Breaking News
Home / featured / ಸವದತ್ತಿಮಠನ ‘ಬಸವಣ್ಣ ಎತ್ತು ಮತ್ತು ಬ್ರಾಹ್ಮಣ’ ಎಂಬ ಲೇಖನಕ್ಕೆ JLM ನಿಂದ ಪ್ರತಿಕ್ರಿಯೇ

ಸವದತ್ತಿಮಠನ ‘ಬಸವಣ್ಣ ಎತ್ತು ಮತ್ತು ಬ್ರಾಹ್ಮಣ’ ಎಂಬ ಲೇಖನಕ್ಕೆ JLM ನಿಂದ ಪ್ರತಿಕ್ರಿಯೇ

 

ವಿಜಯವಾಣಿ ಪತ್ರಿಕೆಯಲ್ಲಿ ದಿನಾಂಕ ಮೇ 12, 2020 ರಂದು ಡಾ. ಸಂಗಮೇಶ್ ಸವದತ್ತಿಮಠ ಅವರು ಬರೆದ ‘ಬಸವಣ್ಣ ಎತ್ತು ಮತ್ತು ಬ್ರಾಹ್ಮಣ’ ಎಂಬ ಲೇಖನಕ್ಕೆ ಇಲ್ಲಿ ಪ್ರತಿಕ್ರೀಯಿಸುತ್ತಿದ್ದೇವೆ.

ಸದರಿ ಲೇಖನದಲ್ಲಿನ ಅವರ ಮೊಂಡುವಾದ ಹೊಸದೇನೂ ಅಲ್ಲ. ಇದನ್ನೇ ಅನೇಕ ವರ್ಷಗಳಿಂದ ಅವರು ಮಾಡುತ್ತ ಬಂದಿದ್ದಾರೆ. ಕಾಲ್ಪನಿಕ ಪುರಾಣಗಳು ಮತ್ತು ಪ್ರಕ್ಷಿಪ್ತ ವಚನಗಳು ಅವರ ಬಂಡವಾಳ.

ಕೊರೋನದಂತ ಭೀತಿಯ ಪ್ರಸಂಗವನ್ನು ದುರುಪಯೋಗಪಡಿಸಿಕೊಳ್ಳುತ್ತಲೇ ಡಾ. ಸವದತ್ತಿಮಠ ಅವರ ಪಠಾಲಂನವರು ಕಳೆದ 300 ವರ್ಷಗಳಿಂದ ಲಿಂಗಾಯತರನ್ನು ದಿಕ್ಕುಗೆಡಿಸಿದ್ದಾರೆ. ಅದೇ ಸಂದರ್ಭದಲ್ಲಿ ತಮ್ಮ ಪಠಾಲಂನವರು ಮಾಡಿದ ಗಂಭೀರ ತಪ್ಪುಗಳನ್ನು ಸವದತ್ತಿಮಠ ಅವರು ಏಕೆ ಖಂಡಿಸಿಲ್ಲ ?

1. ಕೊರೋನದಂತ ಭೀಕರ ಸಂದರ್ಭದಲ್ಲಿ “ಬಸವಣ್ಣ ತಮ್ಮ ಭಕ್ತ ˌ ಅವನು ಬ್ರಾಹ್ಮಣ್ಯ ತೊರೆದು ತಮ್ಮ ವೀರಶೈವ ಧರ್ಮ ಸ್ವೀಕರಿಸಿದ್ದ ” ಎನ್ನುವ ಪ್ರಚೋದನಾತ್ಮಕ ಹೇಳಿಕೆಯನ್ನು ಏಕೆ ಖಂಡಿಸಲಿಲ್ಲ ?

2. ಬಸವ ಜಯಂತಿಯ ದಿನ ಎತ್ತಿನ ಪೂಜೆ ಮಾಡುವುದನ್ನು 108 ವರ್ಷಗಳ ಹಿಂದೆ ದಾವಣಗೆರೆಯಲ್ಲಿಯೇ ನಿಲ್ಲಿಸಿದ್ದರೂ ಉದ್ದೇಶಪೂರ್ವಕವಾಗಿ ಮತ್ತೆ ಅದನ್ನು ಆಚರಿಸುವ ಮೂಲಕ ವಿವಾದ ಸ್ರಷ್ಠಿಸಿದ್ದನ್ನು ಏಕೆ ಖಂಡಿಸಲಿಲ್ಲ ?

