Breaking News
Home / featured / ಅಲ್ಲಮಪ್ರಭು ಎಂದರೆ ಕಲ್ಯಾಣದ ಜ್ಞಾನದ ಬೆಳಕು

ಅಲ್ಲಮಪ್ರಭು ಎಂದರೆ ಕಲ್ಯಾಣದ ಜ್ಞಾನದ ಬೆಳಕು

ಬಸವಣ್ಣನವರು ಪ್ರಭುದೇವರ ಬರುವನ್ನು ಹನ್ನೆರಡು ವರ್ಷಗಳಿಂದ ಕಾಯುತ್ತಿದ್ದರು ಎಂದು ಅವರ ಒಂದು ವಚನದಲ್ಲಿ ಪ್ರಸ್ತಾಪವಾಗಿದೆ. ಅಲ್ಲಮರ ಜ್ಞಾನದ ಹರವು ಬಸವಣ್ಣನವರು ಚೆನ್ನಾಗಿ ತಿಳಿದಿದ್ದರು. ಕಲ್ಯಾಣಕ್ಕೆ ಅಲ್ಲಮರ ಆಗಮನ ಅದೇನು ಅನಿರೀಕ್ಷಿತ ಘಟನೆಯಲ್ಲ. ಅದು ಅಲ್ಲಮ ಮತ್ತು ಬಸವಣ್ಣನವರ ಪೂರ್ವದ ನಂಟು. ಅವರಿಬ್ಬರು ಬಹುಪೂರ್ವದಲ್ಲಿ ಒಮ್ಮೆ ಕೂಡಲಸಂಗಮದಲ್ಲಿ ಭೇಟಿಯಾಗಿರುವ ಸಾಧ್ಯತೆಗಳಿವೆ. ಇತಿಹಾಸಕಾರರು ಅದರ ಮೇಲೆ ಕೆಳಕು ಚೆಲ್ಲಬೇಕಿದೆ. ಕಲ್ಯಾಣಕ್ಕೆ ಅಲ್ಲಮರ ಆಗಮನದಿಂದ ಬಸವಣ್ಣ ಸಂತಸಗೊಂಡ ಪರಿ ಕೆಳಗಿನ ವಚನದಲ್ಲಿ ವ್ಯಕ್ತಗೊಂಡಿದೆ :

” ಕತ್ತಲೆಯ ನುಂಗಿದ ದೀಪದ ಬೆಳಗಿನಂತೆ,
ಕರ್ದಮವನೀಂಟಿದ ಸುಜಲದಂತೆ,
ಮಧುರರಸವನರಿದ ಜಿಹ್ವೆಯಂತೆ,
ಎನ್ನ ಕಂಗಳಿಗೆ ದೃಷ್ಟವಾಗಿ, ಮನಕ್ಕೆ ಮನೋಹರವಾಗಿ
ಕೂಡಲಸಂಗಮದೇವರಲ್ಲಿ
ಪ್ರಭುದೇವರ ಸುಳುಹು ಚಿಹ್ನವಾಯಿತು.”

ಕತ್ತಲೆಯ ನುಂಗಿದ ದೀಪದ ಬೆಳಗಿನಂತೆ, ಕರ್ದಮವನೀಂಟಿದ ಸುಜಲದಂತೆ,

ದೀಪವು ತನ್ನ ಸುತ್ತಲು ನೆರೆದಿದ್ದ ದಟ್ಟ ಕತ್ತಲೆಯನ್ನು ನುಂಗಿಹಾಕುತ್ತದೆ. ನಮಗಂಟಿದ ಕೊಳೆಯು ಶುಭ್ರವಾದ ನೀರು ತೊಳೆಯಬಲ್ಲದು.

ಮಧುರರಸವನರಿದ ಜಿಹ್ವೆಯಂತೆ,

ನಾಲಗೆಯು ಸಿಹಿ ರಸದ ರುಚಿಯನ್ನು ಗುರುತಿಸುವ ಶಕ್ತಿ ಹೊಂದಿದೆ.

ಎನ್ನ ಕಂಗಳಿಗೆ ದೃಷ್ಟವಾಗಿ, ಮನಕ್ಕೆ ಮನೋಹರವಾಗಿ ಕೂಡಲಸಂಗಮದೇವರಲ್ಲಿ ಪ್ರಭುದೇವರ ಸುಳುಹು ಚಿಹ್ನವಾಯಿತು.

