Breaking News
Home / featured / ಗಾಂಧಿಯೊಂದಿಗೆ ಸಾವರಕರ್ ಹೋಲಿಕೆ ಹೇಯ ಕೃತ್ಯ

ಗಾಂಧಿಯೊಂದಿಗೆ ಸಾವರಕರ್ ಹೋಲಿಕೆ ಹೇಯ ಕೃತ್ಯ

ಇತ್ತೀಜಿನ ದಿನಗಳಲ್ಲಿ ಗಾಂಧಿಜೀಯನ್ನು ಖಳನಾಯಕನಂತೆ ಬಿಂಬಿಸುವ ಮತ್ತು ಗಾಂಧಿ ವ್ಯಕ್ತಿತ್ವಕ್ಕೆ ಸಾವರಕರ್ ಸಮಾನ ವ್ಯಕ್ತಿತ್ವ ರೂಪಿಸುವ ಕೊಟ್ಟಿ ಪ್ರಯತ್ನಗಳು ಕೋಮುವಾದಿಗಳಿಂದ ನಡೆಯುತ್ತಿವೆ. ಗಾಂಧಿಜೀ ಇಡೀ ಜಗತ್ತಿಗೆ ಒಬ್ಬನೇ. ಗಾಂಧಿಜೀ ಒಂದು ವ್ಯಕ್ತಿಯಾಗಿದರೆ ಅದೊಂದು ತತ್ವ. ಇಡೀ ವಿಶ್ವವನ್ನು ಬೆರಗುಗೊಳಿಸಿದˌ ಪ್ರಭಾವಿಸಿದ ಮಹಾನ್ ವಿಚಾರಧಾರೆ ಗಾಂಧಿ. ಸೂರ್ಯ ಮುಳುಗದ ಸಾಮ್ರಾಜ್ಯವೆನ್ನಿಸಿದ ಬ್ರಿಟೀಷ ವಸಾಹತುಶಾಹಿಯನ್ನು ಯಾರೂ ಊಹಿಸದ ಅಹಿಂಸೆ ಮತ್ತು ಸತ್ಯಾಗ್ರಹ ಗಳೆಂಬ ವಿನೂತನ ಅಸ್ತ್ರಗಳಿಂದ ಸೋಲಿಸಿದ ಅನನ್ಯ ಮೇರುಗಿರಿ ಮಹಾತ್ಮ ಗಾಂಧಿ. ಗಾಂಧಿಯೊಂದಿಗೆ ಹೋಲಿಸಬಹುದಾದ ವ್ಯಕ್ತಿತ್ವ ಇನ್ನೂ ಭೂಮಿಯ ಮೇಲೆ ಹುಟ್ಟಿಲ್ಲ. ಆದರೂ ಕುಹಕಿಗಳ ಕ್ರತ್ಯಗಳಿಗೆ ಉತ್ತರವಾಗಿ ಇಲ್ಲಿ ನಾನು ಗಾಂಧಿಯಂತ ಮೇರುಗಿರಿಯನ್ನು ಸಣ್ಣ ಕಲ್ಲಿನ ಆಕಾರದ ಸಾವರಕರ್ ಜೊತೆ ಹೋಲಿಸುತ್ತಿದ್ದು ಅದಕ್ಕಾಗಿ ಸಮಸ್ತ ಗಾಂಧಿವಾದಕ್ಕೆ ಕ್ಷಮೆ ಕೇಳುತ್ತೇನೆ.

1883ರಲ್ಲಿ ಗಾಂಧಿಜೀ ಕಸ್ತೂರಿ ಬಾರನ್ನು ವಿವಾಹವಾದ ವರ್ಷದಲ್ಲಿ ಆಗ ಸಾವರಕರ್ ಎಂಬ ಬ್ರೀಟೀಷರಿಗೆ ಕ್ಷಮಾಪಣೆ ಕೇಳಿದ ವ್ಯಕ್ತಿ ಚಿತ್ಪಾವನ ಬ್ರಾಹ್ಮಣರ ಮನೆಯಲ್ಲಿ ಹುಟ್ಟಿದನು.