3. ಕರ್ನಾಟಕ ಮತ್ತು ಮಹಾರಾಷ್ಟ್ರ ಸರಕಾರಗಳು ಎತ್ತುಗಳ ಜಯಂತಿಗಾಗಿ ಆ ದಿನವನ್ನು ರಾಷ್ಟ್ರೀಯ ಹಬ್ಬವಾಗಿ ಘೋಷಿಸಿದರೆ ?

4. ದೇಶದ ಪ್ರಧಾನಿಯವರೇ ಜಾಗತಿಕ ಬಸವ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅವರು ಎತ್ತನ್ನು ಪೂಜಿಸುವ ಮೂಲಕ ಉದ್ಘಾಟಿಸಿದರೆ ?

ಬಸವಣ್ಣ ಹನ್ನೆರಡನೇ ಶತಮಾನದಲ್ಲಿ ಬಾಳಿ ಬದುಕಿದ ಒಬ್ಬ ಐತಿಹಾಸಿಕ ಪುರುಷ. ಅವರು ಮನುಷ್ಯರಾಗಿ ಹುಟ್ಟಿ ˌ ಮನುಷ್ಯರಾಗಿಯೇ ಹೋರಾಡಿ ಮಡಿದರು. ಆದರೆ ಡಾ. ಸವದತ್ತಿಮಠ ಅವರ ತರಹದ ಲೇಖಕರು 13 ನೇ ಶತಮಾನದಿಂದ 18 ನೇ ಶತಮಾನದ ವರೆಗೆ ಬಸವಣ್ಣನವರ ಕುರಿತು ಎಂಟು ಪುರಾಣಗಳನ್ನು ಬರೆದಿದ್ದಾರೆ. ಕೈಲಾಸದಿಂದ ಭೂಮಿಗೆ ಶಿವನ ಆಜ್ಞೆಯಂತೆ ಬಸವಣ್ಣ ಅವತರಿಸಿ ಬಂದರೆಂಬ ಕಾಲ್ಪನಿಕ ಕಥೆ ಹೆಣೆದಿದ್ದಾರೆ. ಅನೇಕ ಪವಾಡಗಳನ್ನು ವರ್ಣಿಸಿದ್ದಾರೆ. ಅವೆಲ್ಲವೂ ಸತ್ಯವೆ ? ಅವು ಸತ್ಯವೆಂಬುವಂತೆ ಡಾ. ಸವದತ್ತಿಮಠ ಅವರು ಹರಿಹರನ ರಗಳೆಗಳನ್ನು ಉದಾಹರಿಸಿದ್ದು ಅವರ ಬೌದ್ಧಿಕ ದಿವಾಳಿತನದ ಸೂಚಕವಾಗಿದೆ.

ಕೆಲವು ವಚನಗಳನ್ನು ಉದಾಹರಿಸಿ “ಬಸವಣ್ಣನೇ ಸ್ವತಃ ತಾನು ಎತ್ತು ಎಂದಿದ್ದಾನೆ ” ಎಂದು ಡಾ. ಸವದತ್ತಿಮಠ ಹೇಳಿದ್ದಾರೆ. ಆದರೆ ಬಸವಣ್ಣ ನಾಲ್ಕು ಕಾಲಿನ ಮೂಕ ಎತ್ತಾಗಿ ಮಾದಲಾಂಬಿಕೆಯ ಗರ್ಭದಿಂದ ಜನಿಸಿದರೆ ? ಅಥವಾ ಹಾಗೆ ಹೇಳುವ ಆ ವಚನಗಳೇನು ಬಸವಣ್ಣ ˌ ಅಲ್ಲಮಪ್ರಭು ˌ ಚೆನ್ನಬಸವಣ್ಣನವರು ಬರೆದರೆ ? ಆ ವಚನಗಳ ಸತ್ಯಾಸತ್ಯತೆಯನ್ನಾದರೂ ಡಾ. ಸವದತ್ತಿಮಠ ಪರಾಮರಿಸಬಾರದಿತ್ತೆ ?

