Breaking News
Home / featured / ಮದ್ಯಪಾನ ವಿಷಯದಲ್ಲಿ ಸರ್ಕಾರ ಚಿವುಟಿ, ರಮಿಸುವುದು ಬೇಡಾ. ಡಾ ಜಗದೀಶ ಹಾರೂಗೊಪ್ಪ.

ಮದ್ಯಪಾನ ವಿಷಯದಲ್ಲಿ ಸರ್ಕಾರ ಚಿವುಟಿ, ರಮಿಸುವುದು ಬೇಡಾ. ಡಾ ಜಗದೀಶ ಹಾರೂಗೊಪ್ಪ.

ಮದ್ಯಪಾನ ನಿಷೇಧ ಜೀವ ಉಳಿಸಲು ಹೆಲ್ಮೆಟ ಕಡ್ಡಾಯವಂಬಂತೆ ಆರೋಗ್ಯ & ಜೀವ ಉಳಿಸಲು ಸಾರಾಯಿ ನಿಷೇಧ ಏಕಿಲ್ಲ?

ಎಂ ಕೆ ಹುಬ್ಬಳ್ಳಿ : ಸಾರಾಯಿ ಮಾರಾಟ ಮಾಡುವ ಸರಕಾರಗಳು ಆರೋಗ್ಯ ಅಭಿವೃದ್ಧಿ ನೀಡುತ್ತೇವೆ ಅನ್ನುವುದು ಚಿವುಟಿ ರಮಿಸಿದಂತೆ. ಗುಜರಾತ್ ಮತ್ತು ಬಿಹಾರದಲ್ಲಿ ನಿಷೇಧಿಸಿರುವ ಸಾರಾಯಿ ನಮ್ಮ ಕರ್ನಾಟಕ ರಾಜ್ಯದಲ್ಲಿ ಏಕಿಲ್ಲ..?

ಕಲ್ಯಾಣ ಕರ್ನಾಟಕ ಅಥವಾ ರಾಮ ರಾಜ್ಯ ಅನ್ನುವ ಡೊಂಗಿ ರಾಷ್ಟ್ರ ಹಿತಚಿಂತಕರು ಮದ್ಯಪಾನ ನಿಷೇಧಕ್ಕೆ ಒತ್ತಾಯಿಸಿ ಇಲ್ಲವೇ ರಾಜೀನಾಮೆ ನೀಡಿ.
‘ನಾಯಿಯ ಹಾಲು ನಾಯಿಗಲ್ಲದೆ ಸತ್ಪಾತ್ರಕ್ಕೆ ಸಲ್ಲದಯ್ಯ.’ ಎಂದು ಅಣ್ಣ ಬಸವಣ್ಣನವರು ಹೇಳಿದಂತೆ

‘ಲಕ್ಷಾಂತರ ಕುಟುಂಬದ ಸ್ವಾಸ್ಥ್ಯ,ನೆಮ್ಮದಿ ಮತ್ತು ಸಿರಿತನವನ್ನು ಕುಸಿದು ರಾಜ್ಯ ಬೊಕ್ಕಸಕ್ಕೆ ತುಂಬುವುದು ಯಾವ ಪುರುಷಾರ್ಥಕ್ಕೆ? ಸಾರಾಯಿ ಮತ್ತು ದುಡ್ಡು ಹಂಚಿಯೇ ರಾಜಕೀಯ ಮಾಡುವರಿಂದ ಇದು ಸಾಧ್ಯವೇ..?

ಕಾರ್ಮಿಕ ಕಲ್ಯಾಣ, ಆ ಕಲ್ಯಾಣ ಮತ್ತು ಅನೇಕ ಭಾಗ್ಯಗಳನ್ನು ಬಿಟ್ಟು ಮದ್ಯಪಾನವಿಲ್ಲದ ರಾಜ್ಯ ಮತ್ತು ರಾಷ್ಟ್ರವನ್ನು ನೀಡಿ. ಅಬಕಾರಿ ಲಾಬಿಯ ಗುಲಾಮಗಿರಿಯಿಂದ ಹೊರ ಬನ್ನಿ.
ರಾಮ, ಬುದ್ಧ, ಬಸವನ ಹೆಸರಲ್ಲಿ ಸಮಾಜಕಟ್ಟುವವರೆಲ್ಲ
ತಮ್ಮ ನಿಜ ರೂಪ ತೋರಿಸಿ, ಮದ್ಯಪಾನ ನಿಷೇಧಕ್ಕೆ ನಿಮ್ಮ ಬದ್ಧತೆಯನ್ನು ತೋರಿಸಿ.