1893 ರಲ್ಲಿ ವಕೀಲ ಗಾಂಧಿ ದಕ್ಷಿಣ ಅಪ್ರಿಕಾಗೆ ವಕೀಲಿ ವ್ರತ್ತಿಗೆಂದು ಹೋದಾಗ ಈ ಬಾಲಕ ಸಾರ್ವಕರ್ ಇನ್ನೂ ವಿದ್ಯಾರ್ಥಿಯಾಗಿದ್ದ.

1901ರಲ್ಲಿ ಗಾಂಧಿ ದಕ್ಷಿಣ ಅಪ್ರಿಕಾದಲ್ಲಿ ವಕೀಲಿ ವ್ರತ್ತಿ ಆರಂಭಿಸುವುದರ ಜೊತೆಗೆ ಅಲ್ಲಿನ ಕರಿಯರ ಹಕ್ಕುಗಳಿಗಾಗಿ ಹೋರಾಟ ಆರಂಭಿಸಿದರು. ಆಗ ಸಾರ್ವಕರ್ ಇನ್ನೂ ತನ್ನ ಕಾಲಮೇಲೆ ತಾನು ನಿಂತಿರಲಿಲ್ಲ. ತನ್ನ ತಂದೆ ತಾಯಿಯ ಗಳಿಕೆಯ ಊಟ ಮಾಡುತ್ತ ಹಾಯಾಗಿದ್ದ.

1905 ರಲ್ಲಿ ಗಾಂಧಿಜೀಯವರು ದಕ್ಷಿಣ ಅಪ್ರಿಕಾದಲ್ಲಿ ವಕೀಲಿಕೆಯ ಜೊತೆಗೆ ಅಲ್ಲಿನ ವರ್ಣ ತಾರತಮ್ಯದೊಂದಿಗೆ ಅಹಿಂಸಾತ್ಮಕ ಸಂಘರ್ಷ ಮಾಡುತ್ತಿದ್ದಾಗ ಈ ಸಾರ್ವಕರ್ ಲಂಡನ್ನಿಗೆ ಹೋಗಿ ಅಲ್ಲಿನ “ಇಂಡಿಯಾ ಹೌಸ್” ಗೆ ಬರುವ ಭಾರತೀಯ ಯುವಕರನ್ನು ಪ್ರಚೋದಿಸಿ “ಅಭಿನವ ಭಾರತ” ಸಂಘಟನೆ ಆರಂಭಿಸಿ ಬ್ರಿಟೀಷರ ವಿರುದ್ದ ಎಂದಿಗೂ ಯಶಸ್ವಿಯಾಗದ ಹಿಂಸಾತ್ಮಕ ಶಸ್ತ್ರಾಸ್ತ್ರ ಹೋರಾಟ ರೂಪಿಸುತ್ತಿದ್ದ.

1909 ರಲ್ಲಿ ಗಾಂಧಿಜೀ ದಕ್ಷಿಣ ಅಪ್ರಿಕಾದಲ್ಲಿ ವಕೀಲಿ ವ್ರತ್ತಿ ಮತ್ತು ಅಲ್ಲಿನ ಕರಿಯರ ಹಕ್ಕುಗಳ ಹೋರಾಟ ಮಾಡುತ್ತಿರುವಾಗಲೇ ಭಾರತದ ಸ್ವತಂತ್ರ ಚಳುವಳಿಯ ಭಾಗವಾಗಿ ಹಿಂದ್ ಸ್ವರಾಜ್ ಎಂಬ ಶಿರ್ಷಿಕೆಯ ಪುಸ್ತಕ ಬರೆದರು. ಆಗ ಸಾರ್ವಕರ್ ತನ್ನ ಶಿಷ್ಯ ಮದನ್ ಲಾಲ್ ದಿಂಗ್ರಾ ನನ್ನು ಮುಂದೆ ಮಾಡಿ ಬಂಗಾಳ ವಿಭಜನೆಗೆ ಕಾರಣನಾಗಿದ್ದ ಲಾರ್ಡ್ ಕರ್ಜನನ್ನು ಲಂಡನ್ನಲ್ಲಿ ಗುಂಡಿಟ್ಟು ಕೊಲ್ಲುವ ಭಯೋತ್ಪಾದಕ ಹುನ್ನಾರ ಮಾಡಿದ್ದ.

