Breaking News
Home / featured / ಕಾಯಕ ಜೀವಿಗಳ ಧರ್ಮ ಲಿಂಗಾಯತ

ಕಾಯಕ ಜೀವಿಗಳ ಧರ್ಮ ಲಿಂಗಾಯತ

ಬೆಂಗಳೂರು : ಅದೊಂದು ಕಾಲಘಟ್ಟ ದುಡಿಯುವ ಜೀವಿಗಳಿಗೆ ಬೆಲೆ ಇರ್ಲಿಲ್ಲ, ಉತ್ತಮ ಜಾತಿಯಲ್ಲಿ ಹುಟ್ಟಿದವನಿಗೆ ಮಾತ್ರ ಬೆಲೆ ಇತ್ತು. ಶೂದ್ರರು, ಕೆಳವರ್ಗದವರು ದುಡಿಮೆಗೆ ಮಾತ್ರ ಸೀಮಿತವಾಗಿದ್ರು ಇಂತಹ ಒಂದು ಅಂಧಕಾರದಲ್ಲಿ ಮುಳುಗಿದ ಜಗತ್ತಿನಲ್ಲಿ ಬೆಳಕು ತಂದು ಕೊಟ್ಟವರು ಬಸವಾದಿ ಶರಣರು.

ಹೌದು ಮಹಾನ್ ಮಾನವತಾವಾದಿ ಬಸವಣ್ಣ ದುಡಿಯುವ ಜೀವಿಗಳನ್ನು ಒಂದು ಕೂಡಸಿ, ದುಡಿದರೆ ಮಾತ್ರ ನಮ್ಮ ಜೀವನ ಸಾರ್ಥಕವಾಗುತ್ತೆ ಅದಕ್ಕೆ ಈ ದುಡಿಮೆಗೆ ಅವರು ಕಾಯಕ ಅಂತ ಹೆಸರು ಕೊಟ್ರು, ಈ ಕಾಯಕದಿಂದ ಮಾತ್ರ ನಾವು ಆ ದೇವರನ್ನು ಕಾಣಬಹುದು ಎಂದು ಜಗತ್ತಿಗೆ ಸಾರಿದರು. ಅದಕ್ಕೆ “ಕಾಯಕವೇ ಕೈಲಾಸವಾಯಿತು”

ಬಸವಾದಿ ಶರಣರ ಕಾಯಕ ನಾವು ಮಾಡುವ ಬೇರೆಯವರ ಕೆಲಸಗಿಂತ ಭಿನ್ನವಾಗಿತ್ತು , ತಾವು ಮಾಡಿದ ಕಾಯಕದಿಂದ ಅದೆಷ್ಟು ಲಾಭವಾದರೂ ಅವತ್ತಿಗೆ ಎಷ್ಟು ಬೇಕು ಅಷ್ಟು ಇಟ್ಟಕೊಂಡು ಮಿಕ್ಕ ದುಡ್ಡನ್ನು ದಾಸೋಹಕ್ಕೆ ಕೊಡ್ತಾ ಇದ್ರೂ. ಅವರಲ್ಲಿ ತಮಗೆ ಆಗಲಿ ತಮ್ಮ ಮುಂದಿನ ಪೀಳೆಗೆಗಾಗಲಿ ಸಂಪತ್ತು ಮಾಡಿ ಇಡಬೇಕು ಅನ್ನೋ ಮನೋಭಾವ ಅವರಲ್ಲಿ ಇರ್ಲಿಲ್ಲ.

ಬಸವಾದಿ ಶರಣರ ಕಟ್ಟಿದ ಕಲ್ಯಾಣದಲ್ಲಿ ಪ್ರತಿಯೊಬ್ಬರು ಕಾಯಕ ಜೀವಿಗಳು ಆಗಿದ್ದರು, ಅದಕ್ಕೆ ಬಸವಣ್ಣನವರು ಒಂದು ವಚನದಲ್ಲಿ ಹೇಳುತ್ತಾರೆ:
“ಕಲ್ಯಾಣದಲ್ಲಿ ನೀಡುವರು ಉಂಟು ಬೇಡುವರು ಇಲ್ಲ,
ಬೇಡುವರು ಇಲ್ಲದೆ ನಾ ಬಡವನಾದೆ ಅಯ್ಯ ಕೂಡಲಸಂಗಮದೇವ”.

ಈ ಒಂದು ಕಲ್ಯಾಣ ರಾಜ್ಯದಲ್ಲಿ ಕಾಯಕ ಅಂದ್ರೆ ನಮ್ಮ ಕಣ್ಣಿಗೆ ಬರುವರು ಶರಣೆ ಆಯ್ದಕ್ಕೆ ಲಕ್ಕಮ , ಕಾಯಕ ಕುರಿತು ಅವರ ವಚನ ಹೀಗೆ ಇದೆ .

“ಮನಶುದ್ಧವಿಲ್ಲದವಂಗೆ ದ್ರವ್ಯದ ಬಡತನವಲ್ಲದೆ
ಚಿತ್ತಶುದ್ಧದಲ್ಲಿ ಕಾಯಕವ ಮಾಡುವಲ್ಲಿ
ಸದ್ಭಕ್ತಂಗೆ ಎತ್ತ ನೋಡಿದತ್ತ ಲಕ್ಷ್ಮಿ ತಾನಾಗಿಪ್ಪಳು
ಮಾರಯ್ಯಪ್ರಿಯ ಅಮರೇಶ್ವರ ಲಿಂಗದ
ಸೇವೆಯುಳ್ಳನ್ನಕ್ಕರ”.