ಪ್ರಭುದೇವರ ಆಗಮನವು ನನ್ನ ಕಣ್ಣುಗಳಿಗೆ ಸುಂದರ ದ್ರಶ್ಯವಾಗಿˌ ನನ್ನ ಮನಸ್ಸಿಗೆ ಅಪ್ಯಾಯಮಾನವಾಗಿ ನಾನು ಪ್ರಭುದೇವರಲ್ಲಿ ದೇವರ ಚಿನ್ಹೆ ಕಂಡೆನು ಎನ್ನುತ್ತಾರೆ ಬಸವಣ್ಣ.

ಶರಣ: ಡಾ. ಜೆ ಎಸ್ ಪಾಟೀಲ.

ವಿಜಯಪುರ

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ನ. 22 ರಂದು ಡಾ. ಹೆಚ್.ಆರ್.ಗಿರಿಯಾಲ ಅವರಿಗೆ ನುಡಿನಮನ

ಚನ್ನಮ್ಮನ ಕಿತ್ತೂರು: ಸಮೀಪದ ಬೈಲೂರು ಗ್ರಾಮದ ಖ್ಯಾತ ವೈದ್ಯ ಡಾ ಹಣಮಂತ ಆರ್ ಗಿರಿಯಾಲ ಅವರು ಕಳೆದ ಸೆಪ್ಟೆಂಬರ್ 30 …

ಲಿಂಗಾಯತ ಧರ್ಮದ ಹೋರಾಟ ಸರಣಿ-2

  ಲಿಂಗಾಯತ ಧರ್ಮದ ಮಠಾಧೀಶರ ನಿಯೋಗ ಮುಖ್ಯಮಂತ್ರಿಗೆ ಭೇಟಿ ಮಾಡಬಾರದೇಕೆ? ಲಿಂಗಾಯತ ಧರ್ಮದ ಹೋರಾಟದಲ್ಲಿ ಮುಂಚೂಣಿ ಸ್ಥಾನ ವಹಿಸಿ ಅತ್ಯಂತ …

ಸಾಮಾಜಿಕ ಪ್ರಾತಿನಿಧ್ಯತೆ : ಬಿ.ಜೆ ಪಾಟೀಲ

  ವಿಜಯಪುರ : ಸಮಸಮಾಜ ಕಟ್ಟಲು, ಸಂವಿಧಾನದಲ್ಲಿ ಮೂಲಭೂತ ಹಕ್ಕಗಳ ಬಗ್ಗೆ ಮಾತನಾಡುವಾಗ ಮೂರೂ ಬಿಂದುಗಳು ( Article 15, …

ಲಿಂಗಾಯತ–ವೀರಶೈವರಿಗೆ ಶೇ 16 ಮೀಸಲಾತಿ ನೀಡಿ: ಶಿವಮೂರ್ತಿ ಮುರುಘಾ ಶರಣರು

  ಚಿತ್ರದುರ್ಗ: ಜಾತಿ, ಉಪಜಾತಿಗೆ ಒಂದೊಂದು ವಿಧವಾದ ಮೀಸಲಾತಿ ನೀಡುವ ಬದಲು ಲಿಂಗಾಯತ–ವೀರಶೈವ ಸಮುದಾಯಕ್ಕೆ ಶೇ 16ರಷ್ಟು ಮೀಸಲಾತಿಯ ನಿಗದಿಪಡಿಸುವುದು …

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಡಾ. ತೋಂಟದ ಸಿದ್ಧರಾಮ ಶ್ರೀಗಳ ಆಕ್ಷೇಪ

  ಗದಗ: ಸರ್ಕಾರ ತರಾತುರಿಯಲ್ಲಿ ಲಿಂಗಾಯತ ವೀರಶೈವ ಅಭಿವೃದ್ಧಿ ನಿಗಮ ಘೋಷಿಸಿದ್ದು, ಇದಕ್ಕೆ ಯಾವುದೇ ಗೊತ್ತು ಗುರಿಯಾಗಲಿ, ಸ್ಪಷ್ಟತೆಯಾಗಲಿ ಇಲ್ಲ …

Leave a Reply

Your email address will not be published. Required fields are marked *

error: Content is protected !!