Breaking News
Home / featured / ಪತ್ನಿಯನ್ನು ಕೊಂದು ಶವ ಮನೆಯಲ್ಲಿಟ್ಟದ್ದ ಕುಡುಕ

ಪತ್ನಿಯನ್ನು ಕೊಂದು ಶವ ಮನೆಯಲ್ಲಿಟ್ಟದ್ದ ಕುಡುಕ

ಶಿವಮೊಗ್ಗ: ಜಿಲ್ಲೆಯ ಸೊರಬ ತಾಲೂಕಿನ ನಿಸರಾಣಿ ಗ್ರಾಮದ ರಾಮಪ್ಪ ಹತ್ತು ವರ್ಷಗಳ ಹಿಂದೆ ಚಂದ್ರಕಲಾಳನ್ನು ವಿವಾಹವಾಗಿದ್ದ. ಪ್ರತಿನಿತ್ಯ ಕುಡಿದುಬಂದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದ.

ಒಂದೂವರೆ ತಿಂಗಳಿಂದ ಲಾಕ್‌ಡೌನ್ ಇದ್ದ ಕಾರಣ ಕುಡಿಯಲು ಸಿಕ್ಕಿರಲಿಲ್ಲ. ಜಗಳವೂ ತಹಬಂದಿಗೆ ಬಂದಿತ್ತು. ಆದರೆ ಇತ್ತೀಚೆಗೆ ಮತ್ತೆ ಮದ್ಯ ಸಿಗಲು ಆರಂಭವಾದ ಬಳಿಕ ರಾಮಪ್ಪನಿಗೆ ಹಳೇ ಚಟ ಮತ್ತೆ ಆವರಿಸಿಕೊಂಡಿತು. ಮೇ 8ರಂದು ಕುಡಿದು ಬಂದು ಹೆಂಡತಿಯೊಂದಿಗೆ ಜಗಳವಾಡಿದ್ದಾನೆ. ಈ ವೇಳೆ ದಂಪತಿ ನಡುವೆ ಮಾತಿಗೆ ಮಾತು ಬೆಳೆದಿದೆ. ರಾಮಪ್ಪ ಕುಡಿದ ಅಮಲಿನಲ್ಲಿ ಪತ್ನಿ ಚಂದ್ರಕಲಾಳನ್ನು ಹತ್ಯೆ ಮಾಡಿಬಿಟ್ಟಿದ್ದಾನೆ.

ಆಶ್ಚರ್ಯಕರ ವಿಷಯವೇನೆಂದರೆ, ಕೊಲೆ ನಡೆದ ಬಳಿಕವೂ ಆತ ಏನೂ ನಡೆದಿಲ್ಲ ಎಂಬಂತೆ ಓಡಾಡಿಕೊಂಡಿದ್ದ. ಮನೆಯಲ್ಲೇ ಶವವಿಟ್ಟು ಕುಡಿದು ಬರುತ್ತಿದ್ದ ಎನ್ನಲಾಗಿದೆ. ಕೊನೆಗೆ ಅಕ್ಕಪಕ್ಕದ ಮನೆಯವರು ಗಮನಿಸಿದ ನಂತರ ಶನಿವಾರ ಈ ಕೊಲೆ ಬೆಳಕಿಗೆ ಬಂದಿದೆ! ಸೊರಬ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ರಾಮಪ್ಪನನ್ನು ಬಂಧಿಸಿದ್ದಾರೆ.

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಬಡತನದ ಬೇರು ಕತ್ತರಿಸುವ ಕಾರ್ಯ ಮಾಡಿದವರು ಬಸವಾದಿ ಶರಣರು

  ಗಜೇಂದ್ರಗಡ: ಸಮಾಜವನ್ನು ಕಾಡುವ ಬಡತನದ ಬೇರನ್ನು ಕತ್ತರಿಸುವ ಕಾರ್ಯವನ್ನು ಬಸವಾದಿ ಶರಣರು ತಮ್ಮ ನಡೆ ನುಡಿಯ ಮೂಲಕ ಹೇಳಿ …

Leave a Reply

Your email address will not be published. Required fields are marked *

error: Content is protected !!