ರಾಜಕೀಯ ಒಂದು ಸಮಾಜ ಸೇವೆ ಎಂದು ಹೇಳುವ
ಹಲವಾರು ರಾಜಕಾರಣಿಗಳು ರಾಜಕೀಯ ಅಂದರೆ ಸಮಾಜಸೇವೆ ಎಂದು ತಿಳಿಸುತ್ತ ಸಮಾಜದಲ್ಲಿನ ಬಡವರ ದಿನಗೂಲಿ ಕೂಲಿಕಾರ್ಮಿಕರು ಕುಡಿತದಿಂದ ಸಂಪೂರ್ಣ ಹಾಳಾಗುತ್ತಾರೆ ಎಂದು ಯಾಕೆ ಚಿಂತಿಸಬಾರದು.
ಎಲ್ಲ ಜನ ಪ್ರತಿನಿಧಿಗಳು ಮತ್ತು ಮಾನವೀಯ ಮೌಲ್ಯಗಳ ಬಗ್ಗೆ ಕಾಳಜಿ ಇರುವವರು ಮದ್ಯಪಾನ ನಿಷೇಧಕ್ಕೆ ಒತ್ತಾಯಿಸಿ, ಜಾಲತಾಣಗಳಲ್ಲಿ ಅಭಿಪ್ರಾಯ ಮೂಡಿಸಿ.

ತಮ್ಮಲ್ಲಿರುವ ಒಳ್ಳೆಯ ವಿಚಾರಗಳನ್ನು ಹೇಳಿ.
ಕುಡಿಯುವ ಜನರೂ ಕೂಡ ವಾಲ್ಮೀಕಿಯಂತೆ ಆಗಲು ಸಂಕಲ್ಪ ಮಾಡಿ. ನಿಮ್ಮ ಒಂದು ನಡೆ ಒಂದು ಹೇಳಿಕೆ ಅಥವಾ ಶೇರ್ (ಹಂಚಿಕೆ) ನಿಮ್ಮ ಮಕ್ಕಳ ಸುಂದರ ಬದುಕಿನ ಮುನ್ನುಡಿ.

ಡಾ. ಜಗದೀಶ ಹಾರುಗೊಪ್ಪ.                                       ಮಯೂರ ದಂತ ಚಿಕಿತ್ಸಾಲಯ ಎಂ.ಕೆ. ಹುಬ್ಬಳ್ಳಿ.

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಲಿಂಗಾಯತ ಧರ್ಮದ ಹೋರಾಟ ಸರಣಿ-2

  ಜಾತಿ ಲಿಂಗಾಯತರು ಮತ್ತು ಬೇಡ ಜಂಗಮ ಪಂಚಾಚಾರ್ಯರು ಸತ್ಯವೆಂದು ನಂಬಿ ಲಿಂಗಾಯತ ಧರ್ಮದ ಮಾನ್ಯತೆ ತಪ್ಪಿಸುತ್ತಿದ್ದಾರೆ. ಬಸವಕಲ್ಯಾಣ: 12ನೇ …

ನ. 22 ರಂದು ಡಾ. ಹೆಚ್.ಆರ್.ಗಿರಿಯಾಲ ಅವರಿಗೆ ನುಡಿನಮನ

ಚನ್ನಮ್ಮನ ಕಿತ್ತೂರು: ಸಮೀಪದ ಬೈಲೂರು ಗ್ರಾಮದ ಖ್ಯಾತ ವೈದ್ಯ ಡಾ ಹಣಮಂತ ಆರ್ ಗಿರಿಯಾಲ ಅವರು ಕಳೆದ ಸೆಪ್ಟೆಂಬರ್ 30 …

ಲಿಂಗಾಯತ ಧರ್ಮದ ಹೋರಾಟ ಸರಣಿ-2

  ಲಿಂಗಾಯತ ಧರ್ಮದ ಮಠಾಧೀಶರ ನಿಯೋಗ ಮುಖ್ಯಮಂತ್ರಿಗೆ ಭೇಟಿ ಮಾಡಬಾರದೇಕೆ? ಲಿಂಗಾಯತ ಧರ್ಮದ ಹೋರಾಟದಲ್ಲಿ ಮುಂಚೂಣಿ ಸ್ಥಾನ ವಹಿಸಿ ಅತ್ಯಂತ …

ಸಾಮಾಜಿಕ ಪ್ರಾತಿನಿಧ್ಯತೆ : ಬಿ.ಜೆ ಪಾಟೀಲ

  ವಿಜಯಪುರ : ಸಮಸಮಾಜ ಕಟ್ಟಲು, ಸಂವಿಧಾನದಲ್ಲಿ ಮೂಲಭೂತ ಹಕ್ಕಗಳ ಬಗ್ಗೆ ಮಾತನಾಡುವಾಗ ಮೂರೂ ಬಿಂದುಗಳು ( Article 15, …

ಲಿಂಗಾಯತ–ವೀರಶೈವರಿಗೆ ಶೇ 16 ಮೀಸಲಾತಿ ನೀಡಿ: ಶಿವಮೂರ್ತಿ ಮುರುಘಾ ಶರಣರು

  ಚಿತ್ರದುರ್ಗ: ಜಾತಿ, ಉಪಜಾತಿಗೆ ಒಂದೊಂದು ವಿಧವಾದ ಮೀಸಲಾತಿ ನೀಡುವ ಬದಲು ಲಿಂಗಾಯತ–ವೀರಶೈವ ಸಮುದಾಯಕ್ಕೆ ಶೇ 16ರಷ್ಟು ಮೀಸಲಾತಿಯ ನಿಗದಿಪಡಿಸುವುದು …

Leave a Reply

Your email address will not be published. Required fields are marked *

error: Content is protected !!