Breaking News
Home / featured / ಮದ್ಯ ಮಾರಾಟ ಆರಂಭ: ಮೂರು ದಿನಗಳಲ್ಲಿ ಮೂರು ಕೊಲೆ

ಮದ್ಯ ಮಾರಾಟ ಆರಂಭ: ಮೂರು ದಿನಗಳಲ್ಲಿ ಮೂರು ಕೊಲೆ

ಬೆಂಗಳೂರು: ಮದ್ಯ ಮಾರಾಟ ಆರಂಭವಾದ ಬಳಿಕ ಬೆಂಗಳೂರು ನಗರದಲ್ಲಿ ಕೊಲೆ ಪ್ರಕರಣಗಳು ಹೆಚ್ಚಾಗುತ್ತಿವೆ. ಕಳೆದ ಮೂರು ದಿನಗಳಲ್ಲಿ ಮದ್ಯದ ನಶೆಯಲ್ಲಿ ಮೂರು ಕೊಲೆ ಹಾಗೂ 1 ಕೊಲೆ ಯತ್ನ ಪ್ರಕರಣ ನಡೆದಿದೆ.

ಕೃಷ್ಣರಾಜಪುರದ ಆವಲಹಳ್ಳಿ ಬಳಿ ಮಂಗಳವಾರ ರಾತ್ರಿ ಮದ್ಯದ ಅಮಲಿನಲ್ಲಿ ನಡೆದ ಜಗಳ ಓರ್ವನ ಕೊಲೆಯಲ್ಲಿ ಅಂತ್ಯವಾಗಿದೆ. ಹಂಚರಹಳ್ಳಿಯ ನಿವಾಸಿ ವಿನಯ್ (32) ಕೊಲೆಯಾದ ಯುವಕ. ಸೋಮವಾರ ಹಂಚರಹಳ್ಳಿಯ ಪ್ರಶಾಂತ್, ಮಧು, ರಾಜ್​ಕುಮಾರ್ ಎಂಬುವರ ಜತೆ ವಿನಯ್ ಜಗಳ ಮಾಡಿಕೊಂಡಿದ್ದ. ಸ್ಥಳೀಯರು ಸಮಾಧಾನ ಮಾಡಿ ಕಳá-ಹಿಸಿದ್ದರು. ವಿನಯ್ ವಿರುದ್ಧ ಆಕ್ರೋಶಗೊಂಡಿದ್ದ ಆರೋಪಿಗಳು ಸಂಚು ರೂಪಿಸಿ ಹಂಚರಹಳ್ಳಿ ಚರ್ಚ್ ಬಳಿ ವಿನಯ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೋಮವಾರದಿಂದ ನಡೆದ ಕೊಲೆ ಪ್ರಕರಣಗಳ ವಿವರ ಹೀಗಿದೆ.

# ಜೀವನ್​ವಿಮಾನಗರದಲ್ಲಿ ಸೋಮವಾರ ಮದ್ಯದ ಅಮಲಿನಲ್ಲಿ ಸ್ನೇಹಿತರಿಬ್ಬರ ನಡುವೆ ಹೊಡೆದಾಟ ನಡೆದು ಗಣಪತಿ ಕಾಲನಿ ನಿವಾಸಿ ಶ್ರೀನಿವಾಸ್ (42) ಎಂಬಾತನ ಕೊಲೆಯಾಗಿತ್ತು.

# ಮಂಗಳವಾರ ಕುಡಿದ ಮತ್ತಿನಲ್ಲಿ ಜಗಳ ನಡೆದು ಕಾಮಾಕ್ಷಿಪಾಳ್ಯದಲ್ಲಿ ಪುರುಷೋತ್ತಮ್ ಎಂಬಾತನ ಹತ್ಯೆಯಾಗಿತ್ತು.

ಕಠಿಣ ಕ್ರಮಕ್ಕೆ ಸೂಚನೆ: ನಗರದಲ್ಲಿ ನಡೆದ ಕೊಲೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಕಠಿಣ ಕ್ರಮ ತೆಗೆದುಕೊಳ್ಳುವಂತೆ ಡಿಸಿಪಿಗಳಿಗೆ ಸೂಚನೆ ನೀಡಿದ್ದಾರೆ. ಕೊಲೆ ಮಾಡಿ ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಸ್ನೇಹಿತನ ಹಂತಕನಿಗೆ ಖಾಕಿ ಗುಂಡೇಟು