V.D.SAVARKAR

1910ರಲ್ಲಿ ದಕ್ಷಿಣ ಅಪ್ರಿಕಾದಲ್ಲಿ ವಕೀಲಿ ವ್ರತ್ತಿ ಮಾಡುತ್ತಿದ್ದ ಗಾಂಧಿಜೀ ಆನಂತರ ಭಾರತಕ್ಕೆ ಬಂದು ಸ್ವಂತತ್ರ ಚಳುವಳಿ ರೂಪಿಸುವ ಯೋಜನೆ ಮಾಡುತ್ತಿದ್ದುದ್ದನ್ನು ಅರಗಿಸಿಕೊಳ್ಳಲಾಗದೆ ಗಾಂಧಿಜೀಯ ಅಹಿಂಸಾ ಮಾರ್ಗವನ್ನು ಟೀಕಿಸುತ್ತ ಅವರ ಹೋರಾಟವು ಯಶಸ್ವಿಯಾಗದಂತೆ ಸಾವರಕರ್ ಮತ್ತವರ ಕೋಮುವಾದಿಗಳ ಗುಂಪು ಸಶಸ್ತ್ರ ಹೋರಾಟˌ ಮತ್ತು ದಂಗೆಯ ಸಂಚು ರೂಪಿಸುತ್ತಿತ್ತು. ಅದೇ ಆರೋಪದಲ್ಲಿ ಬ್ರಿಟಿಷರಿಂದ ಬಂಧನಕ್ಕೊಳಗಾಗಿ ಸಾವಕರಕ್ ಜೈಲುಪಾಲಾದ. ಜೈಲಿನಿಂದ ತಪ್ಪಿಸಿಕೊಳ್ಳಲು ಯತ್ನಿಸಿ ಸಿಕ್ಕಿಕೊಂಡ.

