Breaking News
Home / featured / ಕರೋನ ಗೆದ್ದು ಬಂದ ಕನ್ನಡಿಗ ನೀರಜ್ ಪಾಟೀಲ

ಕರೋನ ಗೆದ್ದು ಬಂದ ಕನ್ನಡಿಗ ನೀರಜ್ ಪಾಟೀಲ

ಬೆಂಗಳೂರು: ಲಂಡನ್ನಿನಲ್ಲಿರುವ ಕನ್ನಡಿಗ ವೈದ್ಯ ಡಾ. ನೀರಜ್ ಪಾಟೀಲ್ ಕರೊನಾ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿದ್ದಾರೆ.

ರಾಷ್ಟ್ರೀಯ ಆರೋಗ್ಯ ಸೇವೆಯ (ಎನ್​ಎಚ್​ಎಸ್) ಅಪಘಾತ ಮತ್ತು ತುರ್ತು ಸೇವೆಯ ಕನ್ಸಲ್ಟೆಂಟ್ ಆಗಿರುವ ನೀರಜ್ ಪಾಟೀಲ್, ಏ.8ರ ಸುಮಾರಿಗೆ ಕರೊನಾ ಸೋಂಕಿಗೆ ಒಳಗಾಗಿದ್ದರು. ಇದೀಗ ಸೋಂಕಿನಿಂದ ಮುಕ್ತವಾಗಿದ್ದು, 14 ದಿನಗಳ ಕ್ವಾರಂಟೈನ್ ಅವಧಿಯನ್ನೂ ಮುಕ್ತಾಯಗೊಳಿಸಿದ್ದಾರೆ. ಸೋಮವಾರದಿಂದ ಮತ್ತೆ ಕರ್ತವ್ಯಕ್ಕೆ ಮರಳಲು ಸಿದ್ಧವಾಗಿದ್ದಾರೆ.

ದೇವರ ದಯೆ ಮತ್ತು ಪ್ರಾರ್ಥನೆಯಿಂದಾಗಿ ಕರೊನಾದಿಂದ ಸಂಪೂರ್ಣ ಗುಣಮುಖನಾಗಿದ್ದೇನೆ. ಅನೇಕ ಸೋಂಕಿತನ್ನು ಉಪಚರಿಸುತ್ತಿದ್ದ ನನಗೆ ಪ್ರಾರಂಭದಲ್ಲಿ ಸಣ್ಣ ಜ್ವರ ಬಂತು. ಪ್ರತಿ ಎರಡು ದಿನಕ್ಕೊಮ್ಮೆ ಜಿಮ್ ಹೋಗುತ್ತಿದ್ದ ನನಗೆ ಅದೇಕೊ ನಿಶ್ಯಕ್ತಿ ಕಾಣಿಸಲು ಆರಂಭವಾಗಿತ್ತು. ಕೆಲಸ ಮಾಡಲು ಆಸಕ್ತಿ, ಉತ್ಸಾಹ ಇರುತ್ತಿರಲಿಲ್ಲ. ನಂತರ ತೀವ್ರ ಕೆಮ್ಮು ಆರಂಭವಾಯಿತು. ಮುಖ್ಯವಾಗಿ ನಾಲಿಗೆ ರುಚಿಯನ್ನು ಕಳೆದುಕೊಂಡಿತು.

ಸೋಂಕು ತಗುಲಿದೆ ಎಂಬ ವಿಚಾರ ತಿಳಿದ ಕೂಡಲೆ ಒಮ್ಮೆ ಭಯವಾಯಿತು. ಜ್ವರದ ತೀವ್ರತೆಗೆ ಬದುಕುವುದೇ ಇಲ್ಲ ಎನ್ನುವಂತಾಗಿತ್ತು. ಒಮ್ಮೆ ಪ್ಯಾರಾಸಿಟಮಲ್ ತೆಗೆದುಕೊಂಡರೆ ತೀವ್ರ ಬೆವರು ಬಂದು 5-6 ಗಂಟೆ ಸರಿಯಾಗಿರುತ್ತಿತ್ತು. ಮತ್ತೆ ಜ್ವರ ಹೆಚ್ಚುತ್ತಿತ್ತು. ಆಸ್ಪತ್ರೆಯಲ್ಲಿ ಪ್ರಮುಖವಾಗಿ Hydroxychloroquine, azithromycin, amoxicillin ಅನ್ನು ಪ್ರತಿನಿತ್ಯ 4 ಬಾರಿ 1 ಗ್ರಾಂ ಪ್ಯಾರಾಸಿಟಮಲ್ ಔಷಧದಿಂದ ವೈದ್ಯರು ಉಪಚರಿಸಿದ್ದರು. ಜತೆಗೆ ಯಥೇಚ್ಚ ನೀರು ಸೇವಿಸುವುದರ ಮೂಲಕ ಗುಣಮುಖರಾಗಿಸಿದ್ದಾರೆ. ಆಸ್ಪತ್ರೆಯಲ್ಲಿ ಎರಡು ದಿನ ಇದ್ದು, ನಂತರ 5 ದಿನ ಮನೆಯಲ್ಲೇ ಸಂಪೂರ್ಣ ಕ್ವಾರಂಟೈನ್ ಆದೆ. 7 ದಿನಕ್ಕೆ ಗುಣಮುಖನಾಗಿ ನಂತರ 14 ದಿನ ಕ್ವಾರಂಟೈನ್ ಮುಂದುವರಿಸಿದೆ. ಮನೆಯವರು ಆಹಾರ ತಯಾರಿಸಿ ಬಾಗಿಲಲ್ಲಿ ತಂದಿಡುತ್ತಿದ್ದರು. ಟಿವಿ, ಲ್ಯಾಪ್​ಟಾಪ್, ಇಂಟರ್ನೆಟ್, ನೆಟ್​ಫ್ಲಿಕ್ಸ್​ನಲ್ಲಿ ಸಿನಿಮಾ ನೋಡುವುದು, ಹಾಡುಗಳನ್ನು ಕೇಳುವುದರ ಮೂಲಕ ಮಾನಸಿಕ ಸದೃಢತೆ ಕಾಪಾಡಿಕೊಂಡೆ. ಎಲ್ಲರೂ ಕೈ ಸ್ವಚ್ಛವಾಗಿಟ್ಟುಕೊಳ್ಳಬೇಕು. ಕೈನಿಂದ ಆಗಾಗ್ಗೆ ಮೂಗು, ಕಣ್ಣು ಮುಟ್ಟಿಕೊಳ್ಳುವ ಸಾಮಾನ್ಯ ಅಭ್ಯಾಸ ಬಿಡಬೇಕು. ಎಲ್ಲರಿಗೂ ಮನೆಯಲ್ಲಿ ಪ್ರತ್ಯೇಕ ಕೊಠಡಿ, ಶೌಚಾಲಯ, ಮನರಂಜನೆ ವ್ಯವಸ್ಥೆ ಭಾರತದಲ್ಲಿ ಸಾಕಷ್ಟು ಜನರಿಗೆ ಇರುವುದಿಲ್ಲ. ಅಂಥ ಸ್ಥಿತಿಯಲ್ಲಿ ಕರೊನಾ ನಿಯಂತ್ರಣ ಕಷ್ಟವಾಗುತ್ತದೆ ಎಂದು “ನೀರಜ್ ಪಾಟೀಲ್” ಕರೋನ ಸಂಕಷ್ಟ ಸಮಯದ ಬಗ್ಗೆ ಅನುಭವ ಹಂಚಿಕೊಡ್ಡಿದ್ದಾರೆ.





