೋಣ.

ಇದುವೇ ನಾವು
ಅವರಿಗೆ ಸಲ್ಲಿಸುವ ಗೌರವ

ಶರಣ: ಮಹಾಂತೇಶ ಅಗಡಿ

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಬಡತನದ ಬೇರು ಕತ್ತರಿಸುವ ಕಾರ್ಯ ಮಾಡಿದವರು ಬಸವಾದಿ ಶರಣರು

  ಗಜೇಂದ್ರಗಡ: ಸಮಾಜವನ್ನು ಕಾಡುವ ಬಡತನದ ಬೇರನ್ನು ಕತ್ತರಿಸುವ ಕಾರ್ಯವನ್ನು ಬಸವಾದಿ ಶರಣರು ತಮ್ಮ ನಡೆ ನುಡಿಯ ಮೂಲಕ ಹೇಳಿ …

Leave a Reply

Your email address will not be published. Required fields are marked *

error: Content is protected !!