Breaking News
Home / featured / ಸಂಪೂರ್ಣ ಮಧ್ಯ ಮಾರಾಟ ನಿಷೇಧ ಮಾಡಿ: ಹೆಚ್ ಕೆ ಪಾಟೀಲ

ಸಂಪೂರ್ಣ ಮಧ್ಯ ಮಾರಾಟ ನಿಷೇಧ ಮಾಡಿ: ಹೆಚ್ ಕೆ ಪಾಟೀಲ

ಬೆಂಗಳೂರು:- ಲಾಕ್‌ಡೌನ್ ಜಾರಿಯಿಂದಾಗಿ ಕಳೆದ 48 ದಿನಗಳಿಂದ ರಾಜ್ಯದಲ್ಲಿ ಮದ್ಯ ಮಾರಾಟ ನಿಂತಿದ್ದು, ಇದೇ ಅವಕಾಶ ಬಳಸಿ ಮದ್ಯ ಮಾರಾಟ ನಿಷೇಧ ಜಾರಿಗೆ ತರುವಂತೆ ಮಾಜಿ ಸಚಿವ ಹೆಚ್.ಕೆ.ಪಾಟೀಲ್ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಮದ್ಯಪಾನ ನಿಷೇದ ಅತ್ಯಂತ ಕಠಿಣವಾದರೂ ಇದು ಶ್ರೇಷ್ಠ ಕೆಲಸ. ಪ್ರಸಕ್ತ ಪ್ರಕೃತಿ ರೂಪಿಸಿರುವ ಪರಿಸ್ಥಿತಿಯ ಪ್ರಯೋಜನ ಪಡೆದು ಸಂತಸದ, ನೆಮ್ಮದಿಯ, ತೃಪ್ತಿಯ ಸಮಾಜ ನಿರ್ಮಾಣದತ್ತ ಹೆಜ್ಜೆಗಳನ್ನಿಡಲು ಮುಖ್ಯಮಂತ್ರಿಗಳು ದೃಢ ಸಂಕಲ್ಪರಾಗಬೇಕು ಎಂದು ಮುಖ್ಯಮಂತ್ರಿಗೆ ಬರೆದಿರುವ ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಆದಾಯ ಮೂಲವನ್ನು ಕೇಂದ್ರೀಕರಿಸಿ ಮಹಾತ್ಮ ಗಾಂಧೀಜಿಯವರ ಪಾನ ನಿರೋಧ ನೀತಿಯಿಂದ ದೂರಸರಿದ ಆಡಳಿತ ನೀತಿಗೆ ಗುಡ್ ಬಾಯ್ ಹೇಳಬೇಕು. ಮದ್ಯಪಾನ ನಿಷೇಧಕ್ಕೆ ಸುಸಂಸ್ಕೃತ ಸಮಾಜಕ್ಕಾಗಿ ಮಹಿಳಾ ಸಂಘಟನೆಗಳು ಹೊರಾಡುತ್ತಿವೆ.

ಇದನ್ನು ಗಮನದಲ್ಲಿರಿಸಿಕೊಂಡು ನಾಡಿನ ಅಭಿವೃದ್ಧಿ ಸೂಚ್ಯಂಕಕ್ಕಿಂತ ಸಮಾಜದ ನೆಮ್ಮದಿಯ ಸೂಚ್ಯಂಕ ಹೆಚ್ಚುವಂತೆ ಮಾಡಲು ನಿರ್ಮಲ ವಾತಾವರಣ ನಿರ್ಮಿಸಬೇಕಾಗಿದೆ ಎಂದಿದ್ದಾರೆ.ನಮ್ಮ ನೆರೆಯ ಪುಟ್ಟ ದೇಶ ಭೂತಾನ್ ಸಂತಸದ ಸೂಚ್ಯಂಕಕ್ಕೆ ಹೆಚ್ಚಿನ ಆಧ್ಯತೆ ನೀಡಿದ್ದು, ಪರಿಶುದ್ಧ ಜೀವನ ಸ್ವಚ್ಛ ಪರಿಸರ, ಕೌಟುಂಬಿಕ ಶಾಂತಿಗಳ ಕೆಲಸ ಮಾಡಿದೆ.

