Breaking News
Home / featured / ಮಧ್ಯಪಾನ ಮಾರಾಟ ಸಂಪೂರ್ಣ ನಿಷೇಧಿಸಿ : ಬಸವಪ್ರಭು ಸ್ವಾಮೀಜಿ ಕಲ್ಯಾಣ

ಮಧ್ಯಪಾನ ಮಾರಾಟ ಸಂಪೂರ್ಣ ನಿಷೇಧಿಸಿ : ಬಸವಪ್ರಭು ಸ್ವಾಮೀಜಿ ಕಲ್ಯಾಣ

ದೂಮಪಾನದಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳು

ಬಸವಕಲ್ಯಾಣ: ಸರಕಾರಗಳು ಇಬ್ಬದಿಯ ನೀತಿ ಅನುಸರಿಸುವುದು ಯಾಕೆ..? ಮಗುವನ್ನು ಚಿವುಟಿ ತೊಟ್ಟಿಲು ತೂಗುವ ನೀತಿಗೆ ಏನೆನ್ನಬೇಕು.

ಕೊರೋನಾದ ಕರಾಳ ಛಾಯೆಯಿಂದ ಹೊರಬರಲಾಗದೆ, ಮದ್ಯಮ ಮತ್ತು ಬಡ ಜನತೆ ಕಂಗಾಲಾಗಿದ್ದಾರೆ‌. ದಿನನಿತ್ಯಲೂ ಕುಡಿದು ಬಂದು ಮನೆ ಕುಟುಂಬದ ನೆಮ್ಮದಿ ಹಾಳು ಮಾಡುತ್ತಿದ್ದ ತಮ್ಮ ಗಂಡಂದಿರ, ಮಕ್ಕಳ ವರ್ತನೆಗೆ ರೋಷಿ ಹೋಗಿದ್ದ ಜನತೆಗೆ ಲಾಕ್ ಡೌನ್ ಪರಿಣಾಮ ಮಧ್ಯಪಾನ ನಿಷೇದದಿಂದ ತುಸು ನಿರಾಳತೆ ಅವರಲ್ಲಿತ್ತು. ಕೆಲವರು ಜೀವನದ ಸತ್ಯ ತಿಳಿದು ಶಾಶ್ವತವಾಗಿ ಬಿಡಲು ಮನಸ್ಸು ಮಾಡಿದ್ದರು. ಆದರೆ ಸರಕಾರಗಳು ನೆಮ್ಮದಿಯ ದೇಹಕ್ಕೆ ಬೆಂಕಿ ಹಚ್ಚಿ ಎಣ್ಣೆ ಸುರಿಯಲು ಯೋಜನೆ ಹಾಕಿಕೊಂಡು ರಾತ್ರೋರಾತ್ರಿ ಮಧ್ಯಪಾನ ಜಾರಿಗೊಳಿಸುವುದು ಯಾವ ನ್ಯಾಯ?.

ಜನರ ಆರೋಗ್ಯಕ್ಕಿಂತ ಆದಾಯವೇ ಮುಖ್ಯವಾಯಿತಾ..? ಕೊರೋನಾ ಭೀತಿಯಲ್ಲಿ ಲಾಕ್ ಡೌನಾಗಿ ಮನೆಯಲ್ಲಿ ಕುಳಿತ ಜನ ಹಸಿವು ತುಂಬಿಸಲು ಮುಂದೇನು ಮಾಡಬೇಕೆಂದು ಚಿಂತಾಕ್ರಾಂತರಾಗಿರುವಾಗ, ಆ ಚಿಂತೆಯಲ್ಲಿ ಸಾಲ ಮಾಡಿ ಎಣ್ಣೆ ಹೊಡೆದು ಚಿತೆಗೆ ರೆಡಿ ಮಾಡಿಸಲು ಮಧ್ಯಪಾನ ಮಾರಾಟಕ್ಕೆ ಅನುವು ಮಾಡಿಕೊಟ್ಟಿರುವುದು ಯಾವ ಮಾನವೀಯತೆ?. ಹಸಿವು, ಸಾಲದ ಭಾದೆಯಿಂದ ಸಾಯುವುದಕ್ಕಿಂತ ಕೊರೋನಾ ರೋಗಕ್ಕೆ ತುತ್ತಾಗಿ ಸಾಯುವುದು ಎಷ್ಟೋ ವಾಸಿ.