ಎಂದು ಆಯ್ದಕ್ಕಿ ಲಕ್ಕಮ್ಮ ಆತ್ಮವಿಶ್ವಾಸ ವ್ಯಕ್ತಪಡಿಸುತ್ತಾಳೆ. ಬಡ ವಚನಕಾರರ ಆತ್ಮವಿಶ್ವಾಸ ಶ್ರೀಮಂತರನ್ನು ದಂಗುಬಡಿಸುತ್ತದೆ. ಇಲ್ಲಿ ಆಯದಕ್ಕೆ ಲಕ್ಕಮ್ಮನವರು ಹೇಳೋದು ಯಾವದೇ ಕೆಲಸವನ್ನು ನಾವು ಮನಸ್ಸು ಕೊಟ್ಟು ಮಾಡಿದರೆ ದುಡ್ಡು ಅನ್ನೋದು ತಾನಾಗಿ ಬರುತ್ತೆ ದುಡ್ಡಿಗಾಗಿ ನಾವು ಯಾವದೇ ಪೂಜೆ ಹೋಮ ಮಾಡೋದು ಬೇಕಿಲ್ಲ ಅಂತ ಈ ವಚನದ ಅರ್ಥ.

ಪ್ರತಿಯೊಂದು ಕೆಲಸಕ್ಕೂ ತನ್ನದೇ ಆದ ಬೆಲೆ ಇರುತ್ತೆ ಅಂತ ಬಸವಾದಿ ಶರಣ ನಿಲುವಾಗಿತ್ತು.
ಬಸವಣ್ಣವರ ಒಂದ ಕಡೆ ಹೇಳುತ್ತಾರೆ “”ಆವ ಕಾಯಕವಾದಡೂ ಸ್ವಕಾಯಕವ ಮಾಡಿ”.

ಬಸವಣ್ಣನವರ ಕಾಯಕ ತತ್ವದ ಪ್ರೇರಣೆಯಿಂದ ಶರಣೆಯರು ಅನೇಕ ಕಾಯಕಗಳನ್ನು ಕೈಗೆತ್ತಿಕೊಂಡರು, ಉದಾಹರಣೆಗೆ: ಲಕ್ಕಮ್ಮ ಬಿದ್ದ ಅಕ್ಕಿಗಳನ್ನು ಆಯ್ದು ತರುವ, ಮೋಳಿಗೆ ಮಹಾದೇವಿ ಕಟ್ಟಿಗೆ ಹೊತ್ತು ತರುವ, ರಾಯಮ್ಮ ಅಮುಗೆ ಕಾಯಕ, ರೇಮವ್ವೆ ಕದಿರಿನಿಂದ ನೂಲು ತೆಗೆಯುವುದು, ನಿಂಬವ್ವೆ ನೀರು ಹೊರುವ ಮೊದಲಾದ ಕಾಯಕಗಳನ್ನು ಮಾಡಿ ತಮ್ಮ ಬಾಳನ್ನು ಸಾರ್ಥಕ ಮಾಡಿಕೊಂಡರು, ಕಾಳವ್ವೆ. ಕನ್ನಡಿಕಾಯಕ ರೇವಮ್ಮೆ, ಕೊಟ್ಟಣದ ಸೋಮಮ್ಮ ಇವರೆಲ್ಲ ಕಾಯಕ ಶರಣೆಯರು. ಸ್ತ್ರೀ ಅವಲಂಬಿತಳಲ್ಲ ಅನ್ನುವುದನ್ನು ತೋರಿಸಿ ಕೊಟ್ಟು, ಕಾಯಕ ತತ್ವದ ಮೂಲಕ ಆರ್ಥಿಕ ಸ್ವಾತಂತ್ರ್ಯ ಅನುಭವಿಸಿದರು.

ಕಾಯಕ ಕುರಿತು ಬಸವಣ್ಣನವರ ಒಂದು ವಚನ.

ಗುರು ಉಪದೇಶ ಮಂತ್ರವೈದ್ಯ, ಜಂಗಮ ಉಪದೇಶ ಶಸ್ತ್ರವೈದ್ಯ ನೋಡಾ,
ಭವರೋಗವ ಕಳೆವ ಪರಿಯ ನೋಡಾ.
ಕೂಡಲಸಂಗನ ಶರಣರ ಅನುಭಾವ
ಮಡಿವಾಳನ ಕಾಯಕದಂತೆ.

ಶರಣು ಶರಣಾರ್ಥಿಗಳು.

ಶರಣ : ಗುರುರಾಜ್ ಮನಹಳ್ಳಿ
ಜಾಗತಿಕ ಲಿಂಗಾಯತ ಮಹಾಸಭಾ ಬೆಂಗಳೂರು

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಬಡತನದ ಬೇರು ಕತ್ತರಿಸುವ ಕಾರ್ಯ ಮಾಡಿದವರು ಬಸವಾದಿ ಶರಣರು

  ಗಜೇಂದ್ರಗಡ: ಸಮಾಜವನ್ನು ಕಾಡುವ ಬಡತನದ ಬೇರನ್ನು ಕತ್ತರಿಸುವ ಕಾರ್ಯವನ್ನು ಬಸವಾದಿ ಶರಣರು ತಮ್ಮ ನಡೆ ನುಡಿಯ ಮೂಲಕ ಹೇಳಿ …

Leave a Reply

Your email address will not be published. Required fields are marked *

error: Content is protected !!