Breaking News
Home / featured / ಡೆಡ್ಲಿ ಎಣ್ಣೆ..!

ಡೆಡ್ಲಿ ಎಣ್ಣೆ..!

ಈ ಎಣ್ಣೆ ವಿಷಯದಲ್ಲಿ ಸ್ವಲ್ಪ ಹುಷಾರಾಗಿ ಇರಬೇಕಿದೆ. ಅದು ಅಡುಗೆ ಎಣ್ಣೆ ಆಗಿರಬಹುದು ಇಲ್ಲವೇ ಕುಡಿಯೋ ಎಣ್ಣೆ ಆಗಿರಬಹುದು.

ಅಡುಗೆ ಎಣ್ಣೆಯಿಂದ ಹಿಡಿದು ಕುಡಿಯೋ ಎಣ್ಣೆ ವರೆಗೂ ನಮ್ಮನ್ನು ಕಾಡುವ ಪ್ರಶ್ನೆಗಳಿಗೆ ಉತ್ತರಗಳೇ ಸಿಗುವುದಿಲ್ಲ.

ಈ ವೈರಿಸ್ ಬಲಿ ತೆಗೆದುಕೊಳ್ಳಲು ಎಗರಾಡುತ್ತಿರುವಾಗ – ಕೆಲವಡೆ ಸಾಲು ಸಾಲುಗಳಲ್ಲಿ ಇನ್ನುಳಿದ ಹಲವೆಡೆ ಮುಗಿಬಿದ್ದು ಜನ ಬಂದದ್ದು ನೋಡಿದರೆ, ವೈರಸ್ಸಗೆ ಜನರನ್ನು ಆಹಾರವಾಗಿ ಈಡು ಮಾಡುವಂಥ ಪರಿಸ್ಥಿತಿ ನಿರ್ಮಾಣವಾಗಿದೆಯೇ ಅನಿಸುತ್ತಿದೆ.

ಸಾರಾಯಿ ನಿಷೇಧ ಮಾಡಿ, ಬಡತನ ನಿವಾರಣೆ ಮಾಡುವದನ್ನು ಈ ” ಮಾನವ ಕಲ್ಯಾಣ ” ಕುರಿತು ಮಾತಾಡುವ ಸರಕಾರಗಳು ಏಕೆ ಮಾಡಬಾರದು ?
ಬೊಕ್ಕಸಕ್ಕೆ ಧಕ್ಕೆ ಅನ್ನುವುದಾದರೆ ವಿಷವನ್ನು ಹಂಚಿ ಗಳಿಸುವುದೇ ? ಸಂಸಾರಗಳನ್ನು ಹಾಳು ಮಾಡುವ ಈ ಬೊಕ್ಕಸ ಬೇಕೆ ?

ಇನ್ನೊಂದು ಎಣ್ಣೆಯ ವಿಷವಂತೋ ಗೊತ್ತೇ ಇದೆ. ನಾವು ಯಾವುದು ಸೆಂಗಾ ಎಣ್ಣೆ ಅನ್ನುತ್ತೇವೆಯೋ ಅದರಲ್ಲಿ ಒಂದು ಸೆಂಗಾನೂ ಇರುವದಿಲ್ಲ. ಹಾಗೆಯೇ sunflower ಎಣ್ಣೆ. ಸುಮ್ಮನೆ ಅದರ ಫ್ಲೇವರ್ ಹಾಕಿ ಕೊಡವ White Petroleum Jelly ಇರಬಹುದು ಅಥವಾ ನಿಮ್ಮ ಪಾಮ್ ಆಯಿಲು ಅಷ್ಟೆ. ಡಬಲ್ refined ಅಂತ ಹೇಳಿ ದಿಕ್ಕು ತಪ್ಪಿಸುವ ಹುನ್ನಾರಗಳು.

