Breaking News
Home / featured / ಮದ್ಯ ನಿಷೇಧದಿಂದ ಶಾಶ್ವತ ನೆಮ್ಮದಿ: ಕೃಷ್ಣ ಭಟ್

ಮದ್ಯ ನಿಷೇಧದಿಂದ ಶಾಶ್ವತ ನೆಮ್ಮದಿ: ಕೃಷ್ಣ ಭಟ್

ಬೆಳಗಾವಿ : ಮದ್ಯ ಮಾರಾಟ ತಡೆಯುವಂತೆ ತೋಂಟದಾರ್ಯ ಮಠದ ಸಿದ್ದರಾಮ ಸ್ವಾಮಿಗಳು ನೀಡಿರುವ ಹೇಳಿಕೆಗೆ ವಿಶ್ವಹಿಂದೂ ಪರಿಷತ್ ಪ್ರಮುಖ ಕೃಷ್ಣ ಭಟ್ ಪ್ರತಿಕ್ರಿಯೆ ನೀಡಿದ್ದಾರೆ.

 ಕೃಷ್ಣ ಭಟ್ ಅವರ ಪ್ರತಿಕ್ರಿಯೆ:

 ಮಧ್ಯ ನಿಷೇಧದ ತಮ್ಮ ನಿಲುವಿಗೆ ನನ್ನ ಸಂಪೂರ್ಣ ಸಹಮತವಿದೆ.  ಕೊರೋನಾ ಮಹಾಮಾರಿಯನ್ನು ತಡೆಯಲು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಸರ್ವರೀತಿಯ ಪ್ರಯತ್ನ ಮಾಡುತ್ತಿರುವುದು ಸಂತೋಷದ ಸಂಗತಿ. ದಿಲ್ಲಿಗೆ ತಬ್ಲಿಕ್  ಹೋದವರು ಸರಿಯಾಗಿ ಚಿಕಿತ್ಸೆಗೆ ಸಹಕಾರ ಕೊಟ್ಟಿದ್ದರೆ ಈವರೆಗೆ ಯಾವಾಗಲೋ ಭಾರತ ಕೊರೋನಾದಿಂದ ಮುಕ್ತವಾಗುತ್ತಿತ್ತು.
ಪ್ರಧಾನಿಯವರು ತೆಗೆದುಕೊಂಡ  ಮುನ್ನೆಚ್ಚರಿಕೆಯನ್ನು ಭಾರತದ ಬಹುಪಾಲು ಜನರು ತುಂಬಾ ಗೌರವದಿಂದ, ಆದರದಿಂದ ಎಷ್ಟೇ ಕಷ್ಟ ಆದರೂ ದೇಶದ ಒಳಿತಿಗಾಗಿ ಸ್ವಂತ ಆರೋಗ್ಯ ಕಾಪಾಡಿಕೊಳ್ಳುವ ಸಲುವಾಗಿ ಸಹಕರಿಸಿದ ಪರಿ ಜಗತ್ತೇ ಮೆಚ್ಚುವಂತೆ ಮಾಡಿದೆ. ಇದರಲ್ಲಿ ಪ್ರತಿ ನಿತ್ಯ ದುಡಿದರೆ ಮಾತ್ರ ಹೊಟ್ಟೆ ತುಂಬಿಸಿಕೊಳ್ಳಲು ಕಷ್ಟಪಡುವ,  ಬಡವರು, ಕೂಲಿಕಾರರು, ಎಲ್ಲಾ ವೃತ್ತಿ  ಬಾಂಧವರು ಪಟ್ಟ ಕಷ್ಟ ಅಷ್ಟಿಷ್ಟಲ್ಲ.
ಇಡೀ ಸಮಾಜ ಒಂದಾಗಿ, ಇಡೀ ದೇಶ ಒಂದಾಗಿ, ರಾಜ್ಯ ಸರಕಾರ, ಕೇಂದ್ರ ಸರಕಾರ, ವೈದ್ಯರು, ಪೋಲೀಸರು, ಆಶಾಕಾರ್ಯಕರ್ತರು, ಪೌರ ಕಾರ್ಮಿಕರ  ಸೇವೆ, ಸಮಸ್ತ ಜನಸಮುದಾಯ ಜಾತಿ ಭಾಷೆ, ಪ್ರಾಂತ, ದೇಶ, ಪರದೇಶ ನೋಡದೆ ಪರಸ್ಪರ ಕೊಟ್ಟ ಸಹಕಾರ , ತ್ಯಾಗ, ಯಾರೂ ಉಪವಾಸ ಬೀಳದಂತೆ ಆಹಾರ ಸಾಮಗ್ರಿ, ಔಷಧಿ, ಮಾಸ್ಕ್, ವೈದ್ಯಕೀಯ ಕಿಟ್ ವಿತರಣೆ ಮಾಡಿದ ರೀತಿ, ಬೇರೆ  ಬೇರೆ ರೀತಿ ಸಹಾಯ ಮಾಡಿದ ಪರಿ ಎಂದೂ ಮರೆಯಲಾರದ ಇತಿಹಾಸ ನಿರ್ಮಾಣ ಮಾಡಿದೆ.
ಇಂತಹ ಸಂದರ್ಭದಲ್ಲಿ ಏನು ಇದೆಯೋ ಅದರಲ್ಲಿ ಕುಟುಂಬಕ್ಕೆ ಅಡಿಗೆ ಮಾಡಿ ಉಣಬಡಿಸಿದ ಆ ಕರುಣಾಮಯಿ  ತಾಯಂದಿರನ್ನು  ಆ ಪರಮಾತ್ಮನು ಕೂಡ ಮರೆಯಲಾರ.
