Breaking News
Home / featured / ಅನುಭಾವದೆಡೆಗೆ- ಪುಸ್ತಕ ಪರಿಚಯ

ಅನುಭಾವದೆಡೆಗೆ- ಪುಸ್ತಕ ಪರಿಚಯ

ವಿನೋದ ಆರ್ ಪಾಟೀಲ ಚಿಕ್ಕಬಾಗೇವಾಡಿ: ಅನುಭಾವವಿಲ್ಲದ ಭಕ್ತಿ  ಅರಿವಿಂಗೆ ಬಾರದು ಅನುಭಾವವಿಲ್ಲದೆ ಸಂಗ ಸಮಸುಖಕ್ಕೆ ನಿಲುಕದುಅನುಭಾವವಿಲ್ಲದೆ ಪ್ರಸಾದ ಪರಿಣಾಮ ಕೊಡದು ಅನುಭಾವಿಲ್ಲದೆ ಏನೇನೂ ಅರಿಯಬಾರದು ತನ್ನಲ್ಲಿ ಸನ್ನಿಹಿತವುಳ್ಳಡೆ ಶಿವಶರಣರ ಸಂಗವೇತಕ್ಕೆನಲುಂಟೇ                ಕೂಡಲಸಂಗಮದೇವಾ ನಿಮ್ಮ ಅನುಭಾವ ಮಾತಿನ ಮಥನ ನುಡಿಯಬಹುದೇ ಪ್ರಭುವೇ ?

ಅನುಭಾದೆಡೆಗೆ ಎನ್ನುವ ಈ ನಾಟಕ ಈ ಮೇಲಿನ ವಚನದೊಂದಿಗೆ ಪುಟದೆರೆದುಕೊಳ್ಳುತ್ತದೆ. ಹೌದು ಅಣುಭಾವದ ಮಹತ್ವವನ್ನು ಇಲ್ಲಿ ಕಾಣಬಹುದಾಗಿದೆ ೧೨ ನೇಯ ಶತಮಾನದಲ್ಲಿ ಶರಣರು ಈ ಅನುಭಾದ ಮಹತ್ವವನ್ನು ಲೋಕಕ್ಕೆ ಸಾರಿದ್ದಾರೆ. ಸಮಸಮಾಜದ ಕನಸು ಕಂಡ ಶರಣರು ಹಲವು ಆದರ್ಶಗಳನ್ನು ನೀಡಿದ್ದಾರೆ. ನಿವೃತ ಉಪನ್ಯಾಸಕರಾದ ಶ್ರೀ ಎನ್. ಬಿ ಮಲಕಣ್ಣವರ ಗುರುಗಳು ಶರಣರು ಕಂಡ ಸಮಾಜವನ್ನು ಇಂದು ಡಾ.ನೀರಜ್ ಪಾಟೀಲರು ನನಸಾಗಿಸಲು ಕಾಯಕದ ಜೊತೆ ಶರಣರ ತತ್ವವನ್ನು ವಿಶ್ವಕ್ಕೆ ತೋರಿಸಿದ್ದಾರೆ. ಈ ವಿಷಯವನ್ನು ನಾಟಕದಲ್ಲಿ ನಮಗೆ ಕಟ್ಟಿಕೊಟ್ಟಿದ್ದಾರೆ.

ನಾಟಕದಲ್ಲಿ ಹನ್ನೆರಡನೇಯ ಶತಮಾನದ ಹಾಗೂ ವರ್ತಮಾನದ ಕೆಲವು ವಿಚಾರಗಳನ್ನು ಹೇಳಲಾಗಿದೆ.ನಮ್ಮ ಉತ್ತರ ಕರ್ನಾಟಕದ ಆಡುಭಾಷೆಯಲ್ಲಿ ನಾಟಕದ ಭಾಷೆ ಬಂದಿರುವುದು ನಾಟಕದ ಸೊಗಡನದನ್ನು ಹೆಚ್ಚಿಸಿದೆ. ಅಲ್ಲಲ್ಲಿ ಸಂಭಾಷಣೆಯ ನಡುವೆ ಬಂದು ಹೋಗುವ ವಚನಗಳು ನಾಟಕದ ತೂಕವನ್ನು ಹೆಚ್ಚಿಸಿವೆ.ಲಂಡನ್ ನಗರದ ಥೇಮ್ಸ್ ನದಿಯ ತಟದಲ್ಲಿ ಬಸವೇಶ್ವರ ಮೂರ್ತಿಯನ್ನು ಸ್ಥಾಪಿಸಲು ಕಾರಣೀಭೂತರಾದ ಡಾ.ನೀರಜ್ ಪಾಟೀಲರ ಕಾರ್ಯ ಈ ನಾಟಕದ ಮೂಲವಸ್ತುವಾಗಿದೆ. ಕಲಬುರ್ಗಿಯ ಓರ್ವ ರೈತ ಕುಟುಂಬದ ವ್ಯಕ್ತಿ ದೃಢ ಸಂಕಲ್ಪದಿಂದ ವಿದ್ಯಾರ್ಜನೆ ಮಾಡಿ ವೈದ್ಯ ವೃತ್ತಿಯನ್ನು ಲಂಡನ್ ನಗರದಲ್ಲಿ ಮಾಡುತ್ತಾ ಸಾಮಾಜಿಕ ಕಳಕಳಿಯನ್ನು ತೋರಿಸಿದ್ದಾರೆ.