ಅಭಿವೃದ್ಧಿಯ ನೆಪದಲ್ಲಿ ಅಮಾಯಕ ಜನರನ್ನು ಬಲಿ ತೆಗೆದುಕೊಳ್ಳುತ್ತಿರುವ ಕಾರ್ಖಾನೆಗಳು. ಅವರಿಗೆ ಇದು ಸೇಂಗಾ ಎಣ್ಣಿ ಎಂದು ಸೀಲು ಒತ್ತುವ ಸರಕಾರದ ಸಂಸ್ಥೆಗಳು. ನಂಬಿ ತಿಂದು ಕುಡಿದು, ಸಾಯುತ್ತಿರುವ ಜನಗಳು.

ಹಾಲೂ ಅಷ್ಟೆ. ಊರು ಊರುಗಳಲ್ಲಿ ದನ ಕರು – ಎಮ್ಮೆಗಳೆ ಇಲ್ಲ, ಹಾಲು ಮಾತ್ರ ಟ್ಯಾಂಕರ್ ಟ್ಯಾಂಕರ್ ಗಳಲ್ಲಿ ೨೪ ತಾಸುಗಳೂ ಲಭ್ಯ. ಈ ಹಾಲು ಆಲ್ಕೋಹಾಲ್ ಗಿಂತ ಕೆಟ್ಟದು.

ಉಪ್ಪೂ ಕೂಡ – ಮಾರುಕಟ್ಟೆಯಲ್ಲಿ ಸಿಗುವ ಅರ್ಧಕ್ಕಿಂತ ಹೆಚ್ಚು ಉಪ್ಪು ಸಮುದ್ರ ತೀರದಲ್ಲಿ ಅಲ್ಲ, ಕಾರ್ಖಾನೆಗಳಲ್ಲಿ ತಯಾರು ಆದದ್ದು. ಸಿಂಥೆಟಿಕ್ ಉಪ್ಪು ಅಂತೆ. ಉಪ್ಪು ಮತ್ತು ಸಕ್ಕರೆ ಬೆಳ್ಳಗೆ ಕಾಣಲು ಬಳಸುವ chemical ನಲ್ಲಿ ಸ್ಯಾನಾಡ್ ಕೂಡ ಬಳಸುತ್ತಾರಂತೆ.

Has any of the the governments made any survey of demand – production and supply ? Verified the genuinity of the products ?
Pay Tax – Produce anything notion does not work anymore.

ಊರಲ್ಲಿ ಗಾಣದ ಎಣ್ಣೆ ತಿಂದುಕೊಂಡು, ಇಚಲದ ಸೇಂದಿ ಕುಡ್ಕೊಂಡು, ಹಳ್ಳುಪ್ಪು ಹೆಕ್ಕೊಂಡು ಆರಾಮಾಗಿ ಇದ್ದವರಿಗೆ DOUBLE REFINED – OIDISED WHITE SALT – SPIRIT – ALCOHOL ಉದ್ಯಮವಾಗಿ ಗ್ರಾಮದ ಸ್ವರಾಜ್ಯವನ್ನು ಅಷ್ಟೇ ಅಲ್ಲ ಅಲ್ಲಿರುವ ಎಲ್ಲರನ್ನೂ ರೋಗಗ್ರಸ್ತರನ್ನಾಗಿಸಿತು.

BP – SUGAR – CANCER – HEART ATTACK ವಯಸ್ಸನ್ನು ಲೆಕ್ಕಿಸದೇ ಬಂದು Drug Mafia ಅನ್ನು ಮೆರೆಯುವಂತೆ ಮಾಡಿದೆ. ಮಾನವೀಯತೆ ಎಲ್ಲೋ ದವಾಖಾನೆಗಳೆಂಬ – ಕಸಾಯಿಖಾನೆ ಗಳಲ್ಲಿ ಆತ್ಮಹತ್ಯೆಗೆ ಒಳಗಾಗಿದೆ.

