Breaking News
Home / featured / ಶಾಶ್ವತವಾಗಿ ಮಧ್ಯ ತ್ಯಜಿಸಿರಿ, ಆರೋಗ್ಯ ಐಶ್ವರ್ಯ ಗಳಿಸಿರಿ: ವಿರೇಂದ್ರ ಹೆಗ್ಗಡೆ

ಶಾಶ್ವತವಾಗಿ ಮಧ್ಯ ತ್ಯಜಿಸಿರಿ, ಆರೋಗ್ಯ ಐಶ್ವರ್ಯ ಗಳಿಸಿರಿ: ವಿರೇಂದ್ರ ಹೆಗ್ಗಡೆ

ಧರ್ಮಸ್ಥಳ: ಕೊರೋನಾ ಲಾಕ್ ಡೌನ್ ಕಾರಣದಿಂದಾಗಿ ಮದ್ಯ ಮಾರಾಟ ನಿಷೇಧವಾಗಿತ್ತು. ಇದರಿಂದಾಗಿ ಕಳೆದ 40 ದಿನಗಳಿಂದಲೂ ಕೂಡಾ ಮದ್ಯ ಲಭ್ಯವಿಲ್ಲದೆ ಅದರ ತಂಟೆಗೆ ಹೋಗದೆ ಮದ್ಯವ್ಯಸನಿಗಳು ದಿನಗಳನ್ನು ಕಳೆಯುತ್ತಾ ಬಂದಿದ್ದಾರೆ. ಆದರೆ ಈಗ ಮತ್ತೆ ಮದ್ಯ ಮಾರಾಟ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಯವರಾದ ವೀರೇಂದ್ರ ಹೆಗ್ಗಡೆಯವರು ಮತ್ತೆ ಮದ್ಯಸೇವನೆ ಆರಂಭಿಸುವುದು ಬೇಡ ಜನರಲ್ಲಿ ಮನವಿ ಮಾಡಿದ್ದಾರೆ. ಇಷ್ಟು ದಿನಗಳ ಕಾಲ ಮದ್ಯ ದೊರಕದ ಕಾರಣ, ಮದ್ಯ ಸೇವನೆ ಮಾಡದೆ ಮನೆಗಳಲ್ಲಿ ಸಂತೋಷ, ನೆಮ್ಮದಿ ಹೆಚ್ಚಾಗಿದೆ. ಅನೇಕರ ಆರೋಗ್ಯ ಸುಧಾರಿಸಿದೆ. ಮನೆಯ ಖರ್ಚು ಕಡಿಮೆಯಾಗಿದೆ ಎಂದು ಅವರು ಹೇಳಿದ್ದಾರೆ.

ಅಲ್ಲದೆ ಮದ್ಯ ಸೇವನೆ ಬಿಟ್ಟಿದ್ದರಿಂದ ಯಾವುದೇ ರೀತಿಯ ಕೆಡುಕು ಸಂಭವಿಸಲಿಲ್ಲ. ಹಾಗಿರುವಾಗ ಇದೀಗ ಮತ್ತೊಮ್ಮೆ ಮದ್ಯ ಸೇವನೆ ಯಾಕೆ? ದಯವಿಟ್ಟು ಯಾರೂ ಮದ್ಯ ಸೇವನೆಯನ್ನು ಮತ್ತೆ ಆರಂಭ ಮಾಡಬೇಡಿ ಎಂದು ತಮ್ಮ ಪ್ರಕಟಣೆಯ ಮೂಲಕ ಮನವಿಯನ್ನು ಮಾಡಿಕೊಂಡಿದ್ದಾರೆ.

ಮದ್ಯಸೇವನೆ ಮುಕ್ತ ಸಮಾಜದ ನಿರ್ಮಾಣ ಮಹಾತ್ಮಾ ಗಾಂಧೀಜಿಯವರ ಕನಸಾಗಿತ್ತು. ನಮ್ಮ ಆಶಯವೂ ಕೂಡ ಅದೇ ಎಂದಿದ್ದಾರೆ ಧರ್ಮಸ್ಥಳದ ಧರ್ಮಾಧಿಕಾರಿಯವರು. ಜನರು ಸುಖ ಸಂತೋಷವಾಗಿರಲು ಮದ್ಯಪಾನ ಶಾಶ್ವತವಾಗಿ ತ್ಯಜಿಸುವ ತೀರ್ಮಾನ ಮಾಡಿ ಎಂದು ಜನರಲ್ಲಿ ಹೆಗ್ಗಡೆ ಮನವಿ ಮಾಡಿಕೊಂಡಿದ್ದಾರೆ.

ಹೆಗ್ಗಡೆಯವರ ಮನವಿ ಒಂದು ರೀತಿಯಲ್ಲಿ ಪಾನಮುಕ್ತ ಸಮಾಜಕ್ಕೆ ಅಗತ್ಯವಾಗಿದೆ. ಆದರೆ ಮದ್ಯ ಸೇವನೆಯನ್ನು ಮಾಡುವುದಿಲ್ಲ ಎಂದು ನಿರ್ಧಾರವನ್ನು ಮದ್ಯ ವ್ಯಸನಿಗಳು ಮಾಡಬೇಕಿದೆ. ಆದರೆ ಕೆಲವು ಕಡೆ ಮದ್ಯ ವ್ಯಸನಿಗಳು ಮದ್ಯ ದೊರಕಿಲ್ಲವೆಂದು ಆತ್ಮಹತ್ಯೆ ಕೂಡಾ ಮಾಡಿಕೊಂಡ ಘಟನೆಗಳು ನಡೆದಿವೆ. ಒಟ್ಟಾರೆ ಮದ್ಯಪಾನ ನಿಷೇಧ ಮಾಡಲು ಇದು ಉತ್ತಮ ಸಮಯ ಎಂಬುದು ಕೆಲವರ ಅಭಿಪ್ರಾಯವಾದರೆ, ಕೆಲವರು ಮದ್ಯ ವ್ಯಸನಿಗಳಿಗಾಗಿ ಮದ್ಯ ಮಾರಾಟವನ್ನು ಪುನರಾರಂಭ ಮಾಡುವಂತೆ ಸರ್ಕಾರದ ಮುಂದೆ ಮನವಿ ಕೂಡಾ ಮಾಡಿದ್ದುಂಟು.

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

‘ಶರಣಾರ್ಥಿ’ ಗುರು ಪ್ರವೇಶ..!

  ಗಜೇಂದ್ರಗಡದ ಶರಣದಂಪತಿಗಳು ನೂತನ ಮನೆಗೆ ‘ಶರಣಾರ್ಥಿ’ ಎಂದು ವಿಶಿಷ್ಟ ರೀತಿಯಲ್ಲಿ ಮನೆ ನಾಮಕರಣ ಮಾಡಿ ಗುರುಪ್ರವೇಶ, ಅನುಭಾವ ಹಾಗೂ …

Leave a Reply

Your email address will not be published. Required fields are marked *

error: Content is protected !!