ಮದ್ಯವ್ಯಸನದಿಂದ ಅಧಿಕಾರ ದುರುಪಯೋಗ , ಜಗಳ , ಅಶಾಂತಿ ಭ್ರಷ್ಟ ವ್ಯವಸ್ಥೆ ನಿರ್ಮಾಣಕ್ಕೆ ಕಾರಣವಾಗಿದೆ. ಅಮಲು ಮುಕ್ತ ಸಮಾಜದತ್ತ ಅರಿವಿಲ್ಲದೆ ದಾಪುಗಾಲಿಡುತ್ತಿದ್ದೆವೆ. ಮದ್ಯಪಾನ ನಿಷೇಧಿಸುವುದು ಇಂದಿನ ಅತ್ಯಂತ ಅವಶ್ಯಕತೆಯಾಗಿದೆ ಎಂದು ಹೇಳಿದ್ದಾರೆ. ಶ್ರಮಜೀವಿಗಳು ಬಡವರು , ಜೀವನದ ಜಂಜಾಟದಿಂದ ತತ್ತರಿಸಿದವರ ಸುಖಕ್ಕಾಗಿ ಮದ್ಯಪಾನ ಬೇಕೇಬೇಕು ಎಂದು ವಾದಿಸುವವರಿದ್ದಾರೆ.

ಮದ್ಯಪಾನ ಶ್ರಮ ಜೀವಿಗಳಿಗೆ ತಾತ್ಕಾಲಿಕ ಸಮಾಧಾನ ನೀಡಿದರೂ ಅವರ ಬಡತನ ಹೆಚ್ಚಿ ಮರಣಗಳು ಹೆಚ್ಚುತ್ತವೆ. ನಿರಂತರವಾಗಿ ಮನೆಯಲ್ಲಿ ಸುಖ – ಶಾಂತಿ ಬದಲು, ದುಃಖ, ಕಷ್ಟಗಳಿಗೆ ಭದ್ರ ಬುನಾದಿಹಾಕುತ್ತದೆ ಮದ್ಯಪಾನದಿಂದ ಹೆಣ್ಣುಮಕ್ಕಳು ನಿರಂತರ ಶೋಷಣೆಗೊಳಗಾಗುತ್ತಿದ್ದಾರೆ .

ಮಕ್ಕಳು ತಮ್ಮ ಬಾಲ್ಯದ ಸುಖ ನೆಮ್ಮದಿಯಿಂದ ವಂಚಿತರಾಗುತ್ತಿದ್ದಾರೆ . ಮದ್ಯಪಾನ ಕುಟುಂಬಗಳನ್ನು ಒಡೆಯುತ್ತಿದೆ . ಸುಶಿಕ್ಷಿತ ವರ್ಗದಲ್ಲಿ ವಿವಾಹ ವಿಚ್ಛೇದನಗಳು ವಿಪರೀತ ಪ್ರಮಾಣದಲ್ಲಿ ಹೆಚ್ಚಾಗಿವೆ ಎಂದು ಪತ್ರದಲ್ಲಿ ಎಚ್.ಕೆ.ಪಾಟೀಲ್ ತಿಳಿಸಿದ್ದಾರೆ.

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಬಡತನದ ಬೇರು ಕತ್ತರಿಸುವ ಕಾರ್ಯ ಮಾಡಿದವರು ಬಸವಾದಿ ಶರಣರು

  ಗಜೇಂದ್ರಗಡ: ಸಮಾಜವನ್ನು ಕಾಡುವ ಬಡತನದ ಬೇರನ್ನು ಕತ್ತರಿಸುವ ಕಾರ್ಯವನ್ನು ಬಸವಾದಿ ಶರಣರು ತಮ್ಮ ನಡೆ ನುಡಿಯ ಮೂಲಕ ಹೇಳಿ …

Leave a Reply

Your email address will not be published. Required fields are marked *

error: Content is protected !!