1910-15 ತನಕ ದಕ್ಷಿಣ ಅಪ್ರಿಕಾದಲ್ಲಿದ್ದ ಗಾಂಧಿ ಆನಂತರ 1915 ಕ್ಕೆ ಭಾರತಕ್ಕೆ ಬರುತ್ತಾರೆ. 1920 ರಲ್ಲಿ ಪ್ರಬಲ ಬ್ರಿಟೀಷರ ವಿರುದ್ಧ ಶಸ್ತ್ರಾಸ್ತ್ರದಿಂದ ಗೆಲ್ಲುವುದು ಅಸಾಧ್ಯವೆಂದು ಮನಗಂಡು ಶಾಂತಿಯುತ ಅಸಹಕಾರ ಚಳುವಳಿˌ ಕಿಲಾಫತ್ ಚಳುವಳಿ ಆರಂಭಿಸುತ್ತಾರೆ. ಬ್ರಿಟೀಷರ ವಿರುದ್ಧ ಹಿಂಸಾತ್ಮಕ ಹೋರಾಟ ನಿಲ್ಲಿಸುವಂತೆ ಭಾರತೀಯ ಉಗ್ರವಾದಿಗಳಿಗೆ ತಿಳಿ ಹೇಳುತ್ತಾರೆ. ಆದರೆ ಗಾಂಧಿಜೀಯವ ಶಾಂತಿಯುತ ಚಳುವಳಿಯಿಂದ ಹೆದರಿದ ಬ್ರಿಟೀಷರು 1922 ರಿಂದ 1924 ವರೆಗೆ ಅವರನ್ನು 2 ವರ್ಷ ಯರವಾಡ ಜೈಲಿನಲ್ಲಿಡುತ್ತಾರೆ. ಅದೇ ಸಮಯ ಅಂದರೆˌ 1910 ರಿಂದ 1924 ರವರೆಗೆ ವಿವಿಧ ವಿದ್ವಂಸಕ ಕ್ರತ್ಯಗಳ ಪ್ರಕರಣದಲ್ಲಿ ಸಾವರಕರ್ ಕಠಿಣ ಶಿಕ್ಷಿಗೆ ಒಳಪಡುತ್ತಾನೆ. ಬ್ರಿಟೀಷರ ಚಿತ್ರ ಹಿಂಸೆಗೆ ಹೆದರಿ ಅವರ ವಿರುದ್ಧ ಹೋರಾಡುವುದಿಲ್ಲವೆಂದು ಮುಚ್ಚಳಿಕೆ ಬರೆದುಕೊಟ್ಟು ಮತ್ತು ಕ್ಷಮಾಪಣೆ ಕೇಳಿ ಹೊರಗೆ ಬಂದು ಸುಖದಿಂದಿರುತ್ತಾನೆ. ಸಾವರಕರ್ ಜೊತೆಗಿದ್ದ ಅನೇಕ ಹೋರಾಟಗಾರರು ಬ್ರಿಟೀಷರ ಚಿತ್ರಹಿಂಸೆಯಿಂದ ಎದೆಗುಂದದೆˌ ಕ್ಷಮೆ ಕೇಳದೆ ನೇಣಿಗೇರಿತ್ತಾರೆ.

1924ರ ನಂತರ ಗಾಂಧಿಜಿಯವರ ಅಹಿಂಸಾತ್ಮಕ ಸ್ವತಂತ್ರ ಚಳುವಳಿ ತೀವ್ರತೆ ಪಡೆಯುತ್ತದೆ. ಅದರಿಂದ ಬ್ರಿಟೀಷರಂತೂ ಹೆದರುತ್ತಾರಾದರೂ ಅವರಿಗಿಂತ ಸಾವರಕರ್ ಮತ್ತು ಇವರ ಗುಂಪು ಹೆಚ್ಚು ಹೆದರುತ್ತದೆ. ಆಗ ಸಾರ್ವಕರ್ ಅಜ್ಞಾತ ಸ್ಥಳದಲ್ಲಿ ಕುಳಿತು ಗಾಂಧಿಜಿಯರ ಚಳುವಳಿಯನ್ನು ಕೆಡಿಸುವ ಕೆಲಸ ಆರಂಭಿಸುತ್ತಾನೆ. ಅದೇ ಸಮಯದಲ್ಲಿ ಅಂದರೆ 1932ರಿಂದ 1948ರ ವರೆಗೆ ಗಾಂಧಿ ಕೊಲೆಗೆ ಅನೇಕ ಯತ್ನಗಳು ನಡೆಯುತ್ತವೆ. ಆ ಯತ್ನಗಳು ಬ್ರಿಟೀಷರಿಂದಲ್ಲದೆ ಜಾತ್ಯಾತೀತ ಮತ್ತು ಜನತಂತ್ರ ರಾಷ್ಟ್ರವನ್ನು ಒಪ್ಪದ ಭಾರತೀಯ ಕೋಮುವಾದಿಗಳಿಂದ. ಗಾಂಧಿ ಕೊಲೆಯ ಸಂಚಿನ ಆರೋಪ ಸಾವರಕರ್ ಮೇಲಿರುತ್ತದೆ. ಸಾಕ್ಷಗಳ ಕೊರತೆಯಿಂದ ಸಾವರಕರ್ ಆಮೇಲೆ ಖುಲಾಸೆಯಾಗುತ್ತಾನೆ.