ಬೆಂಗಳೂರು: ಬಾಗಲಗುಂಟೆ ರೌಡಿಶೀಟರ್ ಕರಣ್ ಸಿಂಗ್​ನನ್ನು ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಮತ್ತೊಬ್ಬ ರೌಡಿ ಕಾಲಿಗೆ ಗುಂಡು ಹಾರಿಸುವ ಮೂಲಕ ಬುಧವಾರ ಬೆಳಗ್ಗೆ ಪೊಲೀಸರು ಬಂಧಿಸಿದ್ದಾರೆ.

ಬಾಗಲಗುಂಟೆಯ ಪ್ರಭು (25) ಬಂಧಿತ. ಬಂಧಿಸಲು ಹೋದಾಗ ಆತ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದರಿಂದ ಬಾಗಲಗುಂಟೆ ಠಾಣೆ ಮುಖ್ಯಪೇದೆ ಹನುಮೇಗೌಡ ಅವರಿಗೆ ಗಾಯಗಳಾಗಿವೆ ಎಂದು ಡಿಸಿಪಿ ಶಶಿಕುಮಾರ್ ತಿಳಿಸಿದ್ದಾರೆ. ಆಚಾರ್ಯ ಕಾಲೇಜು ಹಿಂಭಾಗದ ನಿರ್ಜನ ಪ್ರದೇಶದಲ್ಲಿ ಪ್ರಭು ಇರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಎಸ್​ಐ ಶ್ರೀಕಂಠೇಗೌಡ ನೇತೃತ್ವದ ತಂಡ ಸ್ಥಳಕ್ಕೆ ಹೋಗಿತ್ತು. ಹನುಮೇಗೌಡ ಆರೋಪಿಯನ್ನು ಬಂಧಿಸಲು ಮುಂದಾದಾಗ ಚೂರಿಯಿಂದ ಹಲ್ಲೆ ಮಾಡಲು ಮುಂದಾಗಿದ್ದ. ಪಿಎಸ್​ಐ ಎಚ್ಚರಿಕೆ ಕೊಟ್ಟರೂ ಎಚ್ಚೆತ್ತುಕೊಳ್ಳದೆ ಮತ್ತೊಬ್ಬ ಪೇದೆ ಶ್ರೀಧರ್ ಮೇಲೆ ಹಲ್ಲೆಗೆ ಯತ್ನಿಸಿದ್ದ. ಆಗ ಪ್ರಭು ಬಲ ಕಾಲಿಗೆ ಪಿಎಸ್​ಐ ಗುಂಡು ಹಾರಿಸಿದ್ದಾರೆ.