ನಮ್ಮವರು ಮಾತ್ರ ಅಭಿವೃದ್ದಿಯ ಕಥೆ ಹೇಳುತ್ತಾ Ten Trillion Economy ಗಾಗಿ ಕಾಡನ್ನು ಬಲಿಕೊಟ್ಟು ಯಾರದೋ ಹಿತಕ್ಕಾಗಿ
ಹೆಣಗುತ್ತಿದ್ದಾರೆ.
ನಾವು ? ಕಥೆ ಕೇಳುತ್ತಾ ಮಲಗಿಯೇ ಇದ್ದೇವೆ.

ಈ ಎಲ್ಲ ಸಮಸ್ಯೆಗಳಲ್ಲಿ ಯುವಕರಿಗೆ ಪರ್ಯಾಯ ಆರ್ಗ್ಯಾನಿಕ್ product ಗಳನ್ನ ತಯಾರಿಸುವ ಮೂಲಕ ಗ್ರಾಮ, ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ – ಬ್ಯುಸಿನೆಸ್ ಅವಕಾಶ ಇದೆ.

ಜಾಣತನದಿಂದ ಬಳಸಿಕೊಂಡು ಸ್ವಂತ ಕಾಲಮೇಲೆ ನಿಂತು ಮಾನವತೆಯ ಇರುವಿಕೆಗೆ ಮಾದರಿಯಾಗಬೇಕು.

ಲೇಖನ: ಪಿ.ವಿ ಹಿರೇಮಠ

ಧಾರವಾಡ

About Shivanand

Admin : Lingayat Kranti Monthly news paper 8884000008 [email protected]

Check Also

ಲಿಂಗಾಯತ ದಿಟ್ಟ ಶರಣೆ: ಪ್ರೇಮಕ್ಕಾ ಅಂಗಡಿ

  ಬೈಲಹೊಂಗಲ: ಪ್ರೇಮಕ್ಕ ಅಂಗಡಿ ನಮ್ಮ ಸಮಾಜದ ದಿಟ್ಟ ಹೆಣ್ಣುಮಗಳು ಇಂದು ಇಡೀ ರಾಜ್ಯದಲ್ಲಿ ಲಿಂಗಾಯತ ಸಮಾಜದ ಮಹಿಳೆಯರು ಸಂಘಟಿತ …

ಮಠಾಧೀಶರಿಗೆ ರಾಜಕಾರಣದ ಉಸಾಬರಿ ಏಕೆ?

  ಬೆಂಗಳೂರು: ರಾಜ್ಯದಲ್ಲಿನ ಸ್ವಾಮೀಜಿಗಳ ಪೈಕಿ ಕೆಲವರು ರಾಜಕೀಯ ನಾಯಕರಂತೆ ವರ್ತಿಸುತ್ತಿರುವುದು ಅವರು ಪ್ರತಿನಿಧಿಸುವ ಸ್ಥಾನಗಳಿಗೆ ಶೋಭೆ ತರುವಂತಹದ್ದಲ್ಲ. ಸಮಾಜಕ್ಕೆ …

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಯಾರಿಗೆ? ಹಾಗೂ ಮಹಾ ಮಾದರಿ ಶೇ.16ರ ವಿಶೇಷ ಮೀಸಲಾತಿ ಬೇಡವೇ….?

    ಬಸವಣ್ಣ ಬರುವಾಗ | ಬಿಸಿಲು ಬೆಳದಿಂಗಳು || ಮೊಗ್ಗು ಮಲ್ಲಿಗೆ | ಅರಳ್ಯಾವ || ಯಾಲಕ್ಕಿ ಗೊನೆಬಾಗಿ …