ಹಾಗಾದರೆ ಲಾಕ್ ಡೌನ್ ತೆಗೆದುಬಿಡಿ. ಮಧ್ಯಪಾನದ ಮೇಲೆ ಆಸೆ, ಜನಗಳ ಮೇಲೆ ಪ್ರೀತಿ ಇಟ್ಟುಕೊಂಡು ಮಾಡುವ ಲಾಕ್ ಡೌನಗೆ ಏನು ಅರ್ಥ ಇದೆ. ನಿಮ್ಮ ನೀತಿಯಿಂದ ಬಡ
ಕುಟುಂಬದ ಹೆಣ್ಣುಮಕ್ಕಳ ಪರಿಸ್ಥಿತಿ ಏನಾಗಬೇಡ ಎಂಬುದನ್ನು ಸರಕಾರಗಳು ಅರಿಯದೇ ಹೋದರೆ, ಬೇಲಿಯೇ ಎದ್ದು ಹೊಲವ ಮೆಯ್ದದಂತೆ ಅಲ್ಲವೆ?.

ಮಧ್ಯಪಾನದ ಮತ್ತಿನಲ್ಲಿ ಇರುವವರು ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಾರೆಯೇ,? ಸರಕಾರದ ಅಧಿಸೂಚನೆಗಳನ್ನು ಪಾಲಿಸುತ್ತಾರೆಯೇ? ಏನಿದು ಹುಚ್ಚು ಸಾಹಸ. ದಯವಿಟ್ಟು ಸರಕಾರಗಳು ಮಧ್ಯಪಾನ ಮಾರಾಟಕ್ಕೆ ಅನುವು ಮಾಡಿಕೊಡಬಾರದೆಂಬ ಕಳಕಳಿ ನಮ್ಮದು.

ಹಾಗೇನಾದರೂ ಜಾರಿಗೆ ‌ಬಂದರೆ, ನಾಗರಿಕ ಸಮಾಜ, ಮಠಾಧೀಶರು, ಬಡ ಹೆಣ್ಣುಮಕ್ಕಳು, ಧಾರ್ಮಿಕ ಮುಖಂಡರು ಧ್ವನಿ ಎತ್ತಿ ಪ್ರತಿಭಟಿಸಬೇಕು. ನಾನಂತೂ ತೀವ್ರವಾಗಿ ಖಂಡಿಸುತ್ತೇನೆ. ಮಧ್ಯಪಾನ ಮಾರಾಟಕ್ಕೆ ಅವಕಾಶ ಬೇಡ. ಬಡ ಜನತೆಗೆ ಹೊಟ್ಟೆ ತುಂಬಾ ಊಟ, ಅವರ ಮುಂದಿನ ಜೀವನದ ಬದುಕಿಗೆ ಭರವಸೆ ನೀಡಬೇಕು. ಆ ನಿಟ್ಟಿನಲ್ಲಿ ಸರಕಾರಗಳು ಚಿಂತನೆ ನಡೆಸಬೇಕು. ಆದಾಯದ ಮೂಲಗಳು ಸಂಗ್ರಹ ಮಾನವನ ಜೀವನದ ಭವಿಷ್ಯವನ್ನು ಹಾಳು ಮಾಡವಂತಿರಬಾರದು.
“ಸರಕಾರಗಳು ಆದಾಯಕ್ಕೆ ಪರ್ಯಾಯ ಮಾರ್ಗ ಹುಡುಕಿ…. ಬಡ ಜನರ ಜೀವನ ಉಳಿಸಿ”.

ಪೂಜ್ಯ ಶ್ರೀ ಸದ್ಗುರು ಬಸವಪ್ರಭು ಸ್ವಾಮೀಜಿ ಬಸವಕಲ್ಯಾಣ

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಬಡತನದ ಬೇರು ಕತ್ತರಿಸುವ ಕಾರ್ಯ ಮಾಡಿದವರು ಬಸವಾದಿ ಶರಣರು

  ಗಜೇಂದ್ರಗಡ: ಸಮಾಜವನ್ನು ಕಾಡುವ ಬಡತನದ ಬೇರನ್ನು ಕತ್ತರಿಸುವ ಕಾರ್ಯವನ್ನು ಬಸವಾದಿ ಶರಣರು ತಮ್ಮ ನಡೆ ನುಡಿಯ ಮೂಲಕ ಹೇಳಿ …

Leave a Reply

Your email address will not be published. Required fields are marked *

error: Content is protected !!