ಹಲವು ಪ್ರಕರಣ

ಪ್ರಭು ಮತ್ತು ಮೃತ ಕರಣ್​ಸಿಂಗ್ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ. ಇಬ್ಬರೂ ಸೇರಿ ಅಪರಾಧ ಕೃತ್ಯ ಎಸಗುವ ಉದ್ದೇಶದಿಂದ ಹೊಸ ತಂಡ ಕಟ್ಟಲು ಸಿದ್ಧತೆ ಮಾಡಿದ್ದರು. ಇದೇ ವಿಚಾರದ ಬಗ್ಗೆ ಮೇ 4ರಂದು ಪ್ರಭು ಗಂಭೀರವಾಗಿ ರ್ಚಚಿಸುತ್ತಿದ್ದ. ಆದರೆ ಈತನ ಮಾತನ್ನು ನಿರ್ಲಕ್ಷಿಸಿದ್ದ ಕರಣ್ ಸಿಂಗ್ ಮತ್ತು ಈತನ ಸಹೋದರ ಅರ್ಜುನ್ ಸಿಂಗ್ ತಮ್ಮ ಪಾಡಿಗೆ ಮೊಬೈಲ್​ನಲ್ಲಿ ಪಬ್ಜಿ ಗೇಮ್ ಆಟದಲ್ಲಿ ನಿರತರಾಗಿದ್ದರು. ಆಗ ಕರಣ್​ಗೆ ಪ್ರಭು ಬೆದರಿಸಿದ್ದ. ಇದಾದ ಕೆಲ ಹೊತ್ತಿನ ಬಳಿಕ ಅರ್ಜುನ್ ಸಿಂಗ್​ಗೆ ಪ್ರಭು ಚೂರಿಯಿಂದ ಇರಿದಿದ್ದ. ಸಹೋದರನಿಗೆ ಇರಿದ ವಿಚಾರ ತಿಳಿದು ಪ್ರಭು ಮನೆಗೆ ಹೋದ ಕರಣ್ ಸಿಂಗ್, ಈ ಬಗ್ಗೆ ಪ್ರಶ್ನಿಸಿದ್ದ. ಈ ವೇಳೆ ಇಬ್ಬರ ನಡುವೆ ಜಗಳ ನಡೆದಿತ್ತು. ಜಗಳ ತಾರಕಕ್ಕೇರಿ ಪ್ರಭು ಚೂರಿಯಿಂದ ಕರಣ್ ಸಿಂಗ್​ಗೆ ಇರಿದು ಹತ್ಯೆ ಮಾಡಿ ಪರಾರಿಯಾಗಿದ್ದ. ಪ್ರಕರಣ ದಾಖಲಿಸಿಕೊಂಡ ಬಾಗಲಗುಂಟೆ ಪೊಲೀಸರು, ಪ್ರಭುನನ್ನು ಬಂಧಿಸಲು ತಂಡ ರಚಿಸಿದ್ದರು.

ಸ್ನೇಹಿತನನ್ನು ಇರಿದು ಹತ್ಯೆ ಮಾಡಿದ್ದವನ ಬಂಧನ

ಬೆಂಗಳೂರು: ಕುಡಿದ ನಶೆಯಲ್ಲಿ ಹಲ್ಲೆ ನಡೆಸಿ ಸ್ನೇಹಿತನಿಗೆ ಇರಿದು ಹತ್ಯೆ ಮಾಡಿದ್ದ ಆರೋಪಿಯನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಾರುತಿ ನಗರ ನಿವಾಸಿ ಗಿರೀಶ್ ಬಂಧಿತ. ಆರೋಪಿ ತನ್ನ ಸ್ನೇಹಿತ ಪುರುಷೋತ್ತಮ್ ಎಂಬಾತನನ್ನು ಮಂಗಳವಾರ ಚೂರಿಯಿಂದ ಇರಿದು ಹತ್ಯೆ ಮಾಡಿದ್ದ.

ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ಪುರುಷೋತ್ತಮ್ ಮತ್ತು ಗಿರೀಶ್ ಸ್ನೇಹಿತರು. ಮಂಗಳವಾರ ಮಧ್ಯಾಹ್ನ ಗಿರೀಶ್ ಆಯೋಜಿಸಿದ್ದ ಪಾರ್ಟಿಗೆ ಸಹೋದರ ದೇವರಾಜ್ ಜತೆ ಪುರುಷೋತ್ತಮ್ ಬಂದಿದ್ದ. ಕುಡಿದ ನಶೆಯಲ್ಲಿ ಪುರುಷೋತ್ತಮ್ನ್ನು ಗಿರೀಶ್ ನಿಂದಿಸಿದ್ದ. ಆಗ ಗಿರೀಶ್ ಮೇಲೆ ಪುರುಷೋತ್ತಮ್ ಹಾಗೂ ಸಹೋದರ ಹಲ್ಲೆ ನಡೆಸಿದ್ದರು. ಇದರಿಂದ ಆಕ್ರೋಶಗೊಂಡಿದ್ದ ಗಿರೀಶ್, ರಾತ್ರಿ 8.40ರಲ್ಲಿ ಬೈಕ್​ನಲ್ಲಿ ಹೋಗುತ್ತಿದ್ದ ಪುರುಷೋತ್ತಮ್ನ್ನು ಮಾರುತಿ ನಗರ ರಸ್ತೆಯಲ್ಲಿ ಅಡ್ಡಗಟ್ಟಿ ಚಾಕá-ವಿನಿಂದ ಇರಿದು ಪರಾರಿಯಾಗಿದ್ದ. ಪುರಷೋತ್ತಮ್ ಸ್ಥಳದಲ್ಲೇ ಮೃತಪಟ್ಟಿದ್ದ. ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಲಿಂಗಾಯತ ಧರ್ಮದ ಹೋರಾಟ ಸರಣಿ-2