ಗಾಂಧಿಜೀಯವರು ಪ್ರತಿಪಾದಿಸುವ ಜಾತ್ಯಾತೀತ ಮತ್ತು ಜನತಂತ್ರ ಸ್ವತಂತ್ರ ಭಾರತದ ಸ್ವರೂಪವನ್ನು ಸಾವರಕರ್ ಗುಂಪು ಮೊದಲಿನಿಂದ ವಿರೋಧಿಸುತ್ತದೆ. ಜನತಂತ್ರ ವ್ಯವಸ್ಥೆಯಲ್ಲಿ ಸಂವಿಧಾನದತ್ತ ಸೌಲಭ್ಯಗಳಿಂದ ಭಾರತದ ಬಹುಸಂಖ್ಯಾತ ಶೂದ್ರವರ್ಗ ಶಿಕ್ಷಣ ಪಡೆದು ಅಭಿವ್ರದ್ಧಿ ಹೊಂದಿದರೆ ತಮ್ಮ ಅಸ್ಥಿತ್ವಕ್ಕೆ ಸಂಚಕಾರ ಬರುತ್ತದೆಂದು ಬಗೆದು ಗಾಂಧಿಜೀಯವರ ಸ್ವತಂತ್ರ ಚಳುವಳಿ ಕೆಡಿಸುವ ಕೆಲಸ ಆಗಲೆ ಆರಂಭಗೊಂಡಿರುತ್ತದೆ. ಹೆಜ್ಜೆ ಹೆಜ್ಜೆಗೂ ಗಾಂಧಿಜೀಯವರ ಸ್ವರಾಜ್ಯ ಚಳುವಳಿ ಕೆಡಿಸುವ ಹುನ್ನಾರಗಳು ಕೋಮುವಾದಿಗಳು ಮಾಡುತ್ತಲೆ ಬರುತ್ತಾರೆ.

1930 ರ ನಂತರ ಗಾಂಧಿಜೀ ತಮ್ಮ ಸ್ವರಾಜ್ಯ ಹೋರಾಟ ತ್ರೀವ್ರಗೊಳಿಸಿ ಉಪ್ಪಿನ ಸತ್ಯಾಗ್ರಹ ಆರಂಭಿಸುತ್ತಾರೆ. ಅದಕ್ಕಾಗಿ ಮತ್ತೆ ಯರವಾಡ ಜೈಲಿನಲ್ಲಿ 1932-33 ವರೆಗೆ ಇರುತ್ತಾರೆ. 1930 ನಂತರ ಸಾರ್ವಕರ್ ಹಿಂದೂ ಮಹಾಸಭಾ ಎಂಬ ರಾಜಕೀಯ ಪಕ್ಷ ಸ್ಥಾಪಿಸಿ ಜತತಂತ್ರ ಸರಕಾರ ಬರುವುದನ್ನು ತಡೆದು ಧರ್ಮಾಧಾರಿತ ರಾಷ್ಟ್ರದ ದುಷ್ಟ ಚಿಂತನೆಯಲ್ಲಿ ತೊಡಗುತ್ತಾನೆ. ದ್ವಿರಾಷ್ಟ್ರ ಪರಿಕಲ್ಪನೆಯನ್ನು ಮೊಟ್ಟಮೊದಲು ತೇಲಿ ಬಿಟ್ಟು ಮುಸ್ಲಿಂ ಲೀಗ್ ನೊಂದಿಗೆ ಹೊಂದಾಣಿಕೆ ಮಾಡಿಕೊಂಡು ಪ್ರಾಂತೀಯ ಸರಕಾರ ರಚಿಸಿಕೊಳ್ಳುತ್ತಾನೆ.