ಈಗ ಹೊಸ ಬದುಕು ಕಟ್ಟಿಕೊಳ್ಳುವ ಸಮಯ. ಹಸಿವು ದೂರ ಮಾಡಿ ಹಸಿದವರಿಗೆ ಅನ್ನ ನೀಡುವ ಸಮಯ. ಈಗ ಆ ಪರಿ ಮದ್ಯದ ಅಂಗಡಿ ತರೆಯಲು ಅವಸರ ಏಕೆ ಎಂದೆ ಅರ್ಥವಾಗುತ್ತಿಲ್ಲ.  ಇಂಥ ಕೊರೋನಾ ಸಂದರ್ಭದಲ್ಲಿ ಮಧ್ಯ ಮಾರಾಟ ನಿಂತ ಪರಿಣಾಮ ಆ ತಾಯಿಂದಿರು  ಮಮತೆಯಿಂದ ಬೆಳೆಸಿದ ಮಕ್ಕಳು ಮದ್ಯ ವ್ಯಸನದಿಂದ  ಸ್ವಲ್ಪ ದಿನವಾದರೂ ದೂರ ಇದ್ದಾಗ ಆ ಮನೆಯ ಆನಂದ, ಶಾಂತಿ  ನೋಡಿದ್ದಾರೆ ಈ ನಾಡಿನ ಎಷ್ಟೋ ಪೂಜ್ಯರು, ಸಂತರು, ಮಠಾಧೀಶರು, ಸಜ್ಜನರು.
ಮದ್ಯ ವ್ಯಸನದಿಂದ ಸಂಸಾರ ಮೂರಾಬಟ್ಟೆಯಾಗಿ, ಆ ತಾಯಂದಿರು ಕಣ್ಣೀರಿಡುವ ದೃಶ್ಯ ನೋಡಿದ ಸಮಸ್ತ  ಕಷ್ಟ ಅನುಭವಿಸುವ ಕುಟುಂಬಗಳು ಸಹಜವಾಗಿ ಮದ್ಯ ಮಾರಾಟ ಶಾಶ್ವತ ನಿಲ್ಲಲಿ ಎನ್ನುವುದು ಅವರ ಅಂತರಾಳದ ಭಾವನೆ. ಸಹಜವಾಗಿ ಸಂತರಂತೆ ತಮ್ಮ ಜೀವನ ನಡೆಸುವ  ಪಂತ  ಪ್ರಧಾನಿ , ಸಜ್ಜನ ಮುಖ್ಯಮಂತ್ರಿ ನಮಗೆ ಸಿಕ್ಕರುವಾಗ ಸಹಜವಾಗಿ ನೆಮ್ಮದಿಯಾಗಿ ಬದುಕು ಸಾಗಿಸಲು  ಮದ್ಯ ಶಾಶ್ವತ ನಿಷೇಧದಿಂದ ತಾಯಿಂದರಿಗೆ   ನೆಮ್ಮದಿ ಸಿಗಬಹುದು ಎಂಬುದು ಅಭಿಪ್ರಾಯ.
ಎಷ್ಟೋ ವಿಷಯಗಳಿಗೆ ಅಭಿಪ್ರಾಯ, ಸರ್ವೇ ಮಾಡುತ್ತಾರೆ. ಮದ್ಯಪಾನದ ವಿಷಯ ಕೂಡ ಸರ್ವೇಮಾಡಿ ಬಹು ಜನರ ಅಭಿಪ್ರಾಯ, ಹೆಣ್ಣು ಮಕ್ಕಳ ಅಭಿಪ್ರಾಯ ಕೂಡ ಕ್ರೋಢೀಕರಿಸಿದಾಗ ನಿಜವಾಗಿ ಮದ್ಯ ನಿಷೇಧದಿಂದ  ಸಾಮಾಜಿಕ ಲಾಭ ಎಷ್ಟು, ಹಾನಿ ಎಷ್ಟು ಎಂದು  ಆಂತರಿಕವಾಗಿ ತಿಳಿಯಬಹುದು. ಆಗ ಸರಿಯಾದ ನಿರ್ಧಾರ ತೆಗೆದು ಕೊಳ್ಳಲು ಸಹಾಯಕವಾಗಬಹುದು.
ಕೃಷ್ಣ ಭಟ್, ವಿಶ್ವ ಹಿಂದು ಪರಿಷತ್, ಬೆಳಗಾವಿ

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

‘ಶರಣಾರ್ಥಿ’ ಗುರು ಪ್ರವೇಶ..!

  ಗಜೇಂದ್ರಗಡದ ಶರಣದಂಪತಿಗಳು ನೂತನ ಮನೆಗೆ ‘ಶರಣಾರ್ಥಿ’ ಎಂದು ವಿಶಿಷ್ಟ ರೀತಿಯಲ್ಲಿ ಮನೆ ನಾಮಕರಣ ಮಾಡಿ ಗುರುಪ್ರವೇಶ, ಅನುಭಾವ ಹಾಗೂ …

Leave a Reply

Your email address will not be published. Required fields are marked *

error: Content is protected !!