  ಜಾತಿ ಲಿಂಗಾಯತರು ಮತ್ತು ಬೇಡ ಜಂಗಮ ಪಂಚಾಚಾರ್ಯರು ಸತ್ಯವೆಂದು ನಂಬಿ ಲಿಂಗಾಯತ ಧರ್ಮದ ಮಾನ್ಯತೆ ತಪ್ಪಿಸುತ್ತಿದ್ದಾರೆ. ಬಸವಕಲ್ಯಾಣ: 12ನೇ …

ನ. 22 ರಂದು ಡಾ. ಹೆಚ್.ಆರ್.ಗಿರಿಯಾಲ ಅವರಿಗೆ ನುಡಿನಮನ

ಚನ್ನಮ್ಮನ ಕಿತ್ತೂರು: ಸಮೀಪದ ಬೈಲೂರು ಗ್ರಾಮದ ಖ್ಯಾತ ವೈದ್ಯ ಡಾ ಹಣಮಂತ ಆರ್ ಗಿರಿಯಾಲ ಅವರು ಕಳೆದ ಸೆಪ್ಟೆಂಬರ್ 30 …

ಲಿಂಗಾಯತ ಧರ್ಮದ ಹೋರಾಟ ಸರಣಿ-2

  ಲಿಂಗಾಯತ ಧರ್ಮದ ಮಠಾಧೀಶರ ನಿಯೋಗ ಮುಖ್ಯಮಂತ್ರಿಗೆ ಭೇಟಿ ಮಾಡಬಾರದೇಕೆ? ಲಿಂಗಾಯತ ಧರ್ಮದ ಹೋರಾಟದಲ್ಲಿ ಮುಂಚೂಣಿ ಸ್ಥಾನ ವಹಿಸಿ ಅತ್ಯಂತ …

ಸಾಮಾಜಿಕ ಪ್ರಾತಿನಿಧ್ಯತೆ : ಬಿ.ಜೆ ಪಾಟೀಲ

  ವಿಜಯಪುರ : ಸಮಸಮಾಜ ಕಟ್ಟಲು, ಸಂವಿಧಾನದಲ್ಲಿ ಮೂಲಭೂತ ಹಕ್ಕಗಳ ಬಗ್ಗೆ ಮಾತನಾಡುವಾಗ ಮೂರೂ ಬಿಂದುಗಳು ( Article 15, …

ಲಿಂಗಾಯತ–ವೀರಶೈವರಿಗೆ ಶೇ 16 ಮೀಸಲಾತಿ ನೀಡಿ: ಶಿವಮೂರ್ತಿ ಮುರುಘಾ ಶರಣರು

  ಚಿತ್ರದುರ್ಗ: ಜಾತಿ, ಉಪಜಾತಿಗೆ ಒಂದೊಂದು ವಿಧವಾದ ಮೀಸಲಾತಿ ನೀಡುವ ಬದಲು ಲಿಂಗಾಯತ–ವೀರಶೈವ ಸಮುದಾಯಕ್ಕೆ ಶೇ 16ರಷ್ಟು ಮೀಸಲಾತಿಯ ನಿಗದಿಪಡಿಸುವುದು …

Leave a Reply

Your email address will not be published. Required fields are marked *

error: Content is protected !!