ಕರ್ನಾಟಕದ ಮ್ಯಾಕ್ಸ್ ಮುಲ್ಲರ್ ‘ವಚನ ಪಿತಾಮಹ’ ಡಾ. ಫ.ಗು.ಹಳಕಟ್ಟಿ

  ರಾಮದುರ್ಗ: ೧೯೫೬ರಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯದ ಪ್ರತಿಷ್ಠಿತ ಗೌರವ ಡಾಕ್ಟರೇಟ್ ಪದವಿ ಪ್ರದಾನ ಸಮಾರಂಭ. ಡಾ.ಪಾವಟೆಯವರು ಕುಲಪತಿಗಳಾಗಿದ್ದರು. ಕರ್ನಾಟಕ ವಿಶ್ವವಿದ್ಯಾನಿಲಯದ …

ರಾಣಿ ಚನ್ನವೀರಮ್ಮ

  ಲಿಂಗಾಯತ ಕ್ರಾಂತಿ: ಚನ್ನಮ್ಮ ಮತ್ತು ವೀರಮ್ಮ ಇವರಿಬ್ಬರು ಕಿತ್ತೂರ ದೇಸಾಯಿಣಿಗಳು. ಇವರಿಬ್ಬರ ಹೆಸರು ಒಂದಾಗಿರುವ ಚನ್ನವೀರಮ್ಮಾಜಿ ಎನ್ನುವ ಕೆಳದಿಯ …

ಜನಪದವೇ ಲಿಂಗಾಯತ ಧರ್ಮ ಉಳಿವಿಗೆ ಆಧಾರ

  ಬೀದರ್: 12ನೆ ಶತಮಾನದಲ್ಲಿ ನಡೆದ ಕಲ್ಯಾಣ ಕ್ರಾಂತಿ ನಂತರ ಲಿಂಗಾಯತ ಧರ್ಮದ ಶರಣರು ಚೆಲ್ಲಾಪಿಲ್ಲಿ ಆದರು, ಹಲವಾರು ಶರಣರು …

ಸಂವಿಧಾನ ಮತ್ತು ಕಾನೂನುಗಳ ಸಮರ್ಪಕ ಬಳಕೆಯೇ ಈ ದೇಶದ ಎಲ್ಲ ಸಮಸ್ಯೆಗಳಿಗೆ ಪರಿಹಾರ

  ~ ಡಾ. ಜೆ ಎಸ್ ಪಾಟೀಲ. ವಿಜಯಪುರ: ಭಾರತವು ಧಾರ್ಮಿಕ ಮೂಢನಂಬಿಕೆಗಳ ತವರು ಮನೆ. ಇಲ್ಲಿ ಧಾರ್ಮಿಕ ನಂಬಿಕೆಗಳ …

ಗ್ರಾಮ ಸ್ವರಾಜ್ಯ ಸಾಕಾರಗೊಳಿಸಿದ: ರಾಮಪ್ಪ ಬಿದರಿ

ವಿಜಯಪುರ: 1952-1962 ಹತ್ತು ವರ್ಷಗಳ ಕಾಲ ಲೋಕಸಭಾ ಸದಸ್ಯರಾಗಿದ್ದ ರಾಮಪ್ಪ ಬಿದ್ರಿ ಈ ಹುದ್ದೆಯನ್ನು ಎಂದೂ ತಮ್ಮ ಸ್ವಂತದ ಲಾಭಕ್ಕಾಗಿ …

ಲಿಂಗಾಯತ ಧರ್ಮದ ಹೋರಾಟ ಸರಣಿ-2 ಭಾಗ-4

  ಲಿಂಗಾಯತ ಧರ್ಮ ಮಾನ್ಯತೆಯ ಹೊರಾಟದಲ್ಲಿ ಲಿಂಗಾಯತ ಸಮನ್ವಯದ ಸಮಿತಿ ಪಾತ್ರ. ಬಸವಕಲ್ಯಾಣ: ಬೆಂಗಳೂರಿನ ಕುಂಬಳಗೋಡಿನ ಬಸವ ಗಂಗೋತ್ರಿಯಲ್ಲಿ ಜೂನ್ …