1933 ರಿಂದ1942 ವರೆಗೆ ಭಾರತದಲ್ಲಿ ಸ್ವರಾಜ್ಯ ಚಳುವಳಿ ತೀವ್ರತೆ ಪಡೆಯುತ್ತದೆ. ಆ ಸಂದರ್ಭದಲ್ಲಿ ಭಗತ್ ಸಿಂಗ್ ನೇಣು ಶಿಕ್ಷೆಗೊಳಗಾಗುತ್ತಾರೆ. ಆಗ ಸಾವರಕರ್ ತನ್ನ ಅನುಯಾಯಿಗಳನ್ನು ಸುಭಾಷ್ ಚಂದ್ರ ಬೋಸರ ಅಝಾದ್ ಹಿಂದ್ ಫೌಜಿಗೆ ಸೇರಲು ಹೇಳದೆ ಬ್ರಿಟೀಷರಿಗೆ ಬೆಂಬಲಿಸುವಂತೆ ಕರೆಕೊಡುತ್ತಾನೆ. 1942ರ ಭಾರತ ಬಿಟ್ಟು ತೊಲಗಿ ಹೋರಾಟದಲ್ಲಿ ಭಾರತದ ಯುವಕರುˌ ಮುದುಕರಾದಿಯಾಗಿ ಎಲ್ಲರೂ ಗಾಂಧಿಜೀಯವರ ಕರೆಗೆ ಓಗೊಟ್ಟು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸುತ್ತಾರೆ.

1942 ರಲ್ಲಿ ಗಾಂಧಿಜೀ ಮತ್ತೆ ಜೈಲಿಗೆ ಹೋಗುತ್ತಾರೆ. ಆಗ ಅವರನ್ನು ಪುಣೆಯ ಆಗಾ ಖಾನ್ ಅರಮನೆಯಲ್ಲಿಡುತ್ತಾರೆ. ಎರಡು ವರ್ಷದ ನಂತರ 1944 ರಲ್ಲಿ ಗಾಂಧಿಜೀ ಮತ್ತೆ ಬಿಡುಗಡೆ ಆಗುತ್ತಾರೆ.

1947 ಗಾಂಧಿಜೀವರ ಶಾಂತ ಚಳುವಳಿಗೆ ಹೆದರಿದ ಬ್ರಿಟೀಷರು ಭಾರತಕ್ಕೆ ಸ್ವತಂತ್ರ ಘೋಷಿಸುತ್ತಾರೆ. ದೇಶ ವಿಭಜನೆಯ ನೆಪದಿಂದ ಜನತಂತ್ರ ಮತ್ತು ಜಾತ್ಯಾತೀತ ಭಾರತವನ್ನು ಸಹಿಸದ ಕೋಮುವಾದಿಗಳು 1948 ರಲ್ಲಿ ಗಾಂಧಿ ಹತ್ಯೆ ಮಾಡುತ್ತಾರೆ. ಸಾಕ್ಷಿಗಳ ಕೊರತೆಯಿದ ಸಾವರಕರ್ ಹತ್ಯೆ ಹಂಚಿನ ಆರೋಪದಿಂದ ಬಿಡುಗಡೆಯಾದರೆ ಆತನ ಉಸಿದ ಸಹಚರರಿಗೆ ಶಿಕ್ಷೆಯಾಗುತ್ತದೆ.

~ ಡಾ. ಜೆ ಎಸ್ ಪಾಟೀಲ.

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಬಡತನದ ಬೇರು ಕತ್ತರಿಸುವ ಕಾರ್ಯ ಮಾಡಿದವರು ಬಸವಾದಿ ಶರಣರು

  ಗಜೇಂದ್ರಗಡ: ಸಮಾಜವನ್ನು ಕಾಡುವ ಬಡತನದ ಬೇರನ್ನು ಕತ್ತರಿಸುವ ಕಾರ್ಯವನ್ನು ಬಸವಾದಿ ಶರಣರು ತಮ್ಮ ನಡೆ ನುಡಿಯ ಮೂಲಕ ಹೇಳಿ …

Leave a Reply

Your email address will not be published. Required fields are marked *

error: Content is protected !!