About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ನ. 22 ರಂದು ಡಾ. ಹೆಚ್.ಆರ್.ಗಿರಿಯಾಲ ಅವರಿಗೆ ನುಡಿನಮನ

ಚನ್ನಮ್ಮನ ಕಿತ್ತೂರು: ಸಮೀಪದ ಬೈಲೂರು ಗ್ರಾಮದ ಖ್ಯಾತ ವೈದ್ಯ ಡಾ ಹಣಮಂತ ಆರ್ ಗಿರಿಯಾಲ ಅವರು ಕಳೆದ ಸೆಪ್ಟೆಂಬರ್ 30 …

ಲಿಂಗಾಯತ ಧರ್ಮದ ಹೋರಾಟ ಸರಣಿ-2

  ಲಿಂಗಾಯತ ಧರ್ಮದ ಮಠಾಧೀಶರ ನಿಯೋಗ ಮುಖ್ಯಮಂತ್ರಿಗೆ ಭೇಟಿ ಮಾಡಬಾರದೇಕೆ? ಲಿಂಗಾಯತ ಧರ್ಮದ ಹೋರಾಟದಲ್ಲಿ ಮುಂಚೂಣಿ ಸ್ಥಾನ ವಹಿಸಿ ಅತ್ಯಂತ …

ಸಾಮಾಜಿಕ ಪ್ರಾತಿನಿಧ್ಯತೆ : ಬಿ.ಜೆ ಪಾಟೀಲ

  ವಿಜಯಪುರ : ಸಮಸಮಾಜ ಕಟ್ಟಲು, ಸಂವಿಧಾನದಲ್ಲಿ ಮೂಲಭೂತ ಹಕ್ಕಗಳ ಬಗ್ಗೆ ಮಾತನಾಡುವಾಗ ಮೂರೂ ಬಿಂದುಗಳು ( Article 15, …

ಲಿಂಗಾಯತ–ವೀರಶೈವರಿಗೆ ಶೇ 16 ಮೀಸಲಾತಿ ನೀಡಿ: ಶಿವಮೂರ್ತಿ ಮುರುಘಾ ಶರಣರು

  ಚಿತ್ರದುರ್ಗ: ಜಾತಿ, ಉಪಜಾತಿಗೆ ಒಂದೊಂದು ವಿಧವಾದ ಮೀಸಲಾತಿ ನೀಡುವ ಬದಲು ಲಿಂಗಾಯತ–ವೀರಶೈವ ಸಮುದಾಯಕ್ಕೆ ಶೇ 16ರಷ್ಟು ಮೀಸಲಾತಿಯ ನಿಗದಿಪಡಿಸುವುದು …

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಡಾ. ತೋಂಟದ ಸಿದ್ಧರಾಮ ಶ್ರೀಗಳ ಆಕ್ಷೇಪ

  ಗದಗ: ಸರ್ಕಾರ ತರಾತುರಿಯಲ್ಲಿ ಲಿಂಗಾಯತ ವೀರಶೈವ ಅಭಿವೃದ್ಧಿ ನಿಗಮ ಘೋಷಿಸಿದ್ದು, ಇದಕ್ಕೆ ಯಾವುದೇ ಗೊತ್ತು ಗುರಿಯಾಗಲಿ, ಸ್ಪಷ್ಟತೆಯಾಗಲಿ ಇಲ್ಲ …

Leave a Reply

Your email address will not be published. Required fields are marked *

error: Content is protected !!