ಲಿಂಗಾಯತ ಧರ್ಮದ ಹೋರಾಟ ಸರಣಿ-2

  ಜಾತಿ ಲಿಂಗಾಯತರು ಮತ್ತು ಬೇಡ ಜಂಗಮ ಪಂಚಾಚಾರ್ಯರು ಸತ್ಯವೆಂದು ನಂಬಿ ಲಿಂಗಾಯತ ಧರ್ಮದ ಮಾನ್ಯತೆ ತಪ್ಪಿಸುತ್ತಿದ್ದಾರೆ. ಬಸವಕಲ್ಯಾಣ: 12ನೇ …

ನ. 22 ರಂದು ಡಾ. ಹೆಚ್.ಆರ್.ಗಿರಿಯಾಲ ಅವರಿಗೆ ನುಡಿನಮನ

ಚನ್ನಮ್ಮನ ಕಿತ್ತೂರು: ಸಮೀಪದ ಬೈಲೂರು ಗ್ರಾಮದ ಖ್ಯಾತ ವೈದ್ಯ ಡಾ ಹಣಮಂತ ಆರ್ ಗಿರಿಯಾಲ ಅವರು ಕಳೆದ ಸೆಪ್ಟೆಂಬರ್ 30 …

ಲಿಂಗಾಯತ ಧರ್ಮದ ಹೋರಾಟ ಸರಣಿ-2

  ಲಿಂಗಾಯತ ಧರ್ಮದ ಮಠಾಧೀಶರ ನಿಯೋಗ ಮುಖ್ಯಮಂತ್ರಿಗೆ ಭೇಟಿ ಮಾಡಬಾರದೇಕೆ? ಲಿಂಗಾಯತ ಧರ್ಮದ ಹೋರಾಟದಲ್ಲಿ ಮುಂಚೂಣಿ ಸ್ಥಾನ ವಹಿಸಿ ಅತ್ಯಂತ …

ಸಾಮಾಜಿಕ ಪ್ರಾತಿನಿಧ್ಯತೆ : ಬಿ.ಜೆ ಪಾಟೀಲ

  ವಿಜಯಪುರ : ಸಮಸಮಾಜ ಕಟ್ಟಲು, ಸಂವಿಧಾನದಲ್ಲಿ ಮೂಲಭೂತ ಹಕ್ಕಗಳ ಬಗ್ಗೆ ಮಾತನಾಡುವಾಗ ಮೂರೂ ಬಿಂದುಗಳು ( Article 15, …

ಲಿಂಗಾಯತ–ವೀರಶೈವರಿಗೆ ಶೇ 16 ಮೀಸಲಾತಿ ನೀಡಿ: ಶಿವಮೂರ್ತಿ ಮುರುಘಾ ಶರಣರು

  ಚಿತ್ರದುರ್ಗ: ಜಾತಿ, ಉಪಜಾತಿಗೆ ಒಂದೊಂದು ವಿಧವಾದ ಮೀಸಲಾತಿ ನೀಡುವ ಬದಲು ಲಿಂಗಾಯತ–ವೀರಶೈವ ಸಮುದಾಯಕ್ಕೆ ಶೇ 16ರಷ್ಟು ಮೀಸಲಾತಿಯ ನಿಗದಿಪಡಿಸುವುದು …

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಡಾ. ತೋಂಟದ ಸಿದ್ಧರಾಮ ಶ್ರೀಗಳ ಆಕ್ಷೇಪ

  ಗದಗ: ಸರ್ಕಾರ ತರಾತುರಿಯಲ್ಲಿ ಲಿಂಗಾಯತ ವೀರಶೈವ ಅಭಿವೃದ್ಧಿ ನಿಗಮ ಘೋಷಿಸಿದ್ದು, ಇದಕ್ಕೆ ಯಾವುದೇ ಗೊತ್ತು ಗುರಿಯಾಗಲಿ, ಸ್ಪಷ್ಟತೆಯಾಗಲಿ ಇಲ್ಲ …

Leave a Reply

Your email address will not be published. Required fields are marked *

error: Content is protected !!