ಅಂತಹ ವ್ಯಕ್ತಿ ಲಂಡನ್ ನಗರದ ಮೇಯರ್ ಆಗಿ ೧೨ ನೇಯ ಶತಮಾನದ ಅನುಭವ ಮಂಟಪದ ರೂವಾರಿಯಾದ ಬಸವೇಶ್ವರರ ಮೂರ್ತಿಯನ್ನು ಸ್ಥಾಪಿಸುವುದು ಶ್ಲಾಘನೀಯ ವಿಷಯವನ್ನು ತಮ್ಮ ನಾಟಕದಲ್ಲಿ ಕಟ್ಟಿಕೊಟ್ಟಿದ್ದಾರೆ.
ನಾಟಕದಲ್ಲಿ ಹಲವು ವಿಚಾರಗಳು ಬಂದು ಹೋಗುತ್ತವೆ. ಮುಖ್ಯವಾಗಿ ಮಕ್ಕಳನ್ನು ಅಕ್ಷರಸ್ಥರನ್ನಾಗಿ ಮಾಡುವುದರಿಂದ ಏನೇನು ಲಾಭವಾಗುತ್ತದೆ.ಎನ್ನುವದನ್ನು ಹಳ್ಳಿಯ ಜನತೆಗೆ ತೋರಿಸಿದ್ದಾರೆ.ನಾಟಕದ ಪ್ರಾರಂಭದಲ್ಲಿಯೇ ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ಕಳುಹಿಸುವ ಸಲುವಾಗಿ ಪಾಲಕರಲ್ಲಿ ಪ್ರಜ್ಞೆ ಮೂಡಿಸುವ ಹಾಗೂ ಮಕ್ಕಳನ್ನು ಶಾಲೆಗೆ ಕರೆತರುವ ತಂತ್ರಗಾರಿಕೆಯನ್ನು ಬಳಸಿಕೊಂಡಿದ್ದಾರೆ. ಇದು ಪ್ರಸ್ತುತವಾಗಿದೆ.

ಅನುಭವ ಮಂಟಪದಲ್ಲಿ ನಡೆಯುವ ಸಂಭಾಷಣೆ ನಾಟಕದಲ್ಲಿ ತುಂಬಾ ಸೊಗಸಾಗಿ ಬಂದಿದೆ. ಸಮಕಾಲೀನ ಎರಡು ಪಾತ್ರಗಳಾದ ಶೆಂಕ್ರೆಪ್ಪ ಮತ್ತು ಮಹದೇವಯ್ಯನ ಪಾತ್ರಗಳ ಮೂಲಕ ಪ್ರಸ್ತುತ ವಿಚಾರಗಳನ್ನು ಹೇಳಿದ್ದಾರೆ. ಅಕ್ಕಮಹಾದೇವಿ ಅಲ್ಲಮಪ್ರಭುಗಳು ಮೋಳಿಗೆ ಮಾರಯ್ಯನವರ ಪಾತ್ರಗಳ ಜೊತೆ ೧೨ ನೇಯ ಶತಮಾನದ ಹಲವು ತಾತ್ವಿಕ ವಿಚಾರಗಳನ್ನು ಸಂಭಾಷಣೆಯ ಮೂಲಕ ನಾಟಕದಲ್ಲಿ ಹೇಳಿದ್ದಾರೆ.ಹೀಗೆ ನಾಟಕ ಓದಿಸಿಕೊಂಡು ಹೋಗುತ್ತಾ ನೀರಜ್ ಪಾಟೀಲರ ಹಾಗೂ ವರದಿಗಾರರ ಸಂಭಾಷಣೆಯೊಂದಿಗೆ ಮುಕ್ತಾಯವಾಗುತ್ತದೆ.ಅನುಭಾವದೆಡೆಗೆ ಶೀರ್ಷಿಕೆ ಹೊತ್ತು ಶರಣರ ನಡೆ,ನುಡಿ,ಆಚಾರ ವಿಚಾರದ ಅಳವಡಿಕೆಯಿಂದ ಪ್ರತಿಯೊಬ್ಬರು ನೀರಜ್ ಪಾಟೀಲರಾಗಬೇಕು ಎನ್ನುವ ಸಂದೇಶವನ್ನು ನಾಟಕ ಹೇಳುತ್ತದೆ.ಉತ್ತಮ ಪುಸ್ತಕಗಳ ಸಾಲಿನಲ್ಲಿ ಅನುಭಾದೆಡೆಗೆ ನಾಟಕ ಕುಳಿತುಕೊಳ್ಳುವ ಎಲ್ಲ ವಿಚಾರಗಳನ್ನು ಹೊಂದಿದೆ.

ಪುಸ್ತಕದ ಪರಿಚಯ
ಲೇಖಕರು : ಎನ್. ಬಿ ಮಲಕಣ್ಣವರ
ನಿವೃತ್ತ ಉಪನ್ಯಾಸಕರು,
ಪ್ರಕಾಶಕರು : ಸ್ನೇಹಾ ಪ್ರಿಂಟರ್ಸ ನಾಗರಭಾವಿ ಬೆಂಗಳೂರು ಮೊಬೈಲ್ ನಂ : +91 97403 39479

ಬೆಲೆ : ೫೦ ರೂಪಾಯಿ

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

‘ಶರಣಾರ್ಥಿ’ ಗುರು ಪ್ರವೇಶ..!

  ಗಜೇಂದ್ರಗಡದ ಶರಣದಂಪತಿಗಳು ನೂತನ ಮನೆಗೆ ‘ಶರಣಾರ್ಥಿ’ ಎಂದು ವಿಶಿಷ್ಟ ರೀತಿಯಲ್ಲಿ ಮನೆ ನಾಮಕರಣ ಮಾಡಿ ಗುರುಪ್ರವೇಶ, ಅನುಭಾವ ಹಾಗೂ …

Leave a Reply

Your email address will not be published. Required fields are marked *

error: Content is protected !!