
ಚಂದಪ್ಪ ಚವ್ಹಾಣ್ ಎಂಬಾತ ಪತ್ನಿಯ ಬಳಿ ತೆರಳಿ ಕುಡಿಯಲು ಹಣ ಕೊಡು ಎಂದು ಕೇಳಿದ. ಅದಕ್ಕೆ ಶಾರದಾ ಒಪ್ಪಲಿಲ್ಲ. ಇದೇ ಸಿಟ್ಟಿಗೆ ಆಕೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಹಿಂದೆಯಿಂದ ಬೈಕ್ನಲ್ಲಿ ಗುದ್ದಿ ಪರಾರಿಯಾಗಿದ್ದ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಶಾರದಾರನ್ನು ಸ್ಥಳೀಯರು ಆಸ್ಪತ್ರೆಗೆ ಸೇರಿಸಿದ್ದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಕಳೆದ ಒಂದೂವರೆ ತಿಂಗಳಿಂದಲೂ ಈತ ಕುಡಿಯಲು ಮದ್ಯ ಸಿಗದೆ ಪರದಾಡುತ್ತಿದ್ದ. ಮೊದಲಿನಿಂದಲೂ ಪತ್ನಿ ಜತೆ ಜಗಳವಾಡುತ್ತಿದ್ದ. ಶಾರದಾ ಬೇರೆಯವರ ಮನೆಯ ಕೆಲಸ ಮಾಡಿ ಹಣ ಕೂಡಿಟ್ಟಿದ್ದರು. ನಿನ್ನೆ ಮದ್ಯದ ಅಂಗಡಿ ತೆರೆಯುತ್ತಿದ್ದಂತೆ ಪತ್ನಿಯ ಬಳಿ ಹೋಗಿ ಹಣವನ್ನು ಕೊಡು ಎಂದು ಪೀಡಿಸಿದ್ದಾನೆ. ಆದರೆ ಆಕೆ ಒಪ್ಪಿರಲಿಲ್ಲ.
ಚಂದಪ್ಪನಿಗೆ ಇನ್ನೋರ್ವ ಪತ್ನಿಯೂ ಇದ್ದಾಳೆ. ಆತನನ್ನು ಇಳಕಲ್ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