ಅವು ಪ್ರಕ್ಷಿಪ್ತ ವಚನಗಳನ್ನೆವ ಸತ್ಯ ಡಾ. ಸವದತ್ತಿಮಠ ಅವರಿಗೆ ಗೊತ್ತಿದೆ. ಆದರೆ ಯಾರದೋ ಪರವಾಗಿ ಅವರು ಈ ರೀತಿಯ ಮೊಂಡುವಾದವನ್ನು ಮಾಡುತ್ತಿದ್ದಾರೆ. ಕ್ರಿ. ಶ. 1520 – 1610 ರ ವರೆಗೆ ಬರೆಯಲ್ಪಟ್ಟ ನಾಲ್ಕು ಶೂನ್ಯ ಸಂಪಾದನೆಗಳಲ್ಲಿ ಮತ್ತು ಕೆಲವು ಇತರ ವಚನ ಕಟ್ಟುಗಳಲ್ಲಿ ಖೊಟ್ಟಿ ವಚನಗಳನ್ನು ಬರೆದು ಉದ್ದೇಶಪೂರ್ವಕವಾಗಿ ವೀರಶೈವವಾದಿ ಸಂಪಾದಕರು ಸೇರಿಸಿದ್ದಾರೆಂದು ಅನೇಕ ಜನ ಹಿರಿಯ ಸಂಶೋಧಕರು ಸಿದ್ಧಪಡಿಸಿದ್ದಾರೆ. ಆದ್ದರಿಂದ ಇಂತಹ ದುಸ್ಸಾಹಸವನ್ನು ಡಾ. ಸವದತ್ತಿಮಠ ಅವರು ಮತ್ತೊಮ್ಮೆ ಮಾಡದಿರಲಿ.

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಲಿಂಗಾಯತ ಧರ್ಮದ ಹೋರಾಟ ಸರಣಿ-2

  ಜಾತಿ ಲಿಂಗಾಯತರು ಮತ್ತು ಬೇಡ ಜಂಗಮ ಪಂಚಾಚಾರ್ಯರು ಸತ್ಯವೆಂದು ನಂಬಿ ಲಿಂಗಾಯತ ಧರ್ಮದ ಮಾನ್ಯತೆ ತಪ್ಪಿಸುತ್ತಿದ್ದಾರೆ. ಬಸವಕಲ್ಯಾಣ: 12ನೇ …

ನ. 22 ರಂದು ಡಾ. ಹೆಚ್.ಆರ್.ಗಿರಿಯಾಲ ಅವರಿಗೆ ನುಡಿನಮನ

ಚನ್ನಮ್ಮನ ಕಿತ್ತೂರು: ಸಮೀಪದ ಬೈಲೂರು ಗ್ರಾಮದ ಖ್ಯಾತ ವೈದ್ಯ ಡಾ ಹಣಮಂತ ಆರ್ ಗಿರಿಯಾಲ ಅವರು ಕಳೆದ ಸೆಪ್ಟೆಂಬರ್ 30 …

ಲಿಂಗಾಯತ ಧರ್ಮದ ಹೋರಾಟ ಸರಣಿ-2

  ಲಿಂಗಾಯತ ಧರ್ಮದ ಮಠಾಧೀಶರ ನಿಯೋಗ ಮುಖ್ಯಮಂತ್ರಿಗೆ ಭೇಟಿ ಮಾಡಬಾರದೇಕೆ? ಲಿಂಗಾಯತ ಧರ್ಮದ ಹೋರಾಟದಲ್ಲಿ ಮುಂಚೂಣಿ ಸ್ಥಾನ ವಹಿಸಿ ಅತ್ಯಂತ …

ಸಾಮಾಜಿಕ ಪ್ರಾತಿನಿಧ್ಯತೆ : ಬಿ.ಜೆ ಪಾಟೀಲ

  ವಿಜಯಪುರ : ಸಮಸಮಾಜ ಕಟ್ಟಲು, ಸಂವಿಧಾನದಲ್ಲಿ ಮೂಲಭೂತ ಹಕ್ಕಗಳ ಬಗ್ಗೆ ಮಾತನಾಡುವಾಗ ಮೂರೂ ಬಿಂದುಗಳು ( Article 15, …

ಲಿಂಗಾಯತ–ವೀರಶೈವರಿಗೆ ಶೇ 16 ಮೀಸಲಾತಿ ನೀಡಿ: ಶಿವಮೂರ್ತಿ ಮುರುಘಾ ಶರಣರು

  ಚಿತ್ರದುರ್ಗ: ಜಾತಿ, ಉಪಜಾತಿಗೆ ಒಂದೊಂದು ವಿಧವಾದ ಮೀಸಲಾತಿ ನೀಡುವ ಬದಲು ಲಿಂಗಾಯತ–ವೀರಶೈವ ಸಮುದಾಯಕ್ಕೆ ಶೇ 16ರಷ್ಟು ಮೀಸಲಾತಿಯ ನಿಗದಿಪಡಿಸುವುದು …

Leave a Reply

Your email address will not be published. Required fields are marked *

